Navakarnataka Vijnana Tantrajnana Padasampada (2011)
Navakarnataka Publications Private Limited
ಬಹುಶೃಂಗೀ
(ಸ) (ಎಲೆಗಳಲ್ಲಿ) ಒಂದಕ್ಕಿಂತ ಹೆಚ್ಚು ಮೊನಚು ಕೊನೆಗಳುಳ್ಳ (ತುದಿ) (ವೈ) (ಹಲ್ಲಿನ ಮೇಲ್ಭಾಗದಲ್ಲಿ) ಒಂದಕ್ಕಿಂತ ಹೆಚ್ಚು ಚಾಚು ಮೊನೆಗಳಿರುವ
ಬಹುಸಾಮರ್ಥ್ಯ ಆದಿಕೋಶಗಳು
(PSCs) (ವೈ) ಯಾವುದೇ ರೀತಿಯ ಜೀವಕೋಶವಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆದಿರುವ ಮೂಲ ಜೀವಕೋಶಗಳು
ಬಹ್ವಂಗುಲಿ
(ಪ್ರಾ) ಸಹಜವಾಗಿರುವುದಕ್ಕಿಂತಲೂ
ಬಳಿ
(ವೈ) ಮುಲಾಮು, ಔಷಧಿ ಲೇಪಿಸುವುದು
ಬಳೆ
(ಗ) ನೋಡಿ: ಟೋರಸ್
ಬಳ್ಳಿ
(ಸ) ಚಾಚು ಕುಡಿಗಳಿಂದ ಆಧಾರ ಸಸ್ಯ ಅಥವಾ ಇತರ ಊರೆಯನ್ನು ಬಿಗಿಹಿಡಿದು ಹಬ್ಬುವ ಸಸ್ಯ. ಹಂಬು
ಬಳ್ಳಿ
(ಸ) ಬೆಂಬಲಕ್ಕಾಗಿ ಮತ್ತೊಂದು ಸಸ್ಯದ ಸುತ್ತ ಬಳಸಿಕೊಂಡು ಬೆಳೆಯುವ ಸಸ್ಯ
ಬಾಕ್ಸೈಟ್
(ಭೂವಿ) ಉಷ್ಣ ಪ್ರದೇಶಗಳಲ್ಲಿ ಹವೆಯ ಅಪಕ್ಷಯದ ಫಲವಾಗಿ ರೂಪುಗೊಂಡು ಬಹುತೇಕ ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್ಗಳನ್ನು ಮಾತ್ರ ಒಳಗೊಂಡಿರುವ ಅವಶಿಷ್ಟ ಶಿಲೆ. ಅಲ್ಯೂಮಿನಿಯಮ್ನ ಅತ್ಯಂತ ಮುಖ್ಯ ಅದಿರು. ರಾಸಾಯನಿಕ ಸೂತ್ರ Al2O3.2H2O
ಬಾಗಿದ
(ಸ) ಬೆಳೆಯುತ್ತಿರುವ ಗಿಡದ ಕಾಂಡ ಡೊಂಕಾಗಿ ಇರುವುದು. ಬಾಗಿ ನೆಲಮುಖಿಯಾಗಿರುವುದು
ಬಾಗಿಸೂತ್ರ
(ಸ) ಬರ್ಬೆರಿಡೇಸೀ ಕುಟುಂಬಕ್ಕೆ ಸೇರಿದ ಮುಳ್ಳು ಸಸ್ಯ. ಬರ್ಬೆರಿಸ್ ಅರಿಸ್ಟೇಟ ವೈಜ್ಞಾನಿಕ ನಾಮ. ಇದರ ಎಲೆಗಳು ಮೊನಚು ಮುಳ್ಳುಗಳಾಗಿ ಪರಿವರ್ತನೆಗೊಂಡಿರುವುವು. ಹಿಮಾಲಯದ ವಾಯವ್ಯ ಪ್ರಾಂತ ಕುಲು, ಕುಮಾಂವ್ ಪ್ರದೇಶ ಗಳಲ್ಲೂ ನೀಲಗಿರಿ ಬೆಟ್ಟಗಳಲ್ಲೂ ವಿಶೇಷವಾಗಿ ಬೆಳೆಯುತ್ತದೆ. ಬೇರು, ಕಾಂಡಗಳಿಂದ ಲಭಿಸುವ ರಾಳವಸ್ತುವನ್ನು ಚರ್ಮ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ
ಬಾಗು
(ಗ) ಕಾರ್ಟೀಸಿಯನ್ ಜ್ಯಾಮಿತಿಯಲ್ಲಿ x-ಅಕ್ಷದ ಧನದಿಶೆಗೂ ಯಾವುದೇ ಸರಳರೇಖೆಗೂ ನಡುವಿನ ಕೋನ. ಇದು ಆಗಿದ್ದರೆ tan tವನ್ನು ಆ ರೇಖೆಯ ಬಾಗು (ವಾಟ-ಪ್ರವಣತೆ) ಎನ್ನುತ್ತೇವೆ. ಇಳಕಲು, ಆನತ, ಓರೆ
ಬಾಗು
(ತಂ) ಪಕ್ಕಪಕ್ಕದಲ್ಲಿ ವಿಭಿನ್ನ ಕೋನಗಳಲ್ಲಿರುವಂತೆ ಅಳವಡಿಸಿರುವ ಸರಳ ನಾಳಗಳ ಇಲ್ಲವೇ ಕೊಳವೆಗಳ ತುದಿಗಳನ್ನು ಸಂಬಂಧಿಸಲು ಬಳಸುವ ಬಗ್ಗುನಾಳ
ಬಾಗು ಮಹತ್ತ್ವ
(ತಂ) ದೂಲದ
ಬಾಗುತಲ
(ಗ) ನೋಡಿ: ಓರೆತಲ
ಬಾಗುತ್ರಾಣ
(ತಂ) ಬಾಗುವಿಕೆಯನ್ನು ಎದುರಿಸಿ ನಿಲ್ಲುವಲ್ಲಿ ದೂಲ ಅಥವಾ ಯಾವುದೇ ಸಂರಚನೆ ಪ್ರದರ್ಶಿಸುವ ಸಾಮರ್ಥ್ಯ. ನತತ್ರಾಣ
ಬಾಚಿಹಲ್ಲು
(ಪ್ರಾ) ಸ್ತನಿಗಳಲ್ಲಿ, ಕಡಿಯುವುದಕ್ಕೆ ಅನುಕೂಲ ವಾದ ಎಡ ಮತ್ತು ಬಲ ಕೋರೆಹಲ್ಲುಗಳ ನಡುವಣ ಯಾವುದೇ ಹಲ್ಲು. ಈ ಹಲ್ಲುಗಳಿಗೆಲ್ಲ ಬೇರು ಒಂದೇ. ಮೇಲುದವಡೆಯ ಜೊತೆ ಎಲುಬುಗಳಿಗೆ ಹೊಂದಿಕೊಂಡಂತಿರುವ ಹಲ್ಲುಗಳು ಇವು
ಬಾಜಣೆ
(ಸಾ) ಬಡಿತ, ಹೊಡೆತ. ನೋಡಿ: ಮಹಾಬಾಜಣೆ
ಬಾಟಮ್ನೆಸ್
(ಭೌ) ಕ್ವಾರ್ಕ್ (ಆದ್ದರಿಂದ ಹೇಡ್ರಾನ್) ಎಂಬ ಮೂಲಕಣಗಳನ್ನು ಲಕ್ಷಣೀಕರಿಸುವ ಒಂದು ಗುಣ. ಲೆಪ್ಟಾನ್ ಮತ್ತು ಗಾಜ್ ಬೋಸಾನ್ ಮೂಲ ಕಣಗಳ ಬಾಟಮ್ನೆಸ್ ಸೊನ್ನೆ. ಕಣಗಳ ನಡುವೆ ಪ್ರಬಲ ಹಾಗೂ ವಿದ್ಯುತ್ಕಾಂತ ಅಂತರಕ್ರಿಯೆಗಳಲ್ಲಿ ಬಾಟಮ್ನೆಸ್ ರಕ್ಷಿತವಾಗಿರುತ್ತದೆ, ದುರ್ಬಲ ಅಂತರಕ್ರಿಯೆಗಳಲ್ಲಿಲ್ಲ
ಬಾಂಟೆಂಗ್
(ಪ್ರಾ) ಭಾರತದ ಕಾಟಿ (ಕಾಡೆಮ್ಮೆ ) ಜಾತಿಯ ಪ್ರಾಣಿ. ಆಗ್ನೇಯ ಏಷ್ಯ ಕಾಡುಗಳಲ್ಲಿ ವಾಸ
ಬಾಟ್