भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭ್ರೂಣಕೋಶ

(ಪ್ರಾ) ಕಶೇರುಕಗಳಲ್ಲಿ ಅಭಿವರ್ಧನೆ ವೇಳೆ ಅಂಡದ ಸೀಳಿಕೆಯಿಂದ ಉದ್ಭವಿಸುವ ರಚನೆ. ಟೊಳ್ಳು ಹೊರಗೋಳ ಮತ್ತು ಕೋಶರಾಶಿಯಿಂದಾದ ಗಟ್ಟಿ ಒಳಗೋಳ

ಭ್ರೂಣಚಲನೆ

(ಪ್ರಾ) ಕೆಲವು ಕೀಟಗಳ ಮೊಟ್ಟೆಗಳಲ್ಲಿ ಭ್ರೂಣಸ್ಥಾನ ಬದಲಾಗುವುದು

ಭ್ರೂಣದ ಹೊರಪೊರೆ

(ಪ್ರಾ) ಮೆಟಾಜೋವ ಪ್ರಾಣಿವರ್ಗದ ಭ್ರೂಣದ ಹೊರಪೊರೆ

ಭ್ರೂಣಪೊರೆ

(ಪ್ರಾ) ಮೊಟ್ಟೆಯೊಳಗೆ ಬಂಡಾರ ಅಥವಾ ಪೀತಕ ಸಮೃದ್ಧವಾಗಿರುವಾಗ ಅದರ ಅಗ್ರಭಾಗದಲ್ಲಿ ಸೀಳಿಕೆಯ ಕಾರಣವಾಗಿ ಮೈದಳೆಯುವ ಕೋಶಬಿಲ್ಲೆಗಳು

ಭ್ರೂಣವಿಜ್ಞಾನ

(ವೈ) ಭ್ರೂಣರೂಪಣೆ ಮತ್ತು ಅಭಿವರ್ಧನೆಗಳ ಅಧ್ಯಯನ

ಭ್ರೂಣಾಂಕುರ

(ಜೀ) ೧. ಮನುಷ್ಯರಲ್ಲಿ ಗರ್ಭಧಾರಣಾ ನಂತರ ಎಂಟನೆಯ ವಾರಾಂತ್ಯದವರೆಗಿನ ಜೀವಿರೂಪ. ೨. ಬೀಜದೊಳಗೆ ಬೆಳವಣಿಗೆಯ ಮೊದಲ ಹಂತದಲ್ಲಿ ಇರುವ ಮೊಳಕೆ. ಅಂಕುರ

Search Dictionaries

Loading Results

Follow Us :   
  Download Bharatavani App
  Bharatavani Windows App