भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಫ್ಯಾರಿಂಜೈಟಿಸ್

(ವೈ) ಗಂಟಲ ಕುಳಿಯ ಉರಿಯೂತ

ಫ್ಯೂಗ್

(ವೈ) ಒಂದು ರೀತಿಯ ಮರೆವು ರೋಗ. ಉನ್ಮಾದಸ್ಥಿತಿ ಯಲ್ಲಿ ಮಾಡುವಂತೆ ಈ ಸ್ಥಿತಿಯಲ್ಲೂ ವ್ಯಕ್ತಿ ಅಹಿತ ವಾಸ್ತವಿಕತೆಯಿಂದ ಪಲಾಯನಗೈಯ್ಯುತ್ತಾನೆ. ಇಂಥಸ್ಥಿತಿಯಲ್ಲಿ ಮಾಡಿದ ಯಾವ ಕಾರ್ಯ ಗಳನ್ನೂ ಆತ ಅನಂತರ ಸಹಜ ಸ್ಥಿತಿಗೆ ಬಂದಾಗ ನೆನಪಿಸಿಕೊಳ್ಳಲಾರ

ಫ್ಯೂಸಿಲೇಜ್

(ತಂ) ಫಲಕ ವಿಮಾನದ ರೆಕ್ಕೆಗಳೂ ಹಿಂತುದಿಯೂ ಜೋಡಿಸಲ್ಪಟ್ಟ ಮೈಕಟ್ಟು. ವಿಮಾನದ ಈ ಪ್ರಧಾನ ಭಾಗದಲ್ಲಿ ಚಾಲಕ ವರ್ಗ, ಪ್ರಯಾಣಿಕರು ಹಾಗೂ ಸರಕುಗಳಿಗೆ ಅವಕಾಶ ಒದಗಿಸಲಾಗಿರುತ್ತದೆ

ಫ್ಯೂಸ್

(ತಂ) ೧. ವಿದ್ಯುತ್ ಪ್ರವಾಹ ಸುರಕ್ಷತೆಯ ಮಿತಿ ದಾಟಿದಾಗ ಅಧಿಕ ಉಷ್ಣತೆಯಲ್ಲಿ ಕರಗಿ ಮಂಡಲವನ್ನು ಕತ್ತರಿಸಲು ಪ್ರವಾಹ ಮಾರ್ಗದಲ್ಲಿ ಸೇರಿಸಿರುವ, ಕಡಿಮೆ ದ್ರಬಿಂ ಉಳ್ಳ ತಂತಿ, ಕಂಬಿ, ತಗಡು ಮುಂತಾದವು. ಇಂತಹ ಕರಗು ತಂತಿಯನ್ನು ಸಾಮಾನ್ಯವಾಗಿ ಲೋಹ ತುದಿಗಳುಳ್ಳ ಒಂದು ಪುಟ್ಟ ಗಾಜಿನ ಇಲ್ಲವೇ ಪಿಂಗಾಣಿ ಕೊಳವೆಯೊಳಗೆ ಹುದುಗಿಸಲಾಗಿರುತ್ತದೆ. ರಕ್ಷಾತಂತು. ಕಾಪು. ೨. ಸಿಡಿಗುಂಡಿಗೂ, ಬಂಡೆ ಮೊದಲಾದವನ್ನು ಒಡೆಯುವ ಸಿಡಿಮದ್ದಿಗೂ ಬೆಂಕಿ ಇಡುವುದಕ್ಕಾಗಿ ಮಾಡಿರುವ ದಹ್ಯ ವಸ್ತುವನ್ನೊಳಗೊಂಡ ಕೊಳವೆ, ಬತ್ತಿ ಇತ್ಯಾದಿ. ಸರಬತ್ತಿ

ಫ್ರಕ್ಟೋಸ್

(ರ) ಹಣ್ಣಿನ ರಸ, ಜೇನು, ಸಸ್ಯ ರಸ ಗ್ರಂಥಿಗಳ ಮಧು ದ್ರವಗಳಲ್ಲಿ, ಮುಕ್ತಸ್ಥಿತಿಯಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಕೀಟೋನ್‌ಗಳು ಹಾಗೂ ಅತ್ಯಂತ ಮಧುರ ಶರ್ಕರ. ಫಲಶರ್ಕರ. C6H12O6. ದ್ರಬಿಂ ೧೦೨0-೧೦೪0ಸೆ

ಫ್ರಂಟ್

(ಖ) ಟ್ರೊಫೊಸ್ಫಿಯರ್‌ನಲ್ಲಿ (ಕ್ಷೋಭಾಗೋಳ) ವಿಭಿನ್ನ ಸಾಂದ್ರತೆ ಅಥವಾ ಉಷ್ಣತೆಗಳ ಅನಿಲ ಸಮೂಹಗಳನ್ನು ಪ್ರತ್ಯೇಕಿಸುವ ವಿಚ್ಛಿನ್ನ ಇಳುಕಲು ಮೇಲ್ಮೈ

ಫ್ರಾಗ್

(ತಂ) ಎರಡು ರೈಲುದಾರಿಗಳು ಒಂದನ್ನೊಂದು ಅಡ್ಡಹಾಯುವ ಕಡೆ ಕಂಬಿಗಳು ಸೇರುವ ಸ್ಥಳದಲ್ಲಿ ಹಾಕಿರುವ ಹಳ್ಳ ಕೊರೆದ ಕಬ್ಬಿಣದ ತುಂಡು

ಫ್ರಾಗ್ಮಾ

(ಪ್ರಾ) ರಕ್ತನಾಳದ ಅಥವಾ ಪದಾರ್ಥದ ಎರಡು ಭಾಗಗಳನ್ನು ಬೇರ್ಪಡಿಸುವ ಅಡ್ಡತಡಿಕೆ

ಫ್ರಾನ್ಸಿಯಮ್

(ರ) ಅತ್ಯಂತ ಭಾರವಾದ ಕ್ಷಾರಲೋಹ. ಪ್ರತೀಕ Fr. ಪರಮಾಣು ಸಂಖ್ಯೆ ೮೭. ಸ್ಥಿರ ಸಮಸ್ಥಾನಿಗಳಿಲ್ಲ. ಏಕೈಕ ಸಹಜ ವಿಕಿರಣಪಟು ೨೨೩೮೭ Fr ಸಮಸ್ಥಾನಿ ಅರ್ಧಾಯು ೨೧ ಮಿನಿಟ್

ಫ್ರಿಗೇಟ್

(ತಂ) ಡೆಸ್ಟ್ರಾಯರ್‌ಗಿಂತ ದೊಡ್ಡದೂ ಕ್ರೂಯ್ಸರ್ ಗಿಂತ ಚಿಕ್ಕದೂ ಆದ, ೪೦೦೦-೯೦೦೦ ಟನ್ ನೀರಿನ ವಿಸ್ಥಾಪನೆಯುಳ್ಳ, ಎರಡನೆಯ ದರ್ಜೆಯ ಯುದ್ಧದ ಹಡಗು. ಕಾವಲು ಹಡಗು

ಫ್ರಿನಮ್

(ವೈ) ಶರೀರದ ಯಾವುದೇ ಅಂಗಕ್ಕೆ ಬೆಂಬಲ ವಾದ, ಅದನ್ನು ಸ್ವಸ್ಥಾನದಲ್ಲಿರಿಸಿರುವ ಅಥವಾ ಅದರ ಚಲನೆ ಯನ್ನು ಸೀಮಿತಗೊಳಿಸುವ, ಚರ್ಮದ ಅಥವಾ ತೆಳುಪೊರೆಯ ಮಡಿಕೆ ರಚನೆ. ಉದಾ: ನಾಲಿಗೆಯ ಕೆಳಗಿರುವಂತಹುದು

ಫ್ರೆನೆಟಿಕ್

(ವೈ) ಉಗ್ರ ಉನ್ಮಾದ ಅಥವಾ ಬುದ್ಧಿ ವಿಕಲ್ಪ ಸ್ಥಿತಿಯಲ್ಲಿರುವ, ಸ್ಥಿತಿಗೆ ಸಂಬಂಧಿಸಿದ

ಫ್ರೆನೊಗ್ರಾಫ್

(ವೈ) ತೆಳುಪೊರೆಯ ಚಲನೆಗಳನ್ನು ಅಲೇಖಿಕವಾಗಿ ದಾಖಲಿಸುವ ಉಪಕರಣ

ಫ್ರೈಟರ್

(ತಂ) ಸಾಮಾನುಗಳನ್ನು ಸಾಗಿಸಲು ಮಾತ್ರ ಬಳಸುವ ಹಡಗು/ವಿಮಾನ

ಫ್ಲಷ್

(ಸ) ಭೂಮಿಯೊಳಗಿನ ನೀರಿನಿಂದ ಪೋಷಿತವಾದ ನೆಲ. (ಸಾ) ನೀರಿನ ನುಗ್ಗು

ಫ್ಲಾಕಸ್

(ಪ್ರಾ) ಸ್ತನಿಗಳಲ್ಲಿ ಬಾಲದ ತುದಿಯಲ್ಲಿರುವ ಉಣ್ಣೆಯಂಥ ಕೂದಲ ಗೊಂಚಲು

ಫ್ಲಾಕೋಸ್

(ಸ) ಉಣ್ಣೆಯಂಥ ರೋಮಗಳಿಂದಾದ ಚುಂಗುಗಳಿಂದ ಕೂಡಿದ

ಫ್ಲಾಕ್ಯುಲಸ್

(ವೈ) ಅನುಮಸ್ತಿಷ್ಕದ ಕೆಳ ಪಾರ್ಶ್ವದ ಎರಡು ಸಣ್ಣ ಭಾಗಗಳ ಪೈಕಿ ಒಂದು. (ಜೀ) ಉಣ್ಣೆ ಎಳೆಗಳಂಥ ಕೂದಲಿನ ಕಂತೆ. (ಖ) ಸೂರ್ಯನ ಸುತ್ತಲಿನ ಅನಿಲದಲ್ಲಿ ಕ್ಯಾಲ್ಸಿಯಮ್, ಹೈಡ್ರೊಜನ್ ಅಥವಾ ಇತರ ಪದಾರ್ಥಗಳ ಮೇಘಸದೃಶ ರಾಶಿ

ಫ್ಲಾಕ್ಯುಲೆಂಟ್

(ರ) ಮೇಘಸದೃಶವೂ ಅಸ್ಫಟಿಕೀಯವೂ ಆದ ವಸ್ತುವನ್ನು ಕುರಿತ

ಫ್ಲಾಕ್ಯುಲೇಟ್

(ಜೀ) ರೋಮಯುಕ್ತವಾದ ಪುಟ್ಟ ಜುಟ್ಟು ಗಳಿರುವ. (ರ) ಸೂಕ್ಷ್ಮ ವಿಭಜಿತ ಅವಕ್ಷೇಪ ದೊಡ್ಡ ಕಣಗಳಾಗಿ ಸಂಚಯಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App