भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಬಾಯಿ

(ವೈ) ಪ್ರಾಣಿಗಳಲ್ಲಿ ಆಹಾರ ಸೇವನಾಂಗ. ಅನ್ನನಾಳದ ಮೇಲುಭಾಗದಲ್ಲಿರುವ ಇದರಲ್ಲಿ ನಾಲಗೆ ಮತ್ತು ಹಲ್ಲುಗಳಿರುವುವು. (ಭೂವಿ) ಗುಹೆ, ಕುಲುಮೆ, ನದಿ ಮೊದಲಾದವುಗಳ ಆರಂಭ ಭಾಗ

ಬಾಯಿ

(ತಂ) ಯಾವುದೇ ಘನ ಪದಾರ್ಥದಲ್ಲಿನ ತೆರಪು, ವಿಶೇಷವಾಗಿ ದ್ರವ ಇತ್ಯಾದಿಗಳು ಹರಿದು ಹೋಗಲೆಂದು ಮಾಡಿದುದು. ಕಂಡಿ. ದ್ವಾರ

ಬಾಯಿ ಗ್ರಂಥಿಗಳು

(ವೈ) ಭೂವಾಸಿ ಕಪಾಲಯುಕ್ತ ಜೀವಿಗಳಲ್ಲಿ ಬಾಯಿ ಕುಹರದೊಳಕ್ಕೆ ತೆರೆಯುವ ಗ್ರಂಥಿಗಳು. ಇವುಗಳಲ್ಲಿ ಮುಖ್ಯವಾದವು ಲಾಲಾರಸ ಗ್ರಂಥಿಗಳು

ಬಾಯ್ಲರ್

(ತಂ) ನೋಡಿ: ಕುದಿಪಾತ್ರೆ

ಬಾರಗ್ನೋಸಿಸ್

(ವೈ) ವಸ್ತುಗಳ ತೂಕಗಳಲ್ಲಿಯ ವ್ಯತ್ಯಾಸ ತಿಳಿಯುವ ವಿವೇಚನ ಸಾಮರ್ಥ್ಯ ನಷ್ಟವಾಗಿರುವುದು

ಬಾರ್

(ಪವಿ) ಒತ್ತಡದ ಮಾನ. ಅಕ್ಷಾಂಶ ೪೫0 ಉಷ್ಣತೆ ೦0 ಸೆಯಲ್ಲಿ, ಶಿಷ್ಟ ವಾಯುಮಂಡಲ ಒತ್ತಡ ೧ ಬಾರ್ =೭೫೦.೦೭ ಮಿಮೀ ಪಾದರಸ. ೧ ಮಿಲಿಬಾರ್ =೧೦೩ ಡೈನ್/ಸೆಂಮೀ೨. ನೋಡಿ: ಮಿಲಿಬಾರ್

ಬಾರ್ನಕಲ್

(ಪ್ರಾ) ೧. ಶೀತಕಾಲದಲ್ಲಿ ಬ್ರಿಟನ್ನಿಗೆ ವಲಸೆ ಬರುವ ಉತ್ತರ ಶೀತವಲಯದ ಒಂದು ಜಾತಿಯ ಬಾತು. ೨. ಸಿರ್ರಿಪಿಡಿಯ ಉಪವರ್ಗಕ್ಕೆ ಸೇರಿದ ಅನೇಕ ವಲ್ಕವಂತ ಪ್ರಾಣಿ ಪ್ರಭೇದಗಳ ಸಾಮಾನ್ಯ ನಾಮ. ೩. ಹಡಗಿನ ತಳಕ್ಕೆ ಭದ್ರವಾಗಿ ಅಂಟಿಕೊಳ್ಳುವ ಒಂದು ಜಾತಿಯ ಚಿಪ್ಪಿನ ಪ್ರಾಣಿ

ಬಾರ್ನ್

(ಭೌ) ಪರಮಾಣು ಬೀಜದ ಅಡ್ಡಕೊಯ್ತದ ಏಕಮಾನ. ೧ ಬಾರ್ನ್ = ೧೦-೨೪ ಚ.ಸೆಂಮೀ. = ೧೦-೨೮ ಚಮೀ

ಬಾರ್ಬರಿ ಕುರಿ

(ಪ್ರಾ) ಉತ್ತರ ಆಫ್ರಿಕಾವಾಸಿ ಕಾಡು ಕುರಿ. ಆಮೊಟ್ರೇಗಸ್ ಲರ್ವಿಯ ವೈಜ್ಞಾನಿಕ ನಾಮ. ಉದ್ದವಾದ ಸುರುಳಿ ಆಕಾರದ ಕೊಂಬುಗಳು, ಕತ್ತು ಮತ್ತು ಎದೆಯ ಮೇಲೆ ಗಡ್ಡದಂಥ ರೋಮಗುಚ್ಛ ಇದರ ಲಕ್ಷಣಗಳು

ಬಾರ್ಬರಿ ವಾನರ

(ಪ್ರಾ) ಮ್ಯಾಮೇಲಿಯ ವರ್ಗದ ಪ್ರೈಮೇಟ್ ಗಣಕ್ಕೆ ಸೇರಿದ ಬಾಲವಿಲ್ಲದ ದೊಡ್ಡ ಕೋತಿ. ಮಕಾಕ ಸಿಲ್ವೇನಸ್ ವೈಜ್ಞಾನಿಕ ನಾಮ. ಉತ್ತರ ಆಫ್ರಿಕ ಮತ್ತು ಮೆಡಿಟರೇನಿಯನ್ ಸಮುದ್ರ ಬಳಿಯ ಜಿಬ್ರಾಲ್ಟರ್‌ನಲ್ಲಿ ಹಿಂಡುಹಿಂಡಾಗಿ ವಾಸಿಸುತ್ತದೆ

ಬಾರ್ಬಿಟ್ಯುರಿಕ್ ಆಮ್ಲ

(ರ) ಮಲೊನಿಕ್ ಆಮ್ಲವನ್ನು ಯೂರಿಯಾದ ಜೊತೆ ಕಾಸಿದಾಗ ದೊರೆಯುವ ಪದಾರ್ಥ. ನಿರ್ವರ್ಣ ಹರಳುಗಳಾಗಿ ಸ್ಫಟಿಕೀಕರಿಸುತ್ತದೆ. ಬಾರ್ಬಿಟ್ಯುರೇಟ್‌ಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ಸಾಮಗ್ರಿ. ದ್ರಬಿಂ ೨೪೮0ಸೆ. CO(NH.CO)2CH2. ಮ್ಯಾಲೊನಿಲ್ ಯೂರಿಯ

ಬಾರ್ಬಿಟ್ಯುರೇಟ್‌ಗಳು

(ರ) ಬಾರ್ಬಿಟ್ಯುರಿಕ್ ಆಮ್ಲದಿಂದ ಪಡೆದ ಆರ್ಗ್ಯಾನಿಕ್ ಸಂಯುಕ್ತಗಳು. ಇವು ನಿದ್ರಾಜನಕಗಳು. ಚಟವಾಗಬಲ್ಲವು. ಅತಿಯಾದಲ್ಲಿ ಮರಣಕಾರಕ ಗಳೂ ಹೌದು. ಈಗ ಸುರಕ್ಷಿತ ನಿದ್ರಾಜನಕಗಳುಂಟು

ಬಾರ‍್ಯೇ

(ಭೌ) ಸಿಜಿಎಸ್ ಪದ್ಧತಿಯಲ್ಲಿ ಒತ್ತಡದ ಏಕಮಾನ = ೦.೧ಪ್ಯಾಸ್ಕಲ್ = ೧ಡೈನ್/ಸೆಮೀ೨ = ೦.೦೦೧ ಮಿಲಿಬಾರ್. ಮೈಕ್ರೊಬಾರ್ ಎಂದೂ ಕರೆಯುವುದುಂಟು

ಬಾಲಚಂದ್ರ

(ಖ) ಶುಕ್ಲಪಕ್ಷದ ಮೊದಲ ವಾರದಲ್ಲಿ ಕಾಣುವ ಚಂದ್ರಬಿಂಬ. ಶೃಂಗ ಚಂದ್ರ

ಬಾಲಚುಕ್ಕಿ

(ಖ) ನೋಡಿ: ಧೂಮಕೇತು

ಬಾಲಪ್ರೌಢಿಮೆ

(ಜೀ) ವಯಸ್ಸಿಗೆ ಮೊದಲೇ ಬುದ್ಧಿ ಶಕ್ತಿ, ಪ್ರೌಢಿಮೆ ಪೂರ್ಣ ವಿಕಾಗೊಂಡಿರುವುದು

ಬಾಲವಾಡಿ

(ಸಾ) ಪಾಠ ವಸ್ತು, ಆಟದ ಸಾಮಾನು, ಆಟಗಳು, ಹಾಡುವಿಕೆ, ಅಭಿನಯ ಮೊದಲಾದವುಗಳ ಮೂಲಕ ಮಕ್ಕಳ ಮನಸ್ಸನ್ನು ವಿಕಾಸಗೊಳಿಸುವ ಪಾಠಶಾಲೆ. ಕಿಂಡರ್‌ಗಾರ್ಟನ್

ಬಾಲ್ಕನಿ

(ತಂ) ಉಪ್ಪರಿಗೆಯ ಮೊಗಸಾಲೆ

ಬಾಲ್ಸಮ್

(ಸ) ಕೆಲವು ಬಗೆಯ ಸಸ್ಯಗಳು ಸ್ರವಿಸುವ ಸುವಾಸನಾಯುಕ್ತ ಪದಾರ್ಥ. ಸಾಧಾರಣವಾಗಿ ಇದೊಂದು ತೈಲಯುಕ್ತ ರಾಳ. ಬೆನ್ಝೋಯಿಕ್ ಅಥವಾ ಸಿನ್ನಮಿಕ್ ಆಮ್ಲ ಇದರ ಒಂದು ಘಟಕ. ಔಷಧೀಯ ಉಪಯೋಗವಿದೆ. ಗುಗ್ಗುಳ, ಕರ್ಣಕುಂಡಲ. ಗೌರಿಹೂವು

ಬಾವಲಿ

(ಪ್ರಾ) ಕೈರಾಪ್ಟರ ಗಣಕ್ಕೆ ಸೇರಿದ ಮತ್ತು ಹಕ್ಕಿಯಂತೆ ಹಾರಬಲ್ಲ ಸ್ತನಿ. ಕಾಲ್ಬೆರಳುಗಳು ಚರ್ಮದ ರೆಕ್ಕೆಗಳಿಗೆ ಆಸರೆ ಯಾಗಿರುವಂತೆ ವಿಸ್ತೃತ. ಇಲಿ ರೂಪದ ಚತುಷ್ಪಾದಿ. ನಿಶಾಚರಿ. ಕಣ್‌ಕಪಟ. ಚಕ್ಕಳದ ಹಕ್ಕಿ. ತೋಲಕ್ಕಿ

Search Dictionaries

Loading Results

Follow Us :   
  Download Bharatavani App
  Bharatavani Windows App