भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನಿಗ್ರಹಿಸು

(ವೈ) ಗಾಯದಿಂದ ರಕ್ತಹರಿವಿಗೆ ಅಥವಾ ಇಂಥದೇ ಯಾವುದೇ ಪ್ರಕ್ರಿಯೆಗೆ ತಡೆಹಾಕು. ಯಾವುದೇ ಅಭಿವರ್ಧನೆಯನ್ನು ವಿಕಸಿಸದಂತೆ ದಮನ ಮಾಡು. ನಿವಾರಿಸು.

ನಿಗ್ರಾಹಕ

(ಕಂ) ಸಂಪರ್ಕ ವ್ಯವಸ್ಥೆಯ ನಿರ್ವಹಣೆಯಲ್ಲಿ ತೊಡಕಾಗುವ ಸದ್ದು ಅಥವಾ ಇತರ ಸಂಜ್ಞೆಗಳನ್ನು ಕುಂಠಿಸಲು/ತೊಡೆದುಹಾಕಲು ಬಳಸುವ ಸಲಕರಣೆ

ನಿಘಂಟುವಿಜ್ಞಾನ

(ಸಾ) ಪದಗಳ ರೂಪ, ಚರಿತ್ರೆ ಮತ್ತು ಅರ್ಥಗಳನ್ನು ಕುರಿತ ಅಧ್ಯಯನ. ಕೋಶವಿಜ್ಞಾನ

ನಿಜಚರ್ಮ

(ಪ್ರಾ) ನೋಡಿ: ಕ್ಯೂಟಿಸ್

ನಿಜತ್ವಚೆ

(ವೈ) ಚರ್ಮದ ಒಳಪದರ. ಇದರಲ್ಲಿ ಸೂಕ್ಷ್ಮಗ್ರಾಹಿ ರಕ್ತನಾಳ, ಕೂದಲ ಬೇರುಗಳು ಮತ್ತು ಬೆವರು ಗ್ರಂಥಿಗಳು ಇರುತ್ತವೆ. ನೋಡಿ: ಡರ್ಮಿಸ್

ನಿಜಮೌಲ್ಯ

(ಗ) ಗಣಿತ ತರ್ಕಶಾಸ್ತ್ರದಲ್ಲಿ ಒಂದು ಉಕ್ತಿಯ ‘ನಿಜತನ’ ಅಥವಾ ‘ಸುಳ್ಳುತನ’ವು ಅದರ ನಿಜಮೌಲ್ಯ. ಪ್ರತೀಕ t ಮತ್ತು F ಇವು ಬೂಲಿಯನ್ ಬೀಜಗಣಿತದಲ್ಲಿ ೧ ಹಾಗೂ ೦ಯಿಂದ ವ್ಯಕ್ತ. ನೋಡಿ: ಬೂಲಿಯನ್ ಬೀಜಗಣಿತ

ನಿಡಿಕಲಸ್

(ಪ್ರಾ) ಮೊಟ್ಟೆಯೊಡೆದು ಹೊರಬಂದ ಅನಂತರ ತಾಯಿ ಗೂಡಿನಲ್ಲೇ ಸ್ವಲ್ಪಕಾಲ ಉಳಿಯುವ ಹಕ್ಕಿಗಳನ್ನು ಕುರಿತು ಹೇಳುವ ಪದ

ನಿಡಿಫ್ಯೂಗಸ್

(ಪ್ರಾ) ತುಲನಾತ್ಮಕವಾಗಿ ಹೆಚ್ಚು ಅಭಿವರ್ಧನೆಗೊಂಡ ಸ್ಥಿತಿಯಲ್ಲಿ ಮೊಟ್ಟೆಯೊಡೆದು ಹೊರಬಂದು ಕೂಡಲೇ ತಾಯಿ ಗೂಡನ್ನು ಬಿಟ್ಟು ಆಹಾರ ಹುಡುಕಿಕೊಂಡು ಹೊರ ಹೋಗುವ ಹಕ್ಕಿಗಳ ವಿಷಯದಲ್ಲಿ ಹೇಳುವ ಪದ. ಉದಾ: ಕೋಳಿ

ನಿಡುದಲೆಯ

(ಪ್ರಾ) ಉದ್ದದ ೪/೫ಕ್ಕಿಂತಲೂ ಕಡಿಮೆ ಅಗಲದ ತಲೆಬುರುಡೆ. ಇಂಥ ತಲೆಬುರುಡೆಯುಳ್ಳವ, ಅಂಥ ಜನಾಂಗ. ಕಪಾಲಾಂಕ ೭೭.೬ ಅಥವಾ ಅದಕ್ಕೂ ಕಡಿಮೆ ಇರುವ. ದೀರ್ಘಶಿರಸ್ಕ

ನಿಡೇಶನ್

(ಪ್ರಾ) ಸ್ತನಿಗಳ ಬೆದೆ ಚಕ್ರದಲ್ಲಿ ರಜಸ್ಸ್ರಾವಗಳ ನಡುವಿನ ಅವಧಿಯಲ್ಲಿ ಗರ್ಭಾಶಯದ ಅಸ್ತರಿ ಪುನರ್‌ನವೀಕರಣ ಗೊಳ್ಳುವ ಪ್ರಕ್ರಿಯೆ

ನಿಡ್ಯುಲಸ್

(ಪ್ರಾ) ನರದ ಆರಂಭ ಬಿಂದು ರೂಪಿಸುವ ನ್ಯೂಕ್ಲಿಯಸ್

ನಿಂತ ನೀರಿನ

(ಸ) ಕೊಳ ಮುಂತಾದ ಹರಿಯದೆ ನಿಂತ ನೀರಿನ, ಅದಕ್ಕೆ ಸಂಬಂಧಿಸಿದ, ಅದರಲ್ಲಿ ಜೀವಿಸುವ, ಸ್ಥಾಯಿ ಜಲೀಯ

ನಿತ್ಯರೋಗಿ

(ವೈ) ಕ್ರಮಬದ್ಧ ವೈದ್ಯೋಪಚಾರ ಅಗತ್ಯವಾಗಿರುವ, ಹೆಚ್ಚು ಕೆಲಸಕಾರ್ಯ ಮಾಡಲಾಗದ ಮತ್ತು ತನ್ನ ದುರ್ಬಲ ಅನಾರೋಗ್ಯಸ್ಥಿತಿಯೇ ಪ್ರಧಾನ ಆಸಕ್ತಿಯಾಗಿರುವ ಸೂಕ್ಷ್ಮ ಪ್ರಕೃತಿಯ ವ್ಯಕ್ತಿ. ತನ್ನ ಆರೋಗ್ಯದ ಬಗೆಗೆ ಅತಿಶಂಕೆಯುಳ್ಳವನು. ಒಂದಲ್ಲಒಂದು ರೋಗವಿದೆಯೆಂದು ಕಳವಳಪಡುತ್ತಲೇ ಇರುವವ

ನಿತ್ಯಹರಿತ್

(ಸ) ಯಾವಾಗಲೂ ಹಸಿರಾಗಿಯೂ ಹೊಸತಾಗಿಯೂ ಇರುವ (ಸಸ್ಯ ಮೊದಲಾದವು)

ನಿತ್ರಾಣ

(ವೈ) ಪೌಷ್ಟಿಕ ಆಹಾರವಿಲ್ಲದ್ದರಿಂದ ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದ್ದರಿಂದ ಉಂಟಾದ ನಿಶ್ಶಕ್ತಿ, ಸುಸ್ತು. ಆಹಾರ ನೀರು ಇಲ್ಲದ್ದರಿಂದ ಆಗುವ ಸುಸ್ತು, ಸೊರಗುವಿಕೆ

ನಿತ್ರಾಣ

(ವೈ) ಸ್ನಾಯುತ್ರಾಣ ನಷ್ಟ

ನಿದರ್ಶಜ

(ಗ) ವೀಕ್ಷಣೆಗಳ ಯಾವುದೇ ಗಣದಿಂದ ಗಣಿಸಲಾದ ಒಂದು ಸಾಂಖ್ಯಕ ಪರಿಣಾಮ

ನಿದಾನ

(ವೈ) ರೋಗಚಿಹ್ನೆ ಮತ್ತು ಲಕ್ಷಣಗಳ ಅಧ್ಯಯನದಿಂದ ರೋಗವನ್ನು ಪತ್ತೆ ಮಾಡುವುದು

ನಿದ್ರಾಜನಕ

(ವೈ) ನಿದ್ರೆ ಬರಿಸುವ ಯಾವುದೇ ವಸ್ತು, ವಿಶೇಷ ವಾಗಿ ಅಫೀಮುಯುಕ್ತವಾದುದು. ಇದು ಮಿದುಳಿನ ಕ್ರಿಯೆಯನ್ನು ಕುಗ್ಗಿಸುತ್ತದೆ. ಮಾರ್ಫಿನ್ ಮತ್ತು ಇದರ ಸಂಶ್ಲೇಷಿತ ನಿಷ್ಪನ್ನಗಳಾದ ಹೆರಾಯಿನ್ ಮತ್ತು ಕೊಡೈನ್ ಇಂಥ ನಿದ್ರಾಜನಕಗಳು. ವೈದ್ಯಕೀಯ ದಲ್ಲಿ ನೋವು ನಿವಾರಕವಾಗಿ ಬಳಕೆ. ಆದರೆ ಬಳಕೆ ಕಟ್ಟುನಿಟ್ಟಾಗಿ ನಿಯಂತ್ರಿತ, ಏಕೆಂದರೆ ಹೆಚ್ಚಿನ ಬಳಕೆ ಚಟ ಉಂಟುಮಾಡಬಹುದು

ನಿದ್ರಾರಾಹಿತ್ಯ

(ವೈ) ನಿದ್ರಾಸಾಮರ್ಥ್ಯ ನಷ್ಟವಾದ ಸ್ಥಿತಿ. ನಿರ್ನಿದ್ರೆ. ನಿದ್ರೆ ಬಾರದಿರುವುದು

Search Dictionaries

Loading Results

Follow Us :   
  Download Bharatavani App
  Bharatavani Windows App