भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬರ್

(ತಂ) ಸಾಣೆಕಲ್ಲು, ಮಸೆಕಲ್ಲು, ಕುರಂಗ. ಕತ್ತರಿಸಿದ ಅಥವಾ ಕಂಡಿ ಕೊರೆದ ಲೋಹ, ಕಾಗದ, ರಟ್ಟು ಇವುಗಳಲ್ಲಿ ಉಂಟಾಗುವ ತರಕಲು ಏಣು. (ಖ) ಚಂದ್ರನ ಅಥವಾ ನಕ್ಷತ್ರದ ಸುತ್ತ ಹರಡಿರುವಂತೆ ಭಾಸವಾಗುವ ಮಸಕು ಬೆಳಕು. (ಸ) ಪ್ರಾಣಿಗಳ ಮೂಲಕ ಪ್ರಸರಣಕ್ಕೆ ನೆರವಾಗಲೆಂದು ಕೊಕ್ಕೆ ಮುಳ್ಳುಗಳಿಂದ ಆವೃತವಾಗಿರುವ ಹಣ್ಣು

ಬರ್ಕೀಲಿಯಮ್

(ರ) Bk ಯುರೇನಿಯಮ್- ಅತೀತ ಧಾತು. ಪಸಂ. ೯೭. ಆಕ್ಟಿನೈಡ್ ಶ್ರೇಣಿಯ ಸದಸ್ಯ. ಎಂಟು ಸಮಸ್ಥಾನಿಗಳಿವೆ. ಅತ್ಯಂತ ಸ್ಥಿರ ಸಮಸ್ಥಾನಿ ೨೪೭೯೭Bk. ಅರ್ಧಾಯು ಸುಮಾರು ೧೪೦೦ ವರ್ಷಗಳು

ಬರ್ಗ್‌ಸ್ಕ್ರುಂಡ್

(ಭೂವಿ) ಹಿಮನದಿ ಬಿರುಕು. ಹಿಮಾನಿಗೂ (ಗ್ಲೇಸಿಯರ್) ಪರ್ವತ ಪಾರ್ಶ್ವಕ್ಕೂ ನಡುವೆ ಆಗಾಗ ತಲೆದೋರುವ ಆಳ ಕಮರಿಗಳು. ಹೆಬ್ಬಿರುಕು, ಪ್ರಪಾತ

ಬರ್ಚ್

(ಸ) ಫ್ಯಾಗೇಲಿಸ್ ಗಣ, ಬೆಚಲೇಸೀ ಕುಟುಂಬ ಹಾಗೂ ಬೆಚಲ ಜಾತಿಗೆ ಸೇರಿದ, ಕಂದು ಬಣ್ಣದ ಹಲಗೆ ಪಡೆಯಬಹುದಾದ ಕಾಡುಮರ. ಯೂರೋಪ್ ಖಂಡದಲ್ಲಿ ವ್ಯಾಪಕವಾಗಿದೆ. ಬೆಚಲ ಯೂಟಿಲಿಸ್ ವೈಜ್ಞಾನಿಕ ನಾಮ. ಇದರ ತೊಗಟೆಯನ್ನು ಹಿಂದಿನ ಕಾಲದಲ್ಲಿ ಬರೆಯಲು ಕಾಗದವಾಗಿ (ಭೂರ್ಜಪತ್ರ) ಬಳಸುತ್ತಿದ್ದರು

ಬರ್ಫ

(ಪವಿ) ನೀರಿನ ಉಷ್ಣತೆ ಘನೀಭವನ ಬಿಂದುವಿಗಿಂತ ಕಡಿಮೆಯಾದಾಗ ಬರ್ಫ ರೂಪುಗೊಳ್ಳುತ್ತದೆ ಮತ್ತು ಅದರ ಗಾತ್ರ ಹಿಗ್ಗುತ್ತದೆ. ಅದೊಂದು ಪಾರಕವಾದ ಷಡ್ಭುಜಾಕೃತಿಯ ಸ್ಫಟಿಕ. ಸಾ.ಸಾಂ ೦.೯೧೬. ವಿಶಿಷ್ಟ ಉಷ್ಣಧಾರಕತೆ ೦.೫. ನೀರು ೪0ಸೆ ಉಷ್ಣತೆಯಲ್ಲಿ ಗರಿಷ್ಠ ಸಾಂದ್ರತೆ ಪಡೆಯುವುದರಿಂದ ಕೊಳಗಳು ಮತ್ತು ಸರೋವರಗಳ ಮೇಲ್ಭಾಗದಲ್ಲಿ ಬರ್ಫ ರೂಪುಗೊಳ್ಳುತ್ತದೆ ಮತ್ತು ಹಾಗೆ ಒಳಗೊಳಗೇ ಗಟ್ಟಿಯಾಗುತ್ತ ಹೋಗುತ್ತದೆ. ನೀರಿಗಿಂತ ಕಡಿಮೆ ಸಾಂದ್ರತೆಯುಳ್ಳದ್ದರಿಂದ ಬರ್ಫ ನೀರಿನ ಮೇಲೆ ತೇಲುತ್ತದೆ. ನೀರ್ಗಲ್ಲು. ಮಂಜುಗಡ್ಡೆ

ಬರ್ಸ

(ಪ್ರಾ) ಕಶೇರುಕಗಳ ಅಸ್ಥಿಸಂಧಿಗಳಲ್ಲಿ ಘರ್ಷಣೆ ಕಡಿಮೆ ಮಾಡಲೋಸುಗ ಲೋಳೆ ದ್ರವ ಸ್ರವಿಸುವ ಸಂಚಿ ಅಥವಾ ಕುಳಿ. ಸ್ನೇಹಕೋಶ

ಬರ್‌ಸ್ಟೋನ್

(ಭೂವಿ) ಮೈ ತುಂಬ ಕುಹರಗಳಿಂದ ಕೂಡಿದ ಸಿಲಿಕೀಕೃತ ಫಾಸಿಲೀಕೃತ ಸುಣ್ಣಗಲ್ಲು. ಈ ಕುಹರಗಳಲ್ಲಿ ಹಿಂದೆ ಪಳೆಯುಳಿಕೆಗಳ ಚಿಪ್ಪುಗಳಿದ್ದುವು. ನೋಡಿ: ಕಠಿಣ ಸೈಕತ ಶಿಲೆ

ಬಲ

(ಭೌ) ಯಾವುದೇ ಕಾಯದ ವಿಶ್ರಾಂತ ಅಥವಾ ಚಲನಸ್ಥಿತಿಯಲ್ಲಿ ಬದಲಾವಣೆ ತರುವ ಭೌತ ಪರಿಮಾಣ. ಪ್ರತೀಕ F. ನ್ಯೂಟನ್‌ಗಳಲ್ಲಿ (ಎಸ್‌ಐ) ಡೈನ್‌ಗಳಲ್ಲಿ (ಸಿಜಿಎಸ್) ಅಥವಾ ಪೌಂಡಲ್‌ಗಳಲ್ಲಿ (ಎಫ್‌ಪಿಎಸ್) ಅಳೆಯಲಾಗುತ್ತದೆ. m ರಾಶಿಯ ವಸ್ತುವಿನಲ್ಲಿ a ವೇಗೋತ್ಕರ್ಷ ಉಂಟುಮಾಡಲು ಅವಶ್ಯವಾದ ಬಲ F = ma

ಬಲಗಳ ತ್ರಿಭುಜ

(ಗ) ಮೂರು ವಿಭಿನ್ನ ಬಲಗಳು ಒಂದು ಬಿಂದುವಿನಲ್ಲಿ ಮೂರು ವಿಭಿನ್ನ ದಿಶೆಗಳಲ್ಲಿ ವರ್ತಿಸುತ್ತ ಸಮತೋಲವಿದ್ದರೆ ಇವನ್ನು ಒಂದು ತ್ರಿಭುಜದ ಮೂರು ಭುಜಗಳು ಪ್ರಮಾಣದಲ್ಲಿಯೂ ದಿಶೆಯಲ್ಲಿಯೂ ಪ್ರತಿನಿಧಿಸುವಂತೆ ಆ ತ್ರಿಭುಜವನ್ನು ರಚಿಸಬಹುದು; ಮತ್ತು ವಿಲೋಮವಾಗಿ, ನೋಡಿ: ಸದಿಶಗಳ ತ್ರಿಭುಜ

ಬಲಗಳ ಸಮಾಂತರ ಚತುರ್ಭುಜ

(ಗ) ಯಾವುದೇ ಬಿಂದುವಿನಲ್ಲಿ ಪ್ರಯೋಗ ವಾಗುವ ಎರಡು ಬಲಗಳ ಪರಿಮಾಣ ಗಳನ್ನೂ ದಿಶೆಗಳನ್ನೂ ಸಮಾಂತರ ಚತುರ್ಭುಜದ ಎರಡು ಆಸನ್ನ ಭುಜಗಳು ನಿರ್ದೇಶಿಸಿದಲ್ಲಿ, ಆಗ ಆ ಎರಡು ಬಲಗಳ ಒಟ್ಟು ಪರಿಣಾಮದ (ಫಲಿತ ಬಲದ) ಪ್ರಮಾಣವನ್ನೂ ದಿಶೆಯನ್ನೂ ಆ ಬಿಂದುವಿನಿಂದ ತೊಡಗುವ ಕರ್ಣ ನಿರ್ದೇಶಿಸುತ್ತದೆ

ಬಲಗಳ ಸಂಯೋಜನೆ

(ಭೌ) ಇತರ ಹಲವಾರು ಬಲಗಳ ಸಮಗ್ರ ಪರಿಣಾಮ ಬೀರಬಲ್ಲ ಒಂಟಿ ಬಲವನ್ನು ಶೋಧಿಸುವ ಪ್ರಕ್ರಿಯೆ. ನೋಡಿ: ಬಲಗಳ ಸಮಾಂತರ ಚತುರ್ಭುಜ

ಬಲದ ಮಹತ್ತ್ವ

(ಭೌ) ಯಾವುದೇ ಅಕ್ಷವನ್ನು ಕುರಿತು ಬಲ ಉತ್ಪಾದಿಸುವ ಆವರ್ತಕ ಪರಿಣಾಮದ ಅಳತೆ. ಇದರ ಅಳತೆ F ´ l. ಇಲ್ಲಿ F ಬಲ, l ಅಕ್ಷದಿಂದ ಬಲದ ವರ್ತನರೇಖೆಯ ಲಂಬದೂರ

ಬಲಮುರಿ

(ಜೀ) ಬಲಕ್ಕೆ ವಾಲಿರುವ. ದಕ್ಷಿಣಾವರ್ತ. ಪ್ರದಕ್ಷಿಣ ವಾಗಿರುವ. ಹೋಲಿಸಿ: ಎಡಮುರಿ. ನೋಡಿ: ದಕ್ಷಿಣಾವರ್ತಕ

ಬಲರೇಖೆ

(ಭೌ) ವಿದ್ಯುತ್ ಕಾಂತ ಇಲ್ಲವೇ ಗುರುತ್ವದಂಥ ಯಾವುದೇ ಕ್ಷೇತ್ರದಲ್ಲಿಯ ಒಂದು ಕಾಲ್ಪನಿಕ ರೇಖೆ. ಈ ರೇಖೆಯ ಯಾವುದೇ ಬಿಂದುವಿನಲ್ಲಿ ಅದಕ್ಕೆಳೆದ ಸ್ಪರ್ಶಕ ಆ ಬಿಂದುವಿನಲ್ಲಿ ಆ ಕ್ಷೇತ್ರದ ದಿಶೆಯನ್ನು ನೀಡುತ್ತದೆ

ಬಲವಿಜ್ಞಾನ

(ಭೌ) ವಸ್ತುವಿಗೆ ಸ್ಥಾಯೀಸ್ಥಿತಿ ಇಲ್ಲವೇ ಚಲನಸ್ಥಿತಿ ಕೊಡುವ ಅಥವಾ ಅದರ ಚಲನೆಯಲ್ಲಿ ವ್ಯತ್ಯಾಸ ಉಂಟುಮಾಡುವ ಬಲಗಳ ವರ್ತನೆಯನ್ನು ಅಭ್ಯಸಿಸುವ ಭೌತ ವಿಜ್ಞಾನ ವಿಭಾಗ

ಬಲಾಟ

(ಸ) ದಕ್ಷಿಣ ಅಮೆರಿಕದಲ್ಲಿಯ ಬುಲೆಟ್ ಮರದಿಂದ ಒಸರುವ ಸಸ್ಯಕ್ಷೀರ. ರಬ್ಬರ್‌ಸದೃಶ ಪದಾರ್ಥ

ಬಲಿ

(ಪ್ರಾ) ಹಿಂಸ್ರ ಪ್ರಾಣಿಗೆ ಆಹಾರವಾಗುವ ಪ್ರಾಣಿ. ಎರೆ

ಬಲೀನ್

(ಪ್ರಾ) ಕೆಲವು ತಿಮಿಂಗಿಲಗಳಲ್ಲಿ ಅಂಗುಳದ ಲೋಳೆಪೊರೆಯಿಂದ ಹೊರಚಾಚಿರುವ ಕೊಂಬಿನಂಥ ಪದಾರ್ಥ. ಜರಡಿಯಂತೆ ವರ್ತಿಸುತ್ತದೆ. ತಿಮಿಮೂಳೆ

ಬಲೂನ್

(ಸಾ) ತೆಳು, ಮೃದು, ಆದರೆ ದೃಢ ರೇಷ್ಮೆಯ, ರಬ್ಬರಿನ ಇಲ್ಲವೇ ಪ್ಲಾಸ್ಟಿಕ್‌ನ ವಾಯು ನಿರ್ಬಂಧಿತ ಚೀಲ ದೊಳಗೆ ವಾಯುವಿಗಿಂತ ಹಗುರ ಅನಿಲ ತುಂಬಿ ಉಬ್ಬಿಸಿದ ಸಾಧನ. ವಾಯು ಮಂಡಲದಲ್ಲಿದು ಮುಕ್ತವಾಗಿ ತೇಲಬಲ್ಲದು. ಆಕಾಶಬುಟ್ಟಿ. (ತಂ) ಸ್ವಂತ ಪ್ಲವನತೆಯಿಂದ (ಯಾಂತ್ರಿಕ ಬಲ ಗಳಿಂದ ಅಲ್ಲ) ವಾಯುವಿನಲ್ಲಿ ಹಾರುವ ಯಾವುದೇ ಸಲಕರಣೆ. ತೇಲು ಬುರುಡೆ

ಬಲ್ಬ್

(ತಂ) ಥರ್ಮಿಯಾನಿಕ್ (ಉಷ್ಣ ವಿದ್ಯುದ್ವಾಹಿ ಕಣ) ಕವಾಟದ ಅಥವಾ ವಿದ್ಯುತ್ ವಿಸರ್ಜನಾ ದೀಪದ ಎಲೆಕ್ಟ್ರೋಡ್ ಗಳನ್ನು ಇಲ್ಲವೇ ವಿದ್ಯುತ್ ತಂತು ದೀಪದ ತಂತುಗಳನ್ನೊಳಗೊಂಡಿರುವ ವಾಯು ನಿರ್ಬಂಧಿತ ಬುರುಡೆ. ವಿದ್ಯುತ್ತು ಪ್ರವಹಿಸಿದಾಗ ಬೆಳಗುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App