भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಹಿರ್ವೇಶನ

(ಗ) ಯಾವುದೇ ಸಂಖ್ಯಾಶ್ರೇಣಿ ಯಲ್ಲಿಯ ಜ್ಞಾತಪದಗಳಿಂದ ಆ ಶ್ರೇಣಿಯ ಹಿಂದಿನ/ಮುಂದಿನ ಇತರ ಪದಗಳನ್ನು ಗಣಿಸುವುದು. ಜ್ಞಾತದಿಂದ ಅಜ್ಞಾತದ ಗಣನೆ. ಒಂದು ನಿರ್ದಿಷ್ಟ ಅಂಶದ ಮೌಲ್ಯವನ್ನು ಆ ಅಂಶದ ಒಂದೇ ಬದಿಯ ಫಲನದ ಮೌಲ್ಯದಿಂದ ಅಂದಾಜು ಮಾಡುವುದು

ಬಹಿಶ್ಶಿಲೆ

(ಭೂವಿ) ಹೆಚ್ಚು ಹಳೆಯ (ಪುರಾತನ) ಶಿಲಾಸ್ತರ ಗಳಿಂದ ಸಂಪೂರ್ಣವಾಗಿ ಆವೃತವಾದ ಇತ್ತೀಚೆಗಿನ (ಕಿರಿಪ್ರಾಯದ) ಶಿಲಾವಶೇಷ. ಇದು ಸವೆತ, ಸ್ತರಭಂಗ ಅಥವಾ ಪದರೀಕರಣದಿಂದ ಇಲ್ಲವೇ ಈ ಎಲ್ಲ ಕ್ರಿಯೆಗಳೂ ಕೂಡಿ ಸಂಭವಿಸಬಹುದು. ಪುರಾಂತಃಶಾಹಿ

ಬಹಿಷ್ಕರಣ ತತ್ತ್ವ

(ಭೌ) ೧. ಯಾವುದೇ ಪರಮಾಣುವಿನಲ್ಲಿಯ ೨ ಎಲೆಕ್ಟ್ರಾನ್‌ಗಳು ಒಂದೇ ಕಕ್ಷೆಯಲ್ಲಿರ ಲಾರವು ಎಂಬ ತತ್ತ್ವ. ೨. ಎರಡು ಫರ್ಮಿಯಾನ್ ಕಣಗಳು ಒಂದೇ ಕಾಲದಲ್ಲಿ ಒಂದೇ ರೀತಿಯ ಕ್ವಾಂಟಮ್ ಸ್ಥಿತಿಯಲ್ಲಿ ಇರಲಾರವೆಂಬ ಮೂಲಸೂತ್ರ. ನೋಡಿ: ಪೌಲಿ ಬಹಿಷ್ಕರಣ ತತ್ತ್ವ

ಬಹಿಷ್ಕೇಂದ್ರ

(ಗ) ತ್ರಿಭುಜದಲ್ಲಿ ಒಂದು ಭುಜವನ್ನು ಒಳ ಸ್ಪರ್ಶಿಸುವಂತೆಯೂ ಉಳಿದೆರಡನ್ನು ಹೊರಸ್ಪರ್ಶಿಸುವಂತೆಯೂ ರಚಿಸಿದ ವೃತ್ತದ ಕೇಂದ್ರ. ಬಹಿರ್‌ವೃತ್ತ ಕೇಂದ್ರ. ಇಂಥ

ಬಹಿಃಸಂಕರ

(ಜೀ) ಭಿನ್ನ ಜೀನ್ ನಮೂನೆಯೊಂದಿಗೆ ತಳಿಯೊಂದರ ಸಂಕರ

ಬಹಿಃಸ್ಪರ್ಶಕ ವೃತ್ತ

(ಗ) ನೋಡಿ: ಬಹಿರ್ವೃತ್ತ

ಬಹಿಸ್ಸಂತಾನ

(ಜೀ) ಪ್ರಭೇದವೊಂದರಲ್ಲಿ, ಸಂಬಂಧ ಇರದ ಅಥವಾ ದೂರ ಸಂಬಂಧದ ವ್ಯಕ್ತಿಗಳ ನಡುವೆ ಸಂಗಮ. ಇದರಿಂದ ಭಿನ್ನಯುಗ್ಮಜ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತದೆ. ಬಹಿಸ್ಸಂತಾನ ವ್ಯಕ್ತಿಗಳಲ್ಲಿ ಹೆಚ್ಚು ವೈವಿಧ್ಯ ಕಂಡುಬರುತ್ತದೆ ಮತ್ತು ಅವರಲ್ಲಿ ಪರಿಸರ ವ್ಯತ್ಯಯಗಳಿಗೆ ಹೊಂದಿಕೊಳ್ಳುವ ಸಂಭಾವ್ಯತೆ ಹೆಚ್ಚಿರುತ್ತದೆ. ನೋಡಿ: ಒಳತಳೀಕರಣ

ಬಹಿಸ್ಸರಣ

(ರ) ಅತಿಶಯ ಒತ್ತಡದಲ್ಲಿರುವ ಭಾರಿ ಗಾತ್ರದ ದ್ರವವಾಗಲೀ ಅನಿಲವಾಗಲೀ ಸಾಪೇಕ್ಷವಾಗಿ ಕಿರಿದಾದ ರಂಧ್ರಗಳ ಅಥವಾ ಕಂಡಿಗಳ ಮೂಲಕ ಹೊರ ಹರಿಯುವುದು. ನೋಡಿ: ಅಂತಸ್ಸರಣ

ಬಹು ಕ್ಷಯದಂತಿ

(ಪ್ರಾ) ಅನೇಕ ಸಣ್ಣ ಶಂಕ್ವಾಕೃತಿಯ ಹಾಗೂ ಚಾಚುಮೊನೆ ಹಲ್ಲುಗಳಿರುವ

ಬಹು ಗಂಡು ಸಂಗ

(ಜೀ) ಒಂದು ಹೆಣ್ಣು ಅನೇಕ ಗಂಡುಗಳೊಂದಿಗೆ ಕೂಡುವ ಕ್ರಮ/ಪದ್ಧತಿ

ಬಹು ನಮೂನತೆ

(ಪವಿ) ಒಂದೇ ಬಗೆಯ ಜೀವಿ ಭೌಗೋಳಿಕವಾಗಿ ಪ್ರತ್ಯೇಕವಾದ ನೆಲೆಗಳಿಗೆ ಸಂಬಂಧಿಸಿ ತಮ್ಮ ಲಕ್ಷಣಗಳಲ್ಲಿ ತೋರುವ ವ್ಯತ್ಯಯ. ಉದಾ: ಕಾಡು ಹಂದಿ ಮತ್ತು ಊರು ಹಂದಿಗಳು ತೋರುವ ವ್ಯತ್ಯಯ

ಬಹುಆದಿದಾರಕ

(ಸ) ವಿಶೇಷವಾಗಿ ಏಕದಳ ಸಸ್ಯಗಳ ಬೇರುಗಳಲ್ಲಿರುವಂತೆ ಅನೇಕ ಆದಿದಾರು ತಂತುಗಳಿರುವ ಕಾಂಡ

ಬಹುಕಂಪನಕಾರಿ

(ತಂ) ಇದೊಂದು ಎಲೆಕ್ಟ್ರಾನ್ ದೋಲಕ. ಇದರಲ್ಲಿ ಎರಡು ಕ್ರಿಯಾಶೀಲ ಸಾಧನಗಳು (ಸಾಮಾನ್ಯ ವಾಗಿ ಟ್ರಾನ್ಸಿಸ್ಟರುಗಳು) ಇರುತ್ತವೆ. ಇವು ವಿದ್ಯುತ್ ಜಾಲಬಂಧದಲ್ಲಿ ಅಂತರ-ಸಂಬಂಧಿತವಾಗಿರುತ್ತವೆ. ನಿರಂತರವಾದ ಚೌಕ ತರಂಗವನ್ನು ಉಂಟುಮಾಡುವುದು ಈ ಸಾಧನದ ಉದ್ದೇಶ. ಈ ಚೌಕತರಂಗದ ನೆರವಿನಿಂದ ಮಾಹಿತಿಯನ್ನು ತರ್ಕಮಂಡಲದಲ್ಲಿ ದ್ವಿಸಂಕೇತದ ರೂಪದಲ್ಲಿ ದಾಸ್ತಾನು ಮಾಡಲು ಸಾಧ್ಯವಾಗುತ್ತದೆ

ಬಹುಕೃಷಿ

(ಪವಿ) ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವ ಕೃಷಿ ಪದ್ಧತಿ. ಉದಾ: ಎಳ್ಳು, ತೊಗರಿ, ಅವರೆ ಮುಂತಾದವನ್ನು ಒಟ್ಟಿಗೆ ಬೆಳೆಸುವುದು. ಇದರಿಂದ ಕೀಟಗಳ ಹಾವಳಿ ಕಡಿಮೆ. ಇಳುವರಿಗೂ ಧಕ್ಕೆ ಬರದು

ಬಹುಗುಣಿತ

(ಜೀ) ಸಾಧಾರಣವಾಗಿ ಹ್ಯಾಪ್ಲಾಯ್ಡ್ ಸಂಖ್ಯೆ nನ ಎರಡರಷ್ಟಕ್ಕಿಂತಲೂ ಅಧಿಕವಾದ ಕ್ರೋಮೋ ಸೋಮ್‌ಗಳು ಇರುವ ಜೀವಿ ಅಥವಾ ಕೋಶ

ಬಹುಗುಣಿತ ನಕ್ಷತ್ರಗಳು

(ಖ) ಪರಸ್ಪರ ಗುರುತ್ವ ಬಲಗಳಿಂದ ಸಂಯೋಜಿತವಾಗಿರುವ ಮೂರು ಅಥವಾ ಹೆಚ್ಚು ನಕ್ಷತ್ರಗಳ ವ್ಯವಸ್ಥೆ. ಇದರ ಸಾಮಾನ್ಯ ಗುರುತ್ವ ಕೇಂದ್ರದ ಸುತ್ತ ಈ ತಾರೆಗಳು ಪರಿಭ್ರಮಿಸುತ್ತಿರುತ್ತವೆ

ಬಹುಘಾತಪದಿ

(ಗ) ನೋಡಿ : ಬಹುಪದಿ

ಬಹುಚರ

(ಗ) ಒಂದಕ್ಕಿಂತ ಹೆಚ್ಚು ಚರಗಳನ್ನು ಒಳಗೊಂಡಿರುವ. f (x,y,z) = 0. ಇದು ಮೂರು ಚರಗಳನ್ನು ಒಳಗೊಂಡಿರುವ ಸಮೀಕರಣ

ಬಹುಜಲ

(ರ) ಸಾಂದ್ರತೆ, ಸ್ನಿಗ್ಧತೆಗಳಲ್ಲಿ ಸಹಜ ನೀರಿಗಿಂತ ಭಿನ್ನವಾಗಿರುವ ನೀರು. ಅದರಲ್ಲಿ ವಿಲೀನವಾಗಿರುವ ಕಲಿಲ ಕಣಗಳೇ ಇದಕ್ಕೆ ಕಾರಣವೇ ಹೊರತು ಅದರ ಅಣುರಚನಾ ವ್ಯತ್ಯಾಸವು ಇದಕ್ಕೆ ಕಾರಣವಲ್ಲ

ಬಹುದಳ

(ಸ) ಎರಡಕ್ಕಿಂತ ಹೆಚ್ಚು ಮೊಳಕೆ ಎಲೆಗಳಿರುವ. ಉದಾ: ಪೀತದಾರು (ಪೈನ್)

Search Dictionaries

Loading Results

Follow Us :   
  Download Bharatavani App
  Bharatavani Windows App