भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಾವಿ

(ತಂ) ಭೂಮಿಯೊಳಗಿರುವ ನೀರು, ತೈಲ, ಇಂಧನ ಅನಿಲ ಮುಂತಾದವನ್ನು ತಲಪಲು ತೋಡಿದ ಕೂಪ

ಬಾವು

(ವೈ) ನೋಡಿ: ಬಾಸುಂಡೆ

ಬಾವು

(ಪ್ರಾ) ನೊಗ/ಅಧಿಕ ಭಾರದ ವಸ್ತುಗಳು ಪ್ರಾಣಿಗಳ ಚರ್ಮದ ಮೇಲೆ ಉಂಟುಮಾಡುವ ಉಜ್ಜು ಗಾಯ. ಬೊಬ್ಬೆ

ಬಾಷ್ಪ

(ಭೌ) ಕ್ರಾಂತಿ ಉಷ್ಣತೆಗಿಂತ ಕೆಳಗಿನ ಉಷ್ಣತೆಯಲ್ಲಿ ಇರುವ ಒಂದು ಅನಿಲ. ಎಂದೇ ಇದರ ಉಷ್ಣತೆಯನ್ನು ವ್ಯತ್ಯಸ್ತ ಗೊಳಿಸದೆ ಕೇವಲ ಸಂಪೀಡನೆಯಿಂದ ಇದನ್ನು ದ್ರವೀಕರಿಸ ಬಹುದು. ಸಾಮಾನ್ಯವಾಗಿ ದ್ರವ ಅಥವಾ ಘನಸ್ಥಿತಿಯಲ್ಲಿ ಇರುವ ಯಾವುದೇ ವಸ್ತುವಿನ ಅನಿಲರೂಪ. ಹಬೆ. ತೇವ. ಆವಿ

ಬಾಷ್ಪ ವಿಸರ್ಜನೆ

(ಸ) ಸಸ್ಯ ದೇಹದಿಂದ ಹೆಚ್ಚಿಗೆ ಇರತಕ್ಕ ನೀರಿನ ಭಾಗ ಆವಿಯ ರೂಪದಲ್ಲಿ ಹೊರಬೀಳುವ ಕ್ರಿಯೆ. ಇದು ಯಾವ ಭಾಗದಲ್ಲಾದರೂ ನಡೆಯಬಹುದು. ಆದರೆ ಹೆಚ್ಚಾಗಿ ಎಲೆಗಳ ಮೂಲಕವಷ್ಟೆ ಆಗುತ್ತದೆ. ಎರಡು ವಿಧಗಳಲ್ಲಿ ಸಂಭವಿಸುತ್ತದೆ. ಎಲೆಗಳ ತಳಭಾಗದಲ್ಲಿರುವ ಸೂಕ್ಷ್ಮರಂಧ್ರಗಳ ಮೂಲಕ ಒಂದಾದರೆ ಹೊರಚರ್ಮದ ಮೂಲಕ ಆಗುವ ವಿಸರ್ಜನೆ ಇನ್ನೊಂದು

ಬಾಷ್ಪ ಸಾಂದ್ರತೆ

(ಭೌ) ಅನಿಲದ ಅಥವಾ ಬಾಷ್ಪದ ಸಾಂದ್ರತೆಯನ್ನು ಹೈಡ್ರೊಜನ್, ಆಕ್ಸಿಜನ್ ಅಥವಾ ವಾಯುವಿಗೆ ಹೋಲಿಸಿ ನಿರೂಪಿಸುವುದು ವಾಡಿಕೆ. ಹೈಡ್ರೊಜನ್ನನ್ನು ಆಧಾರ ವಸ್ತುವಾಗಿ ತೆಗೆದುಕೊಂಡಾಗ ಒತ್ತಡದ, ಉಷ್ಣತೆಯ ಅವೇ ಪರಿಸ್ಥಿತಿಗಳಲ್ಲಿ ನಿರ್ದಿಷ್ಟ ಗಾತ್ರದ ಅನಿಲ ರಾಶಿಗೂ ಸಮಗಾತ್ರದ ಹೈಡ್ರೊಜನ್ ರಾಶಿಗೂ ನಡುವಿನ ದಾಮಾಷಾ. ಸಂಖ್ಯಾತ್ಮಕವಾಗಿ ಅನಿಲದ ಅಣುತೂಕದ ಅರ್ಧಕ್ಕೆ ಸಮ

ಬಾಷ್ಪಖನಿಜನ

(ಭೂವಿ) ಘನೀಭವಿಸುತ್ತಿರುವ ಶಿಲಾಪಾಕದಿಂದ ಹೊಮ್ಮುವ ಅನಿಲಗಳ ಪರಿಣಾಮವಾಗಿ ಶಿಲಾ ಪರಿವರ್ತನೆ ಇಲ್ಲವೇ ಖನಿಜ ಸ್ಫಟಿಕೀಕರಣ

ಬಾಷ್ಪಶೀಲ

(ರ) ಪದಾರ್ಥವೊಂದು ಸಾಧಾರಣ ಉಷ್ಣತೆಗಳಲ್ಲಿಯೇ ಬೇಗ ಆವಿಯಾಗುವ ಗುಣ. ಆವಿಶೀಲ

ಬಾಷ್ಪಶೀಲ ತೈಲ

(ಸ) ಸಸ್ಯಗಳ ತೈಲ ಗ್ರಂಥಿಗಳಲ್ಲೂ ನಾಳಗಳಲ್ಲೂ ಉಂಟಾಗುವ ಬಾಷ್ಪಶೀಲ ಆನುಷಂಗಿಕ ತೈಲ. ಸುಗಂಧ ಸಸ್ಯಗಳಲ್ಲಿ ಇದು ಸುಗಂಧಕಾರಕ. ಸಾರತೈಲ

ಬಾಷ್ಪೀಕರಣ

(ಭೌ) ಯಾವುದೇ ಪದಾರ್ಥ ಘನ ಅಥವಾ ದ್ರವ ಸ್ಥಿತಿಯಿಂದ ಆವಿ (ಬಾಷ್ಪ) ಅಥವಾ ಅನಿಲ ಸ್ಥಿತಿಗೆ ಪರಿವರ್ತನೆಯಾಗುವ ಪ್ರಕ್ರಿಯೆ; ತನ್ನ ಒಂದು ಭಾಗವನ್ನು ಆವಿ ಅಥವಾ ಅನಿಲ ರೂಪದಲ್ಲಿ ಹೊರಹಾಕುವ ಪ್ರಕ್ರಿಯೆ

ಬಾಷ್ಪೀಭವನ

(ಭೌ) ಕುದಿಬಿಂದು ತಲಪದಿದ್ದರೂ ದ್ರವವೊಂದು ದ್ರವಸ್ಥಿತಿಯಿಂದ ಅನಿಲ ಸ್ಥಿತಿಗೆ ಪರಿವರ್ತನೆ ಯಾಗುವುದು. ಬಾಷ್ಪೀಭವನವು ದ್ರವದ ಮೇಲ್ಮೈಯಲ್ಲಿ ಸಂಭವಿಸುತ್ತದೆ. ಅಲ್ಲಿರುವ ಅತ್ಯಂತ ಹೆಚ್ಚಿನ ಚಲನಶಕ್ತಿಯುಳ್ಳ ಕೆಲವು ಅಣುಗಳು ಅನಿಲ ಸ್ಥಿತಿಗೆ ಹಾರುತ್ತವೆ. ಪರಿಣಾಮವಾಗಿ ದ್ರವದ ಇತರ ಅಣುಗಳ ಸರಾಸರಿ ಚಲನಶಕ್ತಿ ಕುಗ್ಗಿ ದ್ರವದ ಉಷ್ಣತೆಯಲ್ಲಿ ಪತನವಾಗುವುದು

ಬಾಸಿಂಗದ ಹಕ್ಕಿ

(ಪ್ರಾ) ನೋಡಿ: ಕೂಕೂಹಕ್ಕಿ

ಬಾಸಿಲಸ್

(ಜೀ) ದಂಡಾಣುಜೀವಿ. ಸರಳಿನಾಕಾರದ ಬ್ಯಾಕ್ಟೀರಿಯಮ್. ಕ್ಷಯರೋಗ ಮೊದಲಾದ ವ್ಯಾಧಿಗಳಲ್ಲಿ ರೋಗಗ್ರಸ್ತ ಅಂಗಾಂಶಗಳಲ್ಲಿರುವ ಸಸ್ಯಮೂಲ ಸೂಕ್ಷ್ಮ ಜೀವಿ

ಬಾಸುಂಡೆ

(ವೈ) ಚರ್ಮದ ಮೇಲೆ ಹೊಡೆತ ಬಿದ್ದು ಗಾಯವಾದಾಗ ಆ ಭಾಗದಲ್ಲಿ ಊತಕಗಳಿಗಾದ ಗಾಸಿಯ ಪರಿಣಾಮವಾಗಿ ಎದ್ದುಕಾಣುವ ಕೆಂಪು-ಕಂದು ಊತ. ಬಾವು

ಬಾಸ್

(ಭೂವಿ) ಸಸ್ಯಜನ್ಯ ಪದಾರ್ಥ ಬೆರೆತು ವಿವರ್ಣವಾದ ಬಳಪದ ಕಲ್ಲು. (ಪ್ರಾ) ಬಾಸ್ ಮೀನು, ಸೆಂಟ್ರಾರ್ಕಿಡೀ ಮತ್ತು ಸೆರಾನಿಡೀ ಕುಟುಂಬ, ಪೆರ್‌ಕಾಯ್ಡಿಯೈ ಗುಂಪಿನ ಮೀನುಗಳು. ಉತ್ತರ ಅಮೆರಿಕದ ಪೂರ್ವ ಪಶ್ಚಿಮ ಕರಾವಳಿಗಳಲ್ಲಿ ದೊರೆಯುತ್ತವೆ. ಉತ್ತಮ ಖಾದ್ಯ ಮೀನು. (ಭೌ) ಸ್ವರಶ್ರೇಣಿಯಲ್ಲಿ ಮಂದ್ರ – ಗಂಡಸಿನ ಮಂದ್ರ – ಸ್ವರ (ಬೇಸ್)

ಬಾಸ್

(ಭೂವಿ) ೧೦೦ ಚಕಿಮೀಗಿಂತ ಕಡಿಮೆ ಕ್ಷೇತ್ರದ, ಉರುಳೆ ಆಕಾರದ ಅಗ್ನಿಶಿಲಾ ಅಂತಃಸರಣ. (ತಂ) ಯಂತ್ರಭಾಗವೊಂದರ ಮೇಲಿರುವ, ಸಾಮಾನ್ಯವಾಗಿ ಉರುಳೆ ಆಕಾರದ ಪ್ರಕ್ಷೇಪಣ. ಇದನ್ನು ದಂಡಕ್ಕೆ ಇಲ್ಲವೇ ಪಿನ್ನಿಗೆ ಆಧಾರವಾಗಿ ಬಳಸಲಾಗುತ್ತದೆ (ಸಾ) ಬೃಹತ್ ಬಂಡೆ. ಗುಬುಟು. ತಲೆ

ಬಾಸ್ಟರ್ಡ್

(ಜೀ) ಎರಡು ವಿಭಿನ್ನ ಬಗೆಯ ಪ್ರಾಣಿಗಳ ಅಥವಾ ಸಸ್ಯಗಳ ಸಂಕರ ಸಂತಾನ. ಗಂಡು ಕುದುರೆ ಮತ್ತು ಹೆಣ್ಣು ಕತ್ತೆಗಳ ಸಂತಾನ ಹಿನ್ನಿ; ಗಂಡು ಕತ್ತೆ ಮತ್ತು ಹೆಣ್ಣು ಕುದುರೆಗಳ ಸಂತಾನ ಹೇಸರಗತ್ತೆ. ಜಾರಜ. ಅನೈತಿಕ ಸಂತಾನ. ಅವಿವಾಹಿತ ಸಂಬಂಧದಿಂದ ಜನಿಸಿದ ಶಿಶು

ಬಾಸ್ಟರ್ಡ್ ರೆಕ್ಕೆ

(ಪ್ರಾ) ಹಕ್ಕಿ ರೆಕ್ಕೆಯಲ್ಲಿ ೩ ಅಥವಾ ೪ ಗಿಡ್ಡ ಗರಿಗಳ ತಳಹದಿ ಭಾಗ. ಇಡೀ ರೆಕ್ಕೆಯನ್ನು ವ್ಯಕ್ತಿಯ ಕೈಗೆ ಹೋಲಿಸಿದರೆ ಬಾಸ್ಟರ್ಡ್ ರೆಕ್ಕೆಯನ್ನು ಹೆಬ್ಬೆಟ್ಟಿಗೆ ಹೋಲಿಸಬಹುದು

ಬಾಹು

(ಗ) ಕೋನ ರೂಪಿಸುವ ೨ ರೇಖೆಗಳಲ್ಲೊಂದು. ಭುಜ

ಬಾಹ್ಯಕಾರ್ಯ

(ತಂ) ಹೊರಗಿನಿಂದ ಹಾಕಲಾದ ಬಲಗಳ ವಿರುದ್ಧ ವ್ಯವಸ್ಥೆ ವ್ಯಾಕೋಚಿಸುವಾಗ ಎಸಗುವ ಕಾರ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App