भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಲ್ಲಾಸ್ಟು

(ಎಂ) ರೈಲ್ವೆ ಟ್ರ್ಯಾಕ್‌ನ ಸ್ಲೀಪರುಗಳಿಗೆ ಆಧಾರವಾಗಿರುವ, ದಪ್ಪ ಜಲ್ಲಿಯ ಪದರು. ರೈಲಿನ ಭಾರವನ್ನು ಭೂಸ್ತರಕ್ಕೆ ರವಾನಿಸುತ್ತದೆಯಲ್ಲದೆ, ರೈಲಿನ ಓಟದಿಂದಾಗುವ ಕಂಪನವನ್ನು ಕಡಿಮೆ ಮಾಡುತ್ತದೆ

ಬವಳಿ

(ವೈ) ತಲೆ ಸುತ್ತು

ಬಸವನ ಹುಳು

(ಪ್ರಾ) ಪ್ರಾಣಿರಾಜ್ಯದ ಮಾಲಸ್ಕ ವಂಶ, ಉದರ ಪಾದಿ ವರ್ಗ, ಪಲ್ಮೊನೇಟ ಗಣ, ಹೆಲಿಸಿಡೀ ಕುಟುಂಬಕ್ಕೆ ಸೇರಿದ ಭೂಚರವಾಸಿ ಅಕಶೇರುಕ. ಅಧಿಕ ತೇವಾಂಶ ಇರುವ ಸ್ಥಳಗಳಲ್ಲಿ ವಾಸ. ಪಾದದ ಮೇಲೆ ನಿಧಾನವಾಗಿ ತೆವಳುವಾಗ ಶರೀರ ಚಿಪ್ಪಿನಿಂದ ಹೊರಬರುತ್ತದೆ. ಚಿಪ್ಪನ್ನು ಬೆನ್ನಿನ ಮೇಲೆ ಹೊತ್ತು ನಡೆಯುತ್ತದೆ. ೪೦,೦೦೦ ಜೀವಂತ ಪ್ರಭೇದಗಳಿವೆ. ಚಿಪ್ಪಿನ ಸುರುಳಿಗಳು ಬಲಗಡೆಗೆ ತಿರುಗಿದ್ದರೆ ಬಲಮುರಿ, ಎಡಗಡೆಗೆ ತಿರುಗಿದ್ದರೆ ಎಡಮುರಿ ಎನ್ನುತ್ತಾರೆ

ಬಸಾಲ್ಟ್

(ಭೂವಿ) ರವೆಯಂಥ ಸೂಕ್ಷ್ಮಕಣಗಳಿಂದಾದ, ಮೂಲದಲ್ಲಿ ಸಾರಭೂತವಾಗಿ ಪ್ಲೇಜಿಯೊಕ್ಲೇಸ್, ಫೆಲ್ಡ್‌ಸ್ಪಾರ್ ಮತ್ತು ಪೈರಾಕ್ಸೀನ್‌ಗಳನ್ನು ಆಲಿವೀನ್ ಸಹಿತ ಅಥವಾ ರಹಿತ ಒಳಗೊಂಡಿರುವ ಅಗ್ನಿಶಿಲೆ. ಕಪ್ಪು, ಹಸಿರು ಅಥವಾ ಕಂದು ಬಣ್ಣದ್ದು. ಇದರಿಂದ ಎರೆ ಮಣ್ಣು ಉಂಟಾಗುತ್ತದೆ

ಬಸಿತ

(ರ) ತಳದಲ್ಲಿರುವ ಗಷ್ಟನ್ನು ಅಥವಾ ತಳಸ್ತರಗಳಲ್ಲಿರುವ ದ್ರವವನ್ನು ಕದಡದೆ ಮೇಲಿನ ತಿಳಿಯನ್ನಷ್ಟೆ ಬಸಿಯುವುದು. ಸಾರಬಸಿತ. ತಿಳಿಬಸಿತ

ಬಸಿತ

(ವೈ) ಶರೀರದೊಳಗೆ ಕೂಡಿಕೊಂಡಿರುವ ಅನವಶ್ಯ ದ್ರವವನ್ನು ಕಂಡಿ ಮಾಡಿ ಹೊರಬಿಡುವುದು

ಬಸಿಪಾತ್ರೆ

(ಭೌ) ದ್ರವದಲ್ಲಿನ ದೊಡ್ಡ ಕಣಗಳನ್ನು ತಡೆಗಟ್ಟಿ ತೆಗೆದುಹಾಕಲು ಯುಕ್ತ ಗಾತ್ರದ ರಂಧ್ರಗಳು ಅಥವಾ ಸೀಳುಗಂಡಿಗಳು ಇರುವ ಪಾತ್ರೆ. ಬಸಿಗೆ, ಸಾರಣಿಗೆ

ಬಸ್ಟರ್ಡ್

(ಪ್ರಾ) ಓಲಿಸ್ ಜಾತಿಯ ಕೊಕ್ಕರೆ ಸಂಬಂಧಿ ದೊಡ್ಡ ಹಕ್ಕಿ. ತೂಕ ೧೩-೧೪ ಕಿಗ್ರಾಮ್. ಬಿಡಿಸಿದ ರೆಕ್ಕೆ ಅಗಲ ೧೮೦-೨೦೦ ಸೆಮೀ. ಹೆಬ್ಬಕ

ಬಹಿಃಕ್ಷೇಪಣ

(ವೈ) ದೇಹದಿಂದ ಮಲವಿಸರ್ಜನೆ

ಬಹಿರಭಿವರ್ಧಿತ

(ಪ್ರಾ) ಪ್ರಾಣಿದೇಹದ ಹೊರಗೆ ಬೆಳೆಯಬಲ್ಲ. ರೋಗೋತ್ಪಾದಕ ಬ್ಯಾಕ್ಟೀರಿಯಗಳನ್ನು ಕುರಿತು ಬಳಸುವ ಪದ

ಬಹಿರುಷ್ಣಕ

(ರ) ಶಾಖವನ್ನು ಹೊರಹಾಕುವ (ರಾಸಾಯನಿಕ ಕ್ರಿಯೆ); ಶಾಖವನ್ನು ಹೊರಹಾಕಿ ರೂಪುಗೊಳ್ಳುವ (ಸಂಯುಕ್ತ) ನೋಡಿ : ಅಂತರುಷ್ಣಕ. (ಜೀ) ವಾತಾವರಣದ ಉಷ್ಣತೆಯಷ್ಟೆ ದೇಹೋಷ್ಣವುಳ್ಳ. ಉದಾ: ಮೀನು, ಸರೀಸೃಪ, ಉಭಯವಾಸಿಗಳಂಥ ನಿಯತತಾಪಿಗಳನ್ನು ಕುರಿತಂತೆ

ಬಹಿರುಷ್ಣಕ ಕ್ರಿಯೆ

(ಭೌ) ಉಷ್ಣ ರೂಪದಲ್ಲಿ ಶಕ್ತಿ ಹೊರಬೀಳುವ ಕ್ರಿಯೆ. ಅಭಿಕರ್ಮಕಗಳ ಒಟ್ಟು ಶಕ್ತಿಯ ಪರಿಮಾಣವು ಉತ್ಪನ್ನಗಳ ಒಟ್ಟು ಶಕ್ತಿಗಿಂತ ಹೆಚ್ಚಾಗಿದ್ದರೆ ಹೀಗಾಗುತ್ತೆ. ಉದಾ: ನೈಟ್ರೊಜನ್ ಮತ್ತು ಹೈಡ್ರೊಜನ್ ಸಂಯೋಗದಿಂದ ಅಮೋನಿಯ ಉತ್ಪತ್ತಿಯಾಗುವುದು ಒಂದು ಬಹಿರುಷ್ಣಕ ಕ್ರಿಯೆ

ಬಹಿರ್‌ಕಂಕಾಲ

(ಪ್ರಾ) ಮೂಳೆಯ ಅಥವಾ ಚರ್ಮದ ಹೊರಹೊದಿಕೆ. ಜೇಡರಹುಳು, ಜರಿ ಮುಂತಾದ

ಬಹಿರ್ಜನಿತ ಕಾರಕಗಳು

(ಭೂವಿ) ಭೂಮಿಯ ಮೇಲ್ಮೈ ಮೇಲೆ ಉಂಟಾದ ವ್ಯತ್ಯಾಸ ಪ್ರಕ್ರಿಯೆಗಳ ಕಾರಕಗಳು

ಬಹಿರ್ಜಾತ

(ಜೀ) ಅಂಗದ ಒಳಗಿನಿಂದಲೇ ವರ್ಧಿಸದೆ ಹೊರ ಕಾರಣಗಳಿಂದಾಗಿ ವರ್ಧಿಸುವುದು. ಉನ್ನತ ಪ್ರಾಣಿಗಳಲ್ಲಿ ಕ್ರಿಯೆಗಳಿಗೆ ಶಕ್ತಿ ಉಂಟುಮಾಡುವ ಉಪಾಪಚಯ. ಪ್ರಾಣಿಯೊಂದು ಸಂಶ್ಲೇಷಿಸಲಾಗದಂಥ ವೈಟಮಿನ್‌ಗಳು ಅದರ ಆಹಾರದ ಮೂಲಕ ಅದಕ್ಕೆ ಹೊರಗಿನಿಂದ ಸರಬರಾಜು ಆದವೆಂದು ಹೇಳಲಾಗುತ್ತದೆ

ಬಹಿರ್ಮುಖಿ

(ವೈ) ಅಂತರ್ಮುಖಿಯಲ್ಲದವ. ಬಾಹ್ಯವಸ್ತು ಗಳಲ್ಲಿಯೂ ಕ್ರಿಯೆಗಳಲ್ಲಿಯೂ ಆಸಕ್ತನಾದವ, ಪ್ರವೃತ್ತನಾದವ. ಬಹಿರ್ವರ್ತಿ. ನೋಡಿ: ಅಂತರ್ಮುಖಿ. (ಪ್ರಾ) ಕೆಲವು ಜಲವಾಸಿ ಪ್ರಾಣಿಗಳಲ್ಲಿ ಕಾಣುವ ಹೊರಚಾಚಬಹುದಾದ ಹೀರುಕೊಳವೆ

ಬಹಿರ್ಯುಗ್ಮನ

(ಜೀ) ಇಬ್ಬರು ಪರಸ್ಪರ ಸಂಬಂಧವಿರದ ಜನ್ಮದಾತೃಗಳ ಮೇಳನದಿಂದ ಯುಗ್ಮ ಜೀವಕಣ ಉತ್ಪತ್ತಿ ಯಾಗುವುದು. ನೋಡಿ: ಭಿನ್ನಯುಗ್ಮನ

ಬಹಿರ್ವಲನ

(ವೈ) ನಾಳಾಕಾರದ ಅಂಗವನ್ನು ಒಳ- ಹೊರಗುಮಾಡುವುದು. ಒಳಮೈಯನ್ನು ಹೊರ ಮೈ ಮಾಡುವುದು

ಬಹಿರ್ವಾಹಿ

(ಸಾ) ಯಾವುದೇ ಜೆಟ್ ಅಥವಾ ರಾಕೆಟ್ ಎಂಜಿನ್‌ನಲ್ಲಿ ಮುನ್ನೂಕುವ ಮಾಧ್ಯಮವಾಗಿ ವರ್ತಿಸುವ ದಹನೋತ್ಪನ್ನಗಳ ಮತ್ತು ಶೀತಕಾರಿ ವಾಯುವಿನ ಮಿಶ್ರಣ

ಬಹಿರ್ವಿಷ

(ಜೀ) ಬ್ಯಾಕ್ಟೀರಿಯ ತಾನು ಬೆಳೆಯುವ ಮಾಧ್ಯಮಕ್ಕೆ ಬಿಡುವ ನಂಜು (ಟಾಕ್ಸಿನ್). ಹೆಚ್ಚು ವಿಷಕಾರಿ. ಎಕ್ಸೊಟಾಕ್ಸಿನ್

Search Dictionaries

Loading Results

Follow Us :   
  Download Bharatavani App
  Bharatavani Windows App