भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನಿದ್ರಾಸಂಚಾರ

(ವೈ) ಮನುಷ್ಯರಲ್ಲಿ ಮಿದುಳಿನ ಒಂದು ವಿಕಾರ ಸ್ಥಿತಿ. ನಿದ್ರೆಯಲ್ಲಿ ನಡೆದಾಡುವುದು ಅಥವಾ ಇತರ ಕೆಲಸ ಮಾಡುವುದು. ಈ ಸ್ಥಿತಿಯಲ್ಲಿ ವ್ಯಕ್ತಿಗೆ ತಾನು ಏನು ಮಾಡುತ್ತಿರುವೆನೆಂಬುದರ ಅರಿವಿರುವುದಿಲ್ಲ. ಎಚ್ಚರವಾದ ಮೇಲೂ ಅದರ ನೆನಪಿರದು

ನಿದ್ರೆ

(ವೈ) ಸಹಜವಾದ ಸುಪ್ತಾವಸ್ಥೆ ಮತ್ತು ನಿಷ್ಕ್ರಿಯತೆಯ ಸ್ಥಿತಿ. ಇದು ಪ್ರಾಣಿಗಳಲ್ಲಿ ಮತ್ತು ಹಕ್ಕಿಗಳಲ್ಲಿ ಕ್ರಮಬದ್ಧವಾಗಿ ನಿರ್ದಿಷ್ಟ ವಿರಾಮಗಳಲ್ಲಿ ಸಂಭವಿಸುತ್ತದೆ. ಆಗ ಭಂಗಿಯಲ್ಲಿ ವ್ಯತ್ಯಾಸಗಳು ಇರುತ್ತವೆ. ನಿದ್ರೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಗೆ ಅತ್ಯವಶ್ಯ

ನಿಧಾನೋಚ್ಚಾರಣೆ

(ವೈ) ಮಾತು ಹೊರಡುವುದರಲ್ಲಿ ಅಸಾಮಾನ್ಯ ಮಂದಗತಿ

ನಿಪಲ್

(ತಂ) ಎರಡು ತುದಿಗಳಲ್ಲೂ ಹೊರ ತಿರುಪಿನ ಜಾಡುಗಳಿರುವ ಸಣ್ಣ ಕೊಳವೆ ಅಥವಾ ಕಂಬಿ. ಒಳತಿರುಪಿನ ಜಾಡುಗಳಿರುವ ಎರಡು ಕೊಳವೆ ಅಥವಾ ಕಂಬಿಗಳನ್ನು ಜೋಡಿಸಲು ಬಳಕೆ. (ಪ್ರಾ) ಸ್ತನಿಗಳ ಮೊಲೆತೊಟ್ಟು

ನಿಂಬಸ್

(ಪವಿ) ಬೂದು ಬಣ್ಣದ, ಸ್ಫುಟ ರೇಖೆ ಇರದ ಒಂದು ಬಗೆಯ ಮಳೆ ಮೋಡ. ಇದರಿಂದ ಸಾಮಾನ್ಯವಾಗಿ ಮಳೆ ಅಥವಾ ಹಿಮದ ಸುರಿತವಾಗುತ್ತದೆ. ಕೆಲವು ವೇಳೆ ಈ ಮೋಡ ಇಡೀ ಆಗಸವನ್ನೇ ಆವರಿಸಿ ಅಖಂಡವಾಗಿ ಮಳೆ ಸುರಿಸಬಹುದು

ನಿಂಬೂಲವಣ

(ರ) ಪೊಟ್ಯಾಸಿಯಮ್ ಕ್ವಾಡ್ರಾಕ್ಸಲೇಟ್ KH3C4O8. 2H2O ಬಿಳಿ ಹರಳುರೂಪಿ. ಘನ ವಿಲೇಯ ವಿಷ ಪದಾರ್ಥ. ಶಾಯಿ ಕಲೆ ನಿವಾರಕ

ನಿಂಬೊಸ್ಟ್ರ್ಯಾಟಸ್

(ಖ) ಮಳೆಮೋಡದ ಬೂದು, ಅನೇಕ ವೇಳೆ ಕಪ್ಪು ಬಣ್ಣದ ಪದರ. ಇದು ಕಾಣಿಸಿಕೊಂಡಾಗ ಹೆಚ್ಚು ಕಡಿಮೆ ಸತತ ಮಳೆ ಅಥವಾ ಹಿಮ ಸುರಿತವಾಗುತ್ತದೆ. ಮೋಡ ಪದರ ಸೂರ್ಯನ ಬೆಳಕನ್ನೇ ಮರೆಯಾಗಿಸುವಷ್ಟು ದಟ್ಟವಾಗಿ ಇರುತ್ತದೆ. ಇದರ ಕೆಳಗೆ ಕೆಳಮಟ್ಟದ ಚಿಂದಿ ಮೋಡಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಇವು ಮೇಘ ಪದರದೊಂದಿಗೆ ಐಕ್ಯವಾಗ ಬಹುದು, ಆಗದಿರಲೂಬಹುದು. ವರ್ಷಸ್ತರ ಮೇಘ

ನಿಬ್

(ತಂ) ಲೇಖನಿ ಕಡ್ಡಿಯಲ್ಲಿ ಸಿಕ್ಕಿಸುವ ಲೋಹದ ಅಥವಾ ಗರಿಯ ಬರೆಯುವ ಮುಳ್ಳು. (ಪ್ರಾ) ಪಕ್ಷಿ ಕೊಕ್ಕು

ನಿಮ್ನ

(ಪವಿ) ವಾತಾವರಣದಲ್ಲಿ ಕಡಿಮೆ ಒತ್ತಡದ ಅಥವಾ ಕುಸಿತದ ಪ್ರದೇಶ

ನಿಮ್ನ

(ಸಾ) ನಡುವೆ ತಗ್ಗಿರುವ, ಪೊಳ್ಳು. ಗೋಳದ ಅಥವಾ ಉರುಳೆಯ ಅಥವಾ ಈ ಕಾಯಗಳ ಒಂದು ಛೇದದ ಒಳಭಾಗವನ್ನು ಹೋಲುವಂಥ ಒಳಬಾಗುಳ್ಳ

ನಿಮ್ನ ಮಟ್ಟ ಭಾಷೆ

(ತಂ) ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮಿಂಗ್ ಭಾಷೆಗೆ ಸಂಬಂಧಿಸಿದಂತೆ, ಯಂತ್ರ ಭಾಷೆಗೆ ಹತ್ತಿರದ ಭಾಷೆ

ನಿಮ್ನ ಶಕ್ತಿ ಎಲೆಕ್ಟ್ರಾನ್ ವಿವರ್ತನೆ

(ತಂ) ಸ್ಫಟಿಕೀಯ ಪದಾರ್ಥಗಳ ಮೇಲ್ಮೈ ರಚನೆಯನ್ನು ತಿಳಿಯುವ ಒಂದು ತಂತ್ರ, ಇಲ್ಲಿ ನಿಮ್ನ ಶಕ್ತಿಯ (೨೦-೨೦೦ ev) ಸಮಾಂತರಗೊಳಿಸಿದ ಎಲೆಕ್ಟ್ರಾನ್‌ಗಳ ದೂಲವನ್ನು ಲಂಬಪಾತವಾಗುವಂತೆ ಸ್ಫಟಿಕೀಯ ಪದಾರ್ಥಗಳ ಮೇಲ್ಮೈಗೆ ಡಿಕ್ಕಿ ಹೊಡಿಸಲಾಗುವುದು. ಆಗ, ವಿವರ್ತನೆಗೊಂಡ ಎಲೆಕ್ಟ್ರಾನ್‌ಗಳ ಚುಕ್ಕೆಗಳನ್ನು ಪ್ರತಿದೀಪ್ತ ಪರದೆಯ ಮೇಲೆ ನೋಡಬಹುದು

ನಿಮ್ನದರ್ಪಣ

(ಭೌ) ಸಾಧಾರಣವಾಗಿ ಗೋಳದ ಒಂದು ಅಂಶವಾಗಿರುವ ಬಾಗುಕನ್ನಡಿ. ಒಳ ನಿಮ್ನ ಮೈಯನ್ನು ಮೆರಗುಗೊಳಿಸಲಾಗಿರುತ್ತದೆ. ವಾಸ್ತವ ಮತ್ತು ಮಿಥ್ಯಾಬಿಂಬಗಳು ಮೈದಳೆಯುತ್ತವೆ

ನಿಮ್ನಮಸೂರ

(ಭೌ) ಅಪಸರಣ ಮಸೂರ. ಎರಡು ವಿರುದ್ಧ ಮುಖಗಳೂ ನಿಮ್ನವಾಗಿರುವ ಮಸೂರ. ಹಾಗಾಗಿ ಇದು ಮಧ್ಯದಲ್ಲಿ ತೆಳ್ಳಗಿದ್ದು ತುದಿಗಳಲ್ಲಿ ದಪ್ಪಗಿರುತ್ತದೆ

ನಿಮ್ನೋಷ್ಣತಾದರ್ಶಕ

(ಭೌ) ನೋಡಿ: ಅತಿಶೈತ್ಯ ದರ್ಶಕ

ನಿಮ್ನೋಷ್ಣತಾಸ್ಥಾಪಿ

(ಭೌ) ಯಾವುದೇ ವಸ್ತುವನ್ನು ಅತಿ (ಮುಖ್ಯವಾಗಿ ೦0ಸೆ.ಗಿಂತ ಕಡಿಮೆ) ಶೈತ್ಯದಲ್ಲಿಡಲು ಬಳಸುವ ಉಪಕರಣ. ಅತಿಶೈತ್ಯಸ್ಥಾಪಿ

ನಿಯತರೇಖೆ

(ಗ) ವಕ್ರವನ್ನೋ ವಕ್ರತಲವನ್ನೋ ರಚಿಸಲು ಬಳಸುವ ಆಧಾರ ರೇಖೆ. ಸ್ಥಿರರೇಖೆ. ದಿಶಾಕ್ಷ. ನೋಡಿ: ಶಂಕುಜ

ನಿಯತಸತ್ಯೋಕ್ತಿ

(ಗ) ಸ್ವಂತ ತಾರ್ಕಿಕ ರೂಪದ ಕಾರಣ ವಾಗಿಯೇ ಸತ್ಯವಾಗಿರುವ ನಿರೂಪಣೆ. (ಸಾ) ಪುನರುಕ್ತಿ. ಹೇಳಿದ್ದನ್ನೇ ಬೇರೆ ಮಾತುಗಳಲ್ಲಿ ಹೇಳುವುದು. ತಲೆಶಿರೋಭಾರ ಪ್ರಯೋಗ

ನಿಯತಾಂಕ

(ಗ) ಸಮೀಕರಣಗಳಲ್ಲಿ ವ್ಯತ್ಯಯವಾಗದ ಪದ. ಉದಾ: y=ax+b ಸಮೀಕರಣದಲ್ಲಿ b ಒಂದು ನಿಯತಾಂಕ. ಅಂತೆಯೇ ಯಾವುದೇ ವೃತ್ತದ ವ್ಯಾಸಕ್ಕೂ ಅದರ ತ್ರಿಜ್ಯಕ್ಕೂ ನಡುವಿನ ನಿಷ್ಪತ್ತಿ p (ಪೈ)=೨೨/೭. (ಭೌ) ಸಂಬಂಧ, ಗುಣ ಮೊದಲಾದವನ್ನು ಸೂಚಿಸುವ, ಎಲ್ಲ ಸಂದರ್ಭಗಳಲ್ಲೂ ಒಂದೇ ಆದ ಸಂಖ್ಯೆ. ಉದಾ: ಗುರುತ್ವ ನಿಯತಾಂಕ G=6.670´10–11 ನ್ಯೂಟನ್ ಮೀ೨ ಕಿಗ್ರಾಂ-೨

ನಿಯಂತ್ರಕ

(ತಂ) ಶಕ್ತಿಯ ಬೇಡಿಕೆಗೆ ಅನುಗುಣವಾಗಿ ಎಂಜಿನ್‌ಗೆ ಇಂಧನ ಇಲ್ಲವೇ ಉಗಿ ಸರಬರಾಜಾಗುವುದನ್ನು ನಿಯಂತ್ರಿಸುವ ಸಾಧನ. ಇದರಿಂದಾಗಿ ಲೋಡಿಂಗ್‌ನ ಎಲ್ಲ ಪರಿಸ್ಥಿತಿ ಗಳಲ್ಲೂ ಎಂಜಿನ್ ವೇಗ ಒಂದೇ ಸ್ಥಿರ ಮಟ್ಟದಲ್ಲಿರುತ್ತದೆ. ನಿಯಾಮಕ

Search Dictionaries

Loading Results

Follow Us :   
  Download Bharatavani App
  Bharatavani Windows App