भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567894950Next >

ಪಕ್ಕೆಲುಬು

(ಜೀ) ಕಶೇರುಕಗಳ ಅಸ್ಥಿಪಂಜರದ ಬೆನ್ನೆಲುಬಿಗೂ ಎದೆಯ ಮೂಳೆಗೂ ಅಂಟಿಕೊಂಡಿರುವ ಕಮಾನು ಆಕಾರದ ಎಲುಬು; ವಿಸೆರಾವನ್ನು (ಆಂತರಿಕಾಂಗಗಳನ್ನು) ಆವರಿಸಿರುವ ಶರೀರದ ಭಿತ್ತಿಗಳಿಗೆ ಆಸರೆಯಾಗಿ ಉಪಯುಕ್ತ

ಪಕ್ವ

(ಜೀ) ಸಂಪೂರ್ಣ ಬೆಳವಣಿಗೆಯ ಅಥವಾ ಅಭಿವರ್ಧನೆಯ ಹಂತಕ್ಕೆ ಬಂದ ಅಥವಾ ಅಂಥ ಹಂತದಲ್ಲಿರುವ

ಪಕ್ಷ

(ಖ) ಹುಣ್ಣಿಮೆಯಿಂದ ಮುಂದಿನ ಅಮಾವಾಸ್ಯೆ ತನಕದ (ಕೃಷ್ಣ ಪಕ್ಷ) ಅಥವಾ ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆ ತನಕದ (ಶುಕ್ಲ ಪಕ್ಷ) ಅಂದಾಜು ೧೪ ದಿವಸಗಳ ಅವಧಿ

ಪಕ್ಷಪಾತ

(ಭೌ) ದತ್ತ ವಿದ್ಯುತ್ ಪ್ರವಾಹಕ್ಕಿಂತ ಹೆಚ್ಚಿನ ಪ್ರವಾಹಗಳಿಗೆ ಸಂಬಂಧಿಸಿದಂತೆ ಅಥವಾ ಒಂದು ಧ್ರುವೀಯತೆಯ ಪ್ರವಾಹಕ್ಕೆ ಸಂಬಂಧಿಸಿದಂತೆ ಕ್ರಿಯೆ ನಡೆಸುವ ಹಾಗೆ ರಿಲೇಯಲ್ಲಿ (ಟಪ್ಪೆ) ಮಾಡಿದ ಹೊಂದಾಣಿಕೆ. ಇಲ್ಲಿ ಪಕ್ಷಪಾತವು ದತ್ತ ಪ್ರವಾಹಕ್ಕೆ ವಿರುದ್ಧವಾಗಿರುವುದು. ಅಭಿನತಿ

ಪಕ್ಷಪಾತ ಫಲಿತಾಂಶ

(ಭೌ) ವೀಕ್ಷಣೆ, ಗುಣ ಪರೀಕ್ಷಣೆ ಮುಂತಾದ ಕ್ರಿಯೆಗಳಲ್ಲಿ ಉಪಕರಣದ ನ್ಯೂನತೆಯ ಇಲ್ಲವೇ ವಿಧಾನದ ದುರ್ಬಲತೆಯ ಕಾರಣವಾಗಿ ಅಳತೆಯಲ್ಲಿ ವ್ಯವಸ್ಥಿತವಾಗಿ ದೋಷ ನುಸುಳುವುದು

ಪಕ್ಷವಾತ

(ವೈ) ಸೊಂಟದ ಕೆಳಗಿನ ಅಂಗಗಳು ನಿಶ್ಚೇಷ್ಟಿತವಾಗುವುದು, ಪಾರ್ಶ್ವವಾಯುವಿಗೆ ತುತ್ತಾಗುವುದು

ಪಕ್ಷಿ

(ಪ್ರಾ) ಹೆಚ್ಚು ಕಡಿಮೆ ದೇಹವಿಡೀ ಗರಿಗಳಿಂದ ಆವೃತ ವಾಗಿರುವ ಮತ್ತು ಕೈಗಳೆರಡೂ ರೆಕ್ಕೆಗಳಾಗಿ ಮಾರ್ಪಟ್ಟಿರುವ ನಿಯತತಾಪಿ ಕಶೇರುಕ. ಏವೀಸ್ ವರ್ಗದ ಸದಸ್ಯ ಪ್ರಾಣಿ. ಪ್ರಪಂಚದಲ್ಲಿರುವ ಸುಮಾರು ೨೭-೨೮ ಪಕ್ಷಿ-ವರ್ಗಗಳ ಪೈಕಿ ೨೧ ವರ್ಗಗಳ, ೬೨ ಕುಟುಂಬ ಹಾಗೂ ೧೨ ಉಪಕುಟುಂಬಗಳಿಗೆ ಸೇರಿದ ಪಕ್ಷಿಗಳು ಭಾರತದಲ್ಲಿವೆ

ಪಕ್ಷಿ ಪಾಲನೆ

(ಪ್ರಾ) ಪಕ್ಷಿಸಂಗೋಪನೆ ಹಾಗೂ ಸಂವರ್ಧನೆ, ವಿಶೇಷವಾಗಿ ಮನೆಗಳಲ್ಲಿ ಕಾಡುಹಕ್ಕಿಗಳ ಸಾಕಣೆ

ಪಕ್ಷಿಪಾದೀ

(ಪ್ರಾ) ಹಕ್ಕಿಗಳು ಮರದ ಮೇಲೆ ಕುಳಿತು ಕೊಳ್ಳುವಾಗ ಆಸರೆಯಾಗಿ ಮರದ ಕೊಂಬೆ ಇತ್ಯಾದಿಗಳನ್ನು ಹಿಡಿದುಕೊಳ್ಳಲನುವಾಗುವಂತೆ ರೂಪಿತವಾದ (ಹಕ್ಕಿಯ ಪಾದ)

ಪಕ್ಷಿವಿಜ್ಞಾನ

(ಪ್ರಾ) ಪಕ್ಷಿಗಳ ಸ್ವರೂಪ, ಜೀವನ, ವರ್ಗೀಕರಣ, ಶರೀರ ರಚನೆ, ಅಭ್ಯಾಸ, ಆವಾಸ, ಹಾರಾಟ, ವಲಸೆ ಮೊದಲಾದವುಗಳನ್ನು ಕುರಿತ ವೈಜ್ಞಾನಿಕ ಅಧ್ಯಯನ

ಪಂಖ

(ತಂ) ಸ್ಥಿರ ದಂಡದ ಸುತ್ತ ಇದರ ಅಲಗುಗಳು ವೇಗಯುತವಾಗಿ ಆವರ್ತಿಸಿ ಗಾಳಿಯಾಡಲು ನೆರವಾಗುತ್ತವೆ. ಫ್ಯಾನ್

ಪಂಚಕ

(ಗ) ಐದರ ಸಂಖ್ಯೆ (ರ) ಸಂಯೋಗಶಕ್ತಿ ಐದು ಇರುವ ಮೂಲಧಾತು. (ಪವಿ) ಐದು ಅನುಕ್ರಮ ದಿನಗಳ ಅವಧಿ. ಇದು ೩೬೫ ದಿನಗಳ ವರ್ಷದ ನಿಷ್ಕೃಷ್ಟ ಅಪವರ್ತನವಾದುದರಿಂದ ವಾಯುಗುಣ ವಿಜ್ಞಾನದಲ್ಲಿ ಇದನ್ನು ಒಂದು ‘ವಾರ’ ಎಂದು ಪರಿಗಣಿಸಲಾಗುತ್ತದೆ

ಪಚನ

(ವೈ) ಜೀವಿ ಸೇವಿಸಿದ ಆಹಾರ ಪದಾರ್ಥವು ಕಿಣ್ವ ಕ್ರಿಯೆಯಿಂದ ವಿಲೀನಶೀಲವಾಗುವುದು. ಜೀರ್ಣನ. ಆಸವನದಲ್ಲಿ ವಸ್ತುವಿನ ಮೇಲೆ ರಾಸಾಯನಿಕಗಳ ವರ್ತನೆ

ಪಚನವ್ಯವಸ್ಥೆ

(ವೈ) ಆಹಾರ ಸೇವನೆಯಿಂದ ತೊಡಗಿ ಅನ್ನಕ್ಷೀರ ರಕ್ತವಾಗುವ ಹಾಗೂ ತ್ಯಾಜ್ಯಗಳು ವಿಸರ್ಜಿತವಾಗುವವರೆಗಿನ ವಿವಿಧ ಹಂತಗಳಲ್ಲಿ ಕ್ರಿಯಾಶೀಲವಾಗಿ ಇರುವ ಎಲ್ಲ ಅಂಗೋಪಾಂಗಗಳು. ಜೀರ್ಣಾಂಗ ವ್ಯವಸ್ಥೆ

ಪಂಚಭುಜ

(ಗ) ಐದು ಭುಜಗಳ ಸರಳ (ಸಮತಲ) ರೇಖಾಕೃತಿ. ಕ್ರಮ ಪಂಚಭುಜದಲ್ಲಿ ಭುಜಗಳ ನಡುವಿನ ಕೋನ ೧೦೮0. ಕ್ರಮ ಪಂಚಭುಜದ ಎಲ್ಲ ಕರ್ಣರೇಖೆಗಳನ್ನೂ ರಚಿಸಿದಾಗ ಲಭಿಸುವ ಐದು ಮೂಲೆಗಳ ನಕ್ಷತ್ರಾಕೃತಿಗೆ ‘ಪಂಚಕೋನ ತಾರಿಕೆ’ (pentagram) ಎಂಬ ಹೆಸರಿದೆ

ಪಂಚವಳಿ

(ಸಾ) ಐದು ವಸ್ತುಗಳ ಗುಂಪು. (ವೈ) ಒಮ್ಮೆಗೆ ಐದು ಶಿಶುಗಳ ಜನನ

ಪಂಚಾಂಗುಲಿ

(ಪ್ರಾ) ಕೈಯಲ್ಲಿ ಅಥವಾ ಕಾಲಿನಲ್ಲಿ ಐದು ಬೆರಳುಗಳಿರುವ

ಪಚ್ಚೆ

(ಭೂವಿ) ಹಸಿರು ಬಣ್ಣದ ರತ್ನಖನಿಜ. ಷಟ್ಕೋನ ಆಕಾರದಲ್ಲಿ ಸ್ಫಟಿಕೀಕರಿಸುತ್ತದೆ. ಬೆರಿಲ್ ಖನಿಜದ ಒಂದು ಬಗೆ. ಗ್ರಾನೈಟ್ ಮತ್ತು ಪೆಗ್ಮಟೈಟ್ ಶಿಲೆಗಳಲ್ಲಿ ಲಭ್ಯ. ರಾಸಾಯನಿಕ ಸಂಯೋಜನೆ: Be3 AI2 (SiO3)6

ಪಂಚ್ಡ್ ಕಾರ್ಡ್

(ತಂ) ಸಂಕೇತ ವ್ಯವಸ್ಥೆಯೊಂದರ ಪ್ರಕಾರ ಆಯಾಕಾರದ ತೂತುಗಳನ್ನು ಕೊರೆದ ಕಾರ್ಡು. ಇದರ ಮೂಲಕ ಕಂಪ್ಯೂಟರ್‌ನ ದತ್ತಾಂಶ ಸಂಸ್ಕಾರಕ ಮೊದಲಾದವುಗಳಿಗೆ ಮಾಹಿತಿಗಳನ್ನು ಉಣಿಸಲಾಗುತ್ತದೆ

ಪಂಜ

(ಪ್ರಾ) ಮೊನಚಾದ ಉಗುರು ಇರುವ ಪ್ರಾಣಿಪಾದ. ಮೃಗಪಕ್ಷಿಗಳ ಚೂಪಾದ ಕೊಂಬಿನಂಥ ಕಾಲುಗುರು
< previous1234567894950Next >

Search Dictionaries

Loading Results

Follow Us :   
  Download Bharatavani App
  Bharatavani Windows App