भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪ್ಲೂಟೋನಿಯಮ್

(ರ) ಬೆಳ್ಳಿ ಬಿಳುಪಿನ ವಿಕಿರಣಪಟು ಲೋಹಧಾತು. ಪ್ರತೀಕ Pu. ಪಸಂ ೯೪; ಸಾಪರಾ ೨೩೯.೧೩. ಪ್ರಕೃತಿ ಯಲ್ಲಿ ಅಲ್ಪ ಪ್ರಮಾಣಗಳಲ್ಲಿ ಲಭ್ಯ. ನೆಪ್ಟೂನಿಯಮ್ ಧಾತುವಿನ ವಿಕಿರಣಪಟುಕ್ಷಯದಿಂದ ದೊಡ್ಡ ಪ್ರಮಾಣದಲ್ಲಿ ಕೃತಕವಾಗಿ ತಯಾರಿಸಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಅತ್ಯಂತ ಮುಖ್ಯ ಧಾತು. ಮಂದಗತಿಯ ನ್ಯೂಟ್ರಾನ್‌ಗಳಿಂದ ಯುರೇನಿಯಮ್-೨೩೮ ಸಮಸ್ಥಾನಿಯನ್ನು ತಾಡಿಸಿದಾಗ ನೆಪ್ಟೂನಿಯಮ್ ಮೂಲಕ ಪ್ಲೂಟೋನಿಯಮ್-೨೩೯ ಉತ್ಪತ್ತಿಯಾಗುತ್ತದೆ, ಇದರ ಅರ್ಧಾಯು ೨೪,೪೦೦ ವರ್ಷಗಳು. ದಟ್ಟ ಬಿಳಿ ಲೋಹ. ಸಾಸಾಂ ೧೯.೮೪. ದ್ರಬಿಂ ೬೩೯.೫0 ಸೆ. ಸಂಶೋಧನೆಯಲ್ಲಿ ವಿಕಿರಣಪಟು ಸಮಸ್ಥಾನಿ ಯನ್ನು ಉತ್ಪಾದಿಸಲು ಬೈಜಿಕ ಇಂಧನವಾಗಿಯೂ, ನ್ಯೂಕ್ಲಿಯರ್ ಅಸ್ತ್ರಗಳಲ್ಲಿ ಸ್ಫೋಟಕವಾಗಿಯೂ ಬಳಕೆ. ಪ್ರತಿವರ್ಷವೂ ಜಗತ್ತಿನಲ್ಲಿ ಬೈಜಿಕ ಕ್ರಿಯಾಕಾರಿಗಳಿಂದ ಸುಮಾರು ೨೦ ಟನ್ ಪ್ಲೂಟೋನಿಯಮ್ ಉತ್ಪಾದಿತವಾಗುತ್ತಿದೆ ಎಂದು ಅಂದಾಜು

ಪ್ಲೂಮ

(ಪ್ರಾ) ಗಟ್ಟಿಯಾದ ದಂಡ ಮತ್ತು ದೃಢವಾದ ಎಸಳುಗಳುಳ್ಳ ಗರಿ ಅಥವಾ ಪುಕ್ಕ

ಪ್ಲೂಮೋಸ್

(ಸ) ಕೂದಲಿನಂತಿರುವ, ಪುಕ್ಕದಂತಿರುವ

ಪ್ಲೂರ

(ಪ್ರಾ) ನೋಡಿ: ಶ್ವಾಸಕೋಶಾವರಣ

ಪ್ಲೂರಿಸಿ

(ವೈ) ಎದೆಯ ಅಥವಾ ಪಕ್ಕೆಗಳ ನೋವೂ ಜ್ವರವೂ ಬರುವ, ಸಾಮಾನ್ಯವಾಗಿ ಶೀತದಿಂದ ಉಂಟಾಗುವ ಶ್ವಾಸಕೋಶಗಳ ಆವರಣದ ಉರಿಯೂತ

ಪ್ಲೂರೋಪ್ಟೆರಿಜಿಯೈ

(ಪ್ರಾ) ಕ್ಲಾಡೊಸೆಲಾಚಿ ಗಣಕ್ಕೆ ಸೇರಿದ, ಷಾರ್ಕ್ ಮೀನಿನಂತಿರುವ ಮೀನಿನ ಪಳೆಯುಳಿಕೆ. ಡಿವೋನಿಯಮ್ ಹಾಗೂ ಪರ್ಮಿಯನ್ ಯುಗಗಳ ಭೂಸ್ತರ ಗಳಲ್ಲಿ ದೊರೆತಿದೆ

ಪ್ಲೆಕ್ಸಸ್

(ಪ್ರಾ) ಜೀವಿಗಳಲ್ಲಿಯ ತಂತುಗಳ/ನಾಳಗಳ ಜಾಲ

ಪ್ಲೇಕ್

(ಜೀ) ಘನ ಮಾಧ್ಯಮವೊಂದರ ಮೇಲೆ ಬೆಳೆದ ಬ್ಯಾಕ್ಟೀರಿಯ ಸಮುದಾಯದಲ್ಲಿ ಕೋಶನಾಶ ಹೊಂದಿದ ಜಾಗ ಗಳಿರುವ ಭಾಗ. ವೈರಸ್ ಸೋಂಕು ತಗಲಿದಾಗ ಸಿದ್ಧಗೊಳ್ಳುವ ಊತಕ ಕೃಷಿಯ ಏಕಪದರ. (ವೈ) ಹಲ್ಲಿನ ಮೇಲ್ಮೈಗೆ ಅಂಟಿ ಕೊಂಡಿರುವ ಅಸ್ಫಟಿಕ ಪದಾರ್ಥದ ಪದರ. (ತಂ) ಅದಿರು ಸಂಸ್ಕರಣೆಯಲ್ಲಿ ಉತ್ಪನ್ನಗಳನ್ನು ಸ್ಥಳದಲ್ಲೇ ಪರೀಕ್ಷಿಸಲು ಬಳಸುವ ಸಾಸರ್ ಆಕಾರದ ಬಿಳಿ ಪಿಂಗಾಣಿ ತಟ್ಟೆ

ಪ್ಲೇಗು ಮಾರಿ

(ವೈ) ಹದಿನಾಲ್ಕನೆಯ ಶತಮಾನದ ನಡುವಿನಲ್ಲಿ ಯುರೋಪ್ ಖಂಡವನ್ನು ಪಿಡುಗಾಗಿ ಕಾಡಿದ ಯೂರೋಪಿನ ಕಾಲುಭಾಗದಷ್ಟು ಜನಸಂಖ್ಯೆಯನ್ನು ಬಲಿ ತೆಗೆದುಕೊಂಡ ಗಡ್ಡೆ ಮಾರಿ ಬೇನೆ. ಕಪ್ಪು ಬೇನೆ

ಪ್ಲೇಗ್

(ವೈ) ಮಾರಕ ಸೋಂಕು ರೋಗ. ಯೆರ್ಸಿನಿಯ ಪೆಸ್ಟಿಸ್ ವೈರಸ್‌ಗಳಿಂದಾಗಿ ದಂಶಕ ಪ್ರಾಣಿಗಳಲ್ಲಿ, ಇಲಿ-ಚಿಗಟಗಳಲ್ಲಿ, ಕಾಣಿಸಿಕೊಳ್ಳುತ್ತದೆ. ಕಡಿತದಿಂದ ಮಾನವನಿಗೆ ಸೋಂಕು ತಗಲುತ್ತದೆ. ಆಗ ಮಾನವನಲ್ಲಿ ದುಗ್ಧರಸ ಗ್ರಂಥಿಗಳು ಉಬ್ಬುತ್ತವೆ, ಅತ್ಯಂತ ನಿತ್ರಾಣ, ರಕ್ತ ವಿಷ ಹಾಗೂ ಉಸಿರಾಟದ ಆತಂಕಗಳು ಕಾಣಿಸಿಕೊಳ್ಳುತ್ತವೆ

ಪ್ಲೇಜಿಯೊಕ್ಲೇಸ್

(ಭೂವಿ) ಶಿಲಾರೂಪಕ ಖನಿಜಗಳಲ್ಲಿ ಒಂದು. ತ್ರಿನತಾಕ್ಷ ವ್ಯವಸ್ಥೆಯಲ್ಲಿ ಸ್ಫಟಿಕೀಕರಣಗೊಳ್ಳುತ್ತದೆ. ರಾಸಾಯನಿಕ ಸೂತ್ರ: (NaCa)Al(SiAl) Si2O8

ಪ್ಲೇಜಿಯೊಟ್ರೋಪಿಕ್

(ಸ) ಸಸ್ಯದ ಭಾಗವೊಂದು ಗುರುತ್ವದಿಂದಾಗಿ ಓರೆ ಬೆಳವಣಿಗೆ ತೋರುವುದು. ಅದರ ಅಕ್ಷ ಗುರುತ್ವಬಲ ರೇಖೆಗೆ ಕೋನೀಯವಾಗಿರುತ್ತದೆ. ಉದಾ: ತಾಯಿಬೇರಿನ ಶಾಖೆಗಳು ಲಘುಕೋನೀಯವಾಗಿರುವುದು

ಪ್ಲೇನಮ್

(ಪ್ರಾ) ಮೇಲ್ವರ್ಗದ ಪ್ರಾಣಿಗಳಲ್ಲಿ ತಲೆ ಭಾಗದಲ್ಲಿರುವ ಚಪ್ಪಟೆ ಮೂಳೆ

ಪ್ಲೇನಿ ಸ್ಫಿಯರ್

(ಖ) ಸಮತಲದ ಮೇಲೆ ಗೋಳ ಭಾಗದ ಪ್ರಲಂಬಿತ ನಕ್ಷೆ

ಪ್ಲೈವುಡ್

(ಸಾ) ಮರದ ತೆಳುವಾದ ಪದರಗಳನ್ನು ಎಳೆಗಳು ಅಡ್ಡ ಹಾಯುವಂತೆ ಅಂಟಿಸಿ ಮಾಡಿದ ತೆಳುವೂ ದೃಢವೂ ಆದ ಹಲಗೆ

ಪ್ಲ್ಯಾಕೊಡರ್ಮಿ

(ಪ್ರಾ) ಪ್ರಾಗ್ಜೀವಿ ಕಲ್ಪದ ದೊಡ್ಡ ಹಾಗೂ ವೈವಿಧ್ಯಮಯ ಮೀನುಗಳ ವರ್ಗ. ತಲೆ ಹಾಗೂ ರುಂಡದ ಮುಂಭಾಗದಲ್ಲಿ ಎಲುಬಿನ ಜಟಿಲ ರಕ್ಷಣಾವರಣವಿರುವುದು ಇವುಗಳ ವೈಶಿಷ್ಟ್ಯ

ಪ್ಲ್ಯಾಂಕ್ಟನ್

(ಪ್ರಾ) ಸಮುದ್ರ, ನದಿ, ಕೊಳ, ಸರೋವರಗಳ ನೀರಿನ ಮೇಲೆ ತೇಲಾಡುವ ಜೀವಿಗಳು, ತಳದಲ್ಲಿ ಅಂಟಿಕೊಂಡಿರುವ ಅಥವಾ ತಳದಲ್ಲೇ ಹರಿದಾಡುವ ಜೀವಿಗಳಿಗಿಂತ ಭಿನ್ನ. ಇವುಗಳ ಚಲನಶಕ್ತಿ ದುರ್ಬಲ. ಪ್ಲವಕ

ಪ್ಲ್ಯಾಂಟ

(ಪ್ರಾ) ನೆಲವಾಸಿ ಕಶೇರುಕಗಳ ಅಂಗಾಲು, ಕೀಟಗಳ ಹುಸಿಪಾದದ ಚಪ್ಪಟೆ ಶೃಂಗ

ಪ್ಲ್ಯಾಂಟಿಗ್ರೇಡ್

(ಪ್ರಾ) ಮಾನವನಂತೆ ಅಂಗಾಲುಗಳ ಮೇಲೆ ನಡೆಯುವ ಪ್ರಾಣಿ

ಪ್ಲ್ಯಾಟಿನಮ್

(ರ) ಲೋಹಧಾತು. ಪ್ರತೀಕ Pt. ಪ.ಸಂ. ೭೮. ಸಾಪರಾ ೧೯೫.೦೯ ಸಾಸಾಂ ೨೦0 ಸೆನಲ್ಲಿ ೨೧.೪೫. ವಿದ್ಯುತ್‌ರೋಧ ೨೦0ಸೆನಲ್ಲಿ ೯.೯೭ x ೧೦-೮ ಓಮ್ ಮೀಟರ್‌ಗಳು. ದ್ರಬಿಂ ೧೭೭೩.೫0 ಸೆ ಕುಬಿಂ ೩೯೧೦0 ಸೆ. ಬ್ರೈನೆಲ್ ಕಾಠಿಣ್ಯಾಂಕ ೪೭. ಆರು ನಿಕಟ ಸಂಬಂಧಿ ವಿರಳಲೋಹಗಳ ತಂಡದಲ್ಲಿ ಪ್ಲ್ಯಾಟಿನಮ್ ಅತಿಮುಖ್ಯವಾದುದು. ಉಳಿದ ಐದು ಆಸ್ಮಿಯಮ್, ಇರಿಡಿಯಮ್, ಪೆಲ್ಲೇಡಿಯಮ್, ರ‍್ಹೋಡಿಯಮ್ ಮತ್ತು ರೂಥೆನಿಯಮ್. ಪ್ಲ್ಯಾಟಿನಮ್ ಭಾರ, ಮೃದು ಮತ್ತು ತನ್ಯ. ಬಹುತೇಕ ರಾಸಾಯನಿಕಗಳ ದಾಳಿಗೆ ಮತ್ತು ಉನ್ನತ ತಾಪಗಳಲ್ಲಿ ಆಕ್ಸಿಡೀಕರಣಕ್ಕೆ ಜಗ್ಗದು. ಆಭರಣ, ವೈಜ್ಞಾನಿಕ ಉಪಕರಣಗಳ ತಯಾರಿಕೆಯಲ್ಲಿ ಉನ್ನತ ತಾಪಗಳಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಮತ್ತು ರಾಸಾಯನಿಕ ದಾಳಿಗೀಡಾಗಬಹುದಾದ ಎಲೆಕ್ಟ್ರೋಡ್‌ಗಳಲ್ಲಿ ಬಳಕೆ. ಮೂಲ ರೂಪದಲ್ಲಿ ಪ್ಲ್ಯಾಟಿನಮ್ ಕಬ್ಬಿಣ, ಇರಿಡಿಯಮ್, ರ‍್ಹೋಡಿಯಮ್, ಪೆಲ್ಲೇಡಿಯಮ್ ಅಥವಾ ಆಸ್ಮಿಯಮ್‌ನ ಮಿಶ್ರಣವಾಗಿ ಲಭ್ಯ, ಘನಾಕೃತಿಯಲ್ಲಿ ಸ್ಫಟಿಕೀಕರಣಗೊಳ್ಳುತ್ತದೆ.

Search Dictionaries

Loading Results

Follow Us :   
  Download Bharatavani App
  Bharatavani Windows App