भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಂಡಿ

(ಸಾ) ಸಾಧಾರಣವಾಗಿ ಪ್ರಾಣಿಗಳ ಸ್ನಾಯು ತ್ರಾಣದಿಂದ ಎಳೆಯಲ್ಪಡುವ ಸರಕು ಅಥವಾ ಸವಾರಿ ಗಾಡಿ. ಚಕ್ಕಡಿ

ಬಡಿಗಲ್ಲು

(ತಂ) ರೂಪಣೆ ವೇಳೆ ವಸ್ತುವಿಗೆ ಆಧಾರವಾಗಿ ಬಳಸುವ ಕಬ್ಬಿಣದ ತೊಲೆ; ಬಿಳಿಗಾವಿಗೆ ಕಾದ ವಸ್ತುವನ್ನು ಇದರ ಮೇಲಿಟ್ಟು ಸುತ್ತಿಗೆಯಿಂದ ಬಡಿದು ರೂಪ ಕೊಡಲಾಗುವುದು

ಬಡಿತ

(ತಂ) ಪೆಟ್ರೋಲ್ ಎಂಜಿನ್ನಿನಲ್ಲಿ ಸ್ಫೋಟನೆಯ ಪರಿಣಾಮವಾಗಿ ಅಥವಾ ಡೀಸೆಲ್ ಎಂಜಿನ್ನಿನಲ್ಲಿ ದಹನ ಕ್ರಿಯೆಯ ಅವಧಿಯಲ್ಲಿ ಒತ್ತಡ ಕ್ಷಿಪ್ರವಾಗಿ ವರ್ಧಿಸುವುದರಿಂದ ಆಗುವ ಲೋಹಶಬ್ದ. ಅವಸ್ಫೋಟನ

ಬಣ್ಣ

(ಭೌ) ನಿರ್ದಿಷ್ಟ ಅಲೆಯುದ್ದದ ಬೆಳಕು ಅಕ್ಷಿಪಟದ ಶಂಕುಗಳ ಮೇಲೆ ಬಿದ್ದಾಗ ಮೂಡುವ ದೃಕ್ ಸಂವೇದನೆ. ಬೆಳಕಿನ ಲಾಕ್ಷಣಿಕ ಅಥವಾ ವೈಲಕ್ಷಣ್ಯಗಳು ಮೂರು: ವರ್ಣಛಾಯೆ – ಅಲೆಯುದ್ದದಿಂದ ನಿರ್ಧರಿತ; ಪರ್ಯಾಪ್ತತೆ – ಯಾವುದೇ ಬಣ್ಣದಿಂದ ಎಷ್ಟು ದೂರದಲ್ಲಿದೆ ಎಂಬುದರ ಅಳತೆ; ಉಜ್ಜ್ವಲತಾಂಕ – ಹೊಳಪಿನ ಅಳತೆ ಬರಿಗಣ್ಣಿಗೆ ಕಾಣುವಂತೆ

ಬಣ್ಣಗಚ್ಚು ವಿಧಾನ

(ತಂ) ಬಂಧಕವನ್ನು ಬಳಸಿ ನೂಲಿಗೆ ಬಣ್ಣ ಕಚ್ಚುವಂತೆ ಮಾಡುವ ಕ್ರಿಯೆ

ಬಣ್ಣಗಾರಿಕೆ

(ಭೌ) ವರ್ಣರಂಜನೆ, ಜೀವಿಗಳ ಅಥವಾ ಇತರ ವಸ್ತುಗಳ ನೈಸರ್ಗಿಕ ವರ್ಣವೈವಿಧ್ಯ

ಬಣ್ಣಗುರುಡು

(ವೈ) ಬೆಳಕಿನ ರೋಹಿತದ ಏಳು ಬಣ್ಣಗಳ ಪೈಕಿ ಒಂದು ಅಥವಾ ಹೆಚ್ಚು ಬಣ್ಣ ಕುರಿತಂತೆ ಕಣ್ಣಿನಲ್ಲಿ ಸಂವೇದನೆ ಇಲ್ಲದಿರುವುದು. ವರ್ಣಾಂಧತೆ

ಬಣ್ಣವೂರಿಕೆ

(ತಂ) ಮರ, ಗಾಜು, ಕಾಗದ ಮೊದಲಾದವಕ್ಕೆ ಬಣ್ಣ ಕೊಡುವಲ್ಲಿ , ಬಣ್ಣವನ್ನು ಮೇಲುಗಡೆ ಬಳಿಯದೆ ಬೇರೆ ರೀತಿಯಲ್ಲಿ (ಉದಾ: ವರ್ಣದ್ರವ್ಯ ಸೇರಿಸಿ) ಆದ್ಯಂತವೂ ವ್ಯಾಪಿಸು ವಂತೆ ಬಣ್ಣವೂರಿಸುವುದು; ವಸ್ತುವನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸುವಲ್ಲಿ ರಚನೆ ಸ್ಪಷ್ಟವಾಗಿ ಕಾಣುವಂತೆ ಆ ಭಾಗವನ್ನು ಬಣ್ಣಗೂಡಿಸುವುದು. ವರ್ಣಸಿಕ್ತವಾಗಿಸುವುದು, ಅಭಿರಂಜನೆ

ಬತ್ತ

(ಸ) ಪೋಯೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಆಹಾರ ಧಾನ್ಯಗಳ ಪೈಕಿ ಒಂದು. ಒರೈಜ ಸೇಟಿವ ವೈಜ್ಞಾನಿಕ ನಾಮ. ಭಾರತ ತವರು. ೫೦೦೦ಕ್ಕೂ ಹೆಚ್ಚು ಬಗೆಗಳುಂಟು. ಪ್ರಪಂಚದ ಮೂರರಲ್ಲೊಂದು ಪಾಲು ಜನಕ್ಕೆ ಮುಖ್ಯ ಆಹಾರ. ಹುಲ್ಲು, ತವಡು ದನಗಳಿಗೆ ಮೇವಾಗಿ, ಹೊಟ್ಟು ಉರುವಲಾಗಿ ಬಳಕೆ. ನೆಲ್ಲು. ನೋಡಿ: ಅಕ್ಕಿ

ಬಂದಣಿಕೆ

(ಸ) ಎಲೆಗಳಿಲ್ಲದ, ದಾರದ ಎಳೆಗಳಂತೆ ತೆಳುವಾದ, ಕಸ್‌ಕ್ಯೂಟ ಜಾತಿಯ ಪರೋಪಜೀವಿ ಸಸ್ಯ

ಬದನೆ

(ಸ) ಸೊಲನೇಸೀ ಕುಟುಂಬಕ್ಕೆ ಸೇರಿದ ಉಷ್ಣ ವಲಯದ ಬೆಳೆ. ಜನಪ್ರಿಯ ತರಕಾರಿ ಸಸ್ಯ. ಸೊಲೇನಮ್ ಮೆಲೊಂಜಿನ ವೈಜ್ಞಾನಿಕ ನಾಮ. ತವರು ಭಾರತ ಮತ್ತು ಚೀನ. ಮೆಣಸಿನಕಾಯಿ, ಈರುಳ್ಳಿ, ಸೊಪ್ಪು ಇತ್ಯಾದಿಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತದೆ

ಬದಲಿ ತಾಯಿ

(ಸಾ) ತಾಯಿಯ ಸ್ಥಾನದಲ್ಲಿ ಇದ್ದುಕೊಂಡು ಮಗುವಿಗೆ ಹಾಲೂಡಿಸುವ ಮತ್ತಿತರ ಶುಶ್ರೂಷೆ ಮಾಡುವ ಹೆಂಗಸು. ಬೇರೊಬ್ಬರಿಗಾಗಿ ಗರ್ಭಧಾರಣೆ ಮಾಡಿ ಮಗುವನ್ನು ಹೆತ್ತುಕೊಡುವ ತಾಯಿ. ಪರ್ಯಾಯ ಮಾತೆ

ಬಂದೂಕುಲೋಹ

(ತಂ) ಶೇ. ಸುಮಾರು ೯೦ರಷ್ಟು ತಾಮ್ರ, ಶೇ. ೮-೧೦ ತವರ ಹಾಗೂ ಶೇ. ೪ರಷ್ಟು ಸತುವನ್ನೊಳ ಗೊಂಡ ಒಂದು ತೆರನಾದ ಕಂಚು. ಹಿಂದೆ ಬಂದೂಕು ಫಿರಂಗಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ತುಕ್ಕು ಹಿಡಿಯದು, ಬೇಗ ಸವೆಯದು. ಆದ್ದರಿಂದ ಈಗಲೂ ಬೇರಿಂಗ್, ಸ್ಟೀಮ್ ಪೈಪ್ ಫಿಟಿಂಗ್ ಹಾಗೂ ಗೇರ್‌ಗಳಲ್ಲಿ ಬಳಕೆ

ಬಂಧ

(ಭೌ) ಅಣು ಅಥವಾ ಸ್ಫಟಿಕದಲ್ಲಿ ಪರಮಾಣುಗಳ ನಡುವಿನ ಕೊಂಡಿ. ಇದು ಹೀಗೆ ಒಟ್ಟಿಗೆ ಹಿಡಿದಿಟ್ಟಿರುವ ಪರಮಾಣುಗಳ ಬೀಜಕೇಂದ್ರದ ಸುತ್ತ ವಿತರಿತವಾದ ಎಲೆಕ್ಟ್ರಾನು ಗಳಿಂದ ಉಂಟಾದ ವಿದ್ಯುತ್ತಿನಿಂದ ಕೂಡಿರುತ್ತದೆಂದು ಭಾವಿಸಲಾಗಿದೆ

ಬಂಧ ಶಕ್ತಿ

(ರ) ಪರಮಾಣುಗಳ ನಡುವೆ ರಾಸಾಯನಿಕ ಬಂಧ ಏರ್ಪಟ್ಟಾಗ ಬಿಡುಗಡೆ ಆಗುವ ಅಥವಾ ಒಡೆದಾಗ ಹೀರಿಕೆಗೊಳ್ಳುವ ಶಕ್ತಿ. ಜೂಲ್‌ಗಳಲ್ಲಿ ಅಳೆತ

ಬಂಧಕ

(ತಂ) ಕಾರ್ಬನ್ ಉತ್ಪನ್ನಗಳು, ಆರ್ಗ್ಯಾನಿಕ್ ಬಿರಿ ಅಸ್ತರಿಗಳು ಮುಂತಾದವುಗಳಲ್ಲಿ ಜಿಗುಟುತನ ಅಥವಾ ಅಂಟುತನ ತರಲು ಅವುಗಳಿಗೆ ಸೇರಿಸುವ ಪದಾರ್ಥ

ಬಂಧಕ

(ವೈ) ಚರ್ಮ ಅಥವಾ ಲೋಳೆ ಪಟಲ ಗಳಲ್ಲಿಯ ಬಾಹ್ಯ ಊತಕಗಳನ್ನು ಕುಗ್ಗಿಸುವ ಅಥವಾ ಅಮುಕುವ ಸಾಮರ್ಥ್ಯವಿರುವ (ಪದಾರ್ಥ). ಗಾಯದಿಂದ ಸೋರುವ ರಕ್ತವನ್ನು ತಡೆಯುವ. ವಿಸರ್ಜನದ್ರವ ಬಂಧಕ. ಬದ್ಧಕಾರಕ

ಬಂಧಕ ಶಕ್ತಿ

(ಭೌ) ವ್ಯವಸ್ಥೆಯ ಭಾಗವಾಗಿರುವ ಮೂಲಕಣವನ್ನು ಅದರಿಂದ ಬೇರ್ಪಡಿಸಲು ಬೇಕಾದ ಶಕ್ತಿ. ಒಂದು ಅಣು, ಪರಮಾಣು ಅಥವಾ ಪರಮಾಣು ಬೀಜವನ್ನು ಸಂಪೂರ್ಣವಾಗಿ ಘಟಕ ಕಣಗಳಾಗಿ ವಿಘಟಿಸಲು ಅಗತ್ಯವಾದ ಶಕ್ತಿ

ಬಂಧಕರಜ್ಜು

(ವೈ) ರಕ್ತಸ್ರಾವವಾಗುತ್ತಿರುವ ನಾಳವನ್ನು ಕಟ್ಟಲು, ಗಂತಿಗಳನ್ನು ಬಿಗಿಯಲು ಬಳಸುವ ಪಟ್ಟಿ ಅಥವಾ ದಾರ

ಬಂಧಕೋನ

(ರ) ಒಂದು ಪರಮಾಣುವಿನ ಬೀಜ ವನ್ನು ಅದಕ್ಕೆ ಬಂಧಿತವಾಗಿರುವ ಇತರ ಎರಡು ಪರಮಾಣುಗಳ ಬೀಜಗಳಿಗೆ ಸಂಯೋಜಿಸುವ ಗೆರೆಗಳ ನಡುವಿನ ಕೋನ. ಉದಾ: ನೀರಿನಲ್ಲಿ H-O-H ಕೋನ ಸುಮಾರು ೧೦೫0

Search Dictionaries

Loading Results

Follow Us :   
  Download Bharatavani App
  Bharatavani Windows App