भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಫೋಟೊಫಾರೆಸಿಸ್

(ರ) ತೇಲಾಡುತ್ತಿರುವ ಕಣಗಳು ಬೆಳಕಿನ ಪ್ರಭಾವದಿಂದ ಸ್ಥಳಾಂತರಗೊಳ್ಳುವುದು

ಫೋಟೊಫೈಗಸ್

(ಜೀ) ತೀಕ್ಷ್ಣವಾದ ಬೆಳಕಿನಿಂದ ಜೀವಿಗಳು ದೂರ ಸರಿಯುವುದು. ಛಾಯಾಪ್ರೇಮಿ

ಫೋಟೊಫೋಬಿಯ

(ವೈ) ಬೆಳಕನ್ನು ಸಹಿಸಲಾಗದೆ ಇರುವುದು. ಬೆಳಕು ಎದುರಾದಾಗ ರೆಪ್ಪೆಗಳು ಅನಿಯಂತ್ರಿತವಾಗಿ ಮಿಡಿಯುವುದು. ದೀಪ್ತಿಭಯ

ಫೋಟೊಫೋರ್

(ಪ್ರಾ) ಕೆಲವು ಬಗೆಯ ಮೀನುಗಳ ಶರೀರದಲ್ಲಿ, ವಿಶೇಷವಾಗಿ ಚರ್ಮದ ಮೇಲೆ, ಬೆಳಕು ಉತ್ಪತ್ತಿ ಮಾಡುವ ಅಂಗ ಭಾಗ. ದೀಪ್ತಾಂಗ

ಫೋಟೊಫ್ತಾಲ್ಮಿಯ

(ವೈ) ಅತಿಪ್ರಕಾಶದ ಬೆಳಕಿಗೆ (ಉದಾ: ತೆರೆದ ಚಾಪ ದೀಪಕ್ಕೆ) ಕಣ್ಣು ತೆರೆದಾಗ ಅತಿ ನೇರಿಳೆ ಕಿರಣಗಳ ಕ್ರಿಯೆಯಿಂದಾಗಿ ಉಂಟಾಗುವ ಕಣ್ಣಿನ ಉರಿ, ಕಣ್ಣೀರು, ದ್ಯುತಿ ಭೀತಿ ಮತ್ತು ರೆಪ್ಪೆಗಳ ಊತ, ಸೆಳೆತ

ಫೋಟೊಲಿಸಿಸ್

(ರ) ಬೆಳಕಿನ ಹೀರಿಕೆ ಉಂಟುಮಾಡುವ ಅಣುವಿನ ವಿಭಜನೆ / ರಾಸಾಯನಿಕ ವಿಯೋಜನೆ. ದ್ಯುತಿ ವಿಭಜನೆ

ಫೋಟೊವೋಲ್ಟಾಯಿಕ್ ಪರಿಣಾಮ

(ಭೌ) ಅಸದೃಶ ವಸ್ತುಗಳನ್ನು ಬೆಳಕಿಗೆ ಅಥವಾ ಅತಿನೇರಿಳೆ ವಿಕಿರಣಕ್ಕೆ ಒಡ್ಡಿದಾಗ ಆ ವಸ್ತುಗಳ ನಡುವಣ ಕೂಡುಭಾಗಕ್ಕೆ ಅಡ್ಡವಾಗಿ ವಿದ್ಯುಚ್ಚಾಲಕ ಬಲ ಉತ್ಪಾದನೆಯಾಗುವುದು

ಫೋಟೊಸ್ಟಾಟ್

(ತಂ) ದಸ್ತಾವೇಜು, ರೇಖನಗಳನ್ನು ಛಾಯಾಗ್ರಾಹಕದ ಮೂಲಕ ನೇರವಾಗಿ ತೆಗೆದ ನಕಲು (ಋಣ ಬಿಂಬ) ಅಥವಾ ಅಂತಹ ನಕಲು ತೆಗೆಯುವ ಯಂತ್ರ

ಫೋಟೊಹೀಲಿಯೋಗ್ರಾಫ್

(ಭೌ) ಸೂರ್ಯ ಬಿಂಬ ಛಾಯಾಗ್ರಹಿಸಲು ರಚಿಸಿದ ವಿಶೇಷ ವಕ್ರೀಭವನ ದೂರದರ್ಶಕ

ಫೋನಾನ್

(ತಂ) ಒಂದು ಘನ ವಸ್ತುವಿನಲ್ಲಿ ಜಾಲಕ ಕಂಪನಗಳ ಕ್ವಾಂಟೀಕೃತ ಶಕ್ತಿ. ಸ್ಫಟಿಕದಲ್ಲಿರುವ ಸ್ಥಿತಿಸ್ಥಾಪಕ ಅಲೆಗಳು ಫೋನಾನ್‌ಗಳಿಂದ ರಚಿತವಾದವು. ಸ್ಫಟಿಕದಲ್ಲಿರುವ ಶಾಖ ಕಂಪನಗಳು ಶಾಖೋದ್ರಿಕ್ತ ಫೋನಾನ್‌ಗಳಷ್ಟೆ ಆಗಿರುತ್ತವೆ

ಫೋನೇಶನ್

(ಪ್ರಾ) ಶ್ವಾಸನಾಳ ದ್ವಾರದಲ್ಲಿ ಬರಿಯ ಧ್ವನಿ ಹೊರಡಿಸುವಿಕೆ

ಫೋನೊಗ್ರಾಫ್

(ತಂ) ನೋಡಿ: ಗ್ರಾಮೊಫೋನ್

ಫೋನೋಗ್ರಫಿ

(ತಂ) ಧ್ವನಿಯ ಮೇಲೆ ಆಧಾರಿತವಾದ ಶೀಘ್ರಲಿಪಿ ಪದ್ಧತಿ

ಫೋಲಿಯಮ್

(ಭೂವಿ) ಪದರಶಿಲೆಯಲ್ಲೊಂದು ತೆಳುಪದರ

ಫ್ಯಾಕ್ಯುಲಗಳು

(ಖ) ಸೌರ ದ್ಯುತಿಗೋಳದಲ್ಲಿಯ ವಿಶಾಲೋಜ್ಜ್ವಲ ಪ್ರದೇಶಗಳು. ಇವುಗಳಲ್ಲಿ ಉಷ್ಣತೆ ಸೂರ್ಯನ ಮೇಲ್ಮೈ ಸರಾಸರಿ ಉಷ್ಣತೆಗಿಂತ ಅಧಿಕ. ಸೌರ ಕಲೆಗಳ ಸನಿಹದಲ್ಲಿವೆ

ಫ್ಯಾಗೋಸೈಟ್

(ಪ್ರಾ) ರಕ್ತಗತವಾದ ಬ್ಯಾಕ್ಟೀರಿಯಾ ಗಳನ್ನು ನುಂಗಿ ಜೀರ್ಣ ಮಾಡಿ ರೋಗ ಸೋಕದಂತೆ ಮನುಷ್ಯನ ದೇಹಸ್ಥಿತಿಯನ್ನು ಕಾಪಾಡಬಲ್ಲ ಬಿಳಿಯ ರಕ್ತಕಣದಂಥ ಯಾವುದೇ ಜೀವಕೋಶ. ಭಕ್ಷಕ ಕೋಶ

ಫ್ಯಾಜಿಡೀನ

(ವೈ) ಶೀಘ್ರವಾಗಿ ಹರಡುವ ಹಾಗೂ ಹಾನಿಕರ ವ್ರಣ

ಫ್ಯಾದಮ್

(ಸಾ) ಆಳದ ಏಕಮಾನ. ವಿಶೇಷವಾಗಿ ಕಡಲು ಅಥವಾ ಇತರ ಯಾವುದೇ ಜಲರಾಶಿಯ ಆಳ ಅಳೆಯಲು ಬಳಕೆ. ೧ ಫ್ಯಾದಮ್=೧.೮೨೯ ಮೀ

ಫ್ಯಾರಡೇ

(ಭೌ) ವಿದ್ಯುದ್ವಿಭಜನೆಯ ಮೂಲಕ ೧ ಗ್ರಾಮ್ ಸಮಾನ ವಸ್ತುವನ್ನು ವಿಮುಕ್ತಗೊಳಿಸಲು ಅವಶ್ಯವಾದ ವಿದ್ಯುದಾವೇಶ. ಪ್ರಾಯೋಗಿಕವಾಗಿ ೯೬,೪೮೭.೦±೧.೬ ಕೂಲಂಬ್ ಗಳಿಗೆ ಸಮ. ಫ್ಯಾರಡೇ ಸ್ಥಿರಾಂಕ

ಫ್ಯಾರಡ್

(ಭೌ) ಸ್ಥಾಯೀ ವಿದ್ಯುತ್ ಧಾರಕತೆಯ ಏಕಮಾನ. ಪ್ರತೀಕ F. ೧ ಕೂಲಂಬ್ ವಿದ್ಯುಚ್ಛಕ್ತಿ ತನ್ನ ವಿಭವವನ್ನು

Search Dictionaries

Loading Results

Follow Us :   
  Download Bharatavani App
  Bharatavani Windows App