भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪರಿಬಂಧಿತ ಸ್ಥಿತಿ

(ಭೌ) ವಿವಿಕ್ತ ಶಕ್ತಿ ಮತ್ತು ಸ್ಥಳೀಕೃತ ತರಂಗಫಲನವಿರುವ ಒಂದು ವ್ಯವಸ್ಥೆಯ ಕ್ವಾಂಟಮ್ ಬಲ ವೈಜ್ಞಾನಿಕ ಸ್ಥಿತಿ. ಉದಾ: ಪರಮಾಣುವಿನಲ್ಲಿಯ ಎಲೆಕ್ಟ್ರಾನ್. ಇಲ್ಲಿ ಪರಿಬಂಧಿತ ಸ್ಥಿತಿಗಳ ನಡುವಿನ ಸಂಕ್ರಮಣಗಳು ಪರಮಾಣುವಿಕ ರೋಹಿತ ರೇಖೆಗಳನ್ನು ಮೂಡಿಸುತ್ತವೆ

ಪರಿಭ್ರಮಣ ದೀರ್ಘವೃತ್ತಾಭ

(ಗ) ದೀರ್ಘವೃತ್ತವನ್ನು ಅದರ ದೀರ್ಘಾಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ಘನಾಕೃತಿ ದೀರ್ಘಾಕ್ಷ ಗೋಳಾಭ; ಹ್ರಸ್ವಾಕ್ಷದ ಸುತ್ತ ಆವರ್ತಿಸಿದಾಗ ದೊರೆಯುವ ಘನಾಕೃತಿ ಹ್ರಸ್ವಾಕ್ಷ ಗೋಳಾಭ

ಪರಿಭ್ರಮಣಮಾಪಕ

(ಭೌ) ಆವರ್ತನಾ ವೇಗವನ್ನು ಅಳೆಯುವ ಸಲಕರಣೆ. ಕೋನೀಯ ವೇಗವನ್ನು ವಿಶೇಷವಾಗಿ ಆವರ್ತನ ದಂಡವೊಂದು ಏಕಮಾನ ಕಾಲದಲ್ಲಿ ಪೂರೈಸುವ ಆವರ್ತನಗಳ ಸಂಖ್ಯೆಯನ್ನು ಅಳೆಯುವ ಸಲಕರಣೆ. ಇದರಲ್ಲಿ ಯಾಂತ್ರಿಕ, ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಮಾದರಿಗಳುಂಟು. ವಿಸ್ತೃತ ಬಳಕೆಯಲ್ಲಿರುವುದು ಕಣ ವಿದ್ಯುದುತ್ಪಾದಕದಲ್ಲಿ ಬಳಸುವ ಪರಿಭ್ರಮಣ ಮಾಪಕ. ವಿದ್ಯುದುತ್ಪಾದಕದಿಂದ ಉತ್ಪಾದನೆ ಯಾಗುವ ವಿದ್ಯುತ್ತಿನ ವೋಲ್ಟೇಜ್‌ನ ಪ್ರಮಾಣವು ಉತ್ಪಾದಕದ ಚಾಲಕ ದಂಡದ ಆವರ್ತನ ದರವನ್ನು (ವೇಗವನ್ನು) ಸೂಚಿಸುತ್ತದೆ

ಪರಿಭ್ರಮಣಾವಧಿ

(ಖ) ವೀಕ್ಷಣೆಗಳಿಂದ ಕಂಡುಬಂದಂತೆ ಯಾವುದೇ ಗ್ರಹ/ಧೂಮಕೇತು ಸೂರ್ಯನ ಸುತ್ತ ಅಥವಾ ಯಾವುದೇ ಉಪಗ್ರಹ ತನ್ನ ಮಾತೃಗ್ರಹದ ಸುತ್ತ ಒಂದು ಪೂರ್ಣ ಪರಿಭ್ರಮಣೆ ಮಾಡಲು ತೆಗೆದುಕೊಳ್ಳುವ ಕಾಲದ ಮಾಧ್ಯ ಮೌಲ್ಯ. ಉದಾ: ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುವ ಅವಧಿ ೩೬೫.೨೪೨೧ ಮಾಧ್ಯಸೌರ ದಿವಸಗಳು

ಪರಿಭ್ರಮಣೆ

(ಭೌ) ಒಂದು ವಸ್ತು ಇನ್ನೊಂದರ ಸುತ್ತ ತಿರುಗುವುದು. ಪರಿಭ್ರಮಣ ಪಥಕ್ಕೆ ಕಕ್ಷೆ ಎಂದು ಹೆಸರು. ಉದಾ: ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ. ಭೂಮಿಯ ಕಕ್ಷೆ ಒಂದು ದೀರ್ಘ ವೃತ್ತ

ಪರಿಮಾಣ

(ತಂ) ಯಾವುದೇ ಬಗೆಯ ಅಳತೆ ಮಾಡಲು ಅಥವಾ ಎಣಿಸಲು ಸಾಧ್ಯ ಮಾಡಿಕೊಡುವ ವಸ್ತುಗಳ ಗುಣ. ರಾಶಿ. ಮೊತ್ತ. ನೋಡಿ: ಪ್ರಮಾಣ

ಪರಿಮಾಣದ ದರ್ಜೆ

(ಗ) ಹತ್ತರ ಘಾತಕ್ಕೆ ಅತ್ಯಂತ ಸಮೀಪವಾಗಿರುವಂತೆ ವ್ಯಕ್ತಪಡಿಸಲಾದ ಮೌಲ್ಯ. ಮೌಲ್ಯ ದರ್ಜೆ

ಪರಿಮಾಣಾತ್ಮಕ ವಿಶ್ಲೇಷಣೆ

(ರ) ಅನಿಲ, ದ್ರವ ಅಥವಾ ಘನ ಮಾದರಿಯಲ್ಲಿ ಅಥವಾ ಮಿಶ್ರಣದಲ್ಲಿ ಇರುವ ಧಾತು, ರ್ಯಾಡಿಕಲ್ ಅಥವಾ ಸಂಯುಕ್ತಗಳ ನಿಷ್ಕೃಷ್ಟ ಶೇಕಡಾ ಪರಿಮಾಣವನ್ನು ಅಳೆಯಲು ಮಾಡುವ ಪ್ರಯೋಗ

ಪರಿಮಿತಿ

(ಗ) ಬಿಂದುವೊಂದರ ನೆರೆಯಲ್ಲಿ ಫಲನದ ಅಧ್ಯಯನ ಕುರಿತ ಪರಿಕಲ್ಪನೆ; ಸ್ವತಂತ್ರ ಚರವು ನಿರ್ದಿಷ್ಟ ಮೌಲ್ಯಗಾಮಿಯಾದಾಗ ಫಲನವು ಸಮೀಪಿಸುವ ಮೌಲ್ಯ. ಉದಾ: < page 378.tif > ಫಲನವು x = 3ರಲ್ಲಿ ಅವ್ಯಾಖ್ಯಿತ. ಆದರೂ xನ ಬೆಲೆ ೩-ಗಾಮಿ ಆದಾಗ f (x) ನ ಬೆಲೆ ೬-ಗಾಮಿ ಆಗುತ್ತದೆ. ಎಂದೇ xx3 ಆದಾಗ f (x)ನ ಪರಿಮಿತಿ ೬. ಪ್ರತೀಕಗಳಲ್ಲಿ . < page 378 a.tif > ಸಾರ್ವತ್ರಿಕವಾಗಿ < page 378 b.tif > f (x) = l, ಅಂದರೆ x-ಚರವು a-ಗಾಮಿಯಾದಾಗ f (x) ಫಲನವು l-ಗಾಮಿ ಆಗುತ್ತದೆ

ಪರಿಮಿತೀಯ ಘರ್ಷಣೆ

(ಭೌ) ಒಂದು ಮೇಲ್ಮೈ ಇನ್ನೊಂದರ ಮೇಲೆ ಜಾರುವಂತೆ ಮಾಡಲು ಯತ್ನಿಸಿದಾಗ ಚಲನೆಯನ್ನು ವಿರೋಧಿಸುವ ಘರ್ಷಣ ಬಲವು ಚಾಲನ ಬಲಕ್ಕೆ ಒಂದು ಮೌಲ್ಯದವರೆಗೆ ಸಮವಾಗಿರುತ್ತದೆ. ಆ ಮೌಲ್ಯಕ್ಕೆ ಪರಿಮಿತೀಯ ಘರ್ಷಣೆ ಎಂದು ಹೆಸರು. ಚಾಲನ ಬಲವು ಈ ಮಿತಿಗೂ ಹೆಚ್ಚಾದಾಗ ಜಾರಿಕೆ ಉಂಟಾಗುತ್ತದೆ. ಜಾರುವುದಕ್ಕೆ ಮುನ್ನ ಪರಿಮಿತೀಯ ಘರ್ಷಣೆಯ ಮೌಲ್ಯ ಸ್ಥಿರಘರ್ಷಣೆ. ಜಾರುವುದಕ್ಕೆ ಪ್ರಾರಂಭವಾದ ಅನಂತರದ ಪರಿಮಿತೀಯ ಘರ್ಷಣೆಯ ಮೌಲ್ಯ ಚರಘರ್ಷಣೆ. ಇದು ಸ್ಥಿರ ಘರ್ಷಣೆಗಿಂತ ತುಸು ಕಡಿಮೆ

ಪರಿಮೇಯ ಪರಿಕರ್ಮಗಳು

(ಗ) ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಹಾರಗಳು

ಪರಿಮೇಯ ಸಂಖ್ಯೆ

(ಗ) ಎರಡು ಪೂರ್ಣಾಂಕ p ಮತ್ತು qಗಳ (q   0)ಗಳ ನಿಷ್ಪತ್ತಿ. p / qವಾಗಿ ವ್ಯಕ್ತಪಡಿಸಬಹು ದಾದಂಥ ಸಂಖ್ಯೆ. ಉದಾ: ೨/೩, ೪/೫. ಭಾಗಲಬ್ಧ ಸಂಖ್ಯೆ. ನೋಡಿ: ಅಪರಿಮೇಯ ಸಂಖ್ಯೆ

ಪರಿಮೇಯೀಕರಿಸು

(ಗ) ಯಾವುದೇ ಸಮೀಕರಣ, ಗಣಿತೋಕ್ತಿ ಇತ್ಯಾದಿಗಳಲ್ಲಿ ರ್ಯಾಡಿಕಲ್‌ಗಳನ್ನು ತೆಗೆದುಹಾಕು. ಉದಾ: < page 378 c.tif > ಎರಡು ಕಡೆಗಳನ್ನೂ ವರ್ಗಕ್ಕೇರಿಸಿದಾಗ x + 2 = 9x ಆಗುತ್ತದೆ

ಪರಿಲಸಿಕೆ

(ಪ್ರಾ) ಕಿವಿಗೂಡಿನ ದ್ರವ. ಕಶೇರುಕಗಳಲ್ಲಿ ಒಳಕಿವಿಯ ಪೊರೆ ಕುಹರ ಮತ್ತು ಅಸ್ಥಿಕುಹರಗಳ ನಡುವಿನ ಸ್ಥಳದಲ್ಲಿ ತುಂಬಿರುವ ದ್ರವ

ಪರಿವರ್ತನ ಸಿದ್ಧಾಂತ

(ಸಾ) ಜೀವಿಯ ಒಂದು ರೂಪ ಪೂರ್ತಿ ಬೇರೆಯದೇ ರೂಪವಾಗಿ ಪರಿವರ್ತನ ಗೊಳ್ಳುವುದು. ಉದಾ: ಹಗ್ಗ ಹಾವಾಗಿ ಬದಲಾಗುವುದು ಸಾಧ್ಯ ಎಂದು ಹಿಂದೆ ಅಂಗೀಕರಿಸಲಾಗಿದ್ದ ಊಹೆ. ಈಗ ಇದು ಸಿಂಧುವಲ್ಲ

ಪರಿವರ್ತನಾಂಕ

(ಸಾ) ಏಕಮಾನಗಳ ಒಂದು ವ್ಯವಸ್ಥೆಯಲ್ಲಿರುವ ಭೌತ ಪರಿಮಾಣ ಸೂಚಕಗಳನ್ನು ಇನ್ನೊಂದು ವ್ಯವಸ್ಥೆಗೆ ಮಾರ್ಪಡಿಸಲು ನೆರವಾಗುವ ಮಧ್ಯವರ್ತಿ ಸಂಖ್ಯೆ. ಪರಿವರ್ತನಕಾರಕ. ಉದಾ: ಉಷ್ಣತೆಯನ್ನು ಅಳೆಯಲು ಬಳಸುವ ಫ್ಯಾರನ್ಹೀಟ್ (F) ಏಕಮಾನವನ್ನು ಸೆಲ್ಸಿಯಸ್ (C) ಏಕಮಾನಕ್ಕೆ ಮಾರ್ಪಡಿಸಲು ಬಳಸುವ ಸೂತ್ರ

ಪರಿವರ್ತಿಸು

(ಗ) ೧. ಗಣಿತದಲ್ಲಿಯ ಒಂದು ಪ್ರಕ್ರಿಯೆ. ಯಾವುದೇ ಫಲನವನ್ನು ಅಥವಾ ಸಮೀಕರಣವನ್ನು ಉಪಯುಕ್ತ ರೂಪಕ್ಕೆ ಮಾರ್ಪಡಿಸುವುದು. ೨. ಭಿನ್ನರಾಶಿಯನ್ನು ಅತ್ಯಂತ ಕಡಿಮೆ ಛೇದವಿರುವ ರೂಪಕ್ಕೆ ಪರಿವರ್ತಿಸುವುದು

ಪರಿವೃತ್ತ

(ಗ) ತ್ರಿಭುಜದ ಅಥವಾ ಚಕ್ರೀಯ ಬಹುಭುಜದ ಎಲ್ಲ ಶೃಂಗಗಳನ್ನೂ ಒಳಗೊಂಡಿರುವ ವೃತ್ತ

ಪರಿವೃತ್ತಿಸು

(ಗ) ಜ್ಯಾಮಿತೀಯ ಆಕೃತಿಯನ್ನು ಸಾಧ್ಯವಾದಷ್ಟು ಬಿಂದುಗಳಲ್ಲಿ ಸ್ಪರ್ಶಿಸುವಂತೆ, ಆದರೆ ಅದನ್ನು ಕತ್ತರಿಸದಂತೆ, ಇನ್ನೊಂದು ಆಕೃತಿಯನ್ನು ರಚಿಸು

ಪರಿವೇಷ್ಟ ಉಷ್ಣತೆ

(ಭೌ) ಪ್ರಯೋಗಕ್ಕೆ ಸಂಬಂಧಿಸಿದಂತೆ ಸುತ್ತಲಿನ ವಾಯುಮಂಡಲದ ಉಷ್ಣತೆ

Search Dictionaries

Loading Results

Follow Us :   
  Download Bharatavani App
  Bharatavani Windows App