भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಫೈಟೋಮ

(ಸ) ಸಸ್ಯದ ಲೈಂಗಿಕ ಭಾಗಗಳನ್ನು ಬಿಟ್ಟು ಉಳಿದ ಭಾಗಗಳನ್ನು ರೂಪಿಸುವ ವಸ್ತು

ಫೈಟೋಮರ್

(ಸ) ಸಸ್ಯದ ರಚನಾತ್ಮಕ ಅಂಗಭಾಗ; ಹೊಸ ಸಸಿಯಾಗಬಲ್ಲ ಸಸ್ಯದ ಗೆಣ್ಣಿನ ಕಣ್ಣು

ಫೈಬ್ರಿನ್

(ವೈ) ರಕ್ತಗರಣೆ ಕಟ್ಟುವಾಗ ಫೈಬ್ರಿನೋಜೆನ್‌ನಿಂದ ಅವಕ್ಷೇಪಿಸುವ ಒಂದು ಅವಿಲೇಯ ಪ್ರೋಟೀನ್. ತಂತುಗಳ ಜಾಲರೂಪದಲ್ಲಿ ಮೈದಳೆಯುತ್ತದೆ

ಫೈಬ್ರಿನ್ ಜನಕ

(ವೈ) ರಕ್ತದ ಪ್ಲಾಸ್ಮಾದಲ್ಲಿ ವಿಲೀನ ವಾಗಿರುವ ಪ್ರೋಟೀನ್. ಇದನ್ನು ಸೂಕ್ಷ್ಮವಾಗಿ ಪಟೂಕರಿಸಿದಾಗ ಆವಿಲೇಯ ಫೈಬ್ರಿನ್ ತಂತುಗಳಾಗುತ್ತದೆ. ಇದು ಗಾಯವಾದ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟಲು ಸಹಕಾರಿ. ಫೈಬ್ರಿನೋಜೆನ್

ಫೈಲೇರಿಯ

(ವೈ) ಫಿಲರೋಯ್ಡಿಯಾ ಜಾತಿಯ ಪರೋಪಜೀವಿ ಕೀಟಗಳು. ಇವನ್ನು ಒಳಗೊಂಡ ಕೆಲವು ಬಗೆಯ ಸೊಳ್ಳೆಗಳು ಅಥವಾ ನೊಣಗಳು ಕಚ್ಚಿದಾಗ ಅವು ಕಶೇರುಕಗಳ ಶರೀರ ಕುಳಿಗಳ ಊತಕಗಳನ್ನು ಸೇರಿ ಅಲ್ಲಿ ವಾಸಿಸುತ್ತ ರಕ್ತ ಹೀರಿಕೊಂಡು ಬೆಳೆಯುತ್ತವೆ. ದುಗ್ಧರಸ ವಾಹಕ ನಳಿಗೆಗಳನ್ನು ಅಡ್ಡಗಟ್ಟಿ ಕಾಲುಗಳು, ತೋಳುಗಳು ವಿಪರೀತವಾಗಿ ಊದುವಂತೆ ಮಾಡಿ ಎಲಿಫೆಂಟಿಯಾಸಿಸ್ (ಆನೆಕಾಲು) ರೋಗಕ್ಕೆ ಕಾರಣವಾಗುತ್ತವೆ

ಫೈಲೋಜೆನಿ

(ಜೀ) ಯಾವುದೇ ಜೀವಿಯ ಅಥವಾ ಜೀವಿಜಾತಿಯ ವಿಕಾಸ, ಬೆಳವಣಿಗೆಯ ಚರಿತ್ರೆ. ವಂಶವೃತ್ತ

ಫೈಲ್

(ಸಾ) ಬೇಕಾದಾಗ ನೋಡುವುದಕ್ಕೆ ದೊರೆಯುವಂತೆ ಕಾಗದ ಪತ್ರಗಳನ್ನು ಒಂದು ಕ್ರಮದಲ್ಲಿ ಬಂಧಿಸಿ ಇಟ್ಟಿರುವ ಸಾಧನ

ಫೊನೆಟಿಕ್ಸ್

(ಸಾ) ೧. ಮಾತನಾಡಿದಾಗ ಉಂಟಾಗುವ ಶಬ್ದಗಳನ್ನು ಅಭ್ಯಸಿಸುವ ಸಾಮಾನ್ಯ ವಿಜ್ಞಾನ. ಧ್ವನಿ ಅಂಗವು ಶಬ್ದಗಳನ್ನು ಉಂಟುಮಾಡುವ ವಿಧಾನ, ಆ ಶಬ್ದಗಳ ನಡುವೆ ಪರಸ್ಪರ ಸಂಬಂಧ, ಅಕ್ಷರಗಳಿಗೂ ಅವುಗಳಿಗೂ ನಡುವಿನ ಸಂಬಂಧ, ಭಾಷಾ ಇತಿಹಾಸದಲ್ಲಿ ಆ ಶಬ್ದಗಳು ಒಳಗಾಗುವ ಬದಲಾವಣೆಗಳು ಇತ್ಯಾದಿಗಳನ್ನು ಇದು ಅಭ್ಯಸಿಸುತ್ತದೆ. ೨. ದತ್ತ ಭಾಷೆಯಲ್ಲಿ ಶಬ್ದಗಳ ವ್ಯವಸ್ಥೆ. ಉಚ್ಚಾರಣಾ ವಿಜ್ಞಾನ

ಫೊನೆಂಡೊಸ್ಕೋಪ್

(ಭೌ) ಮನುಷ್ಯ ದೇಹದ ಒಳಗಿನ ಹೃದಯದ ಬಡಿತ, ಶ್ವಾಸಕೋಶದಲ್ಲಿನ ಉಸಿರಾಟ ಇತ್ಯಾದಿ ಸಣ್ಣ ಧ್ವನಿಗಳನ್ನು ಕಿವಿಗೆ ಸ್ಪಷ್ಟವಾಗಿ ಕೇಳಿಸುವಂತೆ

ಫೊನೋಲೈಟ್

(ಭೂವಿ) ಮಧ್ಯಮ ರಚನೆಯ ಸಣ್ಣ ಕಣಗಳ ಅಗ್ನಿಶಿಲೆ. ಇದು ಮುಖ್ಯವಾಗಿ ನೆಫಿಲಿನ್, ಕಡಿಮೆ ಪ್ರಮಾಣದಲ್ಲಿ ಕ್ಷಾರೀಯ ಫೆಲ್ಡ್‌ಸ್ಪಾರ್ ಮತ್ತು ಸೋಡಿಯಮ್ ಭರಿತ ವರ್ಣ ಸಿಲಿಕೇಟ್‌ಗಳನ್ನೊಳಗೊಂಡಿರುತ್ತದೆ. ಸುತ್ತಿಗೆಯಲ್ಲಿ ಬಡಿದಾಗ ಘಂಟಾನಾದ ಉಂಟುಮಾಡುತ್ತದೆ

ಫೊರಾಮೆನ್

(ಪ್ರಾ) ಪ್ರಾಣಿಗಳಲ್ಲಿ, ಕೊಂಬು ಪದಾರ್ಥ, ಮೃದ್ವಸ್ಥಿ ಅಥವಾ ಅಸ್ಥಿಪಂಜರದಂಥ ರಚನೆಯಲ್ಲಿ ಕಾಣಬರುವ ಸಣ್ಣ ತೆರಪು. ಸಸ್ಯಗಳಲ್ಲಿ, ಅಂಡಾಶಯದ ಕವಚದಲ್ಲಿ ಕಾಣಬರುವ ಸಣ್ಣ ರಂಧ್ರಗಳು. ಇವುಗಳ ಮೂಲಕ ಪರಾಗಗಳು ಅಂಡಾಶಯ ಪ್ರವೇಶಿಸುತ್ತವೆ. ರಂಧ್ರ

ಫೋಟಾನ್

(ಭೌ) ವಿದ್ಯುತ್ಕಾಂತ ವಿಕಿರಣದ ಒಂದು ಕ್ವಾಂಟಮ್ (ಶಕಲ). ಕಣದಂತೆ ವರ್ತಿಸುತ್ತದೆ. ದ್ಯುತಿ ಕಣ. ಇದರಲ್ಲಿ ನಿಹಿತವಾಗಿರುವ ಶಕ್ತಿ E = hv ಇಲ್ಲಿ h = ಪ್ಲಾಂಕ್ ನಿಯತಾಂಕ. v= ವಿಕಿರಣದ ಆವೃತ್ತಿ. ಫೋಟಾನಿನ ನಿಶ್ಚಲ ರಾಶಿ = 0. ಆದರೆ ಇದಕ್ಕೆ ಸಂವೇಗವಿದೆ = hv/c. ಇಲ್ಲಿ c ಬೆಳಕಿನ ವೇಗ. ಸೂರ್ಯನಿಂದ ನಮಗೆ ಬೆಳಕು ಬರುತ್ತಿದೆ ಎಂದರೆ ಫೋಟಾನ್‌ನ ಹೊನಲು ಹರಿಯುತ್ತಿದೆ ಎಂದರ್ಥ. ಫೋಟಾನ್‌ಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಫೋಟೋ ಎಲೆಕ್ಟ್ರಾನ್ ಪರಿಣಾಮ, ಕಾಂಪ್ಟನ್ ಪರಿಣಾಮ, ಪರಮಾಣು ರೇಖಾರೋಹಿತ ಮತ್ತಿತರ ವಿದ್ಯುದಯಸ್ಕಾಂತ ವಿಕಿರಣದ ಗುಣಗಳನ್ನು ವಿವರಿಸಲು ‘ಕಣ’ ರೂಪದ ಈ ಬೆಳಕು (ಫೋಟಾನ್) ಅವಶ್ಯ

ಫೋಟಿಸಮ್

(ಸಾ) ಬೆಳಕನ್ನು ಕಂಡ ಅನುಭವ ಉಂಟಾಗುವ ಭ್ರಮೆ. ದ್ಯುತಿಭ್ರಮೆ. ಕಾಂತಿಭ್ರಾಂತಿ

ಫೋಟೊಕೈನೆಸಿಸ್

(ಪ್ರಾ) ಬೆಳಕಿನಿಂದ ಪ್ರೇರಿತವಾದ ಚಲನೆ ಅಥವಾ ಚಟುವಟಿಕೆ. ಪ್ರಕಾಶಾಭಿಮುಖ ಚಲನೆ

ಫೋಟೊಗ್ರಫಿ

(ತಂ) ವಿಶೇಷವಾಗಿ ಸಂಸ್ಕರಿಸಿದ ಫಿಲ್ಮ್ ಅಥವಾ ಕಾಗದದ ಮೇಲೆ ವಸ್ತುವೊಂದರ ಬಿಂಬವನ್ನು ಶಾಶ್ವತವಾಗಿ ದಾಖಲಿಸುವ ಕ್ರಿಯೆ. ಛಾಯಾಚಿತ್ರಣ

ಫೋಟೊಗ್ರಮ್ಮೆಟ್ರಿ

(ತಂ) ದೂರ ಅಥವಾ ಆಯಾಮಗಳನ್ನು ನಿಖರವಾಗಿ ಅಳೆಯಲು ಛಾಯಾಚಿತ್ರ ದಾಖಲೆ ಗಳನ್ನು ಬಳಸುವ ವಿಧಾನ. ಉದಾ: ಸರ್ವೇಕ್ಷಣೆಗಾಗಿ ವಿಮಾನ ಛಾಯಾಗ್ರಹಣ. ದ್ಯುತಿಚಿತ್ರಮಾಪನ

ಫೋಟೊಗ್ರವ್ಯೂರ್

(ತಂ) ದ್ಯುತಿ ಕೆತ್ತನೆಚಿತ್ರ. ಛಾಯಾಚಿತ್ರದ ವಿಷಮ ಪ್ರತಿಯಿಂದ ಚಿತ್ರವನ್ನು ಲೋಹ ಫಲಕದ ಮೇಲೆ ಮೂಡಿಸಿ ಅದನ್ನು ಒಳಕೆತ್ತನೆ ಮಾಡಿ ತಯಾರಿಸಿದ ಮುದ್ರಣ ಚಿತ್ರ, ಅಂತಹ ಚಿತ್ರ ಮುದ್ರಿಸುವ ವಿಧಾನ

ಫೋಟೊಜನಿನ್

(ಪ್ರಾ) ಕೆಲವು ಪ್ರಾಣಿಗಳ ದೀಪ್ತ ಅಂಗಗಳಲ್ಲಿ ಇರುವ ಪ್ರೋಟೀನ್‌ನಂಥ ವಸ್ತು

ಫೋಟೊಜೆನಿಕ್

(ಸಾ) ೧. ದ್ಯುತಿ ಉತ್ಸರ್ಜಕ, ಕಾಂತಿ ಜನಕ. ೨. ಛಾಯಾಚಿತ್ರದಲ್ಲಿ ಬಿಂಬ ಚೆನ್ನಾಗಿ ಬರುವ ರೂಪವುಳ್ಳ

ಫೋಟೊನ್ಯಾಸ್ಟಿ

(ಸ) ಬೆಳಕಿನ ದಿಶೆಗೆ ಸಸ್ಯಗಳು ತೋರುವ ಚಲನೆ. ಪ್ರಕಾಶಾನುಕುಂಚನ. ಉದಾ: ಸೂರ್ಯ ಕಾಂತಿ ಹೂ

Search Dictionaries

Loading Results

Follow Us :   
  Download Bharatavani App
  Bharatavani Windows App