भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪರಾವೈದ್ಯುತ

(ಭೌ) ವಿದ್ಯುತ್ ಕ್ಷೇತ್ರವನ್ನು ಪ್ರಯೋಗಿಸಿ ದಾಗ ವಿದ್ಯುದಾವೇಶದ ವಿಸ್ಥಾಪನೆಗಷ್ಟೇ ಎಡೆ ಮಾಡಿಕೊಟ್ಟು ಅದರ ನಿವ್ವಳ ಹರಿವಿಗೆ ಎಡೆಮಾಡಿಕೊಡದ ಮತ್ತು ಈ ಕಾರಣದಿಂದ ಅವಾಹಕವಾಗಿ ವರ್ತಿಸುವ ಯಾವುದೇ ಪದಾರ್ಥ

ಪರಾಸರಣ

(ಭೌ.ರ.ಪ್ರಾ) ಹೆಚ್ಚು ಸಾರೀಕೃತ ದ್ರಾವಣವನ್ನು ಕಡಿಮೆ ಸಾರೀಕೃತ ದ್ರಾವಣದಿಂದ ಅಥವಾ ಶುದ್ಧ ನೀರಿನಿಂದ ಪ್ರತ್ಯೇಕಿಸುವ ಪೊರೆಯ ಮೂಲಕ, ವಿಶೇಷವಾಗಿ ಅರೆಪಾರಕ ಪೊರೆಯ ಮೂಲಕ, ದ್ರಾವಕ, ಸಾಮಾನ್ಯವಾಗಿ ನೀರು, ಹಾದು ಹೋಗುವ ಪ್ರಕ್ರಿಯೆ. ಪೊರೆಯ ಎರಡೂ ಕಡೆ ದ್ರಾವಣಗಳ ಸಾರತೆ ಸಮವಾದಾಗ ಮತ್ತು ಪರಾಸರಣ ಒತ್ತಡ ಒಂದೇ ಆದಾಗ, ಅಥವಾ ಹೆಚ್ಚು ಸಾರೀಕೃತ ದ್ರಾವಣದ ಮೇಲೆ ಪರಾಸರಣ ಒತ್ತಡ ಹಾಕಿದಾಗ ಈ ಕ್ರಿಯೆ (ದ್ರಾವಕದ ಅಥವಾ ನೀರಿನ ಚಲನೆ) ನಿಲ್ಲುತ್ತದೆ. ಜೀವಿಗಳಲ್ಲಿ ಇದೊಂದು ಮುಖ್ಯ ಪ್ರಕ್ರಿಯೆ, ಏಕೆಂದರೆ, ಜೀವಿಗಳ ಕೋಶಭಿತ್ತಿಗಳು ಅರೆಪಾರಕ ಪೊರೆಯಿಂದಲೇ ರಚಿತವಾದವು

ಪರಾಸರಣ ಅನುಚಲನ

(ಸ) ಪರಾಸರಣ ಒತ್ತಡದಲ್ಲಿಯ ವ್ಯತ್ಯಯಗಳಿಗೆ ಪ್ರತಿಕ್ರಿಯೆಯಾಗಿ ಉಂಟಾಗುವ ಅನುಚಲನ (ಎಳೆತ)

ಪರಾಸರಣ ಒತ್ತಡ

(ರ) ದ್ರಾವಣವನ್ನೂ ಶುದ್ಧ ದ್ರಾವಕವನ್ನೂ ಪ್ರತ್ಯೇಕಿಸಿರುವ ಅರೆಪಾರಕ ಪೊರೆಯ ಮೂಲಕ ದ್ರಾವಕ ದ್ರಾವಣಕ್ಕೆ ಹರಿದು ಹೋಗುವುದನ್ನು ನಿಲ್ಲಿಸಲು ದ್ರಾವಣದ ಮೇಲೆ ಹಾಕಬೇಕಾದ ಒತ್ತಡ. (ಸ) ದ್ರಾವಣದ ರಾಸಾಯನಿಕ ವಿಭವವನ್ನು ಅದೇ ಉಷ್ಣತೆಯಲ್ಲಿ ಶುದ್ಧ, ಮುಕ್ತ, ನೀರಿನ ವಿಭವಕ್ಕೆ ಸಮವಾಗುವಂತೆ ಮಾಡಲು ಅಥವಾ ದ್ರಾವಣ ಮತ್ತು ಶುದ್ಧ ನೀರಿನ ನಡುವೆ ಇರುವ ಅರೆಪಾರಕ ಪೊರೆಯ ಮೂಲಕ ನೀರು ದ್ರಾವಣಕ್ಕೆ ಪರಾಸರಣಗೊಳ್ಳುವ ಚಲನೆಯನ್ನು ನಿಲ್ಲಿಸಲು, ದ್ರಾವಣದ ಮೇಲೆ ಹಾಕಬೇಕಾದ ಒತ್ತಡ

ಪರಿಕರ

(ಸಾ) ಸಲಕರಣೆ. ಉಪಾಯ. ಸಾಧನ. ಉಪಕರಣ

ಪರಿಕರ್ಮ

(ಗ) ೧.ಗಣ s ಮೇಲಿನ ಪರಿಕರ್ಮ ಒಂದು ಫಲನ. ಇದರ ಪ್ರಾಂತ sನ ಸದಸ್ಯಗಳ ಕ್ರಮೀಕೃತ ಶ್ರೇಢಿ (x1,x2,….,xn)ಗಳ ಗಣ ವ್ಯಾಪ್ತಿ sನ ಒಳಗಿದೆ. nನ ಬೆಲೆ ೧,೨,೩ ಇತ್ಯಾದಿ ಆದಂತೆ ಈ ಪರಿಕರ್ಮಕ್ಕೆ ಏಕಚರಿ, ದ್ವಿಚರಿ, ತ್ರಿಚರಿ ಇತ್ಯಾದಿ ಹೆಸರು. d/dx (sin x)=cos x ಈ ಪರಿಕರ್ಮದಲ್ಲಿ d/dx ಗೆ ಪರಿಕರ್ಮಿ, sin xಗೆ ಪರಿಕರ್ಮ್ಯ ಮತ್ತು cos xಗೆ ಫಲ ಎಂದು ಹೆಸರು. ೨. ನಿರ್ವಹಣೆಯ ವಿಧಿನಿಯಮಗಳನ್ನು – ಸಂಕಲನ, ವ್ಯವಕಲನ, ಅವಕಲನ, ಲಘು ಗಣಕೀಕರಣ, ಆದೇಶಗಳ ಮೂಲಕ ಪರಿವರ್ತನೆ ಇತ್ಯಾದಿಗಳನ್ನು – ಅನುಸರಿಸುವ ಪ್ರಕ್ರಿಯೆ

ಪರಿಕರ್ಮಗಳ ಸಂಶೋಧನೆ

(ಗ) ವಾಣಿಜ್ಯ ಮತ್ತು ಔದ್ಯಮಿಕ ಸಂದರ್ಭಗಳಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಗಣಿತ ಮತ್ತು ಸಂಖ್ಯಾಕಲನ ವಿಜ್ಞಾನಗಳ ಅನ್ವಯ. ವೆಚ್ಚ ಕಡಿತ, ಲಾಭ ಹೆಚ್ಚಳ, ದಾಸ್ತಾನು ನಿಯಂತ್ರಣ ಹಾಗೂ ಯಂತ್ರಸ್ಥಾವರ ನವೀಕರಣ – ಈ ಸಂಬಂಧದ ಸಮಸ್ಯೆಗಳನ್ನು ಅನುಕೂಲತಮ ಸ್ಥಿತಿಯಲ್ಲಿ ಪರಿಹರಿಸುವುದು ಇದರ ವ್ಯಾಪ್ತಿಗೆ ಬರುತ್ತದೆ. ಇದರ ಯಶಸ್ಸು ಸಮಸ್ಯೆಯ ಸೂತ್ರರೂಪ ನಿರೂಪಣೆ, ವ್ಯವಸ್ಥೆಯ ಪ್ರತಿರೂಪ ತಯಾರಿಕೆ, ಪರಿಹಾರ ತಂತ್ರ ಆಯ್ಕೆ, ವ್ಯವಸ್ಥೆಯ ಮೇಲೆ ನಿಯಂತ್ರಣ ಹಾಗೂ ಪರಿಹಾರ ಕಾರ್ಯರೂಪಣೆ ಇವುಗಳನ್ನು ಅವಲಂಬಿಸಿದೆ

ಪರಿಕರ್ಮಿ

(ಗ) ಗಣಿತ ಪ್ರಕ್ರಿಯೆಯನ್ನು ನಿರ್ದೇಶಿಸಲು ಬಳಸುವ ಸಂಕ್ಷೇಪ ಪ್ರತೀಕ. ಉದಾ : d/dx loge, sinಇತ್ಯಾದಿ

ಪರಿಕರ್ಮ್ಯ

(ಗ) ಗಣಿತ ಪರಿಕರ್ಮಕ್ಕೆ ಒಳಗಾಗುವ ಫಲನ. ಉದಾ: sin xನಲ್ಲಿ x, (a+b)ಯಲ್ಲಿ a ಮತ್ತು b

ಪರಿಕಲ್ಪನೆ

(ಸಾ) ಭಾವನಾರೂಪ. ಆಧಾರಭಾವನೆ. ಒಂದು ವಸ್ತುವಿನ, ವರ್ಗದ ಭಾವನೆ

ಪರಿಕೇಂದ್ರ

(ಗ) ತ್ರಿಭುಜದ/ಚಕ್ರೀಯ ಬಹು ಭುಜದ ಎಲ್ಲ ಶೃಂಗಗಳನ್ನೂ ಒಳಗೊಂಡಿರುವ ವೃತ್ತದ ಕೇಂದ್ರ

ಪರಿಕೋಷ್ಠ

(ಪ್ರಾ) ಪ್ರಾಣಿ ದೇಹದಲ್ಲಿರುವ ಕೆಲವು ಚಿಕ್ಕ ಕುಳಿಗಳ ಪೈಕಿ ಯಾವುದೇ ಒಂದು

ಪರಿಕ್ರಮಣ

(ಗ) ನೋಡಿ: ಪರಿಭ್ರಮಣೆ

ಪರಿಗೋಳ

(ಗ) ಬಹುಫಲಕದ ಎಲ್ಲ ಶೃಂಗಗಳನ್ನೂ ಒಳಗೊಂಡಿರುವ ಗೋಳ. ಕ್ರಮ ಬಹುಫಲಕಗಳಿಗೆ ಮಾತ್ರ ಪರಿಗೋಳಗಳಿವೆ: ಕ್ರಮ ಚತುಷ್ಫಲಕ (೪ ಮುಖಗಳು), ಕ್ರಮಷಷ್ಠ ಫಲಕ (೬), ಕ್ರಮಾಷ್ಟಫಲಕ (೮), ಕ್ರಮದ್ವಾದಶ ಫಲಕ (೧೨), ಮತ್ತು ಕ್ರಮವಿಂಶತಿಫಲಕ (೨೦). ನೋಡಿ: ಕ್ರಮಘನಾಕೃತಿಗಳು

ಪರಿಗ್ರಾಹಿ

(ವೈ) ಅಂಗಪೂರಣ ಚಿಕಿತ್ಸೆಯಲ್ಲಿ ದಾನಿಯಿಂದ ಊತಕ ಅಥವಾ ಅಂಗವನ್ನು ಪಡೆಯುವ ವ್ಯಕ್ತಿ. ನೋಡಿ: ದಾನಿ

ಪರಿಚಲನ ವ್ಯವಸ್ಥೆ

(ಜೀ) ದೇಹದೊಳಗೆ ದ್ರವಪರಿಚಲನೆಯನ್ನು, ವಿಶೇಷವಾಗಿ ಉನ್ನತ ಕಶೇರುಕಗಳಲ್ಲಿ ರಕ್ತಪರಿಚಲನೆಯನ್ನು, ಹದದಲ್ಲಿಡುವ ನಾಳಗಳು ಮತ್ತಿತರ ಅಂಗೋಪಾಂಗಗಳ ಸಮೂಹ

ಪರಿಚಲನೆ

(ಸಾ) ಹೊರಟಲ್ಲಿಂದ ಮತ್ತೆ ಅಲ್ಲಿಗೇ ಮರಳುವ ಸುತ್ತು ಚಲನೆ. (ವೈ) ಹೃದಯ, ಅಪಧಮನಿಗಳು, ಲೋಮನಾಳಗಳು ಹಾಗೂ ಸಿರೆಗಳ ಮೂಲಕ ರಕ್ತದ ಸತತ ಚಲನೆ. (ಗ) ಸದಿಶದ ಕ್ಷೇತ್ರದಲ್ಲಿ ಸಂವೃತ ಪಥದುದ್ದಕ್ಕೂ ಹೋಗುವ ಸದಿಶದ ಅನುಕಲ ರೇಖೆ

ಪರಿಚಲಿಸು

(ಸಾ) ಚಲಾವಣೆಯಲ್ಲಿರು. ಸುತ್ತುತ್ತಿರು. ಚಲಿಸು

ಪರಿಜ್ಞಾನ

(ಜೀ) ಯಾವುದೇ ಪೂರ್ವಾನುಭವ ಇಲ್ಲದೆ ಸಂದರ್ಭೋಚಿತವಾಗಿ ಸೂಕ್ತರೀತಿ ವ್ಯಕ್ತಗೊಳ್ಳುವ ನಡವಳಿಕೆ

ಪರಿಣಾಮಕಾರಿ ಉಷ್ಣತೆ

(ಖ) ದತ್ತ ನಕ್ಷತ್ರವೊಂದು ಪರಿಪೂರ್ಣ ವಿಕಿರಣಕಾರಿಯಾಗಿದ್ದ ಪಕ್ಷದಲ್ಲಿ ಅದು ತಳೆದಿರಬಹುದಾದ ಉಷ್ಣತೆ

Search Dictionaries

Loading Results

Follow Us :   
  Download Bharatavani App
  Bharatavani Windows App