भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭೌತವಾದ

(ಸಾ) ಭೌತದ್ರವ್ಯ, ಅದರ ರೂಪಾಂತರಗಳು, ಅದರ ಚಲನೆ – ಇವು ಹೊರತು ಸೃಷ್ಟಿಯಲ್ಲಿ ಬೇರೆ ಯಾವುದೇ ಅಮೂರ್ತ ಅಭೌತಿಕ ಶಕ್ತಿ ಇಲ್ಲವೆಂಬ ವಾದ. ಮನಃಕಾರ್ಯಗಳೂ ಸಹ ಸಂಪೂರ್ಣವಾಗಿ ಭೌತದ್ರವ್ಯದಿಂದಲೇ ಆಗುವಂತಹವು ಎಂಬ ವಾದ

ಭೌತವಿಜ್ಞಾನ

(ಭೌ) ರಾಸಾಯನಿಕ ರಚನೆಯಲ್ಲಿ ಬದಲಾವಣೆಯಿಲ್ಲದೆ ಶಕ್ತಿಯ ಬದಲಾವಣೆಗಳಿಗೆ ಸಂಬಂಧ ಪಟ್ಟಂತೆ ವಿದ್ಯುತ್ತು, ಬೆಳಕು, ಯಾಂತ್ರಿಕ, ಕಾಂತೀಯ ವಿಕಿರಣ ಮತ್ತು ಉಷ್ಣತಾ ವಿದ್ಯಮಾನಗಳ ಅಧ್ಯಯನ. ಭೌತವೃತ್ತಾಂತ

ಭೌತವಿಜ್ಞಾನಿ

(ಭೌ) ಭೌತವಿಜ್ಞಾನವನ್ನು ಅಧ್ಯಯನ ಮಾಡುವಾತ ಅಥವಾ ಅದರಲ್ಲಿ ಪಾರಂಗತ

ಭೌತಿಕ ಬಾಷ್ಪ ಸಂಚಯನ

(ತಂ) ತೆಳು ಫಿಲ್ಮುಗಳನ್ನು ತಯಾರಿಸುವ ಒಂದು ವಿಧಾನ. ಇಲ್ಲಿ ಸಂಚಯನ ಮಾಡುವ ಪದಾರ್ಥಗಳ ಕರಗು ಬಿಂದುವು ತಾಪನಿರೋಧಕ ಧಾತು (ಟಂಗಸ್ಟನ್, ಟಾಂಟಲಂ, ಮೊಲಿಬ್ಡಿನಮ್)ಗಳಿಗಿಂತ ಕಡಿಮೆ ಇರುತ್ತದೆ. ಇಂತಹ ಪದಾರ್ಥವನ್ನು ತಾಪನಿರೋಧಕ ಧಾತುವಿನಿಂದ ತಯಾರಿಸಿದ ಚಿಕ್ಕ ಪಾತ್ರೆಯಲ್ಲಿಟ್ಟು ಉಚ್ಚ ತಾಪದಲ್ಲಿ (೫೦೦-೬೦೦0C) ಕರಗಿಸಿ ಅದರ ಬಾಷ್ಪವು ತಲಾಧಾರದ ಮೇಲೆ ಸಾಂದ್ರೀಕರಣಗೊಂಡು ಸಂಚಯನವಾಗುವಂತೆ ಮಾಡಲಾಗುತ್ತದೆ. ಈ ತಂತ್ರದಲ್ಲಿ ಯಾವುದೇ ಅಪಾಯಕಾರಿ ಅನಿಲಗಳನ್ನು ಬಳಸು ವುದಿಲ್ಲ. ಇದು ಸುರಕ್ಷಿತ ಕ್ರಮವಾಗಿದೆ

ಭೌಮಿಕ

(ಖ) ಭೂಗ್ರಹಕ್ಕೆ ಸಂಬಂಧಿಸಿದ

ಭ್ರಮಣ

(ಭೌ) ಸ್ಥಿರ ಬಿಂದುವಿನ ಸುತ್ತ ವೃತ್ತಾಕಾರದ ಚಲನೆ ಅಥವಾ ಅಕ್ಷದ ಸುತ್ತ ಸುರುಳಿಯಾಕಾರದ ಚಲನೆ

ಭ್ರಮಣ ತ್ರಿಜ್ಯ

(ಭೌ) ಅನಮ್ಯ ಕಾಯದ

ಭ್ರಮಣದರ್ಶಕ

(ತಂ) ಗಾಲಿ ಅಕ್ಷಕ್ಕೆ ಲಂಬವಾಗಿರುವ ಒಂದು ಅಕ್ಷವನ್ನಾಗಲೀ ಪರಸ್ಪರ ಲಂಬವಾಗಿರುವ ಎರಡು ಅಕ್ಷಗಳ ನ್ನಾಗಲೀ ಕುರಿತಂತೆ ಮುಕ್ತವಾಗಿ ಚಲಿಸಬಲ್ಲ ಚೌಕಟ್ಟಿನೊಳಗೆ ಅಧಿಕ ವೇಗದಿಂದ ಗಿರಕಿಸುವಂತೆ ಅಳವಡಿಸಿರುವ ಹಿರಿತೂಕದ ಕಿರಿ ಗಾಲಿ. ಗಿರಿಕಿ ಹೊಡೆಯುತ್ತಿರುವ ಚಕ್ರದ ಅಕ್ಷವು ಸಲೀಸಾಗಿ ದಿಕ್ಕು ಬದಲಿಸುವಂತಿದ್ದು, ಅದನ್ನು ಹೊತ್ತಿರುವ ಕಾಯವು ಯಾವ ಕಡೆಗೆ ತಿರುಗಿಕೊಂಡರೂ ತಾನು ಮಾತ್ರ ಸದಾ ಒಂದೇ ದಿಕ್ಕಿಗೆ ತಿರುಗಿ ಕೊಂಡಿರುತ್ತದೆ. ವಾಯು ಹಾಗೂ ಜಲಯಾನಗಳಲ್ಲಿ ಉಪಯುಕ್ತ ಸಂಗಾತಿ. ಜೈರೊಸ್ಕೋಪ್

ಭ್ರಮಣಮಾಪಕ

(ತಂ) ಸುತ್ತು ಚಲನೆಯ ದರವನ್ನು ಅಳೆಯುವ ಉಪಕರಣ

ಭ್ರಮೆ

(ವೈ) ಇಲ್ಲದ ವಸ್ತು ಅಥವಾ ಸಂಗತಿ ಇದೆಯೆಂದು ನಂಬಿ ವರ್ತಿಸುವ ಮಾನಸಿಕ ಸ್ಥಿತಿ

ಭ್ರಮೆ

(ವೈ) ಬಾಹ್ಯವಸ್ತು ಕುರಿತಂತೆ ಮಿಥ್ಯಾಜ್ಞಾನದ ಇಂದ್ರಿಯ ಗೋಚರತೆ. ಉದಾ: ನಿಶ್ಚಲ ವಸ್ತುವೊಂದು ಚಲಿಸುತ್ತಿರುವಂತೆ ಭಾಸವಾಗುವುದು

ಭ್ರಮೆ

(ವೈ) ಅಸಂಬದ್ಧವಾದರೂ ತನ್ನ ನಂಬಿಕೆಯನ್ನು ಸಮರ್ಥಿಸಿಕೊಳ್ಳುವ ಗಾಢವಾದ ಚಿತ್ತಚಾಂಚಲ್ಯ. ಷಿ(ಸ್ಕಿ)ಜೊ ಫ್ರೇನಿಯ ಮನೋರೋಗಿಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ

ಭ್ರಾಂತಿ

(ವೈ) ಬಾಹ್ಯಪ್ರೇರಣೆಯಿಂದಾದುದೆಂದು ಕಂಡುಬರುವ, ವಾಸ್ತವವಾಗಿ ನರ/ಮಿದುಳು ತೊಂದರೆಯಿಂದಾಗಿ ಆದ ಇಂದ್ರಿಯಾನುಭವ. ಉದಾ: ನಿಜವಾಗಿಯೂ ಇಲ್ಲದ ಬಾಹ್ಯ ವಸ್ತುವನ್ನು ಇದ್ದಂತೆ ಭ್ರಮಿಸುವುದು. ಮಿಥ್ಯಾದರ್ಶನ. ಹುಸಿ ಭಾವನೆ

ಭ್ರಾತೃ ಅವಳಿ

(ವೈ) ಎರಡು ವಿಭಿನ್ನ ವೀರ್ಯಾಣು ಗಳಿಂದ ಒಂದೇ ಹೊತ್ತಿನಲ್ಲಿ ಫಲೀಕರಿಸಿದ ಎರಡು ವಿಭಿನ್ನ ಪುನರುತ್ಪಾದಕ ಕೋಶ ಅಥವಾ ಅಂಡಗಳಿಂದ ಅಭಿವರ್ಧನೆಗೊಂಡ ತದ್ರೂಪವಿಲ್ಲದ ಅವಳಿಗಳು

ಭ್ರಾಮಕ

(ಸಂ) ದತ್ತಾಂಶದಲ್ಲಿ ಚರದ ಮೌಲ್ಯ xiಯ ಆವರ್ತಾಂಕ fi ಆಗಿದ್ದು, ಅಂಕಗಣಿತೀಯ ಮಾಧ್ಯವನ್ನು ಸೂಚಿಸಿದರೆ ಎಂಬುದನ್ನು r – ದರ್ಜೆಯ ಕೇಂದ್ರೀಯ ಭ್ರಾಮಕವೆನ್ನುತ್ತಾರೆ. ಈ ಬಳಕೆಯ ಮೂಲವು ಭೌತವಿಜ್ಞಾನದಲ್ಲಿದೆ

ಭ್ರಾಮಕ

(ಭೌ) ಬಿಂದುವೊಂದರ ಸುತ್ತ ಆವರ್ತನೆ ಇಲ್ಲವೇ ತಿರುಚಿಗೆ ಕಾರಣವಾಗುವ ಬಲ ಮತ್ತು ಆ ಬಿಂದುವಿನಿಂದ ಈ ಬಲದ ಲಂಬದೂರ ಇವುಗಳ ಗುಣಲಬ್ಧ. ಭ್ರಾಮಕದ ಏಕಮಾನ ನ್ಯೂಟನ್-ಮೀಟರ್. ಇದೊಂದು ಸದಿಶ ಗುಣಲಬ್ಧ. ತಿರುಬಾನಿ ತನ್ನ ಕೇಂದ್ರೀಯ ಆವರ್ತಕ ದಂಡದಲ್ಲಿ ಭ್ರಾಮಕವನ್ನು ಉತ್ಪಾದಿಸುತ್ತದೆ. ಟಾರ್ಕ್

ಭ್ರೂಣ

(ಪ್ರಾ) ಸ್ತನಿಗಳಲ್ಲಿ ಗರ್ಭಾಶಯದಲ್ಲಿರುವ ಅಥವಾ ಅಂಡೋತ್ಪಾದಕ ಪ್ರಾಣಿಗಳಲ್ಲಿ ಮೊಟ್ಟೆಯಲ್ಲಿರುವ, ಅಭಿವರ್ಧನೆಯ ಅಂತಿಮ ಘಟ್ಟದ, ಅಂದರೆ ಅಂಗಾಂಗಗಳು ಬೆಳೆಯತೊಡಗಿದ ಅಂದಿನಿಂದ ಜನನವಾಗುವವರೆಗಿನ, ಎಳೆಜೀವ

ಭ್ರೂಣ ಕುಹರ

(ಪ್ರಾ) ಅಂಡದಲ್ಲಿ ಸೀಳಿಕೆ ಆರಂಭ ವಾಗುವಾಗ ಪ್ರಕಟವಾಗುವ ಪೊಳ್ಳು

ಭ್ರೂಣ ಜನನ

(ಸ) ಮೊಗ್ಗು ಅಥವಾ ಅಂಕುರ ಒಡೆಯುವುದರ ಮೂಲಕ ಸಂತಾನೋತ್ಪತ್ತಿ. (ಪ್ರಾ) ಜೀವ ದ್ರವ್ಯದ ಮೂಲಕ ಸಂತತಿಗೆ ಆನುವಂಶಿಕ ಲಕ್ಷಣ ಸಾಗಿಸುವುದು

ಭ್ರೂಣ ಜನನ ಕೋಶಗಳು

(EG) cells (ವೈ) ಭ್ರೂಣದಲ್ಲಿ ಅಪರಿಮಿತ ವಿಭಜನ ಸಾಮರ್ಥ್ಯವಿರುವ ಕೆಲವು ಜೀವಕೋಶಗಳು ಭ್ರೂಣದ ವೃಷಣ ಅಥವಾ ಅಂಡಾಶಯಗಳಿಗೆ ಹೋಗಿ ಸ್ಥಾಪಿತವಾಗುತ್ತವೆ. ಈ ಜನನ ಕೋಶಗಳು ಮಗುವಿನ ಹದಿಹರಯಾವಧಿಯಲ್ಲಿ ಅಸಂಖ್ಯ ವೀರ್ಯಾಣು ಹಾಗೂ ಅಂಡಾಣುಗಳನ್ನು ಸೃಜಿಸುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App