भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪರಮಾಣವಿಕತೆ

(ರ) ಧಾತುವಿನ ಒಂದು ಅಣುವಿನಲ್ಲಿ ಇರುವ ಪರಮಾಣುಗಳ ಸಂಖ್ಯೆ. ಉದಾ : ಆಕ್ಸಿಜನ್ (O2)ನ ಪರಮಾಣವಿಕತೆ ೨. ಓಝೋನ್ (O3)ನದು ೩. ಬೆನ್ಝೀನ್ (C6H6)ನದು ೧೨

ಪರಮಾಣು

(ಭೌ) ಧಾತುವಿನ ಸಮಸ್ತ ಗುಣಲಕ್ಷಣಗಳೂ ನಿಹಿತವಾಗಿದ್ದು ರಾಸಾಯನಿಕ ಕ್ರಿಯೆಯಲ್ಲಿ ಭಾಗಿಯಾಗಬಲ್ಲ ಪರಮಾಂತಿಮ ಘಟಕ; ಪರಮಾಣುವು ಪ್ರೋಟಾನ್ ಹಾಗೂ ನ್ಯೂಟ್ರಾನ್‌ಗಳ ಒಂದು ಪುಟ್ಟ ದಟ್ಟಕೋಶದಿಂದ ಕೂಡಿರುತ್ತದೆ. ಇದರ ಸುತ್ತ ಎಲೆಕ್ಟ್ರಾನುಗಳು ವೃತ್ತೀಯ ಅಥವಾ ದೀರ್ಘವೃತ್ತೀಯ ಕಕ್ಷೆಗಳಲ್ಲಿ ಸುತ್ತುತ್ತಿರುತ್ತವೆ. ಪ್ರೋಟಾನ್‌ಗಳ ಮತ್ತು ಎಲೆಕ್ಟ್ರಾನ್‌ಗಳ ಸಂಖ್ಯೆ ಸಮನಾಗಿದ್ದು ಒಟ್ಟಿನ ಆವೇಶ ಶೂನ್ಯವಾಗಿರುತ್ತದೆ. ಪರಮಾಣುವನ್ನು ವಿಭಜಿಸಿದರೆ ಆ ಧಾತುವಿನ ಮೂಲಗುಣ ನಷ್ಟವಾಗುತ್ತದೆ

ಪರಮಾಣು ಕಕ್ಷಕ

(ರ) ಪರಮಾಣುವಿನಲ್ಲಿಯ ಒಂದು ಎಲೆಕ್ಟ್ರಾನ್‌ನ ಶಕ್ತಿಯನ್ನು ವ್ಯಾಖ್ಯಿಸುವ ತರಂಗ ಫಲನ

ಪರಮಾಣು ಗಡಿಯಾರ

(ತಂ) ಸೀಸಿಯಂನಂಥ ಕೆಲವು ವಸ್ತುಗಳ ಪರಮಾಣು ಯಾ ಅಣುಗಳ ಕಂಪನಾ ಆವೃತ್ತಿ ಯನ್ನು ಅವಲಂಬಿಸಿದ ಮತ್ತು ಅದರಿಂದ ನಿಯಂತ್ರಿತವಾದ ಆವೃತ್ತಿಯೊಂದಿಗೆ ಕೆಲಸಮಾಡುವ ಅತಿನಿಖರ ಕಾಲಸೂಚಕ ಸಾಧನ. ನೋಡಿ : ಅಮೋನಿಯ ಗಡಿಯಾರ

ಪರಮಾಣು ಗಾತ್ರ

(ರ) ಧಾತುವಿನ ಸಾಪರಾ ಮತ್ತು ಸಾಂದ್ರತೆ ನಡುವಿನ ನಿಷ್ಪತ್ತಿ. ಘನಸ್ಥಿತಿಯಲ್ಲಿರುವ ಧಾತುವಿನ ೧ ಗ್ರಾಮ್-ಪರಮಾಣು ಆಕ್ರಮಿಸುವ ಗಾತ್ರ

ಪರಮಾಣು ತೂಕ

(ರ) ೧೨೬c ಪರಮಾಣುವಿನ ತೂಕವನ್ನು (ಇದು ೧೨ ಎಂದು ಗೊತ್ತಾಗಿದೆ) ಶಿಷ್ಟವಾಗಿಟ್ಟು ಕೊಂಡು ಅಳೆದ ಯಾವುದೇ ಧಾತುವಿನ ಪರಮಾಣು ತೂಕ

ಪರಮಾಣು ದ್ರವ್ಯಾಂತರಣ

(ಭೌ) ಬೈಜಿಕ ಕ್ರಿಯೆಯ ಪರಿಣಾಮವಾಗಿ ಒಂದು ಬಗೆಯ ಪರಮಾಣು ಇನ್ನೊಂದು ಬಗೆಯದಾಗಿ ಪರಿವರ್ತಿತವಾಗುವುದು. ಇದರಿಂದಾಗಿ ಪಸಂ ಬದಲಾಗುವುದು. ಹಾಗಾಗಿ ಪರಮಾಣುವಿನ ರಾಸಾಯನಿಕ ಸ್ವರೂಪವೂ ಬದಲಾಗುವುದು. ಉದಾ: ಚಿನ್ನ ಪಾದರಸವಾಗಿ ದ್ರವ್ಯಾಂತರಣಗೊಳ್ಳುವುದು. ನೋಡಿ : ದ್ರವ್ಯಾಂತರಣ. ಬೈಜಿಕ ದ್ರವ್ಯಾಂತರಣ

ಪರಮಾಣು ಬಲ ಸೂಕ್ಷ್ಮದರ್ಶಕ

(ತಂ) ಪರಮಾಣುಗಳ ನಡುವಿನ ಬಲವನ್ನು ಅಳತೆ ಮಾಡುವ ಸೂಕ್ಷ್ಮ ದರ್ಶಕ. ಈ ಸೂಕ್ಷ್ಮ ದರ್ಶಕದಲ್ಲಿ ಸೂಕ್ಷ್ಮ ವಾದ ಭಾಗಗಳನ್ನು ಸಂಯೋಜಿಸಿರುವ ಒಂದು ಮೊನಚಾದ ತುದಿಯಿರುವ ಚಾಚು ತೊಲೆ ಇರುತ್ತದೆ. ಈ ತುದಿಯು ಮಾದರಿ ವಸ್ತುವಿನ ಹೊರತಲ ದಲ್ಲಿರುವ ವಿಶಿಷ್ಟ ಲಕ್ಷಣ ಗಳಿಂದ ವಿಚಲಿತ ವಾಗುತ್ತದೆ. ವಿಚಲಿಸುತ್ತಿರುವ ಚಾಚುತೊಲೆಯ ಹಿಂಭಾಗಕ್ಕೆ ಲೇಸರ್ ದೂಲವನ್ನು ಹಾಯಿಸಲಾಗುವುದು, ಲೇಸರಿನ ದೂಲವು ಸೂಕ್ಷ್ಮದರ್ಶಕ ತುದಿಯ ವಿಚಲನೆಗಳನ್ನು ಬಿಂಬಶೋಧಕದಲ್ಲಿ ಪ್ರತಿಫಲಿಸುತ್ತದೆ. ಹೀಗೆ ದೊರೆತ ಮಾಹಿತಿಯನ್ನು ಉಪಯೋಗಿಸಿ, ಮಾದರಿ ವಸ್ತುವಿನ ಹೊರತಲದ ಪ್ರತಿರೂಪವನ್ನು ಜೋಡಿಸ ಲಾಗುತ್ತದೆ. ಈ ಸೂಕ್ಷ್ಮದರ್ಶಕವು ನಿರ್ವಾತವಿಲ್ಲದೆ ಕಾರ್ಯ ನಿರ್ವಹಿಸುವುದರಿಂದ, ಇದರಲ್ಲಿ ಜೈವಿಕ ಮಾದರಿ ವಸ್ತುಗಳನ್ನು ಪರೀಕ್ಷೆಗೊಳಪಡಿಸಬಹುದು. ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮ ದರ್ಶಕದಂತೆ, ಇಲ್ಲಿಯೂ ಮಾದರಿ ವಸ್ತುವಿನ ಪ್ರತಿಬಿಂಬಗಳನ್ನು ಮೂರು ಆಯಾಮಗಳಲ್ಲಿ ಪಡೆಯಬಹುದಾಗಿದೆ

ಪರಮಾಣು ಬಾಂಬ್

(ತಂ) ನೋಡಿ: ಬೈಜಿಕ ಬಾಂಬ್

ಪರಮಾಣು ರಾಶಿಮಾನ

(ರ) ಸಂಕ್ಷೇಪವಾಗಿ u. ಕಾರ್ಬನ್‌ನ ಅತಿಸಮೃದ್ಧ ಸಮಸ್ಥಾನಿ ೧೨Cಯ ತಟಸ್ಥ ಪರಮಾಣುವಿನ ರಾಶಿಯ ಹನ್ನೆರಡನೆಯ ಒಂದು ಭಾಗ = ೧.೬೬ x ೧೦-೨೭ ಕಿ.ಗ್ರಾಮ್

ಪರಮಾಣು ರೋಹಿತ

(ಭೌ) ಪರಮಾಣುಗಳು ಅಣುಗಳಾಗಿ ಸಂಯೋಜನೆಗೊಂಡಿರದ ಧಾತುವಿನ ರೇಖಾರೋಹಿತ

ಪರಮಾಣು ವಾದ

(ರ) ಡಾಲ್ಟನ್‌ನ (೧೭೬೬- ೧೮೪೪) ನಿರೂಪಣೆ: ವಸ್ತು ಅವಿಚ್ಛಿನ್ನವಾಗಿಲ್ಲ, ಪರಮಾಣುಗಳೆಂಬ ಅವಿಭಾಜ್ಯ ಅತ್ಯಂತ ಅಲ್ಪ ಕಣಗಳಿಂದ ಆಗಿದೆ. ಪರಮಾಣುಗಳು ಅವಿನಾಶಿ. ಅಂದರೆ ರಾಸಾಯನಿಕ ಕ್ರಿಯೆಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಒಂದೇ ಧಾತುವಿನ ಎಲ್ಲ ಪರಮಾಣುಗಳೂ ಆಕಾರ ಗಾತ್ರ ಮತ್ತು ತೂಕಗಳಲ್ಲಿ ಒಂದೇ ತೆರನಾಗಿರುತ್ತವೆ ಮತ್ತು ಬೇರೆ ಬೇರೆ ಧಾತುಗಳ ಪರಮಾಣುಗಳಿಗಿಂತ ಭಿನ್ನ. ಒಂದು ಪರಮಾಣುವಿಗಿಂತ ಕಡಿಮೆಯಾಗಿ ಯಾವ ಧಾತುವೂ ರಾಸಾಯನಿಕ ಸಂಯೋಜನೆಯಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲ. ನಿಯತ ಸರಳ ಸಂಖ್ಯಾ ಪ್ರಮಾಣದಲ್ಲಿ ಪರಮಾಣುಗಳು ‘ಸೇರಿ’ ಸಂಯುಕ್ತ ಪರಮಾಣುಗಳು ಉತ್ಪತ್ತಿಯಾಗುತ್ತವೆ. ಈ ವಾದದ ಬಹುತೇಕ ಭಾಗ ಇಂದಿಗೂ ಪ್ರಸ್ತುತ

ಪರಮಾಣು ಶಕ್ತಿ

(ಭೌ) ವಿಕಿರಣಪಟು ಪರಮಾಣು ಗಳನ್ನು ಬೈಜಿಕ ಕ್ರಿಯಾಕಾರಿಗಳಲ್ಲಿ ವಿದಲನಗೊಳಿಸಿದಾಗ ಹೊಮ್ಮುವ ಅಪಾರ ಶಕ್ತಿ: E = mc2; ಇಲ್ಲಿ E ಶಕ್ತಿಯನ್ನೂ m ರಾಶಿಯನ್ನೂ c ನಿರ್ದ್ರವ್ಯತೆಯಲ್ಲಿ ಬೆಳಕಿನ ಸ್ಥಿರ ವೇಗವನ್ನೂ ಸೂಚಿಸುತ್ತವೆ. ನೋಡಿ : ಬೈಜಿಕ ಶಕ್ತಿ

ಪರಮಾಣು ಸಂಖ್ಯೆ

(ರ) ಪರಮಾಣು ಬೀಜದಲ್ಲಿಯ ಧನಾವೇಶಗಳ (ಪ್ರೋಟಾನ್‌ಗಳ) ಸಂಖ್ಯೆ. ಪರಮಾಣುವಿನ ತಟಸ್ಥ ಸ್ಥಿತಿಯಲ್ಲಿ ಬೀಜದ ಸುತ್ತ ಪರಿಭ್ರಮಿಸುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆಗೆ ಸಮ; ಆವರ್ತ ಕೋಷ್ಟಕದಲ್ಲಿ ಧಾತುವಿನ ಸ್ಥಾನಸಂಖ್ಯೆ; ಪ್ರತೀಕ Z

ಪರಮಾಣು ಸಂರಚನೆ

(ಭೌ) ಕೇಂದ್ರದಲ್ಲಿ ಭಾರವಾದ ಬೀಜ ಮತ್ತು ಇದನ್ನು ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸುವ (ಋಣಾವಿಷ್ಟ) ಎಲೆಕ್ಟ್ರಾನ್‌ಗಳು ರೂಪಿಸುವ ಶಿಲ್ಪ; ಧನಾವಿಷ್ಟ ಪ್ರೋಟಾನ್ ಮತ್ತು ವಿದ್ಯುತ್ ತಟಸ್ಥ ನ್ಯೂಟ್ರಾನ್ (ಇವುಗಳ ಒಟ್ಟು ಹೆಸರು ನ್ಯೂಕ್ಲಿಯಾನ್) ಕಣಗಳು ಬೀಜದ ಘಟಕಗಳು; ಸಾಧಾರಣ ಪರಿಸ್ಥಿತಿಯಲ್ಲಿ ಪರಮಾಣು ವಿದ್ಯುತ್ ತಟಸ್ಥ (ಆವೇಶರಹಿತ) ಎಂದೇ ಅದರಲ್ಲಿಯ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಸಂಖ್ಯೆಗಳು ಸಮವಾಗಿರುವುವು; ಇದೇ ಪರಮಾಣು ಸಂಖ್ಯೆ Z

ಪರಮಾಂತಿಮ

(ತಂ) ಪ್ರಕ್ರಿಯೆಯೊಂದರ ಅಂತಿಮ ಪರಿಣಾಮ. (ಭೌ,ರ) ಮತ್ತಷ್ಟು ವಿಭಜನೆಗೊಳ್ಳಲು ಸಾಧ್ಯವಿರದ, ಸರಳ. ಉದಾ: ಪರಮಾಂತಿಮ ಕಣ. ಕಟ್ಟಕಡೆಯ

ಪರಮಾದಿ

(ಖ) ಪ್ರಥಮ ಸೃಷ್ಟಿಯ

ಪರಮಾದಿ ಪರಮಾಣು

(a)eval atom, primordial atom (ಖ) ಕೆಲವು ಖಗೋಳ ವಿಜ್ಞಾನಿಗಳು ಭಾವಿಸುವಂತೆ, ವಿಶ್ವಕ್ಕೆ ಜನ್ಮನೀಡಿದ ಆ ಪ್ರಪ್ರಥಮ ಅತ್ಯುನ್ನತ ಸಾಂದ್ರ ಪದಾರ್ಥ/ವಸ್ತು

ಪರವಲಯ

(ಗ) ಯಾವುದೇ ಸಮತಲದಲ್ಲಿ s ಸ್ಥಿರ ಬಿಂದುವೂ l ಇದರ ಮೂಲಕ ಸಾಗದ ಸ್ಥಿರ ಸರಳರೇಖೆಯೂ ಆಗಿರಲಿ. ಈ ತಲದ ಮೇಲೆ p ಎಂಬ ಚರಬಿಂದುವು sp/pm=1 ಆಗಿರುವಂತೆ ಚಲಿಸಿದಾಗ ದೊರೆಯುವ ಪಥ pಯಿಂದ lಗೆ ಎಳೆದ ಲಂಬದ ಪಾದ M. Sಗೆ ನಾಭಿ ಎಂದೂ lಗೆ ನಿಯತಾ ಎಂದೂ ಹೆಸರು. ನೋಡಿ : ಶಂಕುಜ

ಪರವಲಯಜ

(ಗ) ಪರವಲಯವನ್ನು ಅದರ ಅಕ್ಷದ ಸುತ್ತ ಆವರ್ತಿಸುವುದ ರಿಂದ ಪಡೆಯುವ ಘನಾಕೃತಿ. ಶಬ್ದ ಹಾಗೂ ಸೂಕ್ಷ್ಮತರಂಗ ವಿಕಿರಣಗಳನ್ನು ಪ್ರತಿಫಲಿಸಲು ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App