भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪದಚಿಹ್ನೆ

(ಸಾ) ಸಂಕ್ಷಿಪ್ತ ಲಿಪಿಯಲ್ಲಿ (ಷಾರ್ಟ್ ಹ್ಯಾಂಡ್) ಪದವನ್ನು ಸೂಚಿಸುವ ಚಿಹ್ನೆ ಅಥವಾ ಅಕ್ಷರ

ಪದರ

(ಭೌ) ಲೋಹ, ಎಲುಬು, ಆವರಣ ಚರ್ಮ, ಶಿಲೆ, ಶಿಲಾಸ್ತರ, ಸಸ್ಯದ ಊತಕ ಮೊದಲಾದವುಗಳ ತೆಳು ತಗಡು, ಹಲಗೆ ಪದರ ಪೊರೆ ಹಾಳೆ, ರೇಕು. (ಪ್ರಾ) ಊತಕದ ತೆಳುಪೊರೆ ಅಥವಾ ಪಟಲ. (ಸ)ಎಲೆ ಅಲಗಿನಂಥ ವಿಸ್ತೃತ ಭಾಗ

ಪದರ

(ಭೂವಿ) ಆಧಾರ ಮೇಲ್ಮೈಗೆ ಸಮಾಂತರವಾಗಿ ಹರಡಿರುವ ಶಿಲೆ, ಬರ್ಫ, ಮಡ್ಡಿ ಅಥವಾ ಮಣ್ಣಿನ ತೆಳು ಸ್ತರ

ಪದಾರ್ಥ

(ರ) ವಿಶಿಷ್ಟ ಗುಣಗಳುಳ್ಳ ಒಂದು ಬಗೆಯ ದ್ರವ್ಯ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸಂಯೋಜನೆಯಿಂದ ಕೂಡಿದ್ದು, ಅದರ ಮೂಲದಿಂದ ಸ್ವತಂತ್ರವಾಗಿರುತ್ತದೆ

ಪದ್ಮರಾಗ, ವೈಢೂರ್ಯ

(ಭೂವಿ) ಸೊಗಸಾದ ಊದಾ ಅಥವಾ ನೇರಿಳೆ ಬಣ್ಣದ ಕ್ವಾರ್ಟ್ಸ್ / ಬೆಣಚುಕಲ್ಲು (ಆಮೆತಿಸ್ಟ್). ಷಷ್ಠಕ ವರ್ಗದ ಹರಳುಗಳಾಗಿ ಪ್ರಕೃತಿಯಲ್ಲಿ ಅಗ್ನಿಶಿಲೆಗಳ ಬಿರುಕುಗಳಲ್ಲಿ, ಸೀಳುಗಳಲ್ಲಿ ಲಭ್ಯ. ಗಾಜಿನಂಥ ಹೊಳಪಿರುತ್ತದೆ. ಕಾಠಿಣ್ಯಾಂಕ ೭. ಅಲ್ಪ ಮೊತ್ತದ ಮ್ಯಾಂಗನೀಸ್ ಅಥವಾ ಕಬ್ಬಿಣದ ಆಕ್ಸೈಡ್ ಕಶ್ಮಲವಾಗಿರುವುದು. ಕೆಂಪು ಅಥವಾ ಊದಾ ಬಣ್ಣದ ವೈಢೂರ್ಯಕ್ಕೆ ಸೈಬೀರಿಯನ್ ಆಮೆತಿಸ್ಟ್ ಎಂಬ ಹೆಸರುಂಟು

ಪನ್ನಾಲೆ ಮೀನು

(ಪ್ರಾ) ಅಸ್ಥಿಮತ್ಸ್ಯಗಳ ವಿಭಾಗ ಎಂದು ಕೆಲವು ವೇಳೆ ಪರಿಗಣಿಸುವ ಮೀನುಗಳ ಒಂದು ಗುಂಪು. ಡಿಪ್ನಾಯ್ ಹಾಗೂ ಕ್ರಾಸಾಪ್ಟರಿಜಿಯೈ ಮತ್ಸ್ಯಗಳಿಂದ ಕೂಡಿದ ಮೀನುಗಳ ಒಂದು ಪ್ರತ್ಯೇಕ ವರ್ಗ ಎಂದೂ ಕೆಲವು ವೇಳೆ ಪರಿಗಣಿಸುವುದುಂಟು

ಪಪೈರಸ್

(ಸ) ಸೈಪರೇಸೀ ಕುಟುಂಬಕ್ಕೆ ಸೇರಿದ ಜೊಂಡು ಜಾತಿಯ ಜಲಸಸ್ಯದಿಂದ ತಯಾರಿಸಿದ ಆದಿ ಕಾಲದಲ್ಲಿ ಬರವಣಿಗೆಗೆ ಉಪಯೋಗಿಸುತ್ತಿದ್ದ ಕಾಗದ. ಸೈಪರಸ್ ಪಪೈರಸ್ ವೈಜ್ಞಾನಿಕ ನಾಮ. ಇಜಿಪ್ಷಿಯನರು ಮೊದಲಾದವರು ಕ್ರಿಶ ೯ನೆಯ ಶತಮಾನದ ವರೆಗೂ ತಮ್ಮ ಜ್ಞಾನ ಸಂಪತ್ತನ್ನು ದಾಖಲಿಸಿ ಇರಿಸಲು ಇದನ್ನು ಬಳಸುತ್ತಿದ್ದರು. ಜಂಬುಕಾಗದ. ಪಪೈರಸ್ ಆಂಟಿಕೋರಮ್

ಪಂಪ್

(ತಂ) ತರಲಗಳನ್ನು ಎತ್ತುವ, ಸಾಗಿಸುವ, ಸಂಪೀಡಿಸುವ ಅಥವಾ ವಿರಳಿಸುವ ಸಾಧನ. ಇದರಲ್ಲಿ ಮೂರು ಬಗೆಗಳುಂಟು: ಮೋಟಾರ್ ಪಂಪ್, ಟರ್ಬೈನ್ ಪಂಪ್, ಕೇಂದ್ರಾಪಗಾಮಿ ಪಂಪ್

ಪಫರ್ ಮೀನು

(ಪ್ರಾ) ಟೆಟ್ರಾಡಾಂಟಿ ಫಾರ್ಮೀಸ್ ಗಣ, ಆಸ್ಟಿಕ್‌ತಿಯೀಸ್ ವರ್ಗ ಆಕ್ಟಿನೋಪೆರಿಜಿಯೈ ಉಪ ವರ್ಗಕ್ಕೆ ಸೇರಿದ ಒಂದು ವಿಚಿತ್ರ ಮೀನು. ಆತಂಕಕ್ಕೆ ಒಳ ಗಾದಾಗ ಇದರ ದೇಹ ಬಲೂನಿನಂತೆ ಊದು ವುದು. ಜಪಾನೀಯರು ಈ ಮೀನನ್ನು ರಸಭಕ್ಷ್ಯವಾಗಿ ಬಳಸುತ್ತಾರೆ. ಆದರೆ ಇದರ ಶರೀರದಲ್ಲಿರುವ ವಿಷವಸ್ತುವನ್ನು ಬೇರ್ಪಡಿಸದೆ ತಿಂದರೆ ಸಾವು ಖಚಿತ. ನೋಡಿ : ಉಂಡೆ ಮೀನು

ಪಯೋಜೆನಿಸಿಸ್

(ವೈ) ಕೀವು ಹುಟ್ಟುವುದು, ಕೀತುಕೊಳ್ಳುವುದು

ಪರ

(ಸಾ) ಇತರ ವ್ಯಕ್ತಿಗಳಿಗೆ ಅಥವಾ ವಸ್ತುಗಳಿಗೆ ಸೇರಿದ, ಸಂಬಂಧಪಟ್ಟ. ಅಸಂಗತ. ಹೊರಗಿನಿಂದ ತಂದು ಸೇರಿಸಿದ, ಬಂದು ಸೇರಿದ. ವಿದೇಶೀಯ

ಪರಂಗಿ ರೋಗ

(ವೈ) ಅಕ್ರಮ ಲೈಂಗಿಕ ಸಂಪರ್ಕದಿಂದ ಬರುವ ಗುಹ್ಯರೋಗ. ಟ್ರೆಪೊನೀಮ ಪ್ಯಾಲಿಡಮ್ ಎಂಬ ಬ್ಯಾಕ್ಟೀರಿಯಾಯಿಂದ ಈ ಸೋಂಕು ಮೊದಲು ಜನನಾಂಗಗಳಿಗೆ ತಗುಲಿ ಅನಂತರ ಚರ್ಮ, ಲೋಳೆ ಪೊರೆ, ಮೂಳೆ, ಸ್ನಾಯು, ಮಿದುಳು ಇವಕ್ಕೆಲ್ಲ ಹರಡುತ್ತದೆ. ಉಪದಂಶ. ರತಿರೋಗ

ಪರಂಪರೆ

(ಸಾ) ನೋಡಿ: ಮೌಲ್ಯ

ಪರಪೋಷಕತೆ

(ಸ) ಆಹಾರಕ್ಕಾಗಿ ಪೂರ್ವಸಿದ್ಧ ಸಸ್ಯ ಪದಾರ್ಥಗಳನ್ನು ಅವಲಂಬಿಸಿರುವುದು. ಸ್ವಪೋಷಕತೆಗೆ ವಿರುದ್ಧ

ಪರಪೋಷಿತ

(ಜೀ) ಸ್ವಂತ ಆಹಾರವನ್ನು ಸರಳ ವಸ್ತುಗಳಿಂದ ತಯಾರಿಸಿಕೊಳ್ಳಲಾಗದೆ ಕೊಳೆತು ವಿಘಟನೆಗೊಂಡ ಬಾಹ್ಯವಸ್ತುಗಳನ್ನು ಅಥವಾ ಜೀವಿಗಳನ್ನು ಅವಲಂಬಿಸಿಕೊಂಡಿರುವ ಪ್ರಾಣಿ ಅಥವಾ ಸಸ್ಯ. ಉದಾ: ಮಾನವರನ್ನು ಒಳಗೊಂಡಂತೆ ಎಲ್ಲ ಸಸ್ಯಾಹಾರಿ ಹಾಗೂ ಮಾಂಸಹಾರಿ ಪ್ರಾಣಿಗಳು ಪರಪೋಷಕಗಳು. ಶಿಲೀಂಧ್ರಗಳು, ಹೆಚ್ಚಿನ ಬ್ಯಾಕ್ಟೀರಿಯಾಗಳು ಮತ್ತು ಕೆಲವು ಹೂ ಬಿಡುವ ಸಸ್ಯಗಳೂ ಇತರ ಆಹಾರ ಮೂಲ ಅವಲಂಬಿಸಿದ ಪರ ಪೋಷಕಗಳು. ಅನ್ಯಾವಲಂಬಿ. ಪರಪುಷ್ಟತನದ. ನೋಡಿ: ಸ್ವಪೋಷಿತ.

ಪರಭಕ್ಷಕ

(ಪ್ರಾ) ಒಂದು ಪ್ರಭೇದದ ಜೀವಿ ಇನ್ನೊಂದು ಪ್ರಭೇದದ ಜೀವಿಯ ಮೇಲೆ ಆಕ್ರಮಣ ನಡೆಸಿ ತಿಂದು ಹಾಕುವುದು. ಸಾಮಾನ್ಯವಾಗಿ ಪರಭಕ್ಷಕವು ಬಲಿಜೀವಿಗಿಂತ ದೊಡ್ಡದಾಗಿರುತ್ತದೆ

ಪರಮಾಣವಿಕ ಆವೃತ್ತಿ

(ಭೌ) ಪರಮಾಣುವಿನ ಸಹಜ ಕಂಪನಾವೃತ್ತಿ; ಪರಮಾಣು ಗಡಿಯಾರದಲ್ಲಿ ಉಪಯೋಗ

ಪರಮಾಣವಿಕ ಉಷ್ಣ

(ಭೌ,ರ) ಯಾವುದೇ ವಸ್ತುವಿನ ಗ್ರಾಮ್ ಪರಮಾಣುವಿನ ಉಷ್ಣತೆಯನ್ನು ೧0ಸೆನಷ್ಟು ಹೆಚ್ಚಿಸಲು ಅವಶ್ಯವಾದ ಶಾಖ ಪ್ರಮಾಣ = ಪರಮಾಣುತೂಕ x ವಿಶಿಷ್ಟೋಷ್ಣ. ಉನ್ನತ ಉಷ್ಣತೆಗಳಲ್ಲಿ ಹೆಚ್ಚಿನ ಘನ ಧಾತುಗಳ ಪರಮಾಣವಿಕ ಉಷ್ಣ ಸರಿಸುಮಾರು ಒಂದೇ ಆಗಿರುತ್ತದೆ

ಪರಮಾಣವಿಕ ಚದರಿಕೆ

(ಭೌ) ವಿಕಿರಣ (ಸಾಧಾರಣವಾಗಿ ಎಲೆಕ್ಟ್ರಾನ್‌ಗಳು ಅಥವಾ ಎಕ್ಸ್‌ವಿಕಿರಣಗಳು) ಹಾದುಹೋಗುವ ಮಾಧ್ಯಮದಲ್ಲಿಯ ಬಿಡಿ ಪರಮಾಣುಗಳಿಂದ ಸಂಭವಿಸುವ ಚದರಿಕೆ. ಪರಮಾಣವಿಕ ಪ್ರಕೀರ್ಣನ

ಪರಮಾಣವಿಕ ವಿಘಟನೆ

(ಭೌ) ವಿಕಿರಣಪಟು ಪರಮಾಣುಗಳು ತಮ್ಮಷ್ಟಕ್ಕೆ (ಅಂದರೆ ಬಾಹ್ಯ ಬಲಪ್ರಯೋಗವಿಲ್ಲದೆ) ವಿಕಿರಣ ಸೂಸಿ ಭಿನ್ನ ರಾಸಾಯನಿಕ ಪರಮಾಣು ಉತ್ಪನ್ನಗಳಾಗಿ ಕ್ಷಯಿಸುವ ನೈಸರ್ಗಿಕ ವಿದ್ಯಮಾನ

Search Dictionaries

Loading Results

Follow Us :   
  Download Bharatavani App
  Bharatavani Windows App