भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪರಿತ್ರಿಜ್ಯ

(ಗ) ಪರಿವೃತ್ತದ/ಪರಿಗೋಳದ ತ್ರಿಜ್ಯ. ಬಹುಭುಜಾಕೃತಿಯ, ತ್ರಿಕೋಣದ, ಸುತ್ತ ರಚಿಸಿದ ವೃತ್ತದ ತ್ರಿಜ್ಯ

ಪರಿದರ್ಶಕ

(ತಂ) ವೀಕ್ಷಕನ ದೃಷ್ಟಿಮಟ್ಟಕ್ಕಿಂತ ಎತ್ತರದಲ್ಲಿ ಇರುವ ಅಥವಾ ನೇರನೋಟಕ್ಕೆ ತೊಡಕುಗಳಿರುವಂಥ ಸ್ಥಳದಲ್ಲಿ ಇರುವ ವಸ್ತುಗಳನ್ನು ನೋಡಲು ಬಳಸುವ ಸಾಧನ. ಇದರಲ್ಲಿ ಸಾರತಃ ಒಂದು ಉದ್ದ ನಳಿಕೆ ಇದ್ದು ಇದರ ಎರಡು ತುದಿ ಗಳಲ್ಲೂ ಒಂದೊಂದು ಲಂಬಕೋನ ಅಶ್ರಗವಿದೆ. ಇವನ್ನು ಪೂರ್ಣ ಆಂತರಿಕ ಪ್ರತಿಫಲನವಾಗುವಂತೆ ಅಳವಡಿಸಿದೆ. ಇದರಿಂದಾಗಿ ಬೆಳಕಿನ ದಿಕ್ಕು ಒಂದೊಂದೂ ಅಶ್ರಗದಿಂದ ೯೦0 ಕೋನದಷ್ಟು ಬದಲುತ್ತದೆ. ಹಾಗಾಗಿ ವಸ್ತುವಿನಿಂದ ಬರುವ ಬೆಳಕು ವೀಕ್ಷಕನ ಕಣ್ಣನ್ನು ವಸ್ತುವಿನ ಮೂಲ ದಿಕ್ಕಿಗೆ ಸಮಾಂತರವಾದ ಆದರೆ ತಳಮಟ್ಟದ ದಿಕ್ಕಿನಲ್ಲಿ ಪ್ರವೇಶಿಸುತ್ತದೆ. ಇಂತಹ ಪರಿದರ್ಶಕವನ್ನು ಟ್ಯಾಂಕ್‌ಗಳಲ್ಲೂ ಜಲಾಂತರ್ಗಾಮಿ ನೌಕೆಗಳಲ್ಲೂ ಬಳಸಲಾಗುತ್ತದೆ

ಪರಿದ್ರವ್ಯ

(ವೈ) ಗ್ರಾಮ್‌ನೆಗೆಟಿವ್ ಬ್ಯಾಕ್ಟೀರಿಯಾದ ಪ್ಲಾಸ್ಮ ಪೊರೆ ಹಾಗೂ ಬಾಹ್ಯ ಪೊರೆಗಳ ನಡುವಿನ ಸ್ಥಳದಲ್ಲಿ

ಪರಿಧಿ

(ಗ) ಸಂವೃತ ವಕ್ರರೇಖೆ ಮತ್ತು ಅದರ ದೀರ್ಘತೆ

ಪರಿಧಿ ನರಮಂಡಲ

(ವೈ) ಕೇಂದ್ರ ನರಮಂಡಲವನ್ನುಳಿದು ದೇಹದ ಅಂಚಿನಲ್ಲಿರುವ ವಿವಿಧ ಗಾತ್ರದ ನರಗಳ ವ್ಯೂಹ

ಪರಿಧ್ರುವೀಯ ನಕ್ಷತ್ರ

(ಖ) ದೈನಂದಿನ ಚಲನೆಯಲ್ಲಿ ವೀಕ್ಷಕನ ಕ್ಷಿತಿಜಕ್ಕೂ ಮೇಲಿರುವ, ಖಗೋಳ ಧ್ರುವದ ಸುತ್ತ ಸುತ್ತು ಹಾಕುತ್ತಿರುವ ತಾರೆ. ಇದು ಮೂಡದು, ಕಂತದು

ಪರಿಧ್ರುವೀಯ ಪ್ರವಾಹ

(ಸಾವಿ) ಅಂಟಾರ್ಕ್ಟಿಕವನ್ನು ಪೂರ್ವದಿಂದ ಪಶ್ಚಿಮಕ್ಕೆ ಸುತ್ತುವ ಪ್ರವಾಹ. ಪಶ್ಚಿಮ ಮಾರುತಗಳು ಇದನ್ನು ದೂಡುತ್ತವೆ. ಸಾಗರದ ಮೇಲ್ಮೈ ನಿಂದ ಸಾಗರದ ತಳದವರೆಗೂ ವಿಸ್ತರಿಸುವ ಏಕೈಕ ಪ್ರವಾಹ ಇದು. ಉತ್ತರ ಅಟ್ಲಾಂಟಿಕ್ ಸಾಗರದ ಆಳ ಶೈತ್ಯ ಜಲವನ್ನು ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಿಗೆ ಒಯ್ಯುತ್ತದೆ

ಪರಿನತ

(ಸ) ಅತ್ಯಂತ ಸಮೀಪದ ಮೇಲ್ಮೈಗೆ ಸಮಾಂತರ ವಾಗಿರುವ (ಭೂವಿ) ಗುಮ್ಮಟ ಅಥವಾ ಹೊಂಡಕ್ಕೆ ಅನ್ವಯಿಸಿದಂತೆ ಮಧ್ಯಬಿಂದುವಿನಿಂದ ಎಲ್ಲ ಕಡೆಗೂ ಇಳಿಜಾರಾಗುತ್ತ ಹೋಗುವ ಪರಿಪ್ರವಣ. ನೋಡಿ: ವಿಮುಖಾವನತ. ಸಮುಖಾವನತ

ಪರಿಪಕ್ವತೆ

(ಭೂವಿ) ೧. ಭೂರೂಪಣ ಚಕ್ರದ ಒಂದು ಹಂತ. ಅತ್ಯಂತ ಹೆಚ್ಚಿನ ಉಬ್ಬು-ತಗ್ಗುಗಳಿರುವುದೂ, ನೀರು ಹರಿದು ಹೋಗಲು ಸುವಿಕಸಿತ ವ್ಯವಸ್ಥೆ ಇರುವುದೂ ಈ ಹಂತದ ಲಕ್ಷಣ. ೨. ಮಡ್ಡಿಯ ವಿಕಸನದ ಅಂತಿಮ ಘಟ್ಟ. ಸ್ಥಿರ ಖನಿಜಗಳೂ ದುಂಡು ದುಂಡಗಿನ ಕಣಗಳೂ ರೂಪುಗೊಂಡಿರುವುದು ಈ ಘಟ್ಟದ ವಿಶಿಷ್ಟ ಲಕ್ಷಣ

ಪರಿಪಕ್ವನ

(ಜೀ) ಸಂತಾನೋತ್ಪತ್ತಿಗೆ ಹೆಣ್ಣು ಒದಗಿಸುವ ಅಂಡ ಹಾಗೂ ಗಂಡು ಒದಗಿಸುವ ರೇತ್ರಗಳು (ಜಂಪತಿಗಳು) ಪರಸ್ಪರ ಕೂಡಿ ಫಲೀಕೃತ ಅಂಡವನ್ನು ಉತ್ಪಾದಿಸಲು ಸಿದ್ಧವಾಗುವ ಪ್ರಕ್ರಿಯೆಯ ಅಂತಿಮಘಟ್ಟ

ಪರಿಪಾಕ ಅವಧಿ

(ವೈ) ಸೋಂಕು ತಾಗಿದಂದಿನಿಂದ ರೋಗಲಕ್ಷಣ ಪ್ರಕಟವಾಗುವವರೆಗಿನ ಕಾಲಾವಧಿ

ಪರಿಪೂರ್ಣ ಅನಿಲ

(ರ) ನೋಡಿ: ಆದರ್ಶ ಅನಿಲ

ಪರಿಪೂರ್ಣ ತರಲ

(ರ) ಸ್ನಿಗ್ಧತಾರಹಿತ ತರಲ. ಆದ್ದರಿಂದ ಶಕ್ತಿ ನಷ್ಟವಿಲ್ಲದೆ ಹರಿಯಬಲ್ಲದು

ಪರಿಪೂರ್ಣ ಸಂಖ್ಯೆ

(ಗ) ಸ್ವತಃ ಆ ಸಂಖ್ಯೆಯ ಹೊರತು ೧ನ್ನೂ ಒಳಗೊಂಡಂತೆ ಅದರ ಎಲ್ಲ ಅಪವರ್ತನಗಳ ಮೊತ್ತ ಅದೇ ಆಗುವ ಪೂರ್ಣಾಂಕ. ಉದಾ: ೬, ೨೮, ೪೯೬, ೮೧೨೮ ಇತ್ಯಾದಿ

ಪರಿಪೃಷ್ಠ ರಜ್ಜುಕ

(ಪ್ರಾ) ನಾಟೊಕಾರ್ಡ್ (ಅಸ್ಥಿಪಟ್ಟೆ) ಕವಚಕ್ಕೆ ಸಂಬಂಧಿಸಿದ

ಪರಿಬಂಧಿತ

(ಗ) ಗಣ ಸಿದ್ಧಾಂತದ ಪರಿಕಲ್ಪನೆ. ಗಣದ ಎಲ್ಲ ಧಾತುಗಳಿಗಿಂತಲೂ ಕಿರಿಯ ಅಥವಾ ಪ್ರತಿಯೊಂದಕ್ಕೂ ಸಮವಾಗಿ ಇರುವ ಧಾತುವಿಗೆ ನೀಚ ಪರಿಬಂಧವೆಂದು ಹೆಸರು. ಇದೇ ಪ್ರಕಾರ ಎಲ್ಲ ಧಾತುಗಳಿಗಿಂತ ಅಧಿಕವಾಗಿರುವ ಅಥವಾ ಪ್ರತಿಯೊಂದಕ್ಕೂ ಸಮವಾಗಿರುವ ಧಾತುವು ಉಚ್ಚ ಪರಿಬಂಧ. ಈ ಪರಿಬಂಧವಿಲ್ಲದಾಗ ಅಪರಿಬಂಧ ಎನ್ನುತ್ತೇವೆ

ಪರಿಬಂಧಿತ ಕಣ

(ಭೌ) ಬಾಹ್ಯ ಬಲವೊಂದರ ಹಿಡಿತಕ್ಕೆ ಒಳಪಟ್ಟಿದ್ದು, ಸ್ವಂತ ಚಲನಶಕ್ತಿಯಿಂದ ಈ ಹಿಡಿತವನ್ನು ಭೇದಿಸಿಕೊಂಡು ಹೊರ ಹೋಗಲಾಗದ ಕಣ

ಪರಿಬಂಧಿತ ಫಲನ

(ಗ) ಉಚ್ಚ ಹಾಗೂ ನೀಚ ಪರಿಬಂಧಗಳಿರುವ, ಆದ್ದರಿಂದ ಮೇಲುಗಡೆಯೂ ಕೆಳಗಡೆಯೂ ಪರಿಬಂಧಿತವಾಗಿರುವ ಫಲನ. f (x) ಇಂಥ ಒಂದು ಫಲನ. l l f(x) m ಆಗಿದ್ದರೆ ಆಗ l ಮತ್ತು m ಇದರ ನೀಚ ಹಾಗೂ ಉಚ್ಚ ಪರಿಬಂಧಗಳು

ಪರಿಬಂಧಿತ ಸಂಖ್ಯಾಗಣ

(ಗ) ಎರಡು ನಿರ್ದಿಷ್ಟ ಸಂಖ್ಯೆಗಳ ನಡುವಿನ ಸಂಖ್ಯಾಗಣ.

ಪರಿಬಂಧಿತ ಸದಿಶ

(ಗ) ನಿರ್ದಿಷ್ಟ ಅನ್ವಯ ಬಿಂದುವಿರುವ ಒಂದು ಸದಿಶ

Search Dictionaries

Loading Results

Follow Us :   
  Download Bharatavani App
  Bharatavani Windows App