Navakarnataka Vijnana Tantrajnana Padasampada (2011)
Navakarnataka Publications Private Limited
ಮಂಡಲಭೇದಕ
(ಭೌ) ವಿದ್ಯುನ್ಮಂಡಲವನ್ನು ಮುರಿಯುವ ಮಂಡಲ ವಿಚ್ಛೇದಕ. ವಿದ್ಯುತ್ ಪ್ರವಾಹವು ಪೂರ್ವ ನಿರ್ಧರಿತ ಮೌಲ್ಯ ಮೀರಿದಾಗ ಮಂಡಲವನ್ನು ಸ್ವಯಂಚಾಲಿತವಾಗಿ ಛೇದಿಸುವ ವಿದ್ಯುತ್ಕಾಂತೀಯ ಸಾಧನ
ಮಂಡಿ
(ವೈ) ಮನುಷ್ಯನಲ್ಲಿ ಕಾಲಿನ ಮಧ್ಯ ಕೀಲು. ಚತುಷ್ಪಾದಿ ಗಳಲ್ಲಿ ಹಿಂಗಾಲಿನ ಸಮಾಂತರ ಕೀಲು. ಹಕ್ಕಿಗಳಲ್ಲಿ ಪಾದಕ್ಕೂ ಕಾಲಿಗೂ ನಡುವಿನ ಕೀಲು. ಮೊಣಕಾಲು. ಜಾನು
ಮಡಿಕೆ
(ಭೂವಿ) ಭೂಮಿಯ ಹೊರಮೈಯಲ್ಲಾದ ಚಲನೆಗಳು ಶಿಲಾಸ್ತರಗಳಲ್ಲುಂಟುಮಾಡಿದ ಬಾಗಿದ ಸ್ಥಿತಿ
ಮಡಿಪು
(ತಂ) ೧. ತೆರೆಯಲೂ ಮುಚ್ಚಲೂ ಆಗುವಂತೆ ಅಳವಡಿಸಿರುವ ಅಗಲವಾದ ಚಪ್ಪಟೆ ತುಂಡು. ಮುಚ್ಚಳ. ೨. ಉಡ್ಡಯನದಲ್ಲಿ ನೆರವಾಗಲು ವಿಮಾನದ ರೆಕ್ಕೆ ತುದಿಗೆ ಜೋಡಿಸಿರುವ ತೆರೆ-ಮಡಚು ಭಾಗ. (ವೈ) ಅಂಗ ವಿಚ್ಛೇದಿಸುವಾಗ ಅಥವಾ ತ್ವಚೆ ಕಸಿ ಮಾಡುವಾಗ ಚಾಕುವಿನಿಂದ ಕೊಯ್ದು ಶರೀರದ ಮೇಲ್ಮೈಯಿಂದ ಭಾಗಶಃ ಬೇರ್ಪಡಿಸಿದ ಊತಕಗಳ ಭಾಗ
ಮಡಿವಾಳ ಹಕ್ಕಿ
(ಪ್ರಾ) ಪ್ಯಾಸರಿಫಾರ್ಮೀಸ್ ಗಣ, ಕ್ಯಾಂಪಿಫ್ಯಾಜಿಡೀ ಕುಟುಂಬ, ಟರ್ಡಿನೀ ಉಪಕುಟುಂಬಕ್ಕೆ ಸೇರಿದ ಹಕ್ಕಿ. ಕಾಪ್ಸಿಕಸ್ ಸೌಲಾರಿಸ್ ವೈಜ್ಞಾನಿಕ ನಾಮ. ಭಾರತಾದ್ಯಂತ ಕಾಣಬರುತ್ತದೆ. ಊರಿನ ಸುತ್ತ ಮುತ್ತಲ ಕಾಡು ಪೊದೆಗಳಲ್ಲಿ ವಾಸ. ಆಗಾಗ್ಗೆ ಇಂಪಾಗಿ ಗಟ್ಟಿಯಾಗಿ ಹಾಡುತ್ತಿರುತ್ತದೆ
ಮಡ್ಡಿ
(ರ) ದ್ರವದಿಂದ ಪ್ರತ್ಯೇಕಗೊಂಡು ಪಾತ್ರೆಯ ತಳದಲ್ಲಿ ಶೇಖರವಾಗುವ ಪುಡಿ ರೂಪದ ಘನ ಪದಾರ್ಥ. ಗಸಿ
ಮಡ್ಡಿ ರೇಷ್ಮೆ
(ಪ್ರಾ) ರೇಷ್ಮೆ ಗೂಡಿನ ಹೊರಭಾಗದಲ್ಲಿರುವ ನೂಲು ತೆಗೆಯಲಾಗದ ತುಂಡು ಎಳೆಗಳ ಸಮೂಹ
ಮಡ್ಸ್ಕಿಪ್ಪರ್
(ಪ್ರಾ) ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಕಂಡುಬರುವ ಪೆರಿ ಆಪ್ತಾಲ್ಮಸ್ ಎಂಬ ಹೆಸರಿನ ಮೀನು. ನೀರಿನಿಂದ ಹೊರಬಂದು ಮಣ್ಣಿನ ಮೇಲೆ ಎರಗಬಲ್ಲುದು. ಇದರ ಬಾಲದಲ್ಲಿ ಹೆಚ್ಚು ರಕ್ತನಾಳಗಳಿದ್ದು ಮೀನು ಬಾಲವನ್ನು ಮಾತ್ರ ನೀರಿನಲ್ಲಿ ಇಳಿಬಿಟ್ಟು ಉಸಿರಾಡಬಲ್ಲದು
ಮಣಿ ಪರೀಕ್ಷೆ
(ರ) ದತ್ತ ಪದಾರ್ಥದಲ್ಲಿ ಲೋಹವಿದೆಯೇ ಎಂದು ತನಿಖೆ ಮಾಡಲು ಬೊರ್ಯಾಕ್ಸಿನ ಮಣಿ ಉಪಯೋಗಿಸಿ ನಡೆಸುವ ವರ್ಣ ಪ್ರಯೋಗ
ಮಣಿಚೌಕಟ್ಟು
(ಗ) ಮಣಿಗಳನ್ನು ಸರಳುಗಳ ಅಥವಾ ಜಾಡುಗಳ ಮೂಲಕ ಸರಿಸಿ ಅಂಕಗಣಿತದ ಪರಿಕರ್ಮಗಳನ್ನು ಮಾಡಲು ಬಳಸುವ ಸಾಧನ. ಬೋದಿಗೆ. ಅಬಕಸ್
ಮಣಿತ
(ಸ) (ಗಿಡವೊಂದರ) ಬಾಗುವ ಕ್ರಿಯೆ, ವಿಶೇಷವಾಗಿ ಗೆಣ್ಣುಗಳಲ್ಲಿ, ಫ್ಲೆಕ್ಷನ್
ಮಣಿವ ಬಿಂದು
(ತಂ) ಪೀಡನೆಯಲ್ಲಿ ಏರಿಕೆ ಇಲ್ಲದಿದ್ದರೂ ವಸ್ತುವಿನ ನಿರೂಪಣೆಯಲ್ಲಿ ಏರಿಕೆ ಉಂಟಾಗುವ ಬಿಂದು ಮತ್ತು ಇದಕ್ಕೆ ಸಂವಾದಿಯಾದ ಕನಿಷ್ಠ ಪೀಡನೆ
ಮಣ್ಣಿನ ಸವಕಳಿ
(ಪವಿ) ಮಣ್ಣಿನ ಕಣಗಳು ಸಡಿಲ ಗೊಂಡು ಮೂಲ ಸ್ಥಳದಿಂದ ಇನ್ನೊಂದೆಡೆಗೆ ವರ್ಗಾವಣೆ ಯಾಗುವ ಯಾವುದೇ ಕ್ರಿಯೆ. ಇದು ನೈಸರ್ಗಿಕ. ಬಿರುಗಾಳಿ, ಪ್ರವಾಹಗಳಿಂದ ತೀವ್ರ ಸವಕಳಿ ಉಂಟಾಗಬಹುದು. ಮಾನವ ಚಟುವಟಿಕೆಗಳಿಂದಲೂ ತೀವ್ರ ಸವಕಳಿ ಉಂಟಾಗುತ್ತದೆ
ಮಣ್ಣು
(ಭೂವಿ) ಸಸ್ಯಗಳು ಬೆಳೆಯುವ ಮತ್ತು ಶಿಥಿಲ ಶಿಲೆಗಳೂ ಜೈವಿಕ ಉಳಿಕೆಗಳೂ ಸೇರಿರುವ ಭೂಮಿಯ ಮೇಲ್ಪದರ. ಮಣ್ಣಿನ ಅಜೈವಿಕ ಭಾಗವು ಪ್ರಧಾನವಾಗಿ ನಾನಾ ಲೋಹಗಳ – ಅಲ್ಯೂಮಿನಿಯಮ್, ಕಬ್ಬಿಣ, ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳ – ಸಿಲಿಕೇಟುಗಳಿಂದಾಗಿರುವುದು. ಜೈವಿಕ ಭಾಗ ವಾದರೋ ಕೊಳೆತ ಸಸ್ಯಗಳ ಅಂಟಾದ ಕಪ್ಪು ಗೊಬ್ಬರದಿಂದಾದುದು
ಮತಿಮಾಂದ್ಯತೆ
(ಮ) ಜನ್ಮತಃ ಬಂದ ದೋಷದ ಇಲ್ಲವೇ ತರುವಾಯದ ಗಾಸಿ ಅಥವಾ ಕಾಯಿಲೆಯ ಕಾರಣವಾಗಿ ಮನಸ್ಸಿನ ಸಹಜಾಭಿವರ್ಧನೆ ಕುಂಠಿತವಾಗಿರುವುದು. ಮಾನಸಿಕ ನ್ಯೂನತೆ. ಮಂಕುತನ, ಹೆಡ್ಡತನ. ನೋಡಿ: ಮನೋವೈಕಲ್ಯ
ಮತಿವಿಕಲ್ಪಿ
(ವೈ) ನಿರ್ಲಕ್ಷ್ಯ ಮನೋಭಾವದಿಂದ ಅಪರಾಧಪ್ರeಯೂ ಇಲ್ಲದೆ ಪದೇ ಪದೇ ಸಮಾಜವಿರೋಧಿ ನಡವಳಿಕೆಗಳಲ್ಲಿ ತೊಡಗುವ ವಿಕೃತಿಗೆ ವೈದ್ಯಕೀಯ ಕಾನೂನಿನಲ್ಲಿ ಬಳಸುವ ಪದ. ಬುದ್ಧಿಕೆಟ್ಟವ
ಮತ್ತು ಬರಿಸುವುದು
(ವೈ) ಮತ್ತು ಬರುವಂತೆ ಔಷಧಿ ನೀಡಿಕೆ
ಮತ್ಸ್ಯ ವಿಜ್ಞಾನ
(ಪ್ರಾ) ಮೀನುಗಳನ್ನು ಕುರಿತು ಅಧ್ಯಯನ ಮಾಡುವ ಕಶೇರುಕ ಪ್ರಾಣಿ ವೃತ್ತಾಂತ ವಿಭಾಗ
ಮತ್ಸ್ಯಕೃಷಿ
(ಜೀ) ಆಹಾರವಾಗಿ ಉಪಯೋಗಿಸಲು ಕೃತಕವಾಗಿ ಮೀನನ್ನು ಬೆಳೆಸುವುದು
ಮತ್ಸ್ಯಾಗಾರ