भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪರವಲಯೀ ಪ್ರತಿಫಲಕ

(ಭೌ) ಮೇಲ್ಮೈ ಪರವಲಯವಾಗಿರುವ ಪ್ರತಿಫಲಕ. ವಿಕಿರಣದ ಆಕರವನ್ನು ಇದರ ನಾಭಿಯಲ್ಲಿಟ್ಟಾಗ ಪ್ರತಿಫಲಿತ ವಿಕಿರಣ ಸಮಾಂತರ ಕಿರಣಗಳ ದೂಲವಾಗುತ್ತದೆ; ಅಂತೆಯೇ ಹೊರಗಿನಿಂದ ಸಮಾಂತರ ಕಿರಣಗಳ ದೂಲವಾಗಿ ಬರುವ ವಿಕಿರಣ ಇದರಿಂದ ಪ್ರತಿಫಲಿಸಲ್ಟಟ್ಟು ನಾಭಿಯಲ್ಲಿ ಸಾಂದ್ರೀಕರಿಸುತ್ತದೆ. ವಿಕಿರಣ ಬೆಳಕಾಗಿರುವಾಗ ಈ ಪ್ರತಿಫಲಕಕ್ಕೆ ಪರವಲಯ ದರ್ಪಣ ಎಂದೂ ಇತರ ಬಗೆಯದಾದಾಗ (ಸೂಕ್ಷ್ಮತರಂಗ/ರೇಡಿಯೊ ಅಲೆಗಳು) ಡಿಶ್ ಆಂಟೆನಾ (ಗಂಗಳ) ಎಂದೂ ಹೆಸರಿದೆ

ಪರಸ್ಪರ ಪ್ರೇರಕತೆ

(ಭೌ) ಕಾಂತೀಯ ಅಭಿವಾಹದಿಂದ ಸಂಬಂಧಿತವಾದ ಎರಡು ವಿದ್ಯುದ್ವಾಹಕಗಳ ವ್ಯವಸ್ಥೆಯಲ್ಲಿ ಒಂದರಲ್ಲಿ ವಿದ್ಯುತ್ ಪ್ರವಾಹದ ಪ್ರಮಾಣ ಬದಲಾದಾಗ ಇನ್ನೊಂದರಲ್ಲಿ ವಿದ್ಯುಚ್ಚಾಲಕ ಬಲಪ್ರೇರಿತವಾಗುವ ಗುಣ. ಸೆಕೆಂಡ್‌ಗೆ ೧ ಆಂಪೇರ್ ಪ್ರವಾಹದ ಬದಲಾವಣೆಯು ೧ ವೋಲ್ಟ್ ವಿದ್ಯುಚ್ಚಾಲಕ ಬಲವನ್ನು ಪ್ರೇರಿಸಿದಾಗ ಅದರ ಏಕಮಾನ ಒಂದು ‘ಹೆನ್ರಿ’

ಪರಸ್ಪರ ಪ್ರೇರಣೆ

(ಭೌ) ಒಂದು ವಿದ್ಯುನ್ಮಂಡಲದಲ್ಲಿ ಪ್ರವಾಹ ಬದಲಾದಾಗ ಹತ್ತಿರದ ಮತ್ತೊಂದು ಪ್ರತ್ಯೇಕ ವಿದ್ಯುನ್ಮಂಡಲದಲ್ಲಿ ವಿದ್ಯುತ್ ಚಾಲಕ ಬಲ ಉಂಟಾಗುವುದು

ಪರಸ್ಪರ ವಹನತೆ

(ಭೌ) ಥರ್ಮಿಯಾನಿಕ್ ವಾಲ್ವ್ (ಉಷ್ಣ ಅಯಾನ್ ಕವಾಟ) ಒಂದರಲ್ಲಿ ನಿಯಂತ್ರಣ ಗ್ರಿಡ್ ವೋಲ್ಟೇಜ್‌ನಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸ ಮಾಡಿದಾಗ, ಆ ಆನೋಡ್ ಪ್ರವಾಹದಲ್ಲಿನ ವ್ಯತ್ಯಾಸಕ್ಕೂ ನಿಯಂತ್ರಣ ಗ್ರಿಡ್ ವೋಲ್ಟೇಜ್‌ನಲ್ಲಿನ ವ್ಯತ್ಯಾಸಕ್ಕೂ ನಡುವಿನ ನಿಷ್ಪತ್ತಿ. ಕವಾಟದ ಕಾರ್ಯದಕ್ಷತೆಯ ಅಳತೆಯಾಗಿ ಬಳಕೆ. ಒಂದು ವೋಲ್ಟ್‌ಗೆ ಇಂತಿಷ್ಟು ಮಿಲಿಆಂಪಿಯರ್ಸ್ ಎಂದು ಅಳತೆ

ಪರಸ್ಪರತೆ

(ಜೀ) ಎರಡು ಸಸ್ಯ ಅಥವಾ ಪ್ರಾಣಿ ಪ್ರಭೇದ ಗಳ ನಡುವೆ ಎರಡಕ್ಕೂ ಪ್ರಯೋಜನಕರವಾದ ಸಂಬಂಧ ಅಥವಾ ಅಂತರಕ್ರಿಯೆ. ಇದಕ್ಕೆ ಸುಪ್ರಸಿದ್ಧ ದೃಷ್ಟಾಂತ: ಗೆದ್ದಲು ಹುಳುಗಳು ಮತ್ತು ಅವುಗಳ ಕರುಳುಗಳಲ್ಲಿ ವಾಸಿಸುವ ವಿಶೇಷ ರೀತಿಯ ಪ್ರೋಟೊಜೋವಗಳು ಇವುಗಳ ನಡುವಿನ ಸಂಬಂಧ. ಗೆದ್ದಲು ಹುಳುಗಳು ಮರವನ್ನು ತಿಂದಾಗ ಸ್ವತಃ ಮರದ ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳಲಾರವು. ಆದರೆ ಅವುಗಳ ಕರುಳಿನಲ್ಲಿರುವ ಪ್ರೋಟೊಜೋವಗಳು ಮರದ ಸೆಲ್ಯುಲೋಸನ್ನು ಜೀರ್ಣಿಸಿಕೊಂಡು ಶರ್ಕರವನ್ನು ಹೊರಗೆಡಹುತ್ತವೆ. ಗೆದ್ದಲು ಹುಳುಗಳು ಈ ಶರ್ಕರ ವನ್ನು ಹೀರಿಕೊಳ್ಳುತ್ತವೆ. ಕೂಡುಜೀವನ. ನೋಡಿ: ಸಹಜೀವನ

ಪರಸ್ಪರಾಭಿಗಮನ

(ಖ) ಕಣ್ಣಿಗೆ ಕಾಣುವಂತೆ ಎರಡು ಆಕಾಶಕಾಯಗಳು ಹತ್ತಿರ ಹತ್ತಿರ ಸರಿಯುವುದು: ವಿಶೇಷವಾಗಿ ಸ್ಥಿರ ನಕ್ಷತ್ರದೆಡೆಗೆ ಯಾವುದೇ ಗ್ರಹದ ಅಥವಾ ಉಪಗ್ರಹದ ಸರಿತ (ಗ್ರಹಣವಾಗದೆಯೇ)

ಪರಾಕಾಷ್ಠೆ

(ಸಾ) ಪರಮಾಂತಿಮ. ಚರಮಸ್ಥಿತಿ. ಶೃಂಗ. ತುತ್ತತುದಿ. (ಪವಿ) ಸಮಸ್ಥಿತಿ, ಪರಿಸರ ವಿಕಾಸದಲ್ಲಿ ಸಸ್ಯ ಹಾಗೂ ಪ್ರಾಣಿ ವರ್ಗಗಳು ತಲಪುವ ಸ್ಥಿರವಾದ ಹಾಗೂ ಸ್ವತಃ ಮುಂದುವರಿದುಕೊಂಡು ಹೋಗುವ ಘಟ್ಟ

ಪರಾಕ್ಸಿಸಮ್

(ವೈ) ಹಠಾತ್ತಾದ ಅನಿಯಂತ್ರಿತ ಭಾವೋದ್ರೇಕ. ಎಲೆಕ್ಟ್ರೊಎನ್‌ಸೆಫೆಲೊಗ್ರಾಮ್ (ವಿದ್ಯುನ್ಮಸ್ತಿಷ್ಕ ಲೇಖನ) ಸಮಯದಲ್ಲಿ ವಿದ್ಯುತ್ ಚಟುವಟಿಕೆ ಆಲೇಖದಲ್ಲಿ ಚೂಪು ತುದಿಗಳ ರೂಪದಲ್ಲಿ ಇಲ್ಲವೇ ಚೂಪು ತುದಿ ಹಾಗೂ ಅಲೆಗಳ ರೂಪದಲ್ಲಿ ಹಠಾತ್ತನೆ ಕಾಣಿಸಿಕೊಳ್ಳುವುದು. ಇದು ಮಿದುಳಿನ ಲಯ ತಪ್ಪುತ್ತಿರುವುದನ್ನು ಅಥವಾ ಅಪಸ್ಮಾರ ರೋಗ ತಗುಲಿರುವುದನ್ನು ಸೂಚಿಸುತ್ತದೆ

ಪರಾಕ್ಸೈಡ್

(ರ) ೧. ಆಮ್ಲದೊಂದಿಗೆ ವರ್ತಿಸಿ ಹೈಡ್ರೊಜನ್ ಪರಾಕ್ಸೈಡ್ (H2O2) ಒದಗಿಸುವ ಯಾವುದೇ ಆಕ್ಸೈಡ್. ೨. ಯಾವುದೇ ಧಾತುವಿನ ಆಕ್ಸೈಡ್ ಸಹಜಕ್ಕಿಂತ ಹೆಚ್ಚಿನ ಆಕ್ಸಿಜನ್ ಒಳಗೊಂಡಿರುವ ಆಕ್ಸೈಡ್

ಪರಾಗ

(ಸ) ಬೀಜ ಸಸ್ಯಗಳ ಪೈಕಿ ಹೂಬಿಡುವ ಸಸ್ಯಗಳಲ್ಲಿ ಪುಂಕೇಸರಗಳಿಂದಲೂ ಶಂಕುಧಾರಿ ಸಸ್ಯಗಳಲ್ಲಿ ಗಂಡು ಶಂಕುವಿ ನಿಂದಲೂ ಉತ್ಪತ್ತಿಯಾಗುವ ಸೂಕ್ಷ್ಮಗಾತ್ರದ ಪುಡಿಯಂಥ ಬೀಜಕಗಳು. ಪ್ರತಿಯೊಂದು ಬೀಜಕದ (ಪರಾಗ ರೇಣು, ಪರಾಗ ಕಣ) ಒಳಗೂ ಗಂಡು ಯುಗ್ಮಕಗಳಿದ್ದು ನಿಷೇಚನೆಯ ಕಾರ್ಯದಲ್ಲಿ ಪುಂ-ಅಂಶವಾಗಿ ಕಾರ್ಯ ನಿರ್ವಹಿಸುತ್ತವೆ. ಪುಷ್ಪದೂಳಿ

ಪರಾಗ ಜ್ವರ

(ವೈ) ಪರಾಗದಿಂದ ಅಥವಾ ದೂಳಿನಿಂದ ಬರುವ, ಸಾಮಾನ್ಯವಾಗಿ ಗೂರಲು ಲಕ್ಷಣಗಳುಳ್ಳ, ಬೇಸಗೆ ಕಾಲದ ಒಂದು ರೋಗ. ಅಲರ್ಜಿಕ್ ರ‍್ಹಿನೈಟಿಸ್

ಪರಾಗ ಸ್ಪರ್ಶ

(ಸ) ಅನಾವೃತ ಬೀಜಸಸ್ಯಗಳಲ್ಲಿ ಸೂಕ್ಷ್ಮದ್ವಾರಕ್ಕೂ ಆವೃತ ಬೀಜಸಸ್ಯಗಳಲ್ಲಿ ಶಲಾಕಾಗ್ರಕ್ಕೂ ಪರಾಗ ಸಂಚಿಯಿಂದ ಪರಾಗದ ವರ್ಗಾವಣೆ. ಸಾಮಾನ್ಯವಾಗಿ ಇದು ಗಾಳಿ, ನೀರು, ಕೀಟ, ಪಕ್ಷಿ ಹಾಗೂ ಬಾವಲಿಗಳ ಮೂಲಕ ಉಂಟಾಗುತ್ತದೆ. ಪರಾಗಣ

ಪರಾಗನಾಳ

(ಸ) ಪರಾಗ ಮೊಳೆತಾಗ ಉತ್ಪತ್ತಿಯಾಗುವ ಪರಾಗರೇಣುವಿನ ಭಿತ್ತಿಯಿಂದ ಮೂಡುವ ನಳಿಗೆಯಂಥ ಶಾಖೆ. ಆವೃತ ಬೀಜಸಸ್ಯಗಳಲ್ಲಿ ಇದು ಭ್ರೂಣ ಚೀಲದತ್ತ ಬೆಳೆದು, ಪುಂಯುಗ್ಮಕಗಳನ್ನು ಬಿಡುಗಡೆ ಮಾಡುತ್ತದೆ

ಪರಾಗರೇಣು

(ಸ) ಬೀಜ ಸಸ್ಯ ಪುಷ್ಪಗಳ ಪುಂಕೇಸರಗಳ ಅಗ್ರಭಾಗವಾದ ಪರಾಗಕೋಶಗಳಲ್ಲಿ ಇರುವ ಸೂಕ್ಷ್ಮಬೀಜಕ

ಪರಾಗವಿಜ್ಞಾನ

(ಸ) ಪರಾಗ ಮತ್ತು ಬೀಜಕಗಳ ವೈಜ್ಞಾನಿಕ ಅಧ್ಯಯನ. ಸಮುದ್ರ ಕಳೆಗಳ ಪಳೆಯುಳಿಕೆಗಳ ಅಧ್ಯಯನವೂ ಇದರಲ್ಲಿ ಸೇರಿದೆ. ಇದು ಗತ ಭೂವಿವರಣೆಯ ಉಪಯುಕ್ತ ಮಾಹಿತಿ ಒದಗಿಸಿ ತೈಲಾನ್ವೇಷಣೆಗೆ ಅನುಕೂಲ ಪ್ರದೇಶ ಸೂಚಿಸುತ್ತದೆ. ಜಲಜಶಿಲೆಗಳ ಕಾಲ ನಿರ್ಧರಣೆಯಲ್ಲೂ ಹೆಚ್ಚು ಉಪಯುಕ್ತ. ಸಸ್ಯೋತ್ಪಾದನೆಯ ಅಭಿವರ್ಧನೆಯಲ್ಲೂ ಅಡ್ಡತಳಿ ನಿರ್ಮಾಣದಲ್ಲೂ ಬಲು ಸಹಕಾರಿ

ಪರಾಗಾಶಯ

(ಸ) ಕೇಸರದ ಫಲವತ್ ಭಾಗ; ಇದರಲ್ಲಿ ನಾಲ್ಕು ಬೀಜಕಧಾನಿಗಳಿರುವುವು; ಪರಾಗೋತ್ಪತ್ತಿ ಆಗುವ ಸ್ಥಳ

ಪರಾಗಾಶಯವಿಹೀನ

(ಸ) ಕೇಸರಗಳಿಲ್ಲದ. ಅಕೇಸರ

ಪರಾರ್ಥತೆ

(ಜೀ) ಸ್ವಾರ್ಥ ಭಾವನೆಯಿಲ್ಲದೆ ಪರರ ಹಿತಕ್ಕಾಗಿ ಸಹಕರಿಸುವ ಪ್ರವೃತ್ತಿ. ಒಂದು ಜೀವಿ ಮತ್ತೊಂದಕ್ಕೆ ಮಾಡುವ ಸಹಾಯ. ಉದಾ: ಸಂಘಜೀವಿ ಜೇನುಗಳಲ್ಲಿ ಕೆಲಸಗಾರ-ಜೇನುಗಳು ರಾಣಿ ಜೇನುಗಳನ್ನು ರಕ್ಷಿಸುವುದು

ಪರಾವಲಂಬನೆ

(ವೈ) ಎರಡು ಜೀವಿಗಳ ನಡುವಿನ ಒಂದು ರೀತಿಯ ಸಹಜೀವನ. ಇದು ಒಂದು ಜೀವಿಗೆ (ಆಶ್ರಯ ದಾತೃವಿಗೆ) ಹಾನಿಕರ, ಆದರೆ ಇನ್ನೊಂದಕ್ಕೆ (ಪರೋಪಜೀವಿಗೆ) ಪ್ರಯೋಜನಕರ. ಈ ಪರೋಪಜೀವಿ ಬಹುವೇಳೆ ತನ್ನ ಶಾರೀರಿಕ ಪುಷ್ಟಿಯನ್ನು ಆಶ್ರಯದಾತೃವಿನ ಪೌಷ್ಟಿಕ ಆಹಾರದಿಂದ ಪಡೆದು ಕೊಳ್ಳುತ್ತದೆ. ಮನುಷ್ಯನಲ್ಲಿ ಹೇನು ಕೂರೆಗಳಂಥವು ಬಾಹ್ಯ ಪರೋಪಜೀವಿಗಳು. ಜಂತುಹುಳು, ಲಾಡಿಹುಳು ಮತ್ತು ರೋಗಾಣುಗಳು ಆಂತರಿಕ ಪರೋಪ ಜೀವಿಗಳು. ಪರಪುಷ್ಟತೆ

ಪರಾವಲಂಬಿ

(ಪ್ರಾ) ನೋಡಿ: ಪರೋಪಜೀವಿ

Search Dictionaries

Loading Results

Follow Us :   
  Download Bharatavani App
  Bharatavani Windows App