भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಹುಧ್ರುವೀಯ

(ಭೌ) ವಿದ್ಯುಜ್ಜನಕದಲ್ಲಿರುವಂತೆ ಎರಡಕ್ಕಿಂತ ಹೆಚ್ಚು ಕಾಂತೀಯ ಧ್ರುವಗಳುಳ್ಳ. (ಪ್ರಾ) ಅನೇಕ ಆಕ್ಸಾನುಗಳುಳ್ಳ ನರಕೋಶ

ಬಹುಪತ್ರದಳೀಯ

(ಸ) ಬಿಡಿ ಬಿಡಿಯಾದ ಅನೇಕ ಪುಷ್ಪಪಾತ್ರೆ ಪತ್ರಗಳುಳ್ಳ

ಬಹುಪದಿ

(ಗ) ಧನಪೂರ್ಣಾಂಕ ಘಾತಗಳಿರುವ ಚರಗಳನ್ನು ಸ್ಥಿರಾಂಕಗಳಿಂದ ಗುಣಿಸಿ ಪಡೆದ ಪದಗಳ ಮೊತ್ತ ರೂಪಿಸುವ ಗಣಿತೋಕ್ತಿ. ಏಕಚರದಲ್ಲಿ ಸಾರ್ವತ್ರಿಕ ರೂಪ: a0+a1x+a2x2+…..+anxn. ಈ ಬಹುಪದಿಯನ್ನು ಶೂನ್ಯಕ್ಕೆ ಸಮೀಕರಿಸಿದಾಗ ಬಹುಪದೀಯ ಸಮೀಕರಣ ದೊರೆಯುತ್ತದೆ. ಬಹುಪದಿ ಇಲ್ಲವೆ ಬಹುಪದೀಯ ಸಮೀಕರಣದ ಗರಿಷ್ಠ ಘಾತಾಂಕವೇ ಅದರ ಡಿಗ್ರಿ. ಇದರಲ್ಲಿಯ ಸ್ಥಿರಾಂಕಗಳಿಗೆ (ai) ಸಹಾಂಕಗಳೆಂದು ಹೆಸರು. ನೋಡಿ: ಅನೇಕಪದಿ

ಬಹುಪರಮಾಣವಿಕ

(ಭೌ) ದ್ವಿಪರಮಾಣವಿಕ ಹಾಗೂ ಏಕಪರಮಾಣವಿಕ ಅಣುಗಳಂತಲ್ಲದೆ ಹಲವಾರು ಪರಮಾಣು ಗಳಿಂದ ರೂಪಿತವಾದ ಅಣು. ಉದಾ: ಪಿರಿಡೀನ್ (C5H5N) ಅಥವಾ ಡೈನೈಟ್ರೊಜನ್ ಟೆಟ್ರಾಕ್ಸೈಡ್ (N2O4)

ಬಹುಪಾದಿ

(ಪ್ರಾ) ಪೂರ್ಣವಾಗಿ ಅಭಿವರ್ಧನೆಗೊಂಡಾಗ ಬಹುಸಂಖ್ಯೆಯಲ್ಲಿ ಪಾದಗಳಿರುವ ಹುಳು. ಉದಾ: ಕಂಬಳಿಹುಳು

ಬಹುಪೋಷೀ

(ಪ್ರಾ) ಒಂದಕ್ಕಿಂತ ಹೆಚ್ಚು ಆಕರಗಳಿಂದ ಸಾವಯವ ಪೋಷಕ ಪಡೆಯುವ ಜೀವಿ. ಉದಾ: ಬ್ಯಾಕ್ಟೀರಿಯ

ಬಹುಪ್ರತ್ಯಾಮ್ಲೀಯ

(ರ) ಒಂದು ಅಣುವಿನಲ್ಲಿ ಪಲ್ಲಟ ಯೋಗ್ಯವಾದ ಅನೇಕ ಹೈಡ್ರೋಜನ್ ಪರಮಾಣುಗಳು ಇರುವ (ಆಮ್ಲ) ಉದಾ: ಸಲ್ಫ್ಯೂರಿಕ್ ಆಮ್ಲ; (H2SO4) ಆರ್ಥೊಫಾಸ್ಫರಿಕ್ ಆಮ್ಲ; (H3PO4) ಪೈರೊಫಾಸ್ಫಾರಿಕ್ ಆಮ್ಲ (H4P2O7)

ಬಹುಫಲಕ

(ಗ) ಸಮತಲ ಬಹುಭುಜಗಳಿಂದ ಆವೃತ ವಾದ ಸಂವೃತ ಆಕೃತಿ. ಪರಿಬಂಧಿಸುವ ಬಹುಭುಜಗಳಿಗೆ ಫಲಕ ಗಳೆಂದೂ (F) ಫಲಕಗಳ ಛೇದನೆಗಳಿಗೆ ಅಂಚುಗಳೆಂದೂ (E) ಮೂರು ಅಥವಾ ಹೆಚ್ಚು ಅಂಚುಗಳ ಸಂಗಮ ಬಿಂದುಗಳಿಗೆ ಶೃಂಗ ಗಳೆಂದೂ (V) ಹೆಸರು. ಎಲ್ಲ ಫಲಕಗಳೂ ಸರ್ವಸಮ ಕ್ರಮಬಹು ಭುಜಗಳಾಗಿದ್ದು ಎಲ್ಲ ಬಹುಫಲಕೀಯ ಕೋನಗಳೂ ಸರ್ವಸಮ ವಾಗಿದ್ದರೆ ಆ ಆಕೃತಿಗೆ ಕ್ರಮ ಬಹುಫಲಕವೆಂದು ಹೆಸರು. ಐದು ಕ್ರಮ ಬಹು ಫಲಕಗಳು ಮಾತ್ರ ಸಾಧ್ಯ; ಚತುಷ್ಫಲಕ (೪ ತ್ರಿಕೋನೀಯ ಫಲಕಗಳು), ಷಷ್ಠಫಲಕ (೬ ಚೌಕೀಯ ಫಲಕ ಗಳು), ಅಷ್ಟಫಲಕ (೮ ತ್ರಿಕೋನೀಯ ಫಲಕಗಳು), ದ್ವಾದಶ ಫಲಕ (೧೨ ಪಂಚ ಕೋನೀಯ ಫಲಕಗಳು) ಮತ್ತು ವಿಂಶತಿ ಫಲಕ (೨೦ ತ್ರಿಕೋನೀಯ ಫಲಕಗಳು). ಇವು ಪ್ರಾಚೀನ ಗ್ರೀಕ್ ಗಣಿತವಿದ ಪ್ಲೇಟೋಗೆ (ಕ್ರಿಪೂ ೫-೪ ಶತಮಾನ) ಗೊತ್ತಿದ್ದುದರಿಂದ ಇವುಗಳಿಗೆ ಪ್ಲೆಟೋನಿಕ್ ಘನಾಕೃತಿಗಳೆಂಬ ಹೆಸರುಂಟು. ಮುಂದೆ ಯೋಹನ್ ಕೆಪ್ಲರ್ (೧೫೭೧-೧೬೩೦) ಗ್ರಹ ಚಲನ ನಿಯಮಗಳನ್ನು ಆವಿಷ್ಕರಿಸುವಾಗ ಈ ಘನಾಕೃತಿಗಳಿಗೆ ವಿನಾಕಾರಣ ಪ್ರಾಶಸ್ತ್ಯ ಬಂದಿತ್ತು. ಯಾವುದೇ ಬಹುಭುಜದಲ್ಲಿ V+F-E = 2. ಇದಕ್ಕೆ ಆಯ್ಲರ್‌ನ ಸೂತ್ರವೆಂದು ಹೆಸರು. ನೋಡಿ: ಕ್ರಮಘನಾಕೃತಿಗಳು

ಬಹುಫಲಕ ಕೋನ

(ಗ) ಬಹು ಫಲಕಾಕೃತಿಯ ಫಲಕಗಳು ಒಂದು ಶೃಂಗದಲ್ಲಿ ರಚಿಸುವ ಕೋನ

ಬಹುಫಲವತ್ತತೆ

(ಜೀ) ಅತಿಶಯ ಸಂತಾನಾಭಿವೃದ್ಧಿ ಸಾಮರ್ಥ್ಯ ಇರುವ ಗುಣ

ಬಹುಫಲೀಯ

(ಸ) ಎರಡು ಅಥವಾ ಹೆಚ್ಚು ಅಂಡಾಶಯಗಳಿರುವ. ವರ್ಷದಲ್ಲಿ ಹಲವು ಬಾರಿ ಫಲ ಕೊಡುವ. ಉದಾ: ತೆಂಗು, ಅಡಿಕೆ. ನೋಡಿ: ಏಕಫಲೀಯ

ಬಹುಭುಜ

(ಗ) ಸರಳರೇಖೆಗಳಿಂದ ಆವೃತವಾಗಿರುವ ಸಂವೃತ ಸಮತಲಾಕೃತಿ. ಪರಿಬಂಧಿಸುವ ಸರಳರೇಖೆಗಳಿಗೆ ಭುಜ ಗಳೆಂದೂ, ಭುಜಗಳ ಛೇದನೆಗಳಿಗೆ ಶೃಂಗಗಳೆಂದೂ ಹೆಸರು. ಯಾವುದೇ ಬಹುಭುಜದಲ್ಲಿ ಭುಜಗಳ ಸಂಖ್ಯೆಯೂ ಒಳ ಕೋನಗಳ ಸಂಖ್ಯೆಯೂ ಒಂದೇ. ಎಲ್ಲ ಭುಜಗಳೂ ಎಲ್ಲ ಕೋನಗಳೂ ಪರಸ್ಪರ ಸಮವಾದಾಗ ಆ ಆಕೃತಿಗೆ ಕ್ರಮ ಬಹುಭುಜವೆಂದು ಹೆಸರು

ಬಹುಮಡಿ ಬಿಂದು

(ಗ) f (x,y) ವಕ್ರರೇಖೆಯ ಈ ಬಿಂದುವಿನಲ್ಲಿ fನ ಮೊದಲ ಅಶೂನ್ಯ (derivative) ನಿಷ್ಪನ್ನದ ದರ್ಜೆ n ಆಗಿದ್ದರೆ ಇದು n ದರ್ಜೆಯ ಬಹುಮಡಿ ಬಿಂದು. n = 2 ಆದಾಗ ಇದು ದ್ವಿಮಡಿ, n = 3 ಆದಾಗ ತ್ರಿಮಡಿ… n = n ಆದಾಗ n-ಮಡಿ ಬಿಂದುವಾಗುವುದು

ಬಹುಮೂತ್ರ

(ವೈ) ಅಧಿಕ ಮೂತ್ರಸ್ರಾವ

ಬಹುರೂಪತೆ

(ಜೀ) ೧. ಜೀವಿ ಪ್ರಭೇದಗಳಲ್ಲಿ ಹಲವು ನಿರ್ದಿಷ್ಟ ಭಿನ್ನ ಬಗೆಗಳು ಸಹಅಸ್ತಿತ್ವದಲ್ಲಿರುವುದು. ಉದಾ: ಮನುಷ್ಯರಲ್ಲಿಯ ಭಿನ್ನ ರಕ್ತಗುಂಪುಗಳು; ಕೆಲವು ಚಿಟ್ಟೆ ಗಳಲ್ಲಿಯ ಭಿನ್ನ ವರ್ಣರೂಪಗಳು. ೨. ಜೀವಿಯ ಜೀವನ ಚಕ್ರದ ವಿಭಿನ್ನ ಘಟ್ಟಗಳಲ್ಲಿ ಬೇರೆ ಬೇರೆ ರಚನಾ ರೂಪಗಳು ಕಾಣಿಸಿಕೊಳ್ಳುವುದು. (ಭೂವಿ) ತಾಪ, ಒತ್ತಡ ಮುಂತಾದ ಭಿನ್ನ ಪರಿಸ್ಥಿತಿಗಳಿಗೆ ಅನುಗುಣವಾಗಿ ಖನಿಜ ಪದಾರ್ಥಗಳಲ್ಲಿ ವಿವಿಧ ಆಂತರಿಕ ರಚನೆಗಳು ಮತ್ತು ಬಾಹ್ಯ ರೂಪಗಳು ಕಂಡುಬರುವ ಗುಣ. ಉದಾ: ಸುಣ್ಣಕಲ್ಲು, ಅಮೃತಶಿಲೆ, ಚಾಕ್, CaCo3ಯ ಬಹುರೂಪಿಗಳು. ಆದರೆ ಇವುಗಳಿಗೆ ವಿಭಿನ್ನ ಗುಣ, ರೂಪಗಳಿವೆ

ಬಹುರೇಕು

(ಗ) ವೃತ್ತದ ತದ್ವತ್ತು ಕಂಸಗಳನ್ನು ಕ್ರಮ ಬಹುಭುಜದ ಮೇಲೆ ನಿರ್ದಿಷ್ಟ ಕ್ರಮದಲ್ಲಿ ಅಳವಡಿಸಿ ರಚಿಸಿದ ಸಮತಲ ಸಮಮಿತಿ ಆಕೃತಿ. ಈ ಆಕೃತಿ ಬಹುಭುಜದ ಕೇಂದ್ರ ಕುರಿತಂತೆ ಸಮ್ಮಿತೀಯವಾಗಿದೆ. ಕಂಸಗಳ ಕೊನೆ ಬಿಂದುಗಳು ಬಹುಭುಜದ ಮೇಲೆ ನೆಲೆಸಿರುತ್ತವೆ

ಬಹುವರ್ಣಕ

(ಭೌ) ಬೆಳಕನ್ನು ಕುರಿತಂತೆ ವಿವಿಧ ಅಲೆಯುದ್ದಗಳ ಮಿಶ್ರಣವುಳ್ಳ ವಿದ್ಯುತ್ಕಾಂತ ವಿಕಿರಣ

ಬಹುವರ್ಣೀ

(ಭೌ) ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಣ್ಣಗಳುಳ್ಳ

ಬಹುವರ್ತಿ

(ಸಂ) ಯಾವುದೇ ಸಂಖ್ಯಾಗಣದಲ್ಲಿ ಹೆಚ್ಚು

ಬಹುವಳಿ

(ಭೌ) ಹಲವಾರು ನಿಕಟ ಸಮೀಪಸ್ಥ

Search Dictionaries

Loading Results

Follow Us :   
  Download Bharatavani App
  Bharatavani Windows App