भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬ್ರೇಕ್

(ತಂ) ಚಲನೆಯಲ್ಲಿರುವ ವಸ್ತುವಿನ ವೇಗ ಕಡಿಮೆ ಮಾಡಲು ಅಥವಾ ವಿಶ್ರಾಂತ ಸ್ಥಿತಿಗೆ ತರಲು ಅದರ ಮೇಲೆ ಪ್ರಯೋಗಿಸುವ ರೋಧ. ತಡೆ. ಬಿರಿ

ಬ್ರೇಕ್ ಅಸ್ತರಿ

(ತಂ) ಘರ್ಷಣೆ ಹೆಚ್ಚಿಸಿ ಚಲನೆಯನ್ನು ನಿಲ್ಲಿಸುವ ಇಲ್ಲವೇ ತಗ್ಗಿಸುವ ಸಲುವಾಗಿ ಬಿರಿ ಉರುಳೆ ಅಂಚಿಗೆ ಲಗತ್ತಿಸಿರುವ ಕಲ್ನಾರುಗಳಿಂದ ಮಾಡಿದ ಪಟ್ಟಿ

ಬ್ರೇಕ್ ಉರುಳೆ

(ತಂ) ಉಕ್ಕು ಇಲ್ಲವೆ ಎರಕ ಕಬ್ಬಿಣದಿಂದ ತಯಾರಿಸಿ ಗಾಲಿಗೆ ಅಥವಾ ದಂಡಕ್ಕೆ ದೃಢವಾಗಿ ಲಗತ್ತಿಸಿದ ಗುಂಡು ದಿಮ್ಮಿ. ಇದರ ಮೇಲೆ ಬಾಹ್ಯರೋಧ ಪ್ರಯೋಗವಾದಾಗ ಚಲನವೇಗ ಕುಂಠಿತವಾಗುತ್ತದೆ

ಬ್ರೇಕ್‌ಷೂ

(ತಂ) ತಡೆ ಉರುಳೆಯ ಒಳಭಾಗವನ್ನು ಅಮುಕಿ ಹಿಡಿದ ಭಾಗ. ಬಿರಿಜೋಡು

ಬ್ರೇಸ್

(ಸಾ) ೧. ವಸ್ತುಗಳನ್ನು ಒಟ್ಟುಗೂಡಿಸಿ ಬಿಗಿ ಮಾಡಿ ಹಿಡಿದಿಡುವ ಕಟ್ಟು. ೨. ಹಿಡಿಗಳನ್ನು ಬೈರಿಗೆಗಳನ್ನೂ ಹಿಡಿದು ಕೊಂಡು ತಿರುಗಿಸಬಲ್ಲ ಕಂಡಿ ಕೊರೆಯುವ ಸಾಧನ

ಬ್ರೋಮಿಕ್ ಆಮ್ಲ

(ರ) HBrO3. ಪ್ರಬಲ ಉತ್ಕರ್ಷಣಕಾರಿ. ಪ್ರತ್ಯಾಮ್ಲಗಳ ಜೊತೆ ವರ್ತಿಸಿ ಬ್ರೋಮೇಟ್ ಗಳನ್ನು ಕೊಡುತ್ತದೆ

ಬ್ರೋಮೀನ್

(ರ) ಆವರ್ತಕೋಷ್ಟಕದ ಏಳನೆಯ ಗುಂಪಿನಲ್ಲಿರುವ ಒಂದು ಅಲೋಹ ರಾಸಾಯನಿಕ ಧಾತು. ಹ್ಯಾಲೊಜನ್ ಗುಂಪಿನ ಐದು ಧಾತುಗಳ ಪೈಕಿ ಒಂದು. ಪ್ರತೀಕ Br. ಪಸಂ೩೫, ಸಾಪರಾ ೭೯.೯೦೯, ದ್ರಬಿಂ -೭,೩0ಸೆ ಕುಬಿಂ ೫೮.೮0ಸೆ ಸಾಸಾಂ ೩.೧೯. ಉರಿತ ಉಂಟುಮಾಡುವ, ವಿಷಯುಕ್ತ ಆವಿ ಸೂಸುವ ಗಾಢ ರಕ್ತವರ್ಣದ ದ್ರವ. ಸಂಶ್ಲೇಷಿತ ಆರ್ಗ್ಯಾನಿಕ್ ರಸಾಯನವಿಜ್ಞಾನದಲ್ಲಿ ವಿಸ್ತೃತ ಬಳಕೆ

ಬ್ರೋಮೈಡ್‌ಗಳು

(ರ) ಹೈಡ್ರೊಬ್ರೋಮಿಕ್ ಆಮ್ಲದ ಲವಣಗಳು. ಬೆಳ್ಳಿ ಬ್ರೋಮೈಡ್‌ಗೆ ಛಾಯಾಚಿತ್ರಣದಲ್ಲಿ ವ್ಯಾಪಕ ಉಪಯೋಗವಿದೆ

ಬ್ರ್ಯಾಕಿಯೊಡಾಂಟ್

(ಪ್ರಾ) (ಜಿಂಕೆಯಂತೆ) ದವಡೆ ಹಲ್ಲುಗಳ ಬೇರು ಆಳವಾಗಿದ್ದು ತುದಿ ಗಿಡ್ಡವಾಗಿರುವ

ಬ್ರ್ಯಾಕಿಯೊಸೆರಸ್

(ಪ್ರಾ) ಕೆಲವು ಡಿಪ್ಟರಾಗಳಲ್ಲಿ ಇರುವಂತೆ ಬಲು ಗಿಡ್ಡ ಆಂಟೆನಾ ಅಥವಾ ಕುಡಿಮೀಸೆಗಳಿರುವ

ಬ್ರ್ಯಾಕೆಟ್

(ಸಾ) ಗೋಡೆಯಿಂದ ಹೊರಚಾಚುವ ಬಡು ಇಲ್ಲವೇ ಕಮಾನಿಗೆ ಆಧಾರ ರಚನೆ. ಗುಜ್ಜುಬಂಕ. ಚಾಚು ನೆಲೆ

ಬ್ರ್ಯಾಂಡಿ

(ರ) ದ್ರಾಕ್ಷಾರಸದ ಅಥವಾ ದ್ರಾಕ್ಷಾರಸ ಮಡ್ಡಿಯ ಆಸವನದಿಂದ ದೊರೆಯುವ ಮತ್ತು ಆಲ್ಕಹಾಲ್ ಪ್ರಮಾಣ ಶೇ. ೪೫-೫೪ರಷ್ಟಿರುವ ಮಾದಕ ಪೇಯ

ಬ್ರ್ಯಾಂಡ್

(ಸ) ಎಲೆಗಳ ಮೇಲೆ ಬಿಸಿ ಬರೆ ಹಾಕಿದಂಥ ಮಚ್ಚೆಗಳಿಗೆ ಕಾರಣವಾದ ಶಿಲೀಂಧ್ರ

ಬ್ಲಾಸ್ಟೊಫೋರ್

(ಪ್ರಾ) ಹಕ್ಕಿಗಳಲ್ಲಿ ಎಳೆಗರಿ ಒಡೆಯುವ ಮೊದಲ ಘಟ್ಟ

ಬ್ಲಾಸ್ಟೊಮೈಕೋಸಿಸ್

(ಪ್ರಾ) ಅಣಬೆಯಿಂದ ಮನುಷ್ಯನಿಗೂ ಪ್ರಾಣಿಗಳಿಗೂ ತಾಗುವ ಚರ್ಮರೋಗ. ಅಣಬೆ ಜನಿತ ಚರ್ಮವ್ಯಾಧಿ

ಬ್ಲೆಂಡ್

(ರ) ನಿಸರ್ಗ ಲಭ್ಯ ಲೋಹಸಲ್ಫೈಡ್. ಉದಾ: ಸತುವಿನ ಸಲ್ಫೈಡ್. ZnS

ಬ್ಲೇಝಾರ್

(ಖ) ಆಕಾಶಗಂಗೆಯಿಂದ ಹೊರಗಿರುವ ಮತ್ತು ಅತಿ ತೀವ್ರಕಾಂತಿ ಬೀರುವ ಕ್ವಾಸಾರ್‌ಸದೃಶ ಕಾಯ. ಆದರೆ ಇದರ ದೃಗ್ರೋಹಿತ ಬಹುತೇಕ ಲಕ್ಷಣರಹಿತವಾಗಿದೆ

ಬ್ಲೈಟ್

(ಸ) ಬೂಸ್ಟ್ ಜಾತಿಯ ಪರೋಪಜೀವಿಗಳಿಂದ ಎಲೆಗಳಿಗೆ ತಗುಲಿ ಹಠಾತ್ತನೆ ಸೋಂಕು ತಾಗಿ ಉಂಟಾಗಿ ಸಾಯಲು ಕಾರಣವಾಗುವ ಹಲವು ಬಗೆಯ ಸಸ್ಯ ವ್ಯಾಧಿಗಳ ಒಟ್ಟು ಹೆಸರು. ಅಡಿಕೆಗೆ ಕೊಳೆರೋಗ, ಕಾಫಿಗೆ ಕಾಡಿಗೆ ರೋಗ, ಬಟಾಟೆಗೆ ಬೂಷ್ಟುರೋಗ, ಗಂಧಕ್ಕೆ ಎಲೆ ಮುರುಟು ರೋಗ ತಾಗುತ್ತವೆ

ಬ್ಲೋಯರ್

(ತಂ) ಅಧಿಕ ಗಾತ್ರದ ವಾಯುವನ್ನು ನಿಮ್ನ ಒತ್ತಡದಲ್ಲಿ ಕುಲುಮೆಗೆ ಊಡಲು ಬಳಸುವ ಸಲಕರಣೆ

ಬ್ಲ್ಯಾಕ್ ಜ್ಯಾಕ್

(ಭೂವಿ) ಸ್ಫಾಲೆರೈಟ್ ಅಥವಾ ಜಿಂಕ್‌ಬ್ಲೆಂಡ್ ಖನಿಜದ ರೂಢನಾಮ

Search Dictionaries

Loading Results

Follow Us :   
  Download Bharatavani App
  Bharatavani Windows App