भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭುಜಾಸ್ಥಿ

(ಪ್ರಾ) ಮನುಷ್ಯನ ಮೇಲುತೋಳಿನ ಮೂಳೆ. ಮನುಷ್ಯೇತರ ಪ್ರಾಣಿಗಳ ಮುಂಗಾಲಿನ ಮೇಲ್ಭಾಗದ ಮೂಳೆ. ಹೆಗಲ ಮೂಳೆ

ಭೂ-ಸ್ಥಿರ ಕಕ್ಷೆ

(ಅಂವಿ) ಭೂಮಧ್ಯ ರೇಖೆ ಸಮತಲದಲ್ಲಿ ೩೬,೦೦೦ ಕಿ.ಮೀ ಎತ್ತರದಲ್ಲಿರುವ ವಿಶೇಷ ವೃತ್ತೀಯ ಕಕ್ಷೆ. ಇದರಲ್ಲಿ ಉಪಗ್ರಹಗಳು ಭೂಮಿಯ ಆವರ್ತನ ವೇಗದಲ್ಲೇ ಚಲಿಸುತ್ತಿರುವುದರಿಂದ ಅವು ಭೂಮಿಯ ಮೇಲಿನ ಪ್ರದೇಶ ವೊಂದರ ಮೇಲೆ ಸ್ಥಿರವಾಗಿ ನಿಂತಂತೆ ವರ್ತಿಸುತ್ತವೆ. ಬಹುತೇಕ ಸಂಪರ್ಕ ಉಪಗ್ರಹಗಳು ಮತ್ತು ಚಂಡಮಾರುತಗಳನ್ನು ವೀಕ್ಷಿಸುವ ಹವಾಮಾನ ಉಪಗ್ರಹಗಳು ಈ ಕಕ್ಷೆಯಲ್ಲಿರುತ್ತವೆ

ಭೂಅಭಿನತಿ

(ಭೂವಿ) ಭೂಚಿಪ್ಪಿನ ಉದ್ದವಾದ ಹಾಗೂ ಭಾರಿ ಪ್ರಮಾಣದ ಕೆಳಬಾಗು. ಉದ್ದ ಹಲವು ನೂರು ಕಿಮೀ. ಲಾವಾರಸ ಮತ್ತು ಮಡ್ಡಿ ತುಂಬಿರುವುದು. ಅನೇಕ ಕಿಮೀ ದಪ್ಪ. ಇಲ್ಲಿಯ ಶಿಲೆಗಳು ಸಾಮಾನ್ಯವಾಗಿ ವಿರೂಪಗೊಂಡಿದ್ದು ತದನಂತರ ರೂಪಾಂತರಗೊಳ್ಳುತ್ತವೆ

ಭೂಉಷ್ಣ ಶಕ್ತಿ

(ಭೌ) ಭೂಚಿಪ್ಪನ್ನು ರೂಪಿಸಿ ರುವ ಶಿಲೆಗಳಲ್ಲಿ ನಿಹಿತವಾಗಿರುವ ಉಷ್ಣಶಕ್ತಿ ಜ್ವಾಲಾಮುಖಿಗಳು, ಬಿಸಿನೀರಿನ ಬುಗ್ಗೆಗಳು, ಬಿಸಿನೀರಿನ ಚಿಲುಮೆಗಳು – ಇವೆಲ್ಲ ಭೂಉಷ್ಣ ಶಕ್ತಿಯ ಆಕರಗಳು. ಈ ಶಕ್ತಿಯನ್ನು ಬಳಸಿಕೊಂಡು ವಿದ್ಯುಚ್ಛಕ್ತಿ ತಯಾರಿಸುವುದು ಈಗ ಸಾಮಾನ್ಯವಾಗುತ್ತಿದೆ. ಭೂಮಿಯ ಉಷ್ಣ ಪ್ರವಣತೆ (ವಾಟ) ಅಧಿಕವಾಗಿರುವೆಡೆಗಳಲ್ಲಿ ಆಳ ಕೊರೆಬಾವಿಗಳನ್ನು ತೋಡಿ ಹಾಗೆ ತೋಡಿದಾಗ ಹೊರ ಹೊಮ್ಮುವ ಔಷ್ಣೀಯ ಶಕ್ತಿಯನ್ನು ಒಂದು ತರಲದೊಳಕ್ಕೆ ಹಾಯಿಸ ಲಾಗುವುದು. ಆಗ ಕಾದ ತರಲವನ್ನು ಟರ್ಬೊಜನರೇಟರ್‌ನ ಚಾಲನೆಗೆ ನೇರ ಶಾಖ ಒದಗಿಸಲು ಇಲ್ಲವೇ ಉಗಿ ಉಂಟುಮಾಡಲು ಬಳಸಲಾಗುತ್ತದೆ. ಹೀಗೆ ವಿದ್ಯುತ್ತನ್ನು ಪಡೆಯುವುದು ಈಚಿನ ದಿನಗಳಲ್ಲಿ ಲಾಭದಾಯಕವಾಗುತ್ತಿದೆ. ಲಾರ್ಡೆರೆಲ್ಲೊ (ಇಟಲಿ) ವೈರಕೈ (ನ್ಯೂಜಿಲ್ಯಾಂಡ್), ರೈಕ್‌ಜವಿಕ್ (ಐಸ್‌ಲ್ಯಾಂಡ್) ಪ್ರದೇಶ ಗಳಲ್ಲಿ ಈ ತೆರನಾಗಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ

ಭೂಕಂಪನ

(ಭೂವಿ) ಭೂಮಿಯ ಹೊರಚಿಪ್ಪಿನ ಅಲುಗಾಟ. ರಿಕ್ಟರ್ ಮಾನಕದಲ್ಲಿ ೬ ಅಥವಾ ಅಧಿಕ ಪರಿಮಾಣದ್ದು ಭೀಕರ ಕಂಪನ. ಕಡಿಮೆ ಪರಿಮಾಣದ್ದು ಲಘುಕಂಪನ. ಸಾಮಾನ್ಯವಾಗಿ ಭೀಕರ ಭೂಕಂಪನಗಳು ಸ್ತರಭಂಗಗಳಲ್ಲಿಯ ಶಿಲಾಸರಿತದಿಂದಾಗುತ್ತವೆ. ಭೂಮಿಯನ್ನು ರೂಪಿಸಿರುವ ವಿವಿಧ ಶಿಲಾಫಲಕಗಳಲ್ಲಿ ಪರಸ್ಪರ ಘರ್ಷಣೆ ಉಂಟಾದಾಗ ಅಥವಾ ಒಂದರ ಕೆಳಕ್ಕೆ ಇನ್ನೊಂದು ನುಸುಳಿ ಅಂತರಾಳದ ಅಸ್ತನೋಗೋಳಕ್ಕೆ ಅಂಚು ತೂರಿದಾಗ ಭೂಕಂಪನವಾಗುತ್ತದೆ. ಅಲ್ಲದೆ, ಹೆಬ್ಬಂಡೆಗಳ ಕುಸಿತ, ಅಣೆಕಟ್ಟುಗಳ ಜಲದ ಒತ್ತಡ ಇತ್ಯಾದಿಗಳಿಂದ ಉಂಟಾಗಬಹುದು

ಭೂಕಂಪನ ಮಾಪಕ

(ಭೂವಿ) ಭೂಕಂಪನದ ಸಾಮರ್ಥ್ಯ, ಪ್ರದೇಶ ಮೊದಲಾದವನ್ನು ತಿಳಿಸುವ ಸಲಕರಣೆ

ಭೂಕಂಪನವಿಜ್ಞಾನ

(ಭೂವಿ) ಭೂಕಂಪನಗಳ, ಮುಖ್ಯವಾಗಿ ಆಘಾತ ತರಂಗಗಳ, ಅಧ್ಯಯನ. ಕಂಪನ ತರಂಗಗಳ ವೇಗ ಮತ್ತು ವಕ್ರೀಕರಣದ ಅಧ್ಯಯನಗಳಿಂದ ಭೂಮಿಯ ಆಳದ ರಚನೆಯ ಪರಿಶೋಧನೆ ಸಾಧ್ಯ

ಭೂಕವಚ ಸಮಸ್ಥಿತಿ

(ಭೂವಿ) ಭೂಮಿಯ ಒಳಗಡೆಯ ಶಿಲಾವಸ್ತು ಗುರುತ್ವದ ಪ್ರಭಾವದಿಂದ ಹರಿಯುವುದರ ಪರಿಣಾಮವಾಗಿ ಭೂಚಿಪ್ಪಿನಲ್ಲಿ ಏರ್ಪಡುವ ಸಮತೋಲ

ಭೂಕಾಂತೀಯ

(ಭೌ) ಭೂಮಿಯ ಕಾಂತೀಯ ಗುಣಗಳಿಗೆ ಸಂಬಂಧಿಸಿದ, ಅದರಿಂದ ಉದ್ಭವಿಸಿದ

ಭೂಕೇಂದ್ರ

(ಅಂವಿ) ಉಪಗ್ರಹ ಹಾಗೂ ಅಂತರಿಕ್ಷ ನೌಕೆಗಳಿಂದ ರೇಡಿಯೋ ತರಂಗಗಳ ರೂಪದಲ್ಲಿ ಮಾಹಿತಿ ಪಡೆಯುವ ಮತ್ತು ರೇಡಿಯೋ ಆeಗಳನ್ನು ರವಾನಿಸುವ ಕೇಂದ್ರ

ಭೂಕೇಂದ್ರವಾದ

(ಖ) ಭೂಮಿಯೇ ಜಗತ್ತಿನ ಕೇಂದ್ರವೆಂದು ಭಾವಿಸಿ ವಿಶ್ವ ಕುರಿತು ಮಂಡಿಸಿದ ಊಹೆ. ಅರಿಸ್ಟಾಟಲ್ (ಕ್ರಿಪೂ ೪ನೇ ಶತಮಾನ) ಇದನ್ನು ಪ್ರತಿಪಾದಿಸಿದನು ಎಂದು ಪ್ರತೀತಿ. ಕ್ರಿಶ ೨ನೆಯ ಶತಮಾನದಲ್ಲಿ ಬಾಳಿದ್ದ ಟಾಲೆಮಿ ಪ್ರಚಲಿತ ಊಹೆಗಳೆಲ್ಲವನ್ನೂ ಕ್ರೋಡೀಕರಿಸಿ ಭೂಕೇಂದ್ರವಾದವನ್ನು ಸ್ಥಿರಚೌಕಟ್ಟಿನಲ್ಲಿ ಸ್ಥಾಪಿಸಿದ. ಎಂದೇ ಭೂಕೇಂದ್ರವಾದಕ್ಕೆ ಟಾಲೆಮಿ ವಾದವೆಂದೂ ಹೆಸರು. ಇದರ ಪ್ರಕಾರ ಭೂಮಿ ಸ್ಥಿರ. ಇದರ ಸುತ್ತ ಚಂದ್ರ, ಬುಧ, ಶುಕ್ರ, ಸೂರ್ಯ, ಕುಜ, ಶನಿ ವಿವಿಧ ಕಕ್ಷಾವೇಗ ಗಳಿಂದ ಸುತ್ತುತ್ತಿವೆ ಎಂದಿತ್ತು. ನೋಡಿ: ಸೂರ್ಯಕೇಂದ್ರವಾದ

ಭೂಕೇಂದ್ರೀಯ ವಿಪಥನ

(ಖ) ವೀಕ್ಷಕನ ನೆಲೆ ಭೂಮೇಲ್ಮೈಯಲ್ಲಿರುವುದರ ಬದಲು ಭೂಕೇಂದ್ರದಲ್ಲಿದ್ದರೆ ಆಗ ಬೆಳಕಿನ ವೇಗ ಮತ್ತು ಭೂಚಲನೆಗಳ ಸಂಯುಕ್ತ ಪ್ರಭಾವದ ಫಲವಾಗಿ ವೀಕ್ಷಕನಿಗೆ ನಕ್ಷತ್ರದ ಸ್ಥಾನದಲ್ಲಿ ವ್ಯತ್ಯಯ ಕಂಡುಬರುವುದು

ಭೂಕ್ಷೇತ್ರ ಮೋಜಣಿ

(ತಂ) ನಿಷ್ಕೃಷ್ಟತೆಯನ್ನು ಪಡೆಯಲೋಸುಗ ಭೂಮಿಯ ಸಮತಲದ ಜೊತೆಗೆ ವಕ್ರತೆಯನ್ನೂ ಪರಿಗಣಿಸಿಕೊಂಡು ನಡೆಸುವ ಭೂಮೇಲ್ಮೈಯ ವಿಶಾಲ ಭಾಗಗಳ ಮೋಜಣಿ. ಭೂಗಣಿತೀಯ ಸರ್ವೇಕ್ಷಣೆ

ಭೂಖಂಡ

(ಭೂ) ನೆಲದ ಅವಿಚ್ಛಿನ್ನ ವಿಸ್ತಾರ. ಉದಾ: ಏಷ್ಯ, ಯೂರೋಪ್, ಆಫ್ರಿಕ, ಅಮೆರಿಕ, ಆಸ್ಟ್ರೇಲಿಯ

ಭೂಖಂಡ ಇಳಿಜಾರು

(ಭೂವಿ) ಭೂಖಂಡ ಚಾಚುವಿನ ಅಂಚಿನಿಂದಾಚೆಗಿನ ಕಡಿದಾದ ಕುಸಿತ

ಭೂಖಂಡ ಚಾಚು

(ಭೂವಿ) ಕಡಲ ಕಿನಾರೆಯಿಂದ ಆಚೆಗೆ ನೀರೊಳಗೆ ಮಂದವಾಗಿ ಇಳಿಯುತ್ತ ಸು. ೨೦೦ಮೀ ಆಳದವರೆಗೆ ಚಾಚಿರುವ ನೆಲ. ಭೂಖಂಡ ಬಡು

ಭೂಖಂಡ ಚಿಪ್ಪು

(ಭೂವಿ) ಭೂಖಂಡಗಳ ಮತ್ತು ಭೂಖಂಡ ಚಾಚುಗಳ ತಳದಲ್ಲಿಯ ಭೂತೊಗಟೆಯ ಭಾಗ. ಹೆಚ್ಚಿನ ಸ್ಥಳಗಳಲ್ಲಿ ಇದರ ದಪ್ಪ ಸುಮಾರು ೩೫ ಕಿಮೀ. ಆದರೆ ಪರ್ವತ ಪ್ರದೇಶಗಳಲ್ಲಿ ಇನ್ನೂ ಅಧಿಕ. ಇದರ ಮೇಲುಪದರದಲ್ಲಿ ಜಲಜ ಶಿಲೆಗಳನ್ನೂ ನಡುಪದರದಲ್ಲಿ ರೂಪಾಂತರಿತ ಶಿಲೆಗಳನ್ನೂ ಸಾಧಾರಣವಾಗಿ ಕಾಣಬಹುದು. ಕೆಳಪದರ ರಚನೆ ಅಸ್ಪಷ್ಟ. ತೊಗಟೆ

ಭೂಖಂಡ ವಾಯುಗುಣ

(ಪವಿ) ಸಾಗರಗಳ ಪ್ರಭಾವಕ್ಕೆ ಒಳಗಾಗದೆ ಅವುಗಳಿಂದ ದೂರದಲ್ಲಿ ಇರುವ ಪ್ರದೇಶ ದಲ್ಲಿಯ ವಿಶಿಷ್ಟ ವಾಯುಗುಣ; ಬೇಸಗೆ-ಚಳಿಗಾಲ ವ್ಯತ್ಯಾಸ ತೀವ್ರ, ಬೇಸಗೆಯಲ್ಲಿ ಬೇಗೆ, ಚಳಿಗಾಲದಲ್ಲಿ ಚಳಿ ತೀವ್ರವಾಗಿ ಏರುತ್ತವೆ. ಕಡಿಮೆ ಮಳೆ. ನಿಮ್ನ ಆರ್ದ್ರತೆ

ಭೂಖಂಡಗಳ ಅಲೆತ

(ಭೂವಿ) ಆಫ್ರಿಕದ ಪಶ್ಚಿಮ ಕರಾವಳಿಗೂ ಅಮೆರಿಕದ ಪೂರ್ವ ಕರಾವಳಿಗೂ ಇರುವ ವಿಶೇಷ ಹೊಂದಾಣಿಕೆ ಗಮನಿಸಿದ ಆಲ್‌ಫ್ರೆಡ್ ವೆಜೆನರ್ (೧೮೮೦- ೧೯೩೦) ಮಂಡಿಸಿದ ನೂತನ ವಾದ. ಆದಿಯಲ್ಲಿ ಭೂಖಂಡಗಳೆಲ್ಲವೂ ಒಂದೇ ಆಗಿ ಕೂಡಿಕೊಂಡಿದ್ದುವು; ಆದರೆ ಇವನ್ನು ಧರಿಸಿರುವ ವಿವಿಧ ಫಲಕಗಳು ಭೂಗರ್ಭದಲ್ಲಿಯ ಕ್ಷೋಭೆಯ ಕಾರಣವಾಗಿ ಅತಿ ಮಂದಗತಿಯಲ್ಲಿ ಪರಸ್ಪರ ಸಂಬಂಧ ವಿಲ್ಲದೆ ಜಾರುತ್ತಿರುವುದರಿಂದ ಭೂ ಮೇಲ್ಮೈ ಒಡೆದು ಖಂಡಗಳು ಮೈ ದಳೆದು ಸರಿಯ ತೊಡಗಿದುವು; ಫಲಕ-ಫಲಕ ಸಂಘಟ್ಟನೆಯಿಂದ ಪರ್ವತಗಳು ಸಂಜನಿಸುತ್ತವೆ, ಕಮರಿಗಳು ಬಾಯಿ ತಳೆಯುತ್ತವೆ. ವೆಜೆನರ್ ವಾದ

ಭೂಗಣಿತ

(ಗ) ಭೂಗಾತ್ರ ಮತ್ತು ಆಕಾರ, ಗುರುತ್ವಾಕರ್ಷಣ ಕ್ಷೇತ್ರ ಮತ್ತು ಭೂಚಿಪ್ಪಿನಲ್ಲಿ ಸ್ಥಿರವಾಗಿರುವ ಬಿಂದುಸ್ಥಾನಗಳನ್ನು ಭೂಮ್ಯಾಧಾರಿತ ನಿರ್ದೇಶಕ ವ್ಯವಸ್ಥೆಯೊಂದರ ಮೂಲಕ ನಿರ್ಧರಿಸುವುದು – ಇವುಗಳ ಅಧ್ಯಯನ

Search Dictionaries

Loading Results

Follow Us :   
  Download Bharatavani App
  Bharatavani Windows App