Navakarnataka Vijnana Tantrajnana Padasampada (2011)
Navakarnataka Publications Private Limited
ಬಕ
(ಪ್ರಾ) ಸಿಕೋನೈಯಿಫಾರ್ಮೀಸ್ ಗಣ, ಸಿಕೋನೈಯಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ಅಗಲ ರೆಕ್ಕೆಗಳು ನೀಳ ಕತ್ತು. ಉದ್ದ ಕೊಕ್ಕು, ಕಾಲು ಇರುವುದು ಇದರ ಲಕ್ಷಣಗಳು. ಕೊಕ್ಕರೆ, ಬೆಳ್ಳಕ್ಕಿ, ಕಂಚುಗಾರ
ಬಕಪಾತ್ರೆ
(ರ) ದ್ರವಗಳನ್ನು ಬಟ್ಟಿ ಇಳಿಸುವ ಉದ್ದೇಶದಿಂದ ಬಳಸುವ, ಸಾಮಾನ್ಯವಾಗಿ ಗಾಜಿ ನಿಂದ ತಯಾರಿಸಿದ ಪಾತ್ರೆ. ಇದು ಬಾಗಿದ ಉದ್ದವಾದ ಕತ್ತಿನಿಂದ ಕೂಡಿರುತ್ತದೆ. ರೆಟಾರ್ಟ್. ಬಟ್ಟಿಪಾತ್ರೆ
ಬಂಕರ್
(ಸಾ) ೧. ಹಡಗಿನಲ್ಲಿ ಕಲ್ಲಿದ್ದಲ ಅಥವಾ ಇಂಧನದ ತೊಟ್ಟಿ. ತೈಲ ದಾಸ್ತಾನಿಡುವ ನೆಲೆ, ೨. ರಕ್ಷಣೆಗಾಗಿ ಸೈನಿಕರು ತೋಡುವ ನೆಲಗೂಡು
ಬಕಲ್
(ಸಾ) ಸೊಂಟಪಟ್ಟಿಯನ್ನು ಬಿಗಿಹಿಡಿದು ನಿಲ್ಲಿಸಲು ನೆರವಾಗುವ ಲೋಹ ಕೊಕ್ಕೆ. ಚಿಲುಕು ಕಟ್ಟು. ಜಗ್ಗಿಸು. ಬಗ್ಗಿಸು
ಬಕೆಟ್
(ಸಾ) ನೀರೆತ್ತಲು ಬಳಸುವ ಹಿಡಿಪಾತ್ರೆ
ಬಕ್ಕತಲೆ
(ವೈ) ತಲೆಯಿಂದ ಕೂದಲು ಉದುರಿ ಹೋಗಿರುವುದು. ಪಟ್ಟತಲೆ, ಬೋಳು ತಲೆ
ಬಖೈರು
(ಸಾ) ಕಾಲಾನುಕ್ರಮ ದಾಖಲೆ. ಚಾರಿತ್ರಿಕ ಮಾಹಿತಿಗಳ ವ್ಯವಸ್ಥಿತ ಯಾದಿ. ವರದಿ
ಬಗಸೆ
(ಸ) ಕಬ್ಬು ಅರೆದು ರಸಹಿಂಡಿದ ನಂತರ ಉಳಿವ ಚರಟ. ಕಬ್ಬಿನ ಹಿಪ್ಪೆ
ಬಂಗಾರದ ಅಕ್ಕಿ
(ಜೈತಂ) ತಳಿ ತಂತ್ರಜ್ಞಾನ ಬಳಸಿ ಮಾರ್ಪಡಿಸಿದ ಅಕ್ಕಿ. ಇದರ ಎಂಡೋಸ್ಪರ್ಮ್ನಲ್ಲಿ ಬೀಟ- ಕ್ಯಾರೊಟಿನ್ ಮತ್ತು ಕಬ್ಬಿಣ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ, ಅಕ್ಕಿಗೆ ಹೊಂಬಣ್ಣ ನೀಡುತ್ತವೆ. ಸೇವಿಸಿದಾಗ ಬೀಟ- ಕ್ಯಾರೊಟಿನ್ ದೇಹದಲ್ಲಿ ವೈಟಮಿನ್-ಎ ಆಗಿ ಪರಿವರ್ತನೆ ಗೊಳ್ಳುತ್ತದೆ. ವಿಕಾಸಶೀಲ ದೇಶಗಳಲ್ಲಿ ವೈಟಮಿನ್-ಎ ಕೊರತೆ ಇರುವವರಿಗೆ ಇದು ಉಪಯುಕ್ತ ಎಂದು ಭಾವಿಸಲಾಗಿದ್ದರೂ ವಿವಾದಾತ್ಮಕವಾಗಿಯೇ ಇದೆ
ಬಂಗುಡೆ
(ಪ್ರಾ) ಸ್ಕಾಂಬ್ರಿಡೀ ಕುಟುಂಬಕ್ಕೆ ಸೇರಿದ ಕಡಲ ಮೀನು. ರಾಸ್ಟ್ರೆಲ್ಲಿಜರ್ ಕನಗುರ್ತ ವೈಜ್ಞಾನಿಕ ನಾಮ. ಭಾರತದ ಪಶ್ಚಿಮ ಕರಾವಳಿಯಲ್ಲಿ ಹೆಚ್ಚು ಲಭ್ಯ. ಬೇಸಗೆಯಲ್ಲಿ ಮೊಟ್ಟೆ ಇಡಲೋಸುಗ ತಂಡೋಪತಂಡವಾಗಿ ಕೆರೆಗಳಿಗೆ ಬರುತ್ತವೆ. ಆಹಾರವಾಗಿ ಬಳಕೆ
ಬಗುಳು ಜಿಂಕೆ
(ಪ್ರಾ) ಆರ್ಟಿಯೊಡ್ಯಾಕ್ಟಿಲ ಗಣ, ಸರ್ವಿಡೀ ಕುಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ ಜಿಂಕೆ. ಮಂಟಿಯಾಕಸ್ ಮಂಟ್ಜಾಕ್ ವೈಜ್ಞಾನಿಕ ನಾಮ. ನೇಪಾಳ, ಭಾರತ, ಶ್ರೀಲಂಕ, ದಕ್ಷಿಣ ಚೀಣ ನಿವಾಸಿ. ಮೈಬಣ್ಣ ಗಾಢ ಕಂದು ಇಲ್ಲವೇ ಬೂದು ಮಿಶ್ರಿತ ಕಂದು. ಗಂಡು ಜಿಂಕೆಗಳಿಗಷ್ಟೆ ಕೋಡುಗಳುಂಟು. ಕೋಡುಗಳು ವರ್ಷಕ್ಕೊಮ್ಮೆ ಉದುರಿ ಮತ್ತೆ ಮೂಡುತ್ತವೆ. ಗಾಬರಿ ಗೊಂಡಾಗ ಇಲ್ಲವೇ ಸಂತಾನವೃದ್ಧಿ ಸಮಯದಲ್ಲಿ ಬಗುಳುವಂಥ ಶಬ್ದ ಮಾಡುವುದರಿಂದ ಈ ಹೆಸರು. ನಿಶಾಚರಿ. ಸಸ್ಯಾಹಾರಿ
ಬಗ್
(ಕಂ) ಕಾರ್ಯಕ್ರಮದಲ್ಲಿಯ ದೋಷ ಅಥವಾ ಸಲಕರಣೆಯಲ್ಲಿಯ ಐಬು. (ತಂ) ಕದ್ದಾಲಿಕೆ ಸಲಕರಣೆ
ಬಗ್ಗು
(ಸಾ) ಭಾರ ಅಥವಾ ಹೊರೆ ತಾಳಲಾಗದೆ ಆಕಾರ ವಿಕಾರವಾಗುವುದು. ನಗ್ಗು, ನುಲಿ
ಬಂಜೆ
(ಜೀ) ಸಂತಾನೋತ್ಪಾದನಾ ವ್ಯವಸ್ಥೆಯಲ್ಲಿ ಆನುವಂಶಿಕ ಅಥವಾ ಆರ್ಜಿತ ಅಸ್ವಸ್ಥತೆ ಅಥವಾ ಅಕ್ರಮಗಳ ಪರಿಣಾಮವಾಗಿ ಸಂತಾನೋತ್ಪತ್ತಿ ಮಾಡಲಾಗದ. ಫಲಬಿಡದ
ಬಝ್
(ತಂ) ಅತಿವೇಗದ ವಿಮಾನ ಹಾರಾಟದಲ್ಲಿ ಅನುಭವಕ್ಕೆ ಬರುವ ಒಂದು ಬಗೆಯ ಶಬ್ದ. ರೇಡಿಯೊ ಗಲಭೆ
ಬಟ್ಟಲು
(ಸಾ) ಬೋಗುಣಿ
ಬಟ್ಟಿಯಂತ್ರ
(ತಂ) ದ್ರವಗಳ ಆಸವನಕ್ಕಾಗಿ ಬಳಸುವ ಲೋಹದ/ಗಾಜಿನ ಉಪಕರಣ. ನೋಡಿ : ಬಕಪಾತ್ರೆ
ಬಟ್ಟೀಕರಣ
(ರ) ದ್ರವದ ವಿವಿಧ ಅಂಶಗಳನ್ನು ಅವುಗಳ ಕುದಿಬಿಂದುಗಳ ಪ್ರಕಾರ ಅಥವಾ ಕುದಿತ ವ್ಯಾಪ್ತಿಗಳ ಪ್ರಕಾರ ಪ್ರತ್ಯೇಕೀಕರಿಸಲು ನಿಯೋಜಿಸುವ ಬಾಷ್ಪೀಕರಣ ಮತ್ತು ಪುನಃ ಸಾಂದ್ರೀಕರಣ ಪ್ರಕ್ರಿಯೆ. ಆಸವನ
ಬಂಡಾರ
(ಪ್ರಾ) ಹಕ್ಕಿ ಮತ್ತು ಸರೀಸೃಪಗಳ ಮೊಟ್ಟೆಯ ಕೇಂದ್ರಭಾಗದಲ್ಲಿರುವ ಪೌಷ್ಟಿಕ ಲೋಳೆ ಪದಾರ್ಥ
ಬಂಡಾರಸಂಚಿ