भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಂಧದೂರ

(ರ) ಅಣುವಿನಲ್ಲಿಯ ಬಂಧಿತ ಪರಮಾಣುಬೀಜಗಳ ನಡುವಿನ ಅಂತರ. ಉದಾ: O-H 96 pm, C-H 107 pm, C-C 154 pm, C=C 133 pm, CºC 120 pm

ಬಂಧನ

(ತಂ) ಸಂರಚನೆಯ ಭಾಗಗಳನ್ನು ಬಂಧಿಸುವುದು. (ರ) ಅಣುಗಳು ಅಥವಾ ಸ್ಫಟಿಕೀಯ ಲವಣಗಳು ರೂಪುಗೊಳ್ಳಲು ಅವುಗಳ ಪರಮಾಣುಗಳು ಜೊತೆಗೂಡುವುದು

ಬಂಧನ

(ಪ್ರಾ) ಪ್ರಾಣಿಯನ್ನು ಬಲವಂತವಾಗಿ ಸೆರೆ ಹಿಡಿದಿಟ್ಟಿರುವುದು

ಬಂಧಿತ

(ರ) ಎರಡು ಅಥವಾ ಹೆಚ್ಚು ವಸ್ತುಗಳು ಪರಸ್ಪರ ಅವಲಂಬನೆಯಲ್ಲಿರುವುದು

ಬನಾಕ್

(ಸ) ವಿರೋಲ ಎಂಬ ಹೆಸರಿನ ಮರ. ಪೆಟ್ಟಿಗೆ ತಯಾರಿಕೆಯಲ್ಲಿ ಉಪಯೋಗ

ಬನ್ಯನ್

(ವೈ) ಬಿಗಿಯಾದ ಬೂಟು ಅಥವಾ ಷೂ ಒತ್ತಡದ ಇಲ್ಲವೇ ಅತಿಯಾಗಿ ಬೆಳೆದ ಮೂಳೆಯ ಪರಿಣಾಮವಾಗಿ ಪಾದದ ಮೇಲೆ ಹೆಬ್ಬೆರಳಿನ ಬಳಿ ಆದ ರಕ್ತ ಕುರು. ಹೆಬ್ಬೆಟ್ಟೂತ. ಹೆಬ್ಬೆರಳ ಕೀಲೂತ (ಸ) ಅಂಟುಪುರಲೆ

ಬಬೂನ್

(ಪ್ರಾ) ಪಾಪಿಯೊ ಜಾತಿಗೆ ಸೇರಿದ ನೆಲವಾಸಿ ಪ್ರೈಮೇಟ್ ಗಳ ೫ ಪ್ರಭೇದಗಳ ಪೈಕಿ ಯಾವುದೇ ಒಂದು. ನಾಯಿಗೆ ಇರುವಂಥ ಮೂತಿ, ಮೊಂಡು ಬಾಲ, ಪಿರ್ರೆಗಳ ಮೇಲೆ ಅನಾವೃತ ಗಡಸು ಭಾಗಗಳು ಇದರ ವೈಲಕ್ಷಣ್ಯ. ಆಫ್ರಿಕ ಮತ್ತು ದಕ್ಷಿಣ ಏಷ್ಯ ವಾಸಿ. ದೊಡ್ಡ ಕೋತಿ

ಬಯಲಂಜಿಕೆ

(ವೈ) ತೆರೆದ ಹರವುಗಳಲ್ಲಿ ಒಂಟಿಯಾಗಿ ಇರಲಾಗದ ಮನಃಸ್ಥಿತಿ

ಬಯಾಪ್ಸಿ

(ವೈ) ಜೀವಂತ ದೇಹದಿಂದ ಕೊಯ್ದು ತೆಗೆದ ಊತಕವನ್ನು (ಉದಾ: ಗಂತಿ) ವ್ಯಾಧಿ ನಿದಾನಾರ್ಥ ಪರೀಕ್ಷಿಸುವುದು. ಊತಕ ಪರೀಕ್ಷೆ. ಜೀವುಂಡಿಗೆ

ಬಯೊಟಿನ್

(ಜೀ) ಬಿ ಕಾಂಪ್ಲೆಕ್ಸ್‌ನ ಒಂದು ವೈಟಮಿನ್. ಎಚ್ ವೈಟಮಿನ್ ಎಂದೂ ಕರೆಯುತ್ತಾರೆ. C10H16O3N2S. ಹುದುಗು, ಮೊಟ್ಟೆಲೋಳೆ, ಪಿತ್ತಕೋಶ ಮೊದಲಾದವುಗಳಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ ಸ್ಫಟಿಕೀಯ ವೈಟಮಿನ್

ಬಯೊಟೈಟ್

(ಭೂವಿ) ಅಗ್ನಿಶಿಲೆಗಳಲ್ಲಿ, ಅಲ್ಲಿಯೂ ಗ್ರಾನೈಟ್‌ಗಳಲ್ಲಿ, ನಯವಾದ ಸೀಳಿಕೆಗಳ ನೇರ ಹೊಳೆವ ಕಪ್ಪು ಸ್ಫಟಿಕಗಳಾಗಿ ಹರಡಿಕೊಂಡಿರುವ ಕರಿ ಅಭ್ರಕ. ಸೂತ್ರ: H2K(Mg, Fe)2Al(SiO4)3

ಬಯೊಟೋಪ್

(ಪವಿ) ಪರಿಸರ ಪರಿಸ್ಥಿತಿಗಳು ಏಕರೀತಿಯ ವಾಗಿದ್ದು ಏಕರೀತಿಯ ಪ್ರಾಣಿ ಹಾಗೂ ಸಸ್ಯ ಸಂಕುಲಗಳಿಗೆ ನೆಲೆಯಾಗಿರುವ ಭೂಪ್ರದೇಶ

ಬಯೋಟ

(ಜೀ) ನಿರ್ದಿಷ್ಟ ಪ್ರದೇಶದ ಪ್ರಾಣಿ ಹಾಗೂ ಸಸ್ಯ ಸಂಕುಲ. ಜೀವಿ ಸಮುದಾಯ. ಜೀವಿರಾಶಿ

ಬಯೋನಿಕ್ಸ್

(ಸಾ) ಜೀವವೈಜ್ಞಾನಿಕ ವ್ಯವಸ್ಥೆಗಳನ್ನು ಲಕ್ಷಣೀಕರಿಸುವ ವಿಭಿನ್ನ ಕ್ರಿಯೆ ಮತ್ತು ವಿದ್ಯಮಾನಗಳಲ್ಲಿಯ ಎಲೆಕ್ಟ್ರಾನಿಕ್ ಏರ್ಪಾಡುಗಳ ಅಧ್ಯಯನ. ಜೀವಿಯಂತೆ ಅಥವಾ ಜೀವಿಯೊಂದರ ಒಂದು ಭಾಗದಂತೆ ಕೆಲಸ ಮಾಡುವ ಯಾಂತ್ರಿಕ ವ್ಯವಸ್ಥೆಗಳ ಅಧ್ಯಯನ

ಬಯೋಮ್

(ಪವಿ) ಪರಿಸರ ವಿಜ್ಞಾನಿಗಳ ಪ್ರಕಾರ ಅತ್ಯಂತ ವಿಶಾಲವಾದ ನೆಲ ಜೀವಿ ಸಮುದಾಯ. ಉದಾ: ತಂಡ್ರಾ, ಸವನ್ನ, ಹುಲ್ಲುಗಾವಲು, ಮರುಭೂಮಿ, ಸಮಶೀತೋಷ್ಣ ಹಾಗೂ ಉಷ್ಣವಲಯಗಳ ಅರಣ್ಯ. ಜೀವಿ ವ್ಯವಸ್ಥೆ/ಭೂಪರಿಸರ ವ್ಯವಸ್ಥೆ

ಬರಗಾಲ

(ಪವಿ) ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೆ ದೀರ್ಘಕಾಲ ಶುಷ್ಕ ವಾತಾವರಣದಿಂದ ನೀರಿನ ಕೊರತೆ ಉಂಟಾಗುವುದು. ನೈಸರ್ಗಿಕ ಹಾಗೂ ಮಾನವ ಚಟುವಟಿಕೆಗಳೂ ಬರಗಾಲಕ್ಕೆ ಕಾರಣವಾಗಬಹುದು. ಪರಿಣಾಮವಾಗಿ ಬೆಳೆ ನಷ್ಟ, ಮೇವು ಅಭಾವ, ಪ್ರಾಣಿ ಸಂಕುಲದ ಮರಣ, ಮರುಭೂಮಿಯ ಹೆಚ್ಚಳ ಇತ್ಯಾದಿ. ಇದೊಂದು ತಾತ್ಕಾಲಿಕ ವಾಯುಗೋಳ ವೈಪರೀತ್ಯ

ಬರಗು

(ಸ) ಪೋಯೇಸೀ ಕುಟುಂಬಕ್ಕೆ ಸೇರಿದ, ಗಿನಿಹುಲ್ಲು, ಸೊಂಟ ಹುಲ್ಲು ಮುಂತಾದವುಗಳ ಹತ್ತಿರ ಸಂಬಂಧಿಯಾದ, ಆಹಾರ ಧಾನ್ಯ. ಮಧ್ಯ ಇಲ್ಲವೇ ಪೂರ್ವ ಏಷ್ಯ ಇದರ ತವರು. ಪ್ಯಾನಿಕಮ್ ಮಿಲಿಯೇಸೀಯಮ್ ವೈಜ್ಞಾನಿಕ ನಾಮ. ಸಾಮಾನ್ಯ ಶುಷ್ಕ ಭೂಮಿಯಲ್ಲೂ ಶೀಘ್ರವಾಗಿ ಬೆಳೆಯುತ್ತದೆ. ಗೋದಿ ಕೃಷಿಯಷ್ಟೆ ಪ್ರಾಚೀನ. ಅಕ್ಕಿಯಂತೆ ಬೇಯಿಸಿ ಅನ್ನ ಮಾಡುತ್ತಾರೆ. ಹಿಟ್ಟಿನಿಂದ ರೊಟ್ಟಿ ತಟ್ಟುತ್ತಾರೆ. ದನಗಳಿಗೆ, ಕುದುರೆಗಳಿಗೆ ಒಳ್ಳೆಯ ಮೇವೂ ಹೌದು

ಬರಾಜ್ ಬಲೂನ್

(ಸಾ) ತಗ್ಗಿನಲ್ಲಿ ಹಾರಿ ಬರುವ ಶತ್ರು ವಿಮಾನಗಳಿಗೆ ಅಡಚಣೆಯಾಗುವಂತೆ ತಂತಿಗಳಿಂದ ಅಥವಾ ಬಲೆಗಳಿಂದ ಕಟ್ಟಿ ನಿಲ್ಲಿಸಿದ ಆಕಾಶಬುಟ್ಟಿಗಳ ತಂಡದಲ್ಲಿನ ಒಂದು ಬುಟ್ಟಿ

ಬರಿದಾದ ಪದಾರ್ಥ

(ಭೌ) ಸಮಸ್ಥಾನಿಯ ಪರಿಮಾಣ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇರುವ ಪದಾರ್ಥ. ಉದಾ: ನೈಸರ್ಗಿಕ ಯುರೇನಿಯಮ್‌ನಲ್ಲಿರುವುದಕ್ಕಿಂತ ಕಡಿಮೆ ಪರಿಮಾಣದಲ್ಲಿ ವಿದಳನಶೀಲ U-೨೩೫ ಇರುವ ಬೈಜಿಕ ಇಂಧನ

ಬರೋ

(ಸಾ) ಬಿಲತೋಡು; ನೆಲ ಬಗೆದು ಕೆಳಕ್ಕೆ ಇಳಿ. (ತಂ) ಕಲ್ಲಿದ್ದಲ ಗಣಿಯಲ್ಲಿ ವ್ಯರ್ಥೋತ್ಪನ್ನ ರಾಶಿ

Search Dictionaries

Loading Results

Follow Us :   
  Download Bharatavani App
  Bharatavani Windows App