भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಫಲವೃಕ್ಷ ವಿಜ್ಞಾನ

(ಸ) ಹಣ್ಣು ಕೊಡುವ ಮರಗಳ ಹಾಗೂ ಹಣ್ಣಿನ ವ್ಯವಸಾಯ ಕುರಿತ ಶಾಸ್ತ್ರ

ಫಲಶೀಲ ಪದಾರ್ಥ

(ಭೌ) ಬೈಜಿಕ ಕ್ರಿಯಾಕಾರಿ ಯಲ್ಲಿಯ ಈ ಸಮಸ್ಥಾನಿಯನ್ನು ನ್ಯೂಟ್ರಾನ್ ಬಂಧನದ ಮೂಲಕ ವಿದಳನಶೀಲ ಸಮಸ್ಥಾನಿಯಾಗಿ ಮಾರ್ಪಡಿಸಬಹುದು. ಉದಾ: ಸಮಸ್ಥಾನಿ ಯುರೇನಿಯಮ್-೨೩೮ನ್ನು ವಿದಳನಶೀಲ ಪದಾರ್ಥ ಪ್ಲೂಟೋನಿಯಮ್-೨೩೯ ಆಗಿ ಪರಿವರ್ತಿಸಬಹುದು

ಫಲಿತ

(ಭೌ) ಎರಡು ಅಥವಾ ಹೆಚ್ಚು ಬಲಗಳು ಅಥವಾ ವೇಗಗಳು ಜೊತೆಗೂಡಿ ವರ್ತಿಸುತ್ತ ಉಂಟುಮಾಡುವ ಪರಿಣಾಮವನ್ನು ತೋರುವ ಒಂದು ಬಲ ಅಥವಾ ವೇಗ

ಫಲಿತಾಂಶ

(ಗ) ಗಣಿತ ಪರಿಕರ್ಮಗಳ ಅಂತಿಮ ಹಂತ

ಫಲ್ಯಾಂಜರ್

(ಪ್ರಾ) ಸ್ತನಿ ವರ್ಗ, ಮಾರ್ಸ್ಯುಪಿಯೇಲಿಯ ಗಣ, ಫಲ್ಯಾಂಜರಿಡೀ ಕುಟುಂಬಕ್ಕೆ ಸೇರಿದ, ವೃಕ್ಷವಾಸಿಯಾದ, ಹೊಟ್ಟೆ ಚೀಲವುಳ್ಳ, ಆಸ್ಟ್ರೇಲಿಯ ಹಾಗೂ ಟಾಸ್ಮೇನಿಯಗಳಲ್ಲಿ ಕಾಣಬರುವ ಹಲವು ಬಗೆಯ ಪ್ರಾಣಿ ಜಾತಿ. ನೋಡಲು ಇಲಿ ಹಾಗೂ ಅಳಿಲಿನಂತೆ ಕಾಣುತ್ತವೆ. ೪-೫ ತಿಂಗಳ ತನಕ ಮರಿಗಳನ್ನು ಸಂಚಿಯಲ್ಲಿ ಇಟ್ಟುಕೊಂಡು ಸಲಹುತ್ತವೆ. ಹಾರು ಅಳಿಲು

ಫಾಕೊಮಲೇಸಿಯ

(ವೈ) ಕಣ್ಣಿನ ಮಸೂರವು ರೋಗ ಸೂಚಕವಾಗಿ ಮೃದುವಾಗುವುದು

ಫಾಟ್

(ಭೌ) ಸಿಜಿಎಸ್ ವ್ಯವಸ್ಥೆಯಲ್ಲಿ ದೀಪನದ (ಇಲ್ಯೂಮಿನೇಶನ್) ಏಕಮಾನ. ೧ ಫಾಟ್=೧ ಲ್ಯೂಮನ್ ಸೆಮೀ-೨

ಫಾನ್

(ತಂ) ಧ್ವನಿಯ ತೀವ್ರತೆ ಅಳೆಯಲು ಬಳಸುವ ಘೋಷದ (ಲೌಡ್‌ನೆಸ್) ಏಕಮಾನ

ಫಾರ್ಮಾಲಿನ್

(ರ) ನೀರಿನಲ್ಲಿ ಶೇ. ೪೦ರಷ್ಟು ಫಾರ್ಮಾಲ್ಡಿಹೈಡ್ ವಿಲೀನಿಸಿರುವ ದ್ರಾವಣ

ಫಾರ್ಮಾಲ್ಡಿಹೈಡ್

(ರ) ಘಾಟು ವಾಸನೆಯ, ಸುಲಭವಾಗಿ ನೀರಿನಲ್ಲಿ ವಿಲೀನಿಸುವ, ನೀರಿನಲ್ಲಿ ವಿಲೀನಿಸಿ ಬಳಸುವ ಅನಿಲ. HCHO, ಕುಬಿಂ -೨೧0ಸೆ ಇದು ಪ್ಯಾರಾ ಫಾರ್ಮಾಲ್ಡಿಹೈಡ್ ಅಥವಾ ಮೆಟಾಫಾರ್ಮಾಲ್ಸಿಹೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಮೆಥನಾಲ್‌ನ ಆಕ್ಸಿಡೀಕರಣದಿಂದ ತಯಾರಾಗುತ್ತದೆ. ಕ್ರಿಮಿನಾಶಕ, ಪ್ಲಾಸ್ಟಿಕ್ಸ್ ತಯಾರಿಕೆಯಲ್ಲಿ ಮುಖ್ಯ ವಸ್ತು. ಮೃತ ದೇಹ ಕೆಡದಂತೆ ಇರಿಸಲು ಬಳಕೆ

ಫಾರ್ಮಿಕೇಶನ್

(ವೈ) ಮೈಮೇಲೆ ಇರುವೆ ಹರಿದಾಡಿದಂತೆ ಭಾಸವಾಗುವ ಭ್ರಮೆ

ಫಾರ್ಮಿಕ್ ಆಮ್ಲ

(ರ) HCOOH. ನಿರ್ವರ್ಣ ದ್ರವ, ಘಾಟು ವಾಸನೆ, ನಾಶಕಾರಿ. ದ್ರಬಿಂ ೯0ಸೆ ಕುಬಿಂ ೧೦೧0ಸೆ.

ಫಾಲಿಕಲ್

(ಸ) ಶುಷ್ಕ, ಏಕಕೋಶಕ ಫಲ. (ಪ್ರಾ) ಕೂದಲು ಬೆಳೆದು ಬರುವ ರಂಧ್ರದಂಥ ಯಾವುದೇ ಸಣ್ಣ, ಸರಳ ಗ್ರಂಥಿ ಅಥವಾ ಕಿರುಮೂತಿಯ ಕುಹರ

ಫಾಸಿಲ್

(ಭೂವಿ) ಭೂಪದರದಲ್ಲಿ ಸಿಕ್ಕಿ ರಾಸಾಯನಿಕ ಅಥವಾ ಇತರ ಮಾರ್ಪಾಡುಗಳಾದ ಚರಿತ್ರಪೂರ್ವ ಯುಗದ ಸಸ್ಯ ಅಥವಾ ಪ್ರಾಣಿಯ ಅವಶೇಷವೆಂದು ಗುರುತಿಸಬಹುದಾದ ಪದಾರ್ಥ. ಸಾಮಾನ್ಯವಾಗಿ ಮೂಳೆ, ಹಲ್ಲು, ಚಿಪ್ಪು, ಮರ ಇವು ಫಾಸಿಲ್‌ಗಳಾಗುತ್ತವೆ. ಕೆಲವು ಪ್ರಸಂಗಗಳಲ್ಲಿ ಇಡೀ ಜೀವಿಯೇ ಫಾಸಿಲ್‌ಗಳಾಗಬಹುದು. ಉದಾ: ಆರ್ಕ್ಟಿಕ್‌ನ ಮಂಜಿನಲ್ಲಿ ಕಂಡು ಬಂದಿರುವ ರೋಮಯುಕ್ತ ಬೃಹದ್ಗಜ (ಮ್ಯಾಮತ್) ಹಾಗೂ ರೋಮಯುಕ್ತ ಖಡ್ಗಮೃಗ. ಫಾಸಿಲ್‌ಗಳು ಮೂರು ರೀತಿಗಳಲ್ಲಿ ಶಿಲೀಕರಣ (ನೋಡಿ)ಗೊಳ್ಳುತ್ತವೆ: ಅಂತಃಖನಿಜೀಕರಣ, ಖನಿಜೀಕರಣ ಹಾಗೂ ಕಾರ್ಬನೀಕರಣ. ಜೀವಿಯು ಮಣ್ಣಿನಲ್ಲಿ ಹೂತುಹೋದ ನಂತರ ಆಕ್ಸಿಜನ್ ಇಲ್ಲದಿರುವಾಗ ಮುಕ್ತ ಕಾರ್ಬನ್ ಮಾತ್ರ ಉಳಿದು ಅದು ಮೂಲ ಜೀವಿಯ ಬಂಡೆ-ರೂಪದ ಮೇಲೆ ಕಪ್ಪು ಕಾರ್ಬನ್ ಪದರ ರೂಪಿಸುತ್ತದೆ. ಫಾಸಿಲ್‌ಗಳು ರೂಪು ಗೊಳ್ಳುವುದಕ್ಕೆ ಶೀಘ್ರ ಅವಸಾದನ ಕ್ಷೇತ್ರಗಳಲ್ಲಿ ವಿಶೇಷವಾಗಿ ತರಂಗ ಕ್ಷೋಭೆ ವಲಯದ ಕೆಳಗಿರುವ ಕಡಲಡಿ ಆದರ್ಶಯುತ ಪರಿಸ್ಥಿತಿ ಕಂಡುಬರುತ್ತದೆ. ಪಳೆಯುಳಿಕೆ. ನೋಡಿ: ಶಿಲೀಕರಣ

ಫಾಸ್ಜೀನ್

(ರ) ಅಸಹ್ಯ ಮತ್ತು ಉಸಿರು ಕಟ್ಟುವ ವಾಸನೆಯಿಂದ ಕೂಡಿರುವ ನಿರ್ವರ್ಣ, ಭಾರ, ವಿಷಾನಿಲ. ಕುಬಿಂ ೮0 ಸೆ. ಇದ್ದಲು ಕ್ರಿಯಾಕಾರಕದ ಮೇಲೆ ಇಂಗಾಲದ ಮಾನಾಕ್ಸೈಡ್ ಮತ್ತು ಕ್ಲೋರೀನನ್ನು ಹಾಯಿಸುವುದರ ಮೂಲಕ ತಯಾರಿಸಲಾಗುತ್ತದೆ. ಬಣ್ಣದ ಕೈಗಾರಿಕೆಯಲ್ಲಿ ಮಧ್ಯವರ್ತಿಯಾಗಿ ಬಳಕೆ. ರಾಸಾಯನಿಕ ಸೂತ್ರ COCl2. ಮೊದಲನೆಯ ಮಹಾಯುದ್ಧದಲ್ಲಿ ಈ ವಿಷಾನಿಲವನ್ನು ಪ್ರಯೋಗಿಸಲಾಗಿತ್ತು

ಫಾಸ್ಫಜನ್

(ರ) ಪ್ರಾಣಿ ಊತಕಗಳಲ್ಲಿ ಕಂಡುಬರುವ ರಾಸಾಯನಿಕ ಸಂಯುಕ್ತ. ಉನ್ನತ ಶಕ್ತಿಯ ಫಾಸ್ಫೇಟ್ ಬಂಧಕಗಳ ರೂಪದಲ್ಲಿ ರಾಸಾಯನಿಕ ಶಕ್ತಿಯ ಮೂಲವಾಗಿ ವರ್ತಿಸುತ್ತದೆ

ಫಾಸ್ಫರಸ್

(ರ) ರಂಜಕ. ಆವರ್ತಕೋಷ್ಟಕದ ಐದನೆಯ ಗುಂಪಿನಲ್ಲಿರುವ ಅಲೋಹೀಯ ಧಾತು. ಪ್ರತೀಕ p. ಪಸಂ ೧೫, ಸಾಪರಾ ೩೦.೯೭೩೮. ವೇಲೆನ್ಸಿಗಳು ೩, ೫. ಬಿಳಿ ರಂಜಕ ಮೇಣದಂತಿರುವುದು – ವಿಷ ಪದಾರ್ಥ. ತಂತಾನೇ ದಹನಶೀಲ. ದ್ರಬಿಂ ೪೪0 ಸೆ ಕುಬಿಂ ೨೮೨0 ಸೆ ಸಾಸಾಂ ೧.೮-೨.೩. ಕೆಂಪು ರಂಜಕ ವಿಷ ಪದಾರ್ಥವಲ್ಲ. ೩೦೦0ಸೆಗಿಂತ ಉಚ್ಚ ಉಷ್ಣತೆಗಳಿಗೆ ಗಾಳಿಯಲ್ಲಿ ಕಾಸಿದಾಗ ಮಾತ್ರ ಜ್ವಲಿಸುತ್ತದೆ. ಖನಿಜಗಳಲ್ಲಿ ಫಾಸ್ಫೇಟ್‌ಗಳಾಗಿ ಫಾಸ್ಫರಸ್ ನಿಸರ್ಗದಲ್ಲಿ ವ್ಯಾಪಕವಾಗಿಯೂ ಸಮೃದ್ಧವಾಗಿಯೂ ಲಭಿಸುತ್ತದೆ. ಊತಕಗಳ (ವಿಶೇಷವಾಗಿ ಮೂಳೆ ಹಾಗೂ ಹಲ್ಲುಗಳ) ಮತ್ತು ಕೋಶಗಳ ಮುಖ್ಯ ಘಟಕಗಳಾಗಿ ಸಮಸ್ತ ಜೀವಿಗಳಲ್ಲಿಯೂ ಫಾಸ್ಫರಸ್ ಇರುವುದು. ಫಾಸ್ಫಾರಿಕ್ ಆಮ್ಲ ಮತ್ತು ಫಾಸ್ಫೇಟ್ ರಸಗೊಬ್ಬರಗಳ ತಯಾರಿಕೆಯಲ್ಲಿ ಉಪಯೋಗ. ಈ ಧಾತುವನ್ನು ಬ್ರಾಂಟ್‌ರವರು ೧೬೬೯ರಲ್ಲಿ ಕಂಡುಹಿಡಿದರು

ಫಾಸ್ಫರಸ್ ಆಮ್ಲ

(ರ) ಫಾಸ್ಫರಸ್ ಟ್ರೈಆಕ್ಸೈಡ್‌ನ ಮೇಲೆ ತಣ್ಣೀರಿನ ಕ್ರಿಯೆಯಿಂದಾಗಿ ಲಭ್ಯ. ಕಾಸಿದಾಗ ವಿಭಜನೆ ಗೊಳ್ಳುತ್ತದೆ, ಫಾಸ್ಫೇಟ್‌ಗಳನ್ನು ರೂಪಿಸುತ್ತದೆ. ದ್ರಬಿಂ ೭೩.೬0ಸೆ. ಸೂತ್ರ H3PO3. ಅಪಕರ್ಷಣಕಾರಿ

ಫಾಸ್ಫರ್

(ರ) ದೀಪ್ತಿ ಪ್ರಕಟಿಸುವ ವಸ್ತುಗಳ ಸಾಮಾನ್ಯ ನಾಮ. ಅಯಾನೀಕಾರಕ ವಿಕಿರಣದಿಂದ ಶಕ್ತಿ ಸಂಚಯಿಸಿ ತದ ನಂತರ ಅದನ್ನು ಬೆಳಕಿನ ರೂಪದಲ್ಲಿ ಬಿಡುಗಡೆ ಮಾಡಬಲ್ಲ ವಸ್ತು

ಫಾಸ್ಫಾರಿಕ್ ಆಮ್ಲ

(ರ) ಆರ್ಥೊಫಾಸ್ಫಾರಿಕ್ ಆಮ್ಲ (H3PO4), ಮೆಟಫಾಸ್ಫಾರಿಕ್ ಆಮ್ಲ (HPO3) ಮತ್ತು ಪೈರೊಫಾಸ್ಫಾರಿಕ್ ಆಮ್ಲ (H4P2O7) ಎಂಬ ಮೂರು ಬಗೆಗಳಿವೆ. ಮೊದಲನೆಯದು ರಸಗೊಬ್ಬರ ಮತ್ತು ಪೇಯಗಳ ತಯಾರಿಕೆಯಲ್ಲಿ ಬಳಕೆ ಆಗುತ್ತದೆ. ಎರಡನೆಯದು ವರ್ಣ ರಹಿತ, ಆರ್ದ್ರಕಾರಕ ಮತ್ತು ಘನ. ಮೂರನೆಯದು ಸ್ಫಟಿಕೀಯ ವಿಲೇಯ ವಸ್ತು. ರಂಜಕಾಮ್ಲ

Search Dictionaries

Loading Results

Follow Us :   
  Download Bharatavani App
  Bharatavani Windows App