Navakarnataka Vijnana Tantrajnana Padasampada (2011)
Navakarnataka Publications Private Limited
ಭಗ
(ಪ್ರಾ) ಹೆಣ್ಣಿನ ಬಾಹ್ಯ ಜನನೇಂದ್ರಿಯ. ಇದರಲ್ಲಿ ಜನನೇಂದ್ರಿಯ ಮಡಿಕೆ, ಭಗಾಂಕುರ, ಕಿರಿ ಮತ್ತು ಹಿರಿ ಯೋನಿ ತುಟಿಗಳಿರುತ್ತವೆ. ಕಿರಿತುಟಿ ಜನನೇಂದ್ರಿಯ ಮಡಿಕೆಯಾದರೆ, ಹಿರಿತುಟಿ ಜನನೇಂದ್ರಿಯ ಊತಕಗಳಿಂದಾಗಿದೆ. ಇವುಗಳ ನಡುವಿನ ಗುಳಿಯೇ ಭಗಾಂಕುರ
ಭಗಾಂಕುರ
(ಜೀ) ಸ್ತನಿವರ್ಗದ ಸ್ತ್ರೀಯೋನಿಯಲ್ಲಿ ಪುರುಷ ಶಿಶ್ನಕ್ಕೆ ಸಂವಾದಿಯಾದ, ನಿಗುರಬಲ್ಲ ಮಾಂಸಲಭಾಗ
ಭಂಗುರ
(ಸಾ) ಸುಲಭವಾಗಿ ಒಡೆಯುವ, ತುಂಡು ತುಂಡಾಗುವ. ದುರ್ಬಲವಾದ, ನಾಜೂಕಾದ
ಭಗೋಷ್ಠ
(ಜೀ) ನೋಡಿ: ಲೇಬಿಯಮ್
ಭಗ್ನಾವಶೇಷ
(ಭೂವಿ) ಬಂಡೆಯ ತುಣುಕುಗಳ ರಾಶಿ. ಕಲ್ಲು ಚೂರು ಗುಪ್ಪೆ
ಭರಣ ಸಾಮರ್ಥ್ಯ
(ಪವಿ) ನಿರ್ದಿಷ್ಟ ಪ್ರದೇಶದಲ್ಲಿ ಬಾಳಬಲ್ಲ ಒಂದು ಪ್ರಭೇದದ ಬಿಡಿಜೀವಿಗಳ ಗರಿಷ್ಠ ಸಂಖ್ಯೆ. ಸಾಮಾನ್ಯವಾಗಿ ಅಲ್ಲಿಯ ಆಹಾರ ಪೂರೈಕೆಯ ಮಟ್ಟ ಗಮನಿಸಿ ಇದನ್ನು ಲೆಕ್ಕ ಹಾಕುತ್ತಾರೆ
ಭರತ ಶಕ್ತಿ
(ಭೂವಿ) ಅಳಿವೆಯಿಂದ ನದಿಯು ತೆರೆದ ಸಮುದ್ರಕ್ಕೆ ಹರಿಯುವಾಗ ಉತ್ಪಾದನೆಯಾಗುವ ಶಕ್ತಿ. ಉಬ್ಬರ ವಿಳಿತದ ಶಕ್ತಿ
ಭಲ್ಲೆ
(ತಂ) ಮೀನನ್ನು ತಿವಿದು ಕೊಲ್ಲಲು ಅಥವಾ ಈಟಿಗಾಳದಿಂದ ಹಿಡಿದು ತಿಮಿಂಗಿಲವನ್ನು ಕೊಲ್ಲಲು ಬಳಸುವ ಶೂಲ. ಈಟಿ. ಭರ್ಜಿ. ಸಮರಾಸ್ತ್ರ
ಭಾಗಲಬ್ಧ
(ಗ) ನೋಡಿ: ಭಾಗಾಹಾರ
ಭಾಗಶಃ
(ಸಾ) ಆಂಶಿಕ
ಭಾಗಾಹಾರ
(ಗ) ಅಂಕಗಣಿತದ ನಾಲ್ಕು ಮೂಲ ಪರಿಕರ್ಮಗಳ ಪೈಕಿ ಒಂದು. ಉಳಿದವು: ಸಂಕಲನ, ವ್ಯವಕಲನ ಮತ್ತು ಗುಣಾಕಾರ. ಭಾಗಾಹಾರವು ಗುಣಾಕಾರದ ವಿಲೋಮ ಕ್ರಿಯೆ. a/b=c ಆಗಿರಲಿ. ಈ ಒಟ್ಟು ಪರಿಕರ್ಮ ಭಾಗಾಹಾರ. aಗೆ ಭಾಜ್ಯ, bಗೆ ಭಾಜಕ ಮತ್ತು cಗೆ ಭಾಗಲಬ್ಧ ಎಂದು ಹೆಸರು. ಭಾಗಾಹಾರದ ಸಾರ್ವತ್ರಿಕ ರೂಪ A/B = Q+R/B. ಇಲ್ಲಿ Rಗೆ ಶೇಷವೆಂದು ಹೆಸರು
ಭಾಗಿಸು
(ಗ) ಭಾಗಾಹಾರ ಪರಿಕರ್ಮ ನಡೆಸು. ಭಾಗಾಹಾರ ಪ್ರಕ್ರಿಯೆ ಮಾಡು
ಭಾಜಕ
(ಗ) ಭಾಗಿಸುವ ರಾಶಿ. ನೋಡಿ: ಭಾಗಾಹಾರ
ಭಾಜ್ಯ
(ಗ) ಭಾಗಿಸ್ಪಟ್ಟ ರಾಶಿ. ನೋಡಿ: ಭಾಗಾಹಾರ
ಭಾರ ಜಲ
(ರ) ಹೈಡ್ರೊಜನ್ ಪರಮಾಣುಗಳ ಬದಲಿಗೆ ಡ್ಯೂಟೀರಿಯಮ್ ಪರಮಾಣುಗಳು (D2O ಅಥವಾ HDO) ಗಣನೀಯ ಪ್ರಮಾಣದಲ್ಲಿರುವ ನೀರು ಅಥವಾ ಡ್ಯೂಟೀರಿಯಮ್ ಆಕ್ಸೈಡ್. ಸಾಮಾನ್ಯ ಹೈಡ್ರೊಜನ್ಗಿಂತ ಇದರಲ್ಲಿರುವ ಹೈಡ್ರೊಜನ್ ಭಾರವಾಗಿರುವುದರಿಂದ ಈ ನೀರು ಸಾಮಾನ್ಯ ನೀರಿಗಿಂತ ಹತ್ತರಷ್ಟು ಹೆಚ್ಚು ತೂಕವಾಗಿರುತ್ತದೆ. ಬೈಜಿಕ ಕ್ರಿಯಾಕಾರಿಗಳಲ್ಲಿ ನ್ಯೂಟ್ರಾನ್ಗಳ ಮಂದಕಾರಿಯಾಗಿ ಬಳಕೆ. ಇಂಥವನ್ನು ಈಜುಕೊಳ ಕ್ರಿಯಾಕಾರಿಗಳು ಎನ್ನುವುದುಂಟು. ಉದಾ: ‘ಅಪ್ಸರ’ ಕ್ರಿಯಾಕಾರಿ
ಭಾರ ರಾಸಾಯನಿಕಗಳು
(ರ) ವ್ಯವಸಾಯ ದಲ್ಲೂ ಕೈಗಾರಿಕೆಯಲ್ಲೂ ಅಧಿಕ ಬಳಕೆಯಲ್ಲಿ ಇರುವುದರಿಂದಾಗಿ ಭಾರಿ ಪ್ರಮಾಣಗಳಲ್ಲಿ ತಯಾರಿಸುವ ಸೋಡಿಯಮ್ ಹೈಡ್ರಾಕ್ಸೈಡ್, ಕ್ಲೋರೀನ್, ನೈಟ್ರಿಕ್ ಹಾಗೂ ಸಲ್ಫ್ಯೂರಿಕ್ ಆಮ್ಲಗಳು ಇತ್ಯಾದಿ ರಾಸಾಯನಿಕ ಪದಾರ್ಥಗಳು
ಭಾರ ಹೈಡ್ರೊಜನ್
(ರ) ರಾಶಿಸಂಖ್ಯೆ ೧ಕ್ಕಿಂತ ಹೆಚ್ಚಾಗಿರುವ ಸಮಸ್ಥಾನಿಗಳಿರುವ ಹೈಡ್ರೊಜನ್. ಉದಾ: ಡ್ಯೂಟೀರಿಯಮ್ ಅಥವಾ ಟ್ರೈಟಿ(ಷಿ)ಯಮ್. ನೋಡಿ: ಡ್ಯೂಟೀರಿಯಮ್
ಭಾರಕೇಂದ್ರ
(ಭೌ) ವ್ಯವಸ್ಥೆಯೊಂದರ ದ್ರವ್ಯರಾಶಿ ಕೇಂದ್ರ (ಖ) ಭೂಮಿ-ಚಂದ್ರ ವ್ಯವಸ್ಥೆಯ ಗುರುತ್ವ ಕೇಂದ್ರ
ಭಾರಗೋಳ
(ಭೂವಿ) ಭೂಮಿಯ ಆಂತರಿಕ ಗೋಳ. ತ್ರಿಜ್ಯ ಸುಮಾರು ೩೫೦೦ ಕಿಮೀ. ಇಲ್ಲಿಯ ಸರಾಸರಿ ಸಾಂದ್ರತೆ ಹೊರವಲಯಗಳಲ್ಲಿಯ ಸಾಂದ್ರತೆಗಿಂತ ಅಧಿಕ
ಭಾರಲೋಹ