भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪಟ್ಟೆ

(ಭೌ) ಆವೃತ್ತಿಗಳು ಅಕ್ಕಪಕ್ಕಗಳಲ್ಲಿರುವ ತರಂಗಗಳ ಒಂದು ವ್ಯಾಪ್ತಿ. ಉದಾ: ಬೆಳಕು, ರೇಡಿಯೊ ಅಲೆಗಳು

ಪಟ್ಟೆ ಅಗಲ

(ಭೌ) ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸ ಲಾಗುವ ಆವೃತ್ತಿಗಳ ವ್ಯಾಪ್ತಿ ಅಥವಾ ಹರವು. ಉದಾ: ರೇಡಿಯೋ ಇಲ್ಲವೇ ದೂರದರ್ಶನ ಪ್ರಸಾರಗಳಲ್ಲಿ ಬಳಸುವ ಯಾವುದೇ ಆವರ್ತನ ಶ್ರೇಣಿಯಲ್ಲಿನ ಒಂದು ನಿರ್ದಿಷ್ಟ ಅವಧಿ

ಪಟ್ಟೆ ಗರಗಸ

(ತಂ) ಗರಗಸದಂತೆ ಹಲ್ಲುಗಳಿರುವ, ಕಿರಿ ಅಗಲದ, ಕೊನೆಗಳಿರದ ಲೋಹ ಪಟ್ಟೆ. ರಾಟೆಗಳಿಗೆ ಜೋಡಿಸಿ ತಿರುಗಿಸಿದಾಗ ನಿರಂತರ ಚಲನಶೀಲ ಗರಗಸವಾಗಿ ಕೆಲಸ ಮಾಡುತ್ತದೆ

ಪಟ್ಟೆ ರಚನೆ

(ಭೂವಿ) ವಿಭಿನ್ನ ನೇಯ್ಗೆಗಳ ಮತ್ತು/ಅಥವಾ ಸಂಯೋಜನೆಗಳ ಪದರಗಳು ಪರ್ಯಾಯವಾಗಿ ಹೆಣೆದುಕೊಂಡು ಅಗ್ನಿಶಿಲೆಗಳಲ್ಲಿಯೂ ರೂಪಾಂತರಿತ ಶಿಲೆ ಗಳಲ್ಲಿಯೂ ಪ್ರಕಟವಾಗುವ ಪಟ್ಟೆಗಳ ವಿನ್ಯಾಸ

ಪಟ್ಟೆ ರೋಹಿತ

(ಭೌ) ಸೀಮಿತ ಆವೃತ್ತಿಗಳ ಪಟ್ಟೆಯಲ್ಲಿ ವ್ಯಾಪಿಸಿರುವ, ದಟ್ಟವಾಗಿ ಸೇರಿಕೊಂಡ ಅಸಂಖ್ಯ ರೇಖೆ ಗಳಿಂದಾದ ಸ್ಪಷ್ಟ ಅಂಚುಗಳಿರುವ ಪಟ್ಟೆಗಳನ್ನು ಒಳಗೊಂಡಿರುವ, ಆಣವಿಕ ದೃಕ್ ರೋಹಿತ

ಪಟ್ಟೆ ಲಂಬನ

(ತಂ) ಸಾಪೇಕ್ಷವಾಗಿ ಚಿಕ್ಕದಾದ ಟ್ಯೂನಿಂಗ್ ಕೆಪಾಸಿಟರ್‌ಅನ್ನು (ಶ್ರುತೀಕರಣ ಸಂಧಾರಿತ್ರವನ್ನು) ರೇಡಿಯೊ ರಿಸೀವರ್‌ನ ಪ್ರಧಾನ ಟ್ಯೂನಿಂಗ್ ಕೆಪಾಸಿಟರ್ ನೊಂದಿಗೆ ಸಮಾಂತರವಾಗಿ ಜೋಡಿಸಿ ಚಿಕ್ಕದರ ನೆರವಿನಿಂದ ಸೂಕ್ಷ್ಮ ಟ್ಯೂನಿಂಗ್ ಸಾಧ್ಯವಾಗುವಂತೆ ಮಾಡುವ ವ್ಯವಸ್ಥೆ. ಆವೃತ್ತಿ ಪಟ್ಟೆ (ಬ್ಯಾಂಡ್) ಕಿಕ್ಕಿರಿದಿದ್ದಾಗ ಇದು ಹೆಚ್ಚು ಉಪಯುಕ್ತ

ಪತಂಗ

(ಪ್ರಾ) ಹೆಟೆರೊನ್ಯೂರ ಉಪಗಣಕ್ಕೆ ಸೇರಿದ ಶಲ್ಕವಂತ ಕೀಟ. ರೆಕ್ಕೆಗಳುಂಟು. ನಿಶಾಚರಿ. ಸ್ಪರ್ಶಾಂಗಗಳು ತುಪ್ಪಳದಿಂದ ಕೂಡಿದ್ದು ಅಪರೂಪವಾಗಿ ಜೊತೆ ಗೂಡಿರುತ್ತವೆ. ಇದಕ್ಕೂ ಚಿಟ್ಟೆಗೂ ಇದೇ ಮುಖ್ಯ ವ್ಯತ್ಯಾಸ. ಇದರ ಶರೀರ ಚಿಟ್ಟೆಯ ಶರೀರಕ್ಕಿಂತಲೂ ದಪ್ಪ. ಬಣ್ಣವು ಉಜ್ಜ್ವಲವಲ್ಲ. ರೆಕ್ಕೆಗಳು ಚಿಕ್ಕವು

ಪತಂಗ ವೃಕ್ಷ

(ಸ) ಫ್ಯಾಬೇಸೀ (ಲೆಗ್ಯೂಮಿನೋಸೀ) ಕುಟುಂಬ, ಸೀಸಾಲ್‌ಪಿನಾಯ್ಡೀ ಉಪಕುಟುಂಬಕ್ಕೆ ಸೇರಿದ ಕಾಡು ಮರ. ಸೀಸಾಲ್‌ಪಿನಿಯ ಸಪ್ಪನ್ ವೈಜ್ಞಾನಿಕ ನಾಮ. ಸಪ್ಪಂಗ ಪರ್ಯಾಯ ನಾಮ. ಬ್ರಜಿಲಿನ್ ವರ್ಣಕ ಇದರ ತೊಗಟೆಯಲ್ಲಿ ಇರುವುದರಿಂದ ರೇಷ್ಮೆ, ಉಣ್ಣೆ ಬಟ್ಟೆಗಳಿಗೆ ಬಣ್ಣ ಕಟ್ಟಲು ಬಳಕೆ. ಗಡಸಾದ ಇದರ ಚೌಬೀನೆಯನ್ನು ಪೀಠೋಪಕರಣ ತಯಾರಿಕೆಗೆ ಬಳಸ ಲಾಗುತ್ತದೆ. ಮರಕ್ಕೆ ಔಷಧೀಯ ಮಹತ್ತ್ವಉಂಟು

ಪತನಶೀಲ

(ಸ) ಶರತ್ಕಾಲದಲ್ಲಿ ಎಲೆ ಉದುರುವ (ಪರ್ಣ ಪಾತಿ ಮರಗಳು). (ಪ್ರಾ) ಹಾಲುಹಲ್ಲು ಬೀಳುವ (ಸ್ತನಿಗಳು). ಸಂಭೋಗಾನಂತರ ರೆಕ್ಕೆ ಕಳಚುವ (ಇರುವೆ ಮುಂತಾದವುಗಳು)

ಪತ್ತೇಕಾರಿ

(ಭೌ) ನೋಡಿ: ಗೀಗರ್ ಮುಲ್ಲರ್ ಗುಣಕ (ತಂ) ಸಂಸೂಚಕ. ಯಾವುದೇ ವಾಹಕವನ್ನು ಶ್ರವಣಶೀಲ ಅಥವಾ ದೃಕ್‌ಶೀಲ ರೂಪಕ್ಕೆ ಪರಿವರ್ತಿಸುವ ಮಂಡಲ. ಡಿಟೆಕ್ಟರ್

ಪತ್ರರಂಧ್ರಗಳು

(ಸ) ನಾಳೀಯ ಸಸ್ಯದ ಎಲೆ ಅಥವಾ ಕಾಂಡದ ಅಧಿಚರ್ಮದಲ್ಲಿರುವ ನಾನಾ ಗಾತ್ರಗಳ ರಂಧ್ರಗಳು. ಇವು ಪ್ರತಿಯೊಂದೂ ಎರಡು ರಕ್ಷಾಕೋಶಗಳಿಂದ ಸುತ್ತುವರಿಯಲ್ಪಟ್ಟಿವೆ. ಸಸ್ಯದ ಆಂತರಿಕ ಊತಕಗಳ ಮತ್ತು ವಾತಾವರಣದ ನಡುವೆ ದ್ಯುತಿಸಂಶ್ಲೇಷಣೆಗೆ ಅಗತ್ಯವಿರುವ ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್ನಿನ ವಿನಿಮಯಕ್ಕೆ ಇವು ಅವಕಾಶ ಮಾಡಿಕೊಡುತ್ತವೆ

ಪತ್ರರಾಶಿ

(ಸ) ಎಲೆಗುಂಪಲು

ಪತ್ರಶೀಲತೆ

(ರ) ಬಡಿಯುವುದರಿಂದ, ಬಲ ಪೀಡನದಿಂದ ಒಡೆದುಹೋಗದೆ ತಗಡಾಗಿ, ರೇಕುಗಳಾಗಿ ವಿಸ್ತರಿಸ ಬಹುದಾದ ಗುಣ. ಲೋಹ (ಚಿನ್ನ, ತಾಮ್ರ ಇತ್ಯಾದಿ) ಮತ್ತು ಮಿಶ್ರ ಲೋಹಗಳ ಭೌತಗುಣ. ಕುಟ್ಯತೆ. ನೋಡಿ: ತನ್ಯತೆ

ಪತ್ರಾಗಾರ ದಫ್ತರ

(ಕಂ) ಸುಭದ್ರ, ಸುಸ್ಥಿರ ದಾಸ್ತಾನು ಮಾಧ್ಯಮದಲ್ಲಿ ಸುರಕ್ಷಿತವಾಗಿ ಹಿಡಿದಿಟ್ಟಿರುವ ದಫ್ತರದ ನಕಲು

ಪಥ

(ಗ) ದತ್ತ ನಿರ್ಬಂಧಗಳಿಗೆ ಅನುಸಾರವಾಗಿ ಚಲಿಸುವ ಬಿಂದುಗಳು, ಸರಳ ಅಥವಾ ವಕ್ರರೇಖೆಗಳು ರೂಪಿಸುವ ಜ್ಯಾಮಿತೀಯ ಆಕೃತಿ. ಉದಾ: ಸ್ಥಿರ ಕೇಂದ್ರದಿಂದ ಸ್ಥಿರ ದೂರದಲ್ಲಿ ಇರುವಂತೆ ಸಮತಲದಲ್ಲಿ ಚಲಿಸುವ ಬಿಂದು ಪಥವು ವೃತ್ತ, ಮೂರು ಆಯಾಮಗಳಲ್ಲಿ ಚಲಿಸಿದರೆ ಗೋಳ

ಪಥ

(ತಂ) ಸಂeಗಳನ್ನು ರವಾನಿಸಬಹುದಾದ ಮಾರ್ಗ

ಪಥವೈಕಲ್ಯ

(ಖ) ಪ್ರಮುಖ ಕಾಯದ ಆಕರ್ಷಣ ದಿಂದ ಅದರ ಸುತ್ತಲೂ ಚಲಿಸುತ್ತಿರುವ ಒಂದು ಆಕಾಶಕಾಯದ ಚಲನೆಯಲ್ಲಿ ಬೇರೊಂದು ಕಾಯದ ಆಕರ್ಷಣೆಯಿಂದಾಗುವ ದಿಕ್ಚ್ಯುತಿ. ಕ್ಷೋಭೆ

ಪಥ್ಯವಿಜ್ಞಾನ

(ವೈ) ವಿವಿಧ ಆರ್ಥಿಕ ಸ್ಥಿತಿಗಳಲ್ಲಿರುವ ಜನರಿಗೆ, ಇಲ್ಲವೇ ಚಿಕಿತ್ಸೆಯ ಸಲುವಾಗಿ ರೋಗಿಗಳಿಗೆ, ಆಹಾರವನ್ನು ಪೋಷಣ ತತ್ತ್ವಾನುಸಾರ ನಿಗದಿಪಡಿಸುವುದನ್ನು ಕುರಿತ ವಿಜ್ಞಾನ ವೃತ್ತಾಂತ

ಪದ ಸಂಸ್ಕಾರಕ

(ಕಂ) ಪಠ್ಯ ಮಾಹಿತಿಗಳ ಸಿದ್ಧತೆ, ಸಂಪಾದನೆ, ಮುದ್ರಣ ಮತ್ತು ರವಾನೆ ಈ ಕ್ರಿಯೆಗಳಿಗೆ ನೆರವಾಗಲು ರಚಿಸಿರುವ ಕಂಪ್ಯೂಟರ್ ವ್ಯವಸ್ಥೆ

ಪದಗುರುಡು

(ವೈ) ಲಿಖಿತ ಭಾಷೆಯನ್ನು ಓದಲಾಗದೆ ಇರುವುದು; ಮಿದುಳಿಗಾದ ಹಾನಿ ಇದಕ್ಕೆ ಕಾರಣ

Search Dictionaries

Loading Results

Follow Us :   
  Download Bharatavani App
  Bharatavani Windows App