भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪಂಜ

(ಪ್ರಾ) ನೋಡಿ: ಅಂಗ್ಯುಲ

ಪಂಜರ

(ಸಾ) ಹಕ್ಕಿಗಳು, ಪ್ರಾಣಿಗಳು, ಯುದ್ಧದ ಸೆರೆಯಾಳು ಗಳನ್ನು ಇಡಲು, ತಂತಿ ಅಥವಾ ಕಂಬಿಗಳಿಂದ ಮಾಡಿದ, ಒಂದು ಕಡೆ ಇಡುವ ಅಥವಾ ಒಯ್ಯಲು ಬರುವ ಬೋನು, ಗೂಡು. (ಭೌ) ಒಂದು ಅಥವಾ ಹೆಚ್ಚು ಪರಕೀಯ ಪರಮಾಣುಗಳನ್ನು ಸೆರೆ ಹಿಡಿದಿಡಬಲ್ಲಂಥ, ಸ್ಫಟಿಕದಲ್ಲಿ ಉಂಟಾಗುವ, ತೆರವು ಅಥವಾ ಶೂನ್ಯ ಪ್ರದೇಶ

ಪಂಜಾಕಾರ ಪತ್ರ

(ಸ) ಮೂರು ಭಾಗಗಳಿರುವ ಎಲೆ. ಇದರಲ್ಲಿ ಪಕ್ಕದ ಎರಡು ಭಾಗಗಳು ಒಂದು ಅಥವಾ ಎರಡು ಬಾರಿ ಕವಲೊಡೆದಿರುತ್ತವೆ. ಕಾಲು ಬೆರಳುಗಳಂತೆ, ಹಕ್ಕಿಯ ಉಗುರು ಗಳಂತೆ, ವಿಂಗಡವಾಗಿರುವ (ಎಲೆ)

ಪಟ

(ಸಾ) ರೇಖಾಚಿತ್ರ. ನಕ್ಷೆ, ಆಲೇಖ

ಪಟಪಟ ಸಿಡಿತ

(ರ) ಖನಿಜಗಳನ್ನು ಕಾಸಿದಾಗ ಅಥವಾ ಹರಳುರೂಪಿ ಘನಗಳನ್ನು ಕಾಸಿದಾಗ ಆಂತರಿಕ ಸ್ಫಟಿಕ ವ್ಯವಸ್ಥೆ ಕುಸಿದು ಬೀಳುವುದರ ಫಲವಾಗಿ ಉಂಟಾಗುವ ಶಬ್ದ.ಉದಾ: ಉಪ್ಪು ಕಾಸಿದಾಗ ಆಗುವ ಶಬ್ದ

ಪಟಲ

(ಸ) ಯೂಗ್ಲೆನೊಫೈಸೆಯ ಪ್ಲಾಸ್ಮಾಲೆಮ್ಮದ (ಸಸ್ಯದ ಕೋಶ, ಅದರ ಆವೃತ ಭಾಗ ನಡುವೆ ಅಣು ಚಲನೆಯನ್ನು ನಿಯಂತ್ರಿ ಸುವ ಹೊರಪೊರೆ) ಕೆಳಗಿರುವ ಅಂತರಬಂಧನದ ಸುರುಳಿಸುತ್ತಿರುವ ಪ್ರೋಟೀನ್‌ಯುಕ್ತ ಪಟ್ಟಿಗಳ ಪದರ. (ಭೌ) ನ್ಯೂಕ್ಲಿಯರ್ ಸಂಶೋಧನೆ ಯಲ್ಲಿ ಬಳಸುವ, ಕಳಚಬಹುದಾದ ದ್ಯುತಿ ಸಂವೇದೀ ಎಮಲ್ಶನ್

ಪಟಲಕ

(ಜೀ) ನೀರಿನ ಮೇಲ್ಮೈ ಮೇಲೆ ಅಥವಾ ನೀರಿನ ಮೇಲ್ಮೈ ಮೇಲಿನ ಪೊರೆಯ ಮೇಲೆ ತೇಲುವ ಅಥವಾ ಈಜುವ ಸೂಕ್ಷ್ಮಜೀವಿಗಳು

ಪಟಸ್ತಂಭ

(ತಂ) ೧. ಹಡಗಿನ ಹಾಯಿಗಳಿಗೆ ಆಶ್ರಯಕ್ಕಾಗಿ ಅಡಿಗಟ್ಟಿನಿಂದ ಹೊರಟ ಕಬ್ಬಿಣದ ಅಥವಾ ಮರದ ಉದ್ದ, ತೆಳು, ನೇರ ಕಂಬ. ಕೂವೆ ಮರ ೨. ನಿಸ್ತಂತು ಸಂeಗಳನ್ನು ಪ್ರಸಾರ ಮಾಡುವ ಅಥವಾ ಗ್ರಹಿಸುವ ಏರಿಯಲ್‌ಗೆ ಆಧಾರವಾಗಿರುವ ಕಂಬ ಅಥವಾ ಜಾಲಕ ಕಟ್ಟಡ

ಪಟಿಕ

(ರ) ಪೊಟ್ಯಾಸಿಯಮ್ ಅಲ್ಯೂಮಿನಿಯಮ್ ಸಲ್ಫೇಟ್; ಅಷ್ಟ ಭುಜಗಳಿರುವ ನಿರ್ವರ್ಣ ಪ್ರಬಲ ಬಂಧಕ ಸ್ಫಟಿಕ. KAl(SO4)2.12H2O. ನಿಸರ್ಗ ಲಭ್ಯ. ರಂಗು ಹಾಕುವಿಕೆಯಲ್ಲಿ ವರ್ಣಬಂಧಕವಾಗಿ ಅಂತೆಯೇ ಅಗ್ನಿ ನಿರೋಧಕ ವ್ಯವಸ್ಥೆಯಲ್ಲಿ ಕೂಡ ಬಳಕೆ. ಪಟಿಕಾರ

ಪಟಿಕಗಳು

(ರ) M2SO4R2(SO4)3.24H2O ಸೂತ್ರವಿರುವ ದ್ವಿ-ಲವಣಗಳು; ಇಲ್ಲಿ M ಯಾವುದೇ ಲೋಹವನ್ನು (ಅಥವಾ ವಿದ್ಯುತ್‌ಧನ ರ‍್ಯಾಡಿಕಲ್‌ಅನ್ನು) ಮತ್ತು R ಆರ್ಗ್ಯಾನಿಕ್ ಹೈಡ್ರೊ-ಕಾರ್ಬನ್ ರ‍್ಯಾಡಿಕಲ್‌ಅನ್ನು (ಅಲ್ಲಿಯೂ ಕ್ಷಾರೀಯ ರ‍್ಯಾಡಿಕಲ್‌ಅನ್ನು) ಪ್ರತಿನಿಧಿಸುತ್ತವೆ. M ಏಕವೇಲೆನ್ಸೀಯ ಮತ್ತು R ತ್ರಿವೇಲೆನ್ಸೀಯ ವಾಗಿರತಕ್ಕದ್ದು. ಪರ್ಯಾಪ್ತ ದ್ರಾವಣವಾಗಿಸಿ ಸ್ಪಟಿಕೀಕರಿಸಿ ತಯಾರಿಸಲಾಗುತ್ತದೆ. ಪೊಟ್ಯಾಷ್‌ಪಟಿಕ, ಫೆರಿನ್ ಪಟಿಕ ಇತ್ಯಾದಿ. ಪೊಟ್ಯಾಷ್ ಪಟಿಕವನ್ನು ನೀರಿನ ಶುದ್ಧೀಕರಣದಲ್ಲಿ ಬಳಸಲಾಗುತ್ತದೆ

ಪಟು ಕೇಂದ್ರಗಳು

(ರ) ಅಧಿಶೋಷಕದ ಮೇಲ್ಮೈ ಯಲ್ಲಿ ಸಡಿಲವಾಗಿ ಬಂಧಿತವಾದ ಪರಮಾಣುಗಳ ದೆಸೆಯಿಂದಾಗಿ ಅದರ ಮೇಲ್ಮೈ ಮೇಲೆ ಕ್ರಿಯಾವರ್ಧಕ ಚಟುವಟಿಕೆ ತೀವ್ರವಾಗಿ ನಡೆಯುವ ನೆಲೆಗಳು

ಪಟುಕರಣ ಶಕ್ತಿ

(ರ) ವಿಕಿರಣದ ಉತ್ಸರ್ಜನೆ ಇಲ್ಲವೇ ರಾಸಾಯನಿಕ ಕ್ರಿಯೆಯಂಥ ನಿರ್ದಿಷ್ಟ ಕ್ರಿಯೆಯನ್ನು ಜರಗಿಸಲು ಪರಮಾಣು ವ್ಯವಸ್ಥೆಯು ಪಡೆಯಬೇಕಾದ, ಅದರ ಭೂಸ್ಥಿತಿ (ಗ್ರೌಂಡ್ ಸ್ಟೇಟ್) ಶಕ್ತಿಗಿಂತ ಹೆಚ್ಚಿನ, ಶಕ್ತಿ

ಪಟುತ್ವ

(ರ) ವಿಕಿರಣಪಟು ವಸ್ತುವಿನ ನ್ಯೂಕ್ಲಿಯಸ್‌ನಲ್ಲಿ ೧ ಸೆಕೆಂಡ್‌ನಲ್ಲಿ ಸಂಭವಿಸುವ ಪರಮಾಣುಗಳ ವಿಭಜನೆಗಳ ಸಂಖ್ಯೆ. ಕ್ಯೂರಿ ಇದರ ಏಕಮಾನ

ಪಟೂಕೃತ ಅಲ್ಯೂಮಿನ

(ರ) ಪಟೂಕೃತ ಅಲ್ಯೂಮಿನಿಯಮ್ ಆಕ್ಸೈಡ್ ಅಥವಾ ಹೈಡ್ರಾಕ್ಸೈಡ್. ಉತ್ತಮ ಅಧಿಶೋಷಕ. ಅನಿಲಗಳನ್ನು ಶುಷ್ಕಗೊಳಿಸಲು ಉಪಯುಕ್ತ. ವರ್ಣಲೇಖನದಲ್ಲಿ ಹೆಚ್ಚು ಬಳಕೆ

ಪಟೂಕೃತ ಇದ್ದಲು

(ಪವಿ) ಅನಿಲಗಳು, ವಾಸನೆ, ಬಣ್ಣಗಳು ಇತ್ಯಾದಿಗಳನ್ನು ಹೀರಲು ಬಳಸುವ, ಆಮ್ಲ ಇತ್ಯಾದಿಗಳಿಂದ ಸಂಸ್ಕರಿಸಲ್ಪಟ್ಟ, ಹೆಚ್ಚಿನ ಕ್ರಿಯಾಶೀಲತೆಯ ಇದ್ದಲು. ಮಾಲಿನ್ಯ ನಿಯಂತ್ರಣ, ಜಲಸಂಸ್ಕರಣ ಮೊದಲಾದವುಗಳಲ್ಲಿ ಬಳಕೆ

ಪಟೂಕೃತ ಕಾರ್ಬನ್

(ರ) ಸಸ್ಯ ಪದಾರ್ಥವನ್ನು ವಾಯುರಹಿತ ಸ್ಥಿತಿಯಲ್ಲಿ (ನಿರ್ದ್ರವ್ಯತೆಯಲ್ಲಾದರೆ ಮೇಲು) ಕಾರ್ಬನೀಕರಿಸಿದಾಗ ದೊರೆಯುವ ಕಾರ್ಬನ್; ಇದು ಅನಿಲಗಳನ್ನು ಅಧಿಕ ಪ್ರಮಾಣಗಳಲ್ಲಿ ಅಧಿಶೋಷಿಸಬಲ್ಲದು; ಅನಿಲ ಮೊಗವಾಡದ ಅವಶ್ಯಕ ಘಟಕ

ಪಟೇಜಿಯಮ್

(ಪ್ರಾ) ಹಾರಾಡುವ ಅಳಿಲು, ಹಾರಾಡುವ ಹಲ್ಲಿ, ಬಾವಲಿ ಮುಂತಾದ ವೃಕ್ಷದ ಮೇಲೆ ವಾಸಿಸುವ ಪ್ರಾಣಿಗಳ ಮುಂಗಾಲುಗಳ ಮತ್ತು ಹಿಂಗಾಲುಗಳ ನಡುವೆ ಹರಡಿಕೊಂಡಿರುವ ತೆಳು ಪೊರೆ ಅಥವಾ ಚರ್ಮ ಪದರ. ಹಕ್ಕಿಯ ರೆಕ್ಕೆಯಲ್ಲಿ ಹೆಗಲು ಮೂಳೆ ಮತ್ತು ಮುಂದೋಳಿನ ಒಳ ಎಲುಬುಗಳ ಮುಂದಿರುವ ತೆಳು ಪೊರೆ ಅಥವಾ ಚರ್ಮಪದರ

ಪಟ್ಟಕ

(ಗ, ಭೌ) ನೋಡಿ: ಅಶ್ರಗ

ಪಟ್ಟಿ ಚಾಲನೆ

(ತಂ) ತುದಿ ಇರದ, ಉದ್ದವಾದ ಮತ್ತು ಬಿಗಿಯಾದ ಪಟ್ಟಿಯಿಂದ ಸುತ್ತುವರಿದಿರುವಂತೆ ಪರಸ್ಪರ ಜೋಡಣೆ ಗೊಂಡಿರುವ, ಅನುಗುಣವಾದ ಅಂಚುಗಳುಳ್ಳ ಎರಡು ಚಕ್ರಗಳ ಪೈಕಿ ಒಂದರ ಚಾಲನೆಯಿಂದ ಇನ್ನೊಂದೂ ಆವರ್ತಿಸತೊಡಗುವ ಕ್ರಿಯೆ. ಪಟ್ಟಿ ಮೂಲಕ ಚಾಲನೆ ವರ್ಗಾವಣೆ

ಪಟ್ಟಿಕೆ ಸಂಕೇತ

(ಕಂ) ಕಂಪ್ಯೂಟರ್ ಗ್ರಹಿಸಲು ಅನುಕೂಲ ವಾಗುವಂತೆ ಅಂಕೆಗಳನ್ನು ಸಂಕೇತಿಸಿ ರೂಪಿಸಲಾದ ದಪ್ಪ ಹಾಗೂ ಸಣ್ಣ ಸಮಾಂತರ ರೇಖೆಗಳನ್ನೊಳಗೊಂಡ ಪಟ್ಟಿಕೆಗಳು. ಇವನ್ನು ಪದಾರ್ಥಗಳಿಗೆ ಲಗತ್ತಿಸಿ ಅವುಗಳ ಬೆಲೆ ಮತ್ತಿತರ ವಿಷಯ ತಿಳಿಯಲು ವ್ಯಾಪಾರಿ ಮಳಿಗೆಗಳಲ್ಲಿ ಬಳಸಲಾಗುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App