भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಫಾಸ್ಫೀನ್

(ವೈ) ೧. ಕಣ್ಣುಗುಡ್ಡೆಯ ಮೇಲೆ ಬಿದ್ದ ಒತ್ತಡದಿಂದಾಗಿ ದೃಷ್ಟಿಕ್ಷೇತ್ರದಲ್ಲಿ ಕಂಡುಬರುವ ದೀಪ್ತತಾವಲಯ. ೨. ಬೆಳಕಿನ ಕಿರಣಗಳನ್ನುಳಿದು ಬೇರೆ ಯಾವುದೇ ಕಾರಣದಿಂದ ಕಣ್ಣಿನ ಅಕ್ಷಿಪಟ ಉದ್ದೀಪನಗೊಳ್ಳುವುದರ ಪರಿಣಾಮವಾಗಿ ಬೆಳಕಿನ ಬಳೆಗಳು, ಉಂಗುರಗಳು ಕಾಣುತ್ತವೆ

ಫಾಸ್ಫೇಟ್‌ಗಳು

(ರ) ಫಾಸ್ಫಾರಿಕ್ ಆಮ್ಲದ ಲವಣಗಳು. ಆರ್ಥೊಫಾಸ್ಫೇಟ್‌ಗಳ ಮೂರು ಶ್ರೇಣಿಗಳಿವೆ: MH2PO4, M2HPO4 ಮತ್ತು M3PO4. ಮೊದಲನೆಯವು ಆಮ್ಲವನ್ನು ಕೊಡುತ್ತವೆ. ಎರಡನೆಯವು ಬಲುಮಟ್ಟಿಗೆ ತಟಸ್ಥ. ಮೂರನೆಯವು ಕ್ಷಾರೀಯ-ಜಲೀಯ ದ್ರಾವಣಗಳು. ಮೆಟಫಾಸ್ಫೇಟ್‌ಗಳು (MPO3) ಮತ್ತು ಪೈರೊಫಾಸ್ಫೇಟ್‌ಗಳು (M4P2O7) ಕೂಡ ತಿಳಿದಿವೆ. ಫಾಸ್ಫೇಟ್ ಗಳನ್ನು ನೈಟ್ರಿಕ್ ಆಮ್ಲದಲ್ಲಿ ಅಮೋನಿಯಮ್ ಮಾಲಿಬ್ಡೇಟ್ ಜೊತೆ ಕಾಸಿದಾಗ ಹಳದಿ ಅವಕ್ಷೇಪ (ಒತ್ತರ) ಕೊಡುತ್ತವೆ. ರಸಗೊಬ್ಬರ ತಯಾರಿಕೆಯಲ್ಲಿ ಬಳಕೆ

ಫಾಸ್ಫೈಟ್

(ರ) ಫಾಸ್ಫರಸ್ ಆಮ್ಲದ ಲವಣ. ರ‍್ಯಾಡಿಕಲ್ PO33-ನ್ನು ಒಳಗೊಂಡಿರುತ್ತದೆ. ಉದಾ: ಸೋಡಿಯಮ್ ಫಾಸ್ಫೈಟ್ Na3PO3

ಫಾಸ್ಫೈಡ್

(ರ) ರಂಜಕವನ್ನು ಒಳಗೊಂಡ ಲೋಹಗಳ ಯುಗ್ಮ ಸಂಯುಕ್ತಗಳು. ಉದಾ: ಕ್ಯಾಲ್ಸಿಯಮ್ ಫಾಸ್ಫೈಡ್ Ca3P2

ಫಾಸ್ಫೈನ್

(ರ) ಫಾಸ್ಫರಸ್ ಟ್ರೈ ಹೈಡ್ರೈಡ್. PH3. ನಿರ್ವರ್ಣ, ದುರ್ವಾಸನೆ ಅನಿಲ. ಸಾಮಾನ್ಯವಾಗಿ ಗಾಳಿಯಲ್ಲಿ ತಂತಾನೇ ಜ್ವಲಿಸಿ ಫಾಸ್ಫರಸ್ ಪೆಂಟಾಕ್ಸೈಡ್ ರೂಪಿಸುತ್ತದೆ, ಇದು ಅಪಕರ್ಷಣಕಾರಿ. ಕುಬಿಂ -೮೫0ಸೆ ದ್ರಬಿಂ -೧೩೩0ಸೆ ಲೋಹಯುಕ್ತ ಲವಣಗಳ ದ್ರಾವಣದಲ್ಲಿ ಫಾಸ್ಫೈಡ್‌ಗಳನ್ನು ಅವಕ್ಷೇಪಿಸುತ್ತದೆ. ಸಮುದ್ರದಲ್ಲಿ ಅಪಘಾತಕ್ಕೆ ಈಡಾಗಿ ತೊಂದರೆಯಲ್ಲಿರುವ ಹಡಗು ಎಲ್ಲಿದೆ ಎಂಬುದನ್ನು ರಕ್ಷಣಾ ಪಡೆಗೆ ಗೋಚರಿಸುವಂತೆ ಮಾಡುವ ‘ಹೋಮ್ ಸಿಗ್ನಲ್’ಗಳಲ್ಲಿ ಇದರ ಪಾತ್ರವಿದೆ

ಫಿಂಚ್

(ಪ್ರಾ) ಏವೀಸ್ ವರ್ಗ, ಪ್ಯಾಸೆರಿಫಾರ್ಮೀಸ್ ಗಣ ಹಾಗೂ ಫ್ರಿಂಜಿಲಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಹಾಡು ಹಕ್ಕಿಗಳ ಸಾಮಾನ್ಯ ನಾಮ. ಗುಬ್ಬಚ್ಚಿ, ಗೀಜಗ ಇವುಗಳ ಹತ್ತಿರ ಸಂಬಂಧಿ. ಇವುಗಳಲ್ಲಿ ೩೧೫ ಪ್ರಭೇದಗಳಿವೆ. ಮರ ಗಿಡಗಳ ರೆಂಬೆಗಳ ಮೇಲೆ ಕುಳಿತು ಕಿವಿಗೆ ಇಂಪಾಗಿ ಸ್ವನ ಹೊಮ್ಮಿಸುವುವು

ಫಿನೆಸ್ಟ್ರ ಒವಾಲಿಸ್

(ಪ್ರಾ) ಮಧ್ಯಕಿವಿ ವಿಕಾಸ ಗೊಂಡ ಕಶೇರುಕಗಳಲ್ಲಿ ಕರ್ಣಶಂಖದ ಎರಡು ತೆರೆ ಭಾಗಗಳ ಪೈಕಿ ಮೇಲಿನದು. ಅಂಡಾಕಾರ ಗವಾಕ್ಷ

ಫಿನೆಸ್ಟ್ರ ರೊಟುಂಡ

(ಪ್ರಾ) ಮಧ್ಯಕಿವಿ ವಿಕಾಸಗೊಂಡ ಕಶೇರುಕಗಳಲ್ಲಿ ಕರ್ಣಶಂಖದ ಎರಡು ತೆರೆ ಭಾಗಗಳ ಪೈಕಿ ಕೆಳಗಿನದು. ವರ್ತುಳ ಗವಾಕ್ಷ

ಫಿಬ್ಯೂಲ

(ಪ್ರಾ) ಕಣಕಾಲಿನಲ್ಲಿ ಹೊರಗಡೆಯ ಎಲುಬು. ಚತುಷ್ಪಾದಿಗಳಲ್ಲಿ ಹಿಂಗಾಲಿನ ಮಧ್ಯಭಾಗದ ಎರಡು ಎಲುಬುಗಳ ಪೈಕಿ ಹಿಂಬದಿಯದು. ಬಹಿರ್ಜಂಘಿಕ

ಫಿರಂಗಿ

(ತಂ) ವಾಹನದ ಮೇಲೆ ಹೂಡಿರುವ ಭಾರವಾದ ಹಿರಿ ತುಪಾಕಿ. ತೋಪು

ಫಿರಂಗಿ ದಳ

(ತಂ) ಗುಂಡು ಮೊದಲಾದುವನ್ನು ಬಿರುಸಾಗಿ ಎಸೆಯಲು ಉಪಯೋಗಿಸುವ ಯಂತ್ರ ಸಾಧನದಿಂದ ಸಜ್ಜು ಗೊಂಡಿರುವ ದಳ. ಗೋಲಂದಾಜು

ಫಿರ್ತ್

(ಭೂವಿ) ಸಮುದ್ರದ ಉದ್ದವಾದ ಕಿರಿದಾದ ತೋಳು. ನದಿ ಸಮುದ್ರ ಸೇರುವ ಸ್ಥಳ. ಸಾಮಾನ್ಯವಾಗಿ ಅಳಿವೆಯ ಕೆಳಭಾಗ. ಕಡಲ ತೋಳು

ಫಿಲ್ಮ್

(ಭೌ) ಛಾಯಾಚಿತ್ರ ಕಾಗದದ ಮೇಲೆ ಅಥವಾ ಹಲಗೆಯ ಮೇಲೆ ಲೇಪಿಸಿದ ಕಲೋಡಿಯನ್, ಜೆಲಟಿನ್ ಮೊದಲಾದ ಪದಾರ್ಥಗಳ ಪೊರೆ. ಪಟಲ. ಛಾಯಾಚಿತ್ರ ತೆಗೆಯಲು ಉಪಯೋಗಿಸುವ ಸೆಲ್ಯುಲಾಯ್ಡಿನ ಸುರುಳಿ

ಫಿಲ್ಲೈಟ್

(ಭೂವಿ) ರೂಪಾಂತರಿತ ಜೇಡು ಶಿಲೆ. ಅಭ್ರಕ, ಕ್ಲೋರೈಟ್ ಮತ್ತು ಟಾಲ್ಕ್ ಇದರಲ್ಲಿಯ ಪ್ರಧಾನ ಖನಿಜಗಳು

ಫಿಲ್ಲೊಪೋಡಿಯಮ್

(ಪ್ರಾ) ಕೆಲವು ವಲ್ಕವಂತ ಪ್ರಾಣಿಗಳಲ್ಲಿ ತೆಳು ಎಲೆಯಂತಿರುವ ಈಜುಪಾದ

ಫಿಷರಿ

(ಸಾ) ಮೀನು ಮತ್ತಿತರ ಜಲಚರ ಜೀವಿಗಳನ್ನು ವಿಶೇಷವಾಗಿ ಕಡಲ ನೀರಿನಲ್ಲಿ ಅಧಿಕ ಪ್ರಮಾಣಗಳಲ್ಲಿ ಹಿಡಿಯುವ, ಸಂಗ್ರಹಿಸುವ ಸ್ಥಳ

ಫಿಷ್ ಪ್ಲೇಟು

(ಎಂ) ರೈಲು ಮಾರ್ಗದ ಹಳಿಗಳ ತುದಿಗಳನ್ನು ಸಾಲಾಗಿ ಸೇರಿಸಿ ಬಿಗಿಸುವ ಪರಿಕರ

ಫಿಸ್ತೂಲ

(ವೈ) ೧. ಎರಡು ಪೊಳ್ಳು ಒಳಾಂಗಗಳನ್ನು ಸಂಬಂಧಿಸುವ ಎಪಿತೀಲಿಯಮ್ ಒಳಾವರಣವುಳ್ಳ ನಾಳ. ಕಿರಿದಾದ ಬಾಯುಳ್ಳ, ಕೊಳವೆಯಂತೆ ಉದ್ದವಾದ ವ್ರಣ. ೨. ಭಗಂದರ ಹೊರದಾರಿ. ಕೀವು ಮೊದಲಾದವು ದೇಹದಿಂದ ಹೊರಕ್ಕೆ ಹೋಗಲು ಶಸ್ತ್ರಕ್ರಿಯೆಯಿಂದ ಮಾಡಿದ ದಾರಿ

ಫೀಡ್‌ಬ್ಯಾಕ್

(ಕಂ) ವ್ಯವಸ್ಥೆಯೊಂದರ ಮಾಹಿತಿಯಿಂದ ಮರುಮಾಹಿತಿ ಪಡೆಯುವುದು. ಹಿನ್ನುಣಿಸು. ಪುನರ್ನಿವಿಷ್ಟ

ಫೀನಾಲ್

(ರ) ಕಾರ್ಬಾಲಿಕ್ ಆಮ್ಲ C6H5OH. ನಿರ್ವರ್ಣ ಆರ್ದ್ರಾಕರ್ಷಕ ಸ್ಫಟಿಕಗಳು. ದ್ರಬಿಂ ೪೩0ಸೆ ಕುಬಿಂ ೧೮೩0ಸೆ

Search Dictionaries

Loading Results

Follow Us :   
  Download Bharatavani App
  Bharatavani Windows App