भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭೂರಚನಾ ವಿಜ್ಞಾನ

(ಭೂವಿ) ಭೂ ಚಿಪ್ಪಿನ ಪ್ರಾದೇಶಿಕ, ರಾಚನಿಕ ಮತ್ತು ವಿರೂಪಣಾತ್ಮಕ ಲಕ್ಷಣಗಳ ಪರಸ್ಪರ ಸಂಬಂಧ. ಮೂಲ ಮತ್ತು ಐತಿಹಾಸಿಕ ವಿಕಾಸಗಳ ಅಧ್ಯಯನ

ಭೂರೂಪಶಾಸ್ತ್ರ

(ಭೂವಿ) ಭೂಚಿಪ್ಪಿನ ಭೌತ ಲಕ್ಷಣ, ನೆಲ-ಜಲ ಹಂಚಿಕೆ, ಭೂವೈಜ್ಞಾನಿಕ ರಚನೆ ಇತ್ಯಾದಿಗಳನ್ನು ಅಭ್ಯಸಿಸುವ ವಿಜ್ಞಾನ ವಿಭಾಗ

ಭೂವಿರೂಪಣ

(ಭೂವಿ) ಭೂಮಿಯ ಹೊರಚಿಪ್ಪಿನಲ್ಲಿ ಖಂಡ, ಸಾಗರ ಪಾತ್ರ, ಪ್ರಸ್ಥಭೂಮಿ, ಪರ್ವತ, ಸ್ತರಮಡಿಕೆ, ಸ್ತರಭಂಗ ಉಂಟುಮಾಡುವ ವಿರೂಪಣ ಪ್ರಕ್ರಿಯೆ

ಭೂವಿವರ್ತನಿಕ

(ಭೂವಿ) ಭೂ ಚಲನೆಯಿಂದಾಗುವ ಭೂ ಚಿಪ್ಪಿನ ಬಾಗು ಮತ್ತು ಚಿಪ್ಪಿನ ಭಂಗದಿಂದಾಗುವ ಶಿಲಾರಚನೆ – ಇವುಗಳಿಗೆ ಸಂಬಂಧಿಸಿದ

ಭೂವೈಜ್ಞಾನಿಕ ಕಾಲ

(ಭೂವಿ) ಜೀವಿ ವಿಕಾಸವೂ ಸೇರಿದಂತೆ ಭೂ ರಚನೆ ಅಂತ್ಯಗೊಂಡ ಕಾಲದಿಂದ ಹಿಡಿದು ಚಾರಿತ್ರಿಕ ಕಾಲದ ಆರಂಭದವರೆಗಿನ ಕಾಲಘಟ್ಟ. ಈ ಅವಧಿಯನ್ನು ಒಂದೊಂದು ಕಾಲದಲ್ಲೂ ಒಂದೊಂದು ವ್ಯವಸ್ಥೆಗೆ (ಸಿಸ್ಟಮ್) ತಕ್ಕಂತೆ ಯುಗಗಳಾಗಿ ವಿಭಜಿಸಲಾಗಿದೆ

ಭೂವೈಜ್ಞಾನಿಕ ಯುಗಗಳು

(ಭೂವಿ) ಭೂವೈಜ್ಞಾನಿಕ ಕಾಲಮಾಪನದಲ್ಲಿ ಉಪಯುಗಕ್ಕಿಂತ ಅಧಿಕಾವಧಿ ಹಾಗೂ ಕಲ್ಪಕ್ಕಿಂತ ಹ್ರಸ್ವಾವಧಿಯ ಕಾಲಘಟ್ಟಗಳು. ಆಯಾಕಾಲದ ಶಿಲಾಮಾದರಿಗಳ ಅಧ್ಯಯನದಿಂದ ಇವನ್ನು ನಿರ್ಧರಿಸಲಾಗುತ್ತದೆ

ಭೂಶಿರ

(ಭೂವಿ) ಕರಾವಳಿ ರೇಖೆಯನ್ನು ಮೀರಿ ನೀರಿನೊಳಕ್ಕೆ ಚಾಚಿರುವ ನೆಲಭಾಗ. ಉದಾ: ಕನ್ಯಾಕುಮಾರಿ

ಭೂಸಂಧಿ

(ಭೂ) ಎರಡು ದೊಡ್ಡ ಭೂಭಾಗಗಳನ್ನು ಸೇರಿಸುವ ಕಿರಿಭೂಭಾಗ. ಉದಾ: ದ.ಗ್ರೀಸಿನ ಕೌರಿಂತ್. ಭೂಕಂಠ

ಭೂಸ್ಥಿತಿ

(ಭೌ) ನ್ಯೂಕ್ಲಿಯರ್ (ಬೈಜಿಕ) ವ್ಯವಸ್ಥೆ, ಪರಮಾಣುಗಳು ಇತ್ಯಾದಿ ತಮ್ಮ ನಿಮ್ನತಮ ಶಕ್ತಿಮಟ್ಟದಲ್ಲಿ ಇರುವುದು – ಅಂದರೆ ಅವು ಉದ್ರಿಕ್ತವಾಗಿರದಾಗಿನ ಸ್ಥಿತಿ

ಭೇದನೆ

(ತಂ) ಅತ್ಯಂತ ಭಾರ ಅಣುಗಳ ಎಣ್ಣೆಗಳನ್ನು ಸಂಸ್ಕರಣ ಕೇಂದ್ರದಲ್ಲಿ ಉಷ್ಣ, ಒತ್ತಡ ಮತ್ತು ಕ್ರಿಯಾವರ್ಧಕಗಳ ಬಳಕೆಯಿಂದ ಅತ್ಯಂತ ಹಗುರವಾದ ಅಣುಗಳಿರುವ ಪೆಟ್ರೋಲಿಯಂನಂಥ ಎಣ್ಣೆಗಳಾಗಿ ಒಡೆಯುವುದು. ಬಿರಿತ

ಭೇದಿ

(ವೈ) ಭೇದಿ ಔಷಧದಿಂದ ಮಲವಿಸರ್ಜನೆ ಮಾಡಿಸುವಿಕೆ. ವಿರೇಚನ

ಭೋರ್ಗರೆತ

(ಸಾ) ಜಲಪಾತದ ಬಳಿ ಇಲ್ಲವೇ ಜಡಿಮಳೆ ಸುರಿಯುವ ವೇಳೆ ಕೇಳಿ ಬರುವ ಗದ್ದಲ. ಅಬ್ಬರ. ಮಸೆತ

ಭೌಗೋಳಿಕ ಧ್ರುವ

(ಖ) ಭೂಮಿಯ ಅಕ್ಷದ ಎರಡು ಕಾಲ್ಪನಿಕ ಕೊನೆಗಳ ಪೈಕಿ ಒಂದು. ಇವುಗಳಿಗೆ ಉತ್ತರ ಮತ್ತು ದಕ್ಷಿಣ ಬಿಂದುಗಳೆಂದು ಹೆಸರು. ಉತ್ತರಗೋಳಾರ್ಧ ನಿವಾಸಿಗಳಿಗೆ ಸ್ಥೂಲವಾಗಿ ಧ್ರುವನಕ್ಷತ್ರದ ದಿಶೆ ಉತ್ತರ ಬಿಂದುವನ್ನು ಸೂಚಿಸುತ್ತದೆ

ಭೌತ ಅಧಿಶೋಷಣ

(ರ) ಇದಕ್ಕೆ ‘ವ್ಯಾನ್ ಡೆರ್ ವಾಲ್ಸ್’ ಅಧಿಶೋಷಣವೆಂದೂ ಹೆಸರು. ಅಧಿಶೋಷಕದ ಮೇಲ್ಮೈಯಲ್ಲಿ ಅಧಿಶೋಷ್ಯದ ಅಣುಗಳು ಅಂತರಾಣು ಬಲಗಳಿಂದ ಬಂಧಿತವಾಗಿರುವುದು. ಈ ಹಿಡಿತದಲ್ಲಿ ವೇಲೆನ್ಸಿ ಬಲಗಳೂ ಸಹ ಪಾಲ್ಗೊಂಡಿದ್ದರೆ ಅದು ರಾಸಾಯನಿಕ ಅಧಿಶೋಷಣ ಎನಿಸಿ ಕೊಳ್ಳುತ್ತದೆ. ಉದಾ: ಟಂಗ್‌ಸ್ಟನ್ ಮೇಲೆ ಆಕ್ಸಿಜನ್, ನಿಕ್ಕಲ್ ಮೇಲೆ ಹೈಡ್ರೊಜನ್ ಅಣುಗಳು ಸಹ-ವೇಲೆನ್ಸಿ ಬಂಧಗಳಿಂದ ಸಂಗ್ರಹಿತ

ಭೌತ ವ್ಯತ್ಯಯ

(ಭೌ) ಯಾವುದೇ ಕಾಯದಲ್ಲಿ ರಾಸಾಯನಿಕ ಬದಲಾವಣೆಗಳಿಲ್ಲದೆ ಸಂಭವಿಸುವ ಬದಲಾವಣೆ

ಭೌತಗುಣ

(ಭೌ) ಯಾವುದೇ ಪದಾರ್ಥದ ರಾಸಾಯನಿಕ ಕ್ರಿಯೆಗಳಿಗೆ ಸಂಬಂಧಿಸಿರದ ಅದರ ಗುಣಗಳು: ತೂಕ, ಗಾತ್ರ, ಬಣ್ಣ, ಪಾರಕತೆ. ಕುದಿಬಿಂದು, ಕರಗು ಬಿಂದು

ಭೌತಚಿಕಿತ್ಸೆ

(ವೈ) ರೋಗಗಳಿಗೆ ಔಷಧಿಗಳ ಬದಲು ಅಂಗ ಮರ್ದನ, ಶಾಖ, ಅಂಗಸಾಧನೆ ಮುಂತಾದ ಭೌತ ವಿಧಾನಗಳ ಮೂಲಕ ನೀಡುವ ಚಿಕಿತ್ಸೆ

ಭೌತಭೂಗೋಳಶಾಸ್ತ್ರ

(ಭೂ) ಭೂಮಿಯ ಹೊರಮೈಯ ಭೌತಲಕ್ಷಣಗಳು ಮತ್ತು ಬದಲಾವಣೆಗಳನ್ನು ಕುರಿತ ಭೂಗೋಳಶಾಸ್ತ್ರ ಶಾಖೆ. ಇದು ವಾಯು, ಜಲ ಹಾಗೂ ಭೂಮಿಗಳ ನಡುವಿನ ಪರಸ್ಪರ ಕ್ರಿಯೆಗಳನ್ನೂ ಒಳಗೊಂಡಿರುತ್ತದೆ

ಭೌತಭೂವಿಜ್ಞಾನ

(ಭೂ) ಭೂಮಿಯ ರಚನೆ, ಶಿಲಾಜನನ ಮತ್ತು ಬಾಹ್ಯಸ್ವರೂಪಗಳನ್ನು ಅಧ್ಯಯನ ಮಾಡುವ ಭೂವಿಜ್ಞಾನ ಶಾಖೆ. ನೋಡಿ : ಭೂಭೌತ ವಿಜ್ಞಾನ

ಭೌತರಸಾಯನವಿಜ್ಞಾನ

(ರ) ಯಾವುದೇ ವಸ್ತುವಿನ ಭೌತಗುಣಗಳ ಮೇಲೆ ಆ ವಸ್ತುವಿನ ರಾಸಾಯನಿಕ ರಚನೆ ಬೀರುವ ಪರಿಣಾಮಗಳನ್ನು ಅಧ್ಯಯಿಸುವ ರಸಾಯನ ವಿಜ್ಞಾನ ಶಾಖೆ

Search Dictionaries

Loading Results

Follow Us :   
  Download Bharatavani App
  Bharatavani Windows App