भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭೂಗರ್ಭ

(ಭೂವಿ) ಭೂಮಿಯಲ್ಲಿ ೨೯೦೦ ಕಿಮೀ ಆಳಕ್ಕಿಂತ ಕೆಳಗಿನ ಕೇಂದ್ರಭಾಗ. ನಿಕ್ಕಲ್ ಮತ್ತು ಕಬ್ಬಿಣ ಧಾತುಗಳಿಂದ ಆಗಿದೆ ಎಂದು ಊಹೆ. ತಿರುಳು

ಭೂಗೋಳ

(ಭೂ) ವಾಯುಮಂಡಲ ಮತ್ತು ಜಲಭಾಗ ಗಳನ್ನು ಬಿಟ್ಟು ಭೂಮಿಯ ಘನಭಾಗ

ಭೂಗೋಳ ಸಮಭಾಜಕ ವೃತ್ತ

(ಖ) ಭೂಮಿಯ ಧ್ರುವೀಯ ಅಕ್ಷಕ್ಕೆ ಲಂಬವಾಗಿದ್ದು ಭೂ ಗೋಳವನ್ನು ಸಮದ್ವಿಭಾಗಿ ಸುವ ಕಾಲ್ಪನಿಕ ವೃತ್ತ. ಇದರ ಮೇಲಿನ ಪ್ರತಿಯೊಂದು ಬಿಂದುವೂ ಧ್ರುವ ಬಿಂದು ಗಳಿಂದ ಸಮದೂರದಲ್ಲಿ ಇರುವುದು (೯೦0). ಉತ್ತರ ಧ್ರುವದ ಕಡೆಗಿನ ಭಾಗ ಉತ್ತರಾರ್ಧಗೋಳ. ದಕ್ಷಿಣ ಧ್ರುವದ ಕಡೆಗಿನದು ದಕ್ಷಿಣಾರ್ಧ ಗೋಳ. ಭೂಗೋಳ ಸಮಭಾಜಕದ ಅಕ್ಷಾಂಶ ೦0 ಆಗಿದ್ದು ಇದರಿಂದ ವಿವಿಧ ಭಾಗಗಳ ಅಕ್ಷಾಂಶಗಳನ್ನು ಲೆಕ್ಕಹಾಕಲಾಗುತ್ತದೆ. ಭೂಗೋಳ ಸಮಭಾಜಕ ವೃತ್ತವನ್ನು ಖಗೋಳಕ್ಕೆ ವಿಸ್ತರಿಸಿದಾಗ ಖಗೋಳ ಸಮಭಾಜಕವೃತ್ತ ದೊರೆಯುತ್ತದೆ. ಭೂಮಧ್ಯರೇಖೆ. ನೋಡಿ: ಖಗೋಳ ವಿಷುವದ್ವೃತ್ತ

ಭೂಗೋಳಶಾಸ್ತ್ರ

(ಭೂ) ಭೂಮಿಯ ಮೇಲ್ಮೈ, ರೂಪ, ಪ್ರಾಕೃತಿಕ ಲಕ್ಷಣಗಳು, ನೈಸರ್ಗಿಕ ಮತ್ತು ರಾಜಕೀಯ ವಿಭಾಗಗಳು, ಹವಾಗುಣ, ಉತ್ಪನ್ನಗಳು, ಜನಸಂಖ್ಯೆ ಮುಂತಾದವನ್ನು ಭೂಪಟ ರಚನೆ, ದೂರಸಂವೇದನಾ ತಂತ್ರಗಳು, ಸರ್ವೇಕ್ಷಣೆ, ಅಂಕಿಅಂಶ ವಿಶ್ಲೇಷಣೆ ಇತ್ಯಾದಿಗಳ ಮೂಲಕ ಅಭ್ಯಸಿಸುವ ಶಾಸ್ತ್ರ. ಭೂವಿವರಣೆ

ಭೂಜಲ

(ಭೂವಿ) ನೋಡಿ: ಅಂತರ್ಜಲ

ಭೂತಗನ್ನಡಿ

(ಭೌ) ವಸ್ತುಗಳ ಗಾತ್ರವನ್ನು ಹಿಗ್ಗಿಸಿ ತೋರಿಸುವ ಪೀನಮಸೂರ

ಭೂತಭಯ

(ವೈ) ರೋಗಿ ತನಗೆ ದೆವ್ವ ಹಿಡಿದಿದೆ ಎಂದು ಭ್ರಾಂತಿಗೊಳ್ಳುವ ಮಾನಸಿಕ ರೋಗ

ಭೂದೀಪ್ತಿ

(ಖ) ಭೂಮಿಯಿಂದ ಪ್ರತಿಫಲನಗೊಂಡ ಸೂರ್ಯ ಪ್ರಕಾಶ. ಇದರಿಂದಾಗಿ ಶುಕ್ಲಪಕ್ಷದ ಪ್ರಥಮಾರ್ಧದಲ್ಲಿ ಇಲ್ಲವೇ ಕೃಷ್ಣಪಕ್ಷದ ದ್ವಿತೀಯಾರ್ಧದಲ್ಲಿ ಚಂದ್ರಬಿಂಬದ ಉಜ್ಜ್ವಲವಲ್ಲದ ಭಾಗವೂ ಕಾಣುವಂತಾಗುತ್ತದೆ

ಭೂದೃಶ್ಯ

(ಭೂ) ಒಂದೇ ನೋಟದಲ್ಲಿ ಕಾಣಬರುವ ಯಾವುದೇ ನೈಸರ್ಗಿಕ ಅಥವಾ ಕಾಲ್ಪನಿಕ ಭೂಪ್ರದೇಶವೊಂದರ ಹೊರಮೈಯ ದೃಶ್ಯ. ನೆಲಹರವು

ಭೂಧ್ರುವಗಳು

(ಖ) ಭೂಮಿಯ ಅಕ್ಷವು ಮೇಲ್ಮೈಯನ್ನು ಸಂಧಿಸುವ ಎರಡು ವ್ಯಾಸೀಯ ವಿರುದ್ಧ ಬಿಂದುಗಳು. ಈ ಅಕ್ಷದ ವಿಸ್ತರಣೆ ಖಗೋಲವನ್ನು ಸಂಧಿಸುವ ಬಿಂದುಗಳಿಗೆ ಖಗೋಳ ಧ್ರುವಗಳೆಂದು ಹೆಸರು. ಮೇರುಗಳು

ಭೂನಗ್ನೀಕರಣ

(ಭೂವಿ) ನೈಸರ್ಗಿಕ ಕಾರಕಗಳಾದ ಗಾಳಿ, ಮಳೆ, ಬಿಸಿಲು ಮತ್ತು ನದಿಗಳಿಂದ ಬೆಟ್ಟ ಅಥವಾ ಬಂಡೆಗಳ ಮೇಲ್ಪದರಗಳು ಕೊಚ್ಚಿಹೋಗಿ ಅವುಗಳ ಮೂಲಗಾತ್ರ ಕುಗ್ಗುವುದು. ಬೆಟ್ಟ ಸವೆತ

ಭೂಪಟ

(ಭೂ) ಭೂಮಿಯ ಅಥವಾ ಯಾವುದೇ ಪ್ರದೇಶದ ಇಡೀ ಇಲ್ಲವೇ ಭಾಗಶಃ ಮೇಲ್ಮೈಯ ಪ್ರಾಕೃತಿಕ ಲಕ್ಷಣಗಳನ್ನೂ ರಾಷ್ಟ್ರೀಯ ವಿಭಾಗಾದಿಗಳನ್ನೂ ಸಾಪೇಕ್ಷ ಗಾತ್ರ ಸ್ಥಾನಗಳನ್ನೂ ಸೂಚಿಸಲು ಕಾಗದದ ಮೇಲೆ ಅಥವಾ ಯಾವುದೇ ಸಮತಲದ ಮೇಲೆ ರೇಖಿಸಿದ ಎರಡು ಆಯಾಮದ ನಿರೂಪಣ ನಕ್ಷೆ

ಭೂಪ್ರದಕ್ಷಿಣೆ

(ಸಾ) ಹಡಗಿನಲ್ಲಿ ಭೂ ಪ್ರದಕ್ಷಿಣೆ ಮಾಡು. ಪ್ರಪಂಚ ಸುತ್ತು

ಭೂಭೌತವಿಜ್ಞಾನ

(ಭೌ) ಭೂಗಣಿತ, ಭೂಕಂಪನ ವಿಜ್ಞಾನ, ಪವನ ವಿಜ್ಞಾನ ಹಾಗೂ ಸಾಗರ ವಿಜ್ಞಾನಗಳಲ್ಲಿ ಲಭ್ಯ ಇರುವ ಮಾಹಿತಿಗಳನ್ನೂ ವಾತಾವರಣ ವಿದ್ಯುಚ್ಛಕ್ತಿ, ಭೂಕಾಂತತೆ ಹಾಗೂ ಉಬ್ಬರವಿಳಿತ ವಿದ್ಯಮಾನಗಳಿಗೆ ಸಂಬಂಧಿಸಿದ ಮಾಹಿತಿಗಳನ್ನೂ ಬಳಸಿಕೊಂಡು ಭೂಮಿಯ ಭೌತ ಗುಣಗಳನ್ನು ಅಭ್ಯಸಿಸುವ ವಿಜ್ಞಾನ

ಭೂಭ್ರಮಣೀಯ

(ಭೂವಿ) ಭೂಭ್ರಮಣವನ್ನು ಅವಲಂಬಿಸಿರುವ ಅಥವಾ ಅದಕ್ಕೆ ಸಂಬಂಧಿಸಿದ (ಬಲಗಳು). ಭೂಮ್ಯಾವರ್ತನ ಸಂಬಂಧಿ

ಭೂಮಾರುತ

(ಭೂ) ನೋಡಿ: ನೆಲಗಾಳಿ

ಭೂಮಿ

(ಖ) ಸೌರವ್ಯೂಹದಲ್ಲಿ ಸೂರ್ಯನಿಂದ ದೂರಾನುಸಾರ ಮೂರನೆಯ ಗ್ರಹ (ಮೊದಲನೆಯ ಎರಡು ಗ್ರಹಗಳು; ಬುಧ, ಶುಕ್ರ). ಭೌತವಿವರಗಳು: ಸರಾಸರಿ ಸಮಭಾಜಕೀಯ ತ್ರಿಜ್ಯ ೬೩೭೮.೧೭ ಕಿಮೀ; ಸಮಭಾಜಕೀಯ ಪರಿಧಿ: ೪೦೦೭೫ ಕಿಲೊಮೀಟರ್; ರಾಶಿ ೫.೯೭೭x೧೦೨೪ ಕಿಗ್ರಾಮ್; ಸರಾಸರಿ ಸಾಂದ್ರತೆ ೫.೫೧೭; ಭೂಗಾತ್ರದ ಶೇ. ೭೧ಕ್ಕಿಂತಲೂ ಅಧಿಕಾಂಶ ಜಲಾವೃತವಾಗಿದೆ. ನಿಜಕ್ಕೂ ಜಲಗೋಳ ಎಂಬ ಹೆಸರು ಈ ಗ್ರಹಕ್ಕೆ ಹೆಚ್ಚು ಯುಕ್ತವಾಗಿ ಇರುತ್ತಿತ್ತು. ವಾಯುಗೋಳದಿಂದಲೂ ಆವೃತ. ಆಕ್ಸಿಜನ್ ಹಾಗೂ ನೈಟ್ರೊಜನ್‌ಗಳಿಂದ ಕೂಡಿದ ವಾತಾವರಣವಿದೆ. ವಿಸ್ತೃತ ಕಾಂತ ವಲಯವೂ ಉಂಟು. ಆಂತರಿಕವಾಗಿ ಮೂರು ವಿಶಿಷ್ಟ ಪ್ರದೇಶ/ವಿಭಾಗಗಳಿವೆ: ತೊಗಟೆ/ಚಿಪ್ಪು ಅತ್ಯಂತ ಮೇಲಿನ ಸ್ತರ. ಖಂಡಗಳ ಕೆಳಗೆ ಸುಮಾರು ೩೫ ಕಿಮೀ ದಪ್ಪ. ಪ್ರಧಾನವಾಗಿ ಪುರಾತನ ಅಗ್ನಿಶಿಲೆ ಬಸಾಲ್ಟ್ ಹಾಗೂ ಗ್ರಾನೈಟ್‌ಗಳನ್ನು ಆಧರಿಸಿ ಜಲಜಶಿಲೆಗಳಿಂದ ಆಗಿದೆ. ಇದರ ಕೆಳಗೆ ಕವಚ ಇದೆ. ಸುಮಾರು ೩೦೦೦ ಕಿಮೀ ವ್ಯಾಪ್ತಿಯ ಇದು ಸಿಲಿಕೇಟ್ ಶಿಲಾಯುಕ್ತವಾಗಿದೆ. ಅತ್ಯಂತ ಒಳಗಿನದು ತಿರುಳು/ಭೂಗರ್ಭ. ಇದು ನೀರಿಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ಸಾಂದ್ರ. ಬಹುಶಃ ನಿಕ್ಕಲ್ ಕಬ್ಬಿಣಗಳಿಂದ ಕೂಡಿದೆ. ಭಾಗಶಃ ದ್ರವರೂಪದಲ್ಲಿದೆ. ಇದೇ ಭೂಕಾಂತ ಕ್ಷೇತ್ರದ ಮೂಲ. ಇಲ್ಲಿಯ ಉಷ್ಣತೆ ೬೪೦೦ K. ಇತರ ಗ್ರಹಗಳಂತೆ ಭೂಮಿಗೂ ಎರಡು ಬಗೆಯ ಚಲನೆಗಳಿವೆ: ಸ್ವಂತ ಅಕ್ಷದ ಸುತ್ತ ಆವರ್ತನೆ (ದಿವಸ), ಸೂರ್ಯನ ಸುತ್ತ ಪರಿಭ್ರಮಣೆ (ವರ್ಷ); ಭೂಕಕ್ಷೆಯ ಸರಾಸರಿ ತ್ರಿಜ್ಯ ೧೪೯, ೫೯೭, ೮೭೦ ಕಿಮೀ

ಭೂಮ್ಯಂತರ್ಗತ

(ಭೂವಿ) ನೆಲದೊಳಗಿನ. ಭೂಗರ್ಭದ ಆಳದಿಂದ ಮೇಲಕ್ಕೆ ಸರಿದುಬಂದು ಭೂಮಿಯ ಮೇಲ್ಪದರದ ಕೆಳಗೆ ರೂಪುಗೊಂಡಿರುವ ಸ್ತರ

ಭೂಮ್ಯತೀತ

(ಖ) ಭೂಮಿಯಿಂದ ಅಥವಾ ಅದರ ವಾಯುಮಂಡಲದ ಆಚೆ ಇರುವ. ಅಧಿಭೌಮ

ಭೂಮ್ಯತೀತ ಬುದ್ಧಿವಂತಿಕೆ

(ಖ) ಭೂಮಿಯಿಂದ ಅಥವಾ ಅದರ ವಾಯುಮಂಡಲದ ಆಚೆ ಇದ್ದು ತನ್ನ ಅಸ್ತಿತ್ವವನ್ನು ನಮಗೆ ವಿದ್ಯುತ್ಕಾಂತ ಸ್ಪಂದಗಳ ಮೂಲಕ ವ್ಯಕ್ತಪಡಿಸಬಲ್ಲ ಮತ್ತು ನಾವು ಪ್ರೇಷಿಸಿದ ವಿದ್ಯುತ್ಕಾಂತ ಸ್ಪಂದಗಳನ್ನು ಗ್ರಹಿಸಿ ವಿಶ್ಲೇಷಿಸಬಲ್ಲ ಜೀವಿ ಸಮುದಾಯ ಮತ್ತು ಅದರ ಸಮಗ್ರ ಬುದ್ಧಿವಂತಿಕೆ. ಇದೊಂದು ಸೈದ್ಧಾಂತಿಕ ಊಹೆ

Search Dictionaries

Loading Results

Follow Us :   
  Download Bharatavani App
  Bharatavani Windows App