भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಭಾರಸ್ವರ

(ಸಾ) ಸಂಗೀತದಲ್ಲಿ ಪುರುಷರ ತಾರಕ್ಕೂ ಮಂದ್ರಕ್ಕೂ ಮಧ್ಯವರ್ತಿಯಾದ ಸ್ವರ. ಮಧ್ಯಮ ಪುರುಷ ಸ್ವರ

ಭಾವದ್ವಂದ್ವ

(ಮ) ಏಕಕಾಲದಲ್ಲಿ ವಿರುದ್ಧ ಭಾವಗಳು ಇರುವುದು. ಉದಾ: ಪ್ರೀತಿ-ದ್ವೇಷ, ಸಂತೋಷ-ದುಃಖ ಇತ್ಯಾದಿ. ಉಭಯಭಾವ

ಭಾವಲಿಪಿ

(ಸಾ) ವಸ್ತುವಿನ ಹೆಸರನ್ನು ಅಥವಾ ಹೆಸರಿನ ಅಕ್ಷರಗಳನ್ನು ಅಥವಾ ಧ್ವನಿಗಳನ್ನು ವ್ಯಕ್ತಪಡಿಸದೆ ನೇರವಾಗಿ ಭಾವವನ್ನು ಅಥವಾ ವಸ್ತುವನ್ನು ಸಂಕೇತಿಸುವ ಲಿಪಿ. ಉದಾ: ಚೀನೀ ಲಿಪಿ, ಅಂಕಿಗಳು

ಭಾವವಿರೋಧ

(ಸಾ) ಮೇಲುನೋಟಕ್ಕೆ ಸರಿ ಎಂದು ಕಾಣುವ ಆದರೆ ವಾಸ್ತವವಾಗಿ ವಿರುದ್ಧ ಭಾವಗಳಿರುವ ಎರಡು ನಿಯಮಗಳ ಅಥವಾ ಉಕ್ತಿಗಳ ನಡುವಿನ ಸಂಬಂಧ. ಪರಸ್ಪರ ಅಸಾಂಗತ್ಯ, ಅನನ್ವಯ

ಭಾವಶುದ್ಧಿ

(ಸಾ) ನಾಟಕದರ್ಶನದಿಂದಾಗುವ ಭಾವೋದ್ರೇಕ (ಭಾವ ವಿರೇಚನ) ಹಾಗೂ ಆ ಮೂಲಕ ಆಗಬಹುದಾದ ಭಾವಶುದ್ಧಿ

ಭಿತ್ತಿ

(ಸಾ) ಗೋಡೆ (ಸ) ಸಸ್ಯಗಳ ಜೀವಕೋಶದ ಹೊರಹೊದಿಕೆ

ಭಿತ್ತೀಯ

(ಪ್ರಾ) ದೇಹದ ಅಥವಾ ಅದರ ಯಾವುದಾದರೂ ಕುಹರದ ಗೋಡೆಯ. ಉದಾ: ತಲೆಬುರುಡೆಯ ಪಕ್ಕಗಳ ಮತ್ತು ಮೇಲಿನ ಆವರಣ ಭಾಗಗಳಾಗಿರುವ ಜೋಡಿ ಎಲುಬುಗಳ. (ಸ) ಪೊಳ್ಳು ರಚನಾಂಗಗಳ ಆವರಣದ

ಭಿದುರ

(ಸಾ) ಸುಲಭವಾಗಿ ಒಡೆದುಹೋಗುವ ಗಾಜಿನಂತೆ. ಭಂಗುರ. ಪೆಡಸು

ಭಿದುರತೆ

(ತಂ) ಅಲ್ಪಪೀಡನ ಪ್ರಯೋಗವಾದಾಗಲೂ ಇನಿತು ಕೂಡ ವಿರೂಪ ಪ್ರದರ್ಶಿಸದೆ ಸೀಳಿಕೆ ಪ್ರದರ್ಶಿಸುವ, ಸುಲಭವಾಗಿ ಒಡೆದುಹೋಗುವ, ಪ್ರವೃತ್ತಿ

ಭಿನ್ನ ಆಸವನ

(ರ) ವಿಭಿನ್ನ ಕುದಿ ಬಿಂದುಗಳುಳ್ಳ ಹಲವಾರು ಆವಿಶೀಲ ಘಟಕಗಳನ್ನು ಅವುಗಳ ಮಿಶ್ರಣದಿಂದ ಬೇರ್ಪಡಿಸುವ ವಿಧಾನ. ಮೊದಲು ಅತ್ಯಂತ ತಳ ಕುದಿಬಿಂದುವಿನಿಂದ ಆರಂಭಿಸಿ ಮಿಶ್ರಣದ ವಿವಿಧ ವಸ್ತುಗಳನ್ನು ಅವುಗಳ ಅನುಕ್ರಮ ಕುದಿಬಿಂದು ತಲಪಿದಾಗ ಪ್ರತ್ಯೇಕ ಪ್ರತ್ಯೇಕವಾಗಿ ಆಸವನದ ಮೂಲಕ ಬೇರ್ಪಡಿಸಲಾಗುವುದು. ಪೆಟ್ರೋಲಿಯಮ್ ಶುದ್ಧೀಕರಣದಲ್ಲಿ ಬಳಕೆ

ಭಿನ್ನಜಾತ್ಯತೆ

(ಸಾ) ವಿಭಿನ್ನ ಅಂಶಗಳಿಂದ ಅಥವಾ ಭಾಗಗಳಿಂದ ವಸ್ತು ರಚಿತವಾಗಿರುವಿಕೆ. ಇತರ ವಸ್ತುಗಳಿಗಿಂತ ಸ್ವರೂಪದಲ್ಲಿ ಬೇರೆಯಾಗಿರುವಿಕೆ, ವಿದೃಶವಾಗಿರುವಿಕೆ. ವಿಸದೃಶತೆ

ಭಿನ್ನದಂತಿ

(ಪ್ರಾ) ನೋಡಿ: ಹೆಟೆರಡಾನ್ಟ್

ಭಿನ್ನಯುಗ್ಮಜ

(ಜೀ) ಯಾವುದೇ ಆನುವಂಶಿಕ ಲಕ್ಷಣಕ್ಕೆ ಸಂಬಂಧಿಸಿದಂತೆ ಅಸದೃಶ ಜೀನ್‌ಗಳನ್ನು ಪಡೆದಿರುವ ಮಿಶ್ರತಳಿ ಪ್ರಾಣಿ ಅಥವಾ ಸಸ್ಯ. ಹಾಗಾಗಿ ಅದರ ಗುಣವೇ ಅದರೆಲ್ಲ ಸಂತತಿಗಳಿಗೂ ಸಾಗಣೆಯಾಗುವುವೆಂದೇನೂ ಇಲ್ಲ

ಭಿನ್ನಯುಗ್ಮನ

(ಜೀ) ಒಂದೇ ಗಿಡದ ಅಥವಾ ವಿವಿಧ ಗಿಡಗಳ ವಿಭಿನ್ನ ಪುಷ್ಪಗಳ ಪರಾಗ ಮತ್ತು ಅಂಡಕ ಸೇರಿ ಆಗುವ ನಿಷೇಚನೆ; ಒಂದೇ ಪ್ರಭೇದದ ಆದರೆ ಜೀನ್ ಪ್ರಕಾರ ವಿಭಿನ್ನವಾಗಿ ಇರುವ ಸದಸ್ಯರುಗಳಿಂದಾಗುವ ನಿಷೇಚನೆ. ನೋಡಿ: ಬಹಿರ್ಯುಗ್ಮನ

ಭಿನ್ನರಾಶಿ

(ಗ) ಪರಿಮೇಯ ಸಂಖ್ಯೆಗಳ ಗಣದಲ್ಲಿ ಪೂರ್ಣಾಂಕವಲ್ಲದುದು. ಉದಾ: ೩/೪, ೦.೫೪೨ ಇತ್ಯಾದಿ. ಇದರ ಸಾರ್ವತ್ರಿಕ ರೂಪ p/q. ಇಲ್ಲಿ p ಮತ್ತು q ಸಾಪೇಕ್ಷವಾಗಿ ಅವಿಭಾಜ್ಯ ಪೂರ್ಣಾಂಕಗಳು ಮತ್ತು q 0

ಭಿನ್ನರೂಪತೆ

(ರ) ದ್ರವ್ಯದ ಒಂದು ಪ್ರಾವಸ್ಥೆಯಲ್ಲಿ ಧಾತು ಎರಡು/ಹೆಚ್ಚು ಘನ/ದ್ರವ/ಅನಿಲ ರೂಪಗಳಲ್ಲಿ ಇರುವುದು. ಬಿಳಿ ಮತ್ತು ಬೂದು ತವರ, ರಂಜಕ, ಗಂಧಕ, ಇಂಗಾಲ. ಧಾತುವೊಂದು ಸ್ಫಟಿಕರೂಪ/ರಾಸಾಯನಿಕ ಗುಣ/ಆಣವಿಕ ಸಂಕೀರ್ಣತೆಗಳಲ್ಲಿ ಮತ್ತೊಂದರಿಂದ ಭಿನ್ನವಾಗಿರುವುದು

ಭಿನ್ನಲಿಂಗಿ

(ಸ) ಹೆಣ್ಣು ಹೂವು ಮತ್ತು ಗಂಡು ಹೂವು ಒಂದೇ ಸಸ್ಯದಲ್ಲಲ್ಲದೆ ಬೇರೆ ಬೇರೆ ಸಸ್ಯಗಳಲ್ಲಿರುವಂಥ ಸಸ್ಯಗಳ ಪ್ರಭೇದ. ಡಯೀಶಸ್

ಭಿನ್ನಲೈಂಗಿಕ

(ವೈ) ವಿರುದ್ಧ ಲಿಂಗದವರ ಬಗೆಗೆ ಕಾಮಾತುರವುಳ್ಳ ಅಥವಾ ಆ ಬಗೆಯ ಕಾಮಾತುರಕ್ಕೆ ಸಂಬಂಧಿಸಿದ. ಭಿನ್ನಲಿಂಗರತಿಯ. ಅನ್ಯಲಿಂಗ ಕಾಮುಕತೆ

ಭಿನ್ನೀಕರಣ

(ರ) ಆಸವನ, ಸ್ಫಟಿಕೀಕರಣ, ಅವಕ್ಷೇಪನಗಳಂಥ ಪ್ರಕ್ರಿಯೆಗಳನ್ನು ಒಂದಾದ ಮೇಲೆ ಒಂದರಂತೆ ಪುನರಾವರ್ತಿಸುವ ಮೂಲಕ ಮಿಶ್ರಣದ ಘಟಕಗಳನ್ನು ಬೇರ್ಪಡಿ ಸುವುದು (ವೈ) ರೇಡಿಯೊ ಥೆರಪಿಯಲ್ಲಿ (ವಿಕಿರಣ ಚಿಕಿತ್ಸೆ) ಸಾಮಾನ್ಯವಾಗಿ ಬಳಸುವ ಒಂದು ಚಿಕಿತ್ಸಾ ಕ್ರಮ. ವಿಕಿರಣದ ಗುಟ್ಟಿಗಳನ್ನು ಪ್ರತಿದಿನವೂ ಅಥವಾ ದೀರ್ಘ ಅಂತರಗಳಲ್ಲಿ ೩-೬ ವಾರಗಳ ಕಾಲ ನೀಡಲಾಗುವುದು

ಭುಜ

(ಗ) ಯಾವುದೇ ಜ್ಯಾಮಿತೀಯ ಆಕೃತಿಯ ಒಂದು ಅಂಚು. ಬದಿ. ಬಹುಫಲಕದ ಯಾವುದೇ ಒಂದು ಮೈ. ಪಕ್ಷ. ಪಾರ್ಶ್ವ. ಬಾಹು

Search Dictionaries

Loading Results

Follow Us :   
  Download Bharatavani App
  Bharatavani Windows App