भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಾಟ್ಯುಲಿಸಮ್

(ಪ್ರಾ) ಡಬ್ಬಿ ಇಲ್ಲವೇ ಬಾಟಲಿಯಲ್ಲಿ ಶೇಖರಿಸಿಟ್ಟ ಸಿದ್ಧ ಆಹಾರದಲ್ಲಿ ಕ್ಲಾಸ್ಟ್ರಿಡಿಯಮ್ ಬಾಟ್ಯುಲಿನಮ್ ಎಂಬ ಅವಾಯವಿಕ ಬ್ಯಾಕ್ಟೀರಿಯಗಳು ಉಗಮಿಸುವುದುಂಟು. ಇವು ಬಾಟ್ಯುಲಿನ್ ಎಂಬ ನರಹಾನಿಕಾರಕ ವಿಷವನ್ನು ಉತ್ಪಾದಿಸುತ್ತವೆ. ಇದರಿಂದ ಕಲುಷಿತ ಆಹಾರವನ್ನು ಸೇವಿಸಿದಾಗ ಬರುವ ತೀವ್ರವಾದ, ಬಹುತೇಕ ಮಾರಕವಾದ ವ್ಯಾಧಿಯೇ ಬಾಟ್ಯುಲಿಸಮ್. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಅಧಿಕ ಅಪಾಯಕಾರಿ

ಬಾಡಿ ಕಟ್ಟುವುದು

(ತಂ) ಸಾಗಣೆ ವಾಹನಗಳ ಚಾಸಿಯ (ಯಂತ್ರ ಭಾಗವಿರುವ ಆಧಾರ ಚೌಕಟ್ಟಿನ) ಮೇಲೆ ಒಡಲು ನಿರ್ಮಿಸುವುದು

ಬಾಂಡು

(ತಂ) ಗಾರೆ ಕೆಲಸದಲ್ಲಿ ಇಟ್ಟಿಗೆಗಳನ್ನು ಜೋಡಿಸುವಾಗ ಗೋಡೆ ಭದ್ರವಾಗಿರುವಂತೆ ಅನು ಸರಿಸುವ ಕ್ರಮ (ಚಿತ್ರ ನೋಡಿ) ಇದರಲ್ಲಿ ಎರಡು ಬಗೆ – ಇಂಗ್ಲಿಷ್ ಬಾಂಡು ಮತ್ತು ಫ್ಲೆಮಿಷ್ ಬಾಂಡು – ಗಳು ಬಳಕೆಯಲ್ಲಿವೆ

ಬಾಡು

(ಸ) ಒಣಗಿ ಸೊರಗುವುದು. ವಿಲ್ಟ್. ಬಾಡುರೋಗ

ಬಾಡು

(ಪ್ರಾ) ನೋಡಿ: ಮಾಂಸ

ಬಾಂಡ್ ಕಾಗದ

(ಸಾ) ಬ್ಯಾಂಕ್ ಕಾಗದಕ್ಕೆ ಸದೃಶವಾದ ಆದರೆ ತೂಕ 50g/m2 ಅಥವಾ ಹೆಚ್ಚು ಇರುವ ವಿಶೇಷ ಕಾಗದ

ಬಾಣ ಹುಳು

(ಪ್ರಾ) ಚಯೆಟೋಗ್ನತ ಪ್ರಾಣಿ ವಿಭಾಗದ ಯಾವುದೇ ಹುಳು; ವಿಸ್ಥಾಪಿತ ಜಲಪ್ರಮಾಣಗಳನ್ನು ಗೊತ್ತು ಹಚ್ಚಲು ಉಪಯುಕ್ತ ಸೂಚಕ ಜೀವಿ

ಬಾಣಂತಿ ನೋವು

(ವೈ) ಮಗು ಹುಟ್ಟಿದ ಬಳಿಕೆ ತಾಯಿಯ ಗರ್ಭಾಶಯ ಗರ್ಭಪೂರ್ವ ಸ್ಥಿತಿ ಹೊಂದಲು ಸಂಕೋಚಿಸು ವುದರ ಪರಿಣಾಮವಾಗಿ ಆಕೆ ಅನುಭವಿಸುವ ದೈಹಿಕ ವೇದನೆ

ಬಾತ್ ಲವಣಗಳು

(ರ) ಗಡಸು ನೀರನ್ನು ಮೃದು ವಾಗಿಸಲು ಬಳಸುವ ಲವಣಗಳು. ಮುಖ್ಯ ಘಟಕ ಸಾಮಾನ್ಯವಾಗಿ ಸೋಡಿಯಮ್ ಸೆಸ್‌ಕ್ವಿಕಾರ್ಬೋನೇಟ್, Na2CO3. NaHCO3. 2H2O ಅಥವಾ ಮತ್ತಾವುದೇ ದ್ರಾವ್ಯ ಶೀಲ ಸೋಡಿಯಮ್ ಲವಣ

ಬಾದಾಮಿ

(ಸ) ರೋಸೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಜನಪ್ರಿಯ ಪರ್ಣಪಾತಿ ಮರ. ಇದರ ಬೀಜದ ತಿರುಳು; ಏಪ್ರಿಕಾಟ್ (ಸಕ್ಕರೆ ಬಾದಾಮಿ), ಚೆರಿ, ಪ್ಲಮ್, ಪೀಜ್ ಫಲ ವೃಕ್ಷಗಳ ಹತ್ತಿರ ಸಂಬಂಧಿ. ಪ್ರೂನಸ್ ಅಮಿಗ್ಡಾಲಿಸ್ ಅಥವಾ ಪ್ರೂನಸ್ ಕಮ್ಯೂನಿಸ್ ವೈಜ್ಞಾನಿಕ ನಾಮ. ತವರು ಪಶ್ಚಿಮ ಏಷ್ಯ. ತಿರುಳಿನಲ್ಲಿ ಶೇಕಡ ಸುಮಾರು ೫೦ ಕೊಬ್ಬು ಅಥವಾ ತೈಲ, ೨೦ ಪ್ರೋಟೀನ್, ೨೦ ಕಾರ್ಬೊಹೈಡ್ರೇಟ್ ಜೊತೆಗೆ ಹಲಬಗೆಯ ಖನಿಜಗಳೂ ಜೀವಸತ್ತ್ವಗಳೂ ಇವೆ. ಬೀಜಗಳಿಗೆ ಔಷಧೀಯ ಗುಣವುಂಟು. ತೈಲವನ್ನು ಹಣ್ಣು ಸಾರ, ಸುಗಂಧ ದ್ರವ್ಯ ಹಾಗೂ ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ

ಬಾಂಧವ್ಯ

(ರ) ದತ್ತ ಸಂಯುಕ್ತದೊಂದಿಗೆ ಇನ್ನೊಂದು ಸಂಯುಕ್ತ ವರ್ತಿಸುವ ತೀವ್ರತೆಯ ಮಾನ. ಪರಮಾಣುಗಳ ನಡುವೆ ರಾಸಾಯನಿಕ ಕ್ರಿಯೆ ನಡೆಯುವ ತೀವ್ರತೆಯನ್ನೂ ಸೂಚಿಸುವುದುಂಟು. (ವೈ) ಪ್ರತಿಜನಕ ಮತ್ತು ಪ್ರತಿಕಾಯ, ಇಲ್ಲವೇ ಗ್ರಾಹಿ ಮತ್ತು ಅದರ ಲಿಗಾಂಡ್ ನಡುವಿನ ಅಂತರ ಕ್ರಿಯೆಯ ತ್ರಾಣದ ಅಳತೆ. ಒಲವು

ಬಾಧೆ

(ಮವೈ) ಅತಿಹೆಚ್ಚಿನ ಶಬ್ದ, ಗಲಭೆ ಗೊಂದಲಗಳು ಉಂಟುಮಾಡುವ ಮಾನಸಿಕ ತುಮುಲ. ಇದನ್ನು ಅಳೆಯಲು ನಿರಪೇಕ್ಷ ಮಾನಗಳಿಲ್ಲ. ಆದರೆ ನಿರ್ದಿಷ್ಟ ವರ್ಗಗಳ ಶಬ್ದ ಉಂಟುಮಾಡುವ ಬಾಧೆಗಳನ್ನು ಸಹಸಂಬಂಧಿಸಬಹುದು

ಬಾನಕ್ಕಿ

(ಪ್ರಾ) ಪ್ಯಾಸರಿಫಾರ್ಮೀಸ್ ಗಣ, ಹೀರುಂಡಿನಿಡೀ ಕುಟುಂಬಕ್ಕೆ ಸೇರಿದ ಪುಟ್ಟ ಗಾತ್ರದ ಹಕ್ಕಿ. ಧ್ರುವ ಪ್ರದೇಶ ಮತ್ತು ನ್ಯೂಜಿಲೆಂಡ್ ದೇಶಬಿಟ್ಟು ಪ್ರಪಂಚದ ಎಲ್ಲೆಡೆ ಕಂಡುಬರುತ್ತದೆ. ಮನೆಯ ಮಾಡು, ಗೋಡೆ ಪೊಟರೆಗಳಲ್ಲಿ ಗೂಡು ಕಟ್ಟಿ ಕೊಂಡು ವಾಸ. ಕೀಟಾಹಾರಿ ಆದುದರಿಂದ ಮನುಷ್ಯನಿಗೆ ಉಪಕಾರಿ

ಬಾನಾಡಿ

(ಪ್ರಾ) ಅಲಾಡಿಡೀ ಕುಟುಂಬಕ್ಕೆ ಸೇರಿದ ಹಾಡುಹಕ್ಕಿ. ಯೂರೋಪ್, ಏಷ್ಯ, ಉತ್ತರ ಆಫ್ರಿಕಗಳಲ್ಲಿ ಅಧಿಕವಾಗಿ ಕಂಡು ಬರುತ್ತದೆ. ಹಾಡುತ್ತ ಹಾಡುತ್ತ ಆಕಾಶಕ್ಕೆ ಏರುತ್ತದೆ. ಟಿಟ್ಟಿಭ. ಭಾರದ್ವಾಜ ಹಕ್ಕಿ

ಬಾನೆಟ್

(ತಂ) ಸರಿಸಬಹುದಾದ/ಕಳಚಬಹುದಾದ ರಕ್ಷಾ ಕವಚ. ಉದಾ: ಕಾರ್‌ನಲ್ಲಿ ಬಾನೆಟ್, ಅದರ ಎಂಜಿನ್‌ನ ರಕ್ಷಾಕವಚ

ಬಾನ್ಗುಮ್ಮಟ

(ಖ) ನೋಡಿ: ಖಗೋಳ

ಬಾಬಿನ್

(ಸಾ) ನೂಲು, ತಂತಿ, ಎಳೆ ಮುಂತಾದವನ್ನು ಸುತ್ತಿಡಲು ಬಳಸುವ ಉರುಳೆ

ಬಾಂಬ್

(ತಂ) ಸಂಘಟ್ಟನೆಯಿಂದಲೋ ನಿರ್ದಿಷ್ಟ ಕ್ಷಣದಲ್ಲೋ ಇಲ್ಲವೇ ಸನ್ನಿವೇಶದಲ್ಲೋ ಆಸ್ಫೋಟಿಸುವ ಸಲುವಾಗಿ ತಯಾರಿಸಲಾದ ಸ್ಫೋಟಕ ವಸ್ತುಸಮುಚ್ಚಯ

ಬಾಂಬ್ ಕ್ಯಾಲರಿಮಾಪಕ

(ತಂ) ಘನ ಅಥವಾ ದ್ರವ ಇಂಧನಗಳ ಕ್ಯಾಲರಿ ಮೌಲ್ಯ ಅಳೆಯಲು ಬಳಸುವ ಸಾಧನ. ಈ ‘ಬಾಂಬಿ’ನಲ್ಲಿ ದಪ್ಪ ಭಿತ್ತಿಯ ಉನ್ನತ ಹೊಳಪಿನ ಒಂದು ಉಕ್ಕಿನ ಪಾತ್ರೆ ಇರುತ್ತದೆ. ಅದರೊಳಕ್ಕೆ ಗೊತ್ತಾದ ತೂಕದ ಇಂಧನವನ್ನು ಹಾಕಿ ಸಂಪೀಡಿತ ಆಕ್ಸಿಜನ್‌ನ ವಾತಾವರಣದಲ್ಲಿ ಅದನ್ನು ವಿದ್ಯುತ್ ಬಳಸಿ ಉರಿಸಲಾಗುತ್ತದೆ. ಈ ‘ಬಾಂಬ್’ನ್ನು ಗೊತ್ತಾದ ಪ್ರಮಾಣದ ನೀರಿನಲ್ಲಿ ಮುಳುಗಿಸಿದಾಗ ದಹನ ಉಷ್ಣವು ನೀರಿಗೆ ವರ್ಗವಾಗಿ ಈ ಉಷ್ಣತೆಯ ಹೆಚ್ಚಳದಿಂದ ಕ್ಯಾಲರಿ ಮೌಲ್ಯವನ್ನು ಅಳೆಯಲಾಗುತ್ತದೆ

ಬಾಮ್

(ವೈ) ಸ್ಥಳೀಯ ವೇದನೆ ಶಮನಿಸುವ ಮುಲಾಮು. ಕೆಲವು ಮರಗಳು ಸ್ರವಿಸುವ ಸುಗಂಧಪೂರಿತ ಬಿಳಿಹಾಲು. ಗುಗ್ಗುಳ

Search Dictionaries

Loading Results

Follow Us :   
  Download Bharatavani App
  Bharatavani Windows App