भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನಾಳ ಉಬ್ಬು

(ವೈ) ನಾಲೆಯ ಅಥವಾ ನಾಳದ ಹಿಗ್ಗಿರುವ ಕೊನೆ. (ಪ್ರಾ) ಆಂಪ್ಯುಲ, ಪೊರೆ ಇರುವ ಯಾವುದೇ ಪುಟ್ಟ ಕೋಶಕ. ಕಶೇರುಕಗಳ ಕಿವಿಯಲ್ಲಿ ಕಂಡುಬರುವ ಯಾವುದೇ ಪುಟ್ಟ ಸಂಚಿಯಂಥ ರಚನೆ

ನಾಳರಹಿತ

(ಪ್ರಾ) ರಕ್ತನಾಳಗಳಿಲ್ಲದ

ನಾಳವ್ಯಾಸ

(ತಂ) ಉರುಳೆಯ ಒಳವ್ಯಾಸ. ಕೊಳವೆಯ ಅಕ್ಷದ ನೇರ ಇರುವ ವರ್ತುಳೀಯ ರಂಧ್ರ

ನಾಳಸಂಕೋಚನ

(ಪ್ರಾ) ದೇಹದಲ್ಲಿಯ ಯಾವುದಾದರೂ ನಾಳವು ರೋಗದಿಂದ ಸಂಕೋಚಿಸುವುದು. ಉದಾ: ಗಾನೊರೀಯ ರೋಗದಿಂದಾಗಿ ಮೂತ್ರ ವಿಸರ್ಜನ ನಾಳದ ಸಂಕೋಚನ

ನಾಳಸಸ್ಯ

(ಸ) ದಾರುಗಳನ್ನೂ ಪೋಷವಾಹಕ ಗಳನ್ನೂ ಒಳಗೊಂಡಿರುವ ಸಸ್ಯಗಳ ಗುಂಪು. ಉದಾ: ಜರೀಗಿಡಗಳು, ನಗ್ನಬೀಜೀಯ ಮತ್ತು ಬೀಜೀಯ ಸಸ್ಯಗಳು, ಟ್ರಕಿಯೊಫೈಟ

ನಾಳೀಯ

(ವೈ,ಸ,ಪ್ರಾ) ದ್ರವವನ್ನು, ವಿಶೇಷವಾಗಿ ರಕ್ತ ಅಥವಾ ಜೀವರಸವನ್ನು ಸಾಗಿಸುವ ನಾಳಗಳಿರುವ, ಅಂಥ ನಾಳ ಗಳಿಂದಾದ, ಅಂಥ ನಾಳಗಳಿಗೆ ಸಂಬಂಧಿಸಿದ

ನಿಕಟತೆ

(ಭೂವಿ) ಅಸನ್ನತೆ, ತಗಲಿಕೊಂಡಿರುವುದು. ಹೊಂದಿಕೊಂಡಿರುವುದು

ನಿಕಲ್

(ರ) ರೇಕುಗಳಾಗಿ ಸಾಗುಬಡಿಯಲಾಗುವ, ತಂತಿಯಾಗಿ ಎಳೆಯಲಾಗುವ, ಹೊಳಪು ಬೆಳ್ಳಿ ಬಿಳುಪಿನ ಲೋಹ ಧಾತು; ಪಸಂ ೨೮, ಪ್ರತೀಕ ni; ಸಪರಾ ೫೮.೭೧; ದ್ರಬಿಂ ೧೪೫೫0 ಸೆ ಕುಬಿಂ ೩೦೦೦0 ಸೆ ಸಾಸಾಂ ೮.೯; ಕವಾಟಗಳ ರಚನೆಯಲ್ಲಿ ಬಳಕೆ; ವಿದ್ಯುಲ್ಲೇಪನದಲ್ಲಿ, ನಾಣ್ಯ ತಯಾರಿಕೆಯಲ್ಲಿ, ರಾಸಾಯನಿಕ ಹಾಗೂ ಆಹಾರ ಪದಾರ್ಥ ತಯಾರಿಕಾ ಕಾರ್ಖಾನೆಗಳಲ್ಲಿ ವಿಶೇಷವಾಗಿ ಉಪಯೋಗ. ಪೆಂಟ್ಲೆಂಡೈಟ್ ಮುಖ್ಯ ಅದಿರು

ನಿಕಲ್ ಉಕ್ಕು

(ತಂ) ಶೇ. ೬ರವರೆಗೂ ನಿಕಲ್‌ನಿಂದ ಕೂಡಿರುವ ಉಕ್ಕು. ಉಕ್ಕಿನ ದೃಢತೆಯನ್ನು ಸಹಜ ಪರಿಸ್ಥಿತಿಗಳಲ್ಲಿ ಹೆಚ್ಚಿಸಲು ನಿಕಲ್ ಸೇರಿಸಲಾಗುತ್ತದೆ

ನಿಕಲ್ ಲೇಪನ

(ತಂ) ನಿಕಲ್ ಲೋಹದ ತೆಳು ಪದರವನ್ನು ಮತ್ತೊಂದು ಲೋಹದ ಮೇಲೆ ವಿದ್ಯುದ್ವಿಭಜನ ಪ್ರಕ್ರಿಯೆಯ ಮೂಲಕ ನೆಲೆಗೊಳಿಸುವುದು

ನಿಕಲ್ ಸಿಲ್ವರ್

(ರ) ಶೇ. ೩೦ರಷ್ಟು ನಿಕಲ್ ಇದ್ದು ತಾಮ್ರ ಹಾಗೂ ಸತುವು ಇದರೊಂದಿಗೆ ನಾನಾ ಪ್ರಮಾಣಗಳಲ್ಲಿ ಮಿಶ್ರಗೊಂಡಿರುವ ಮಿಶ್ರಲೋಹಗಳ ಒಂದು ಗುಂಪು. ಶೇ. ೬೦ ತಾಮ್ರ, ಶೇ. ೨೦ ನಿಕಲ್ ಹಾಗೂ ಶೇ. ೨೦ ಸತುವು ಇರುವುದು ಒಂದು ವಿಶಿಷ್ಟ ಮಿಶ್ರಲೋಹ. ನೋಡಿ: ಜರ್ಮನ್ ಬೆಳ್ಳಿ

ನಿಕೊಟಿನಮೈಡ್

(ರ) ನಿಯಾಸಿನಮೈಡ್ ಎಂದೂ ಹೆಸರಿದೆ. C5H4NCONH2. ವೈಟಮಿನ್ ಬಿ ಕಾಂಪ್ಲೆಕ್ಸ್‌ನ ಒಂದು ಘಟಕ; ನಿರ್ವರ್ಣ ವಿಲೇಯ ಘನ. ದ್ರಬಿಂ ೨೩೫0 ಸೆ. ಪೆಲಾಗ್ರ ವ್ಯಾಧಿ ಚಿಕಿತ್ಸೆಗೆ ಬಳಕೆ

ನಿಕೊಟಿನಿಕ್ ಆಮ್ಲ

(ರ) ಪಿರಿಡೀನ್ ೩-ಕಾರ್ಬಾಕ್ಸಿಲಿಕ್ ಆಮ್ಲ. C5H4N.COOH ವೈಟಮಿನ್ ಬಿ ಕಾಂಪ್ಲೆಕ್ಸ್‌ನ ಒಂದು ಘಟಕ; ನಿರ್ವರ್ಣ ಸ್ಫಟಿಕಾಕಾರದ ಘನ ಪದಾರ್ಥ. ದ್ರಬಿಂ ೨೩೫0 ಸೆ. ಮಾಂಸ ಹಾಗೂ ಕಿಣ್ವಗಳಲ್ಲಿ ಲಭ್ಯ. ಇದರ ಕೊರತೆ ಪೆಲಾಗ್ರ (ಚರ್ಮ ಬಿರಿಯುವ) ವ್ಯಾಧಿಗೆ ಕಾರಣವಾಗುತ್ತದೆ. ನೋಡಿ: ನಿಯಾಸಿನ್

ನಿಕೊಟೀನ್

(ರ) ಹೊಗೆಸೊಪ್ಪಿನಿಂದ ಬಟ್ಟಿಯಿಳಿಸಿ ಎಣ್ಣೆಯಾಗಿ ತೆಗೆದ ನಿರ್ವರ್ಣ ಸಸ್ಯಕ್ಷಾರ ವಿಷ. ಕುಬಿಂ ೨೪೭.೩0 ಸೆ ಕೀಟನಾಶಕವಾಗಿ ಬಳಕೆ. ಸೇವನೆಯು ಚಟ ಬೆಳೆಸುವಂಥದು

ನಿಕೊಲೈಟ್

(ಭೂವಿ) ಷಡ್ಭುಜಾಕೃತಿಯಲ್ಲಿ ಸ್ಫಟಿಕೀಕರಿಸುವ ಖನಿಜ ನಿಕಲ್ ಆರ್ಸನೈಡ್. ನಿಕಲ್ ಲೋಹದ ಪ್ರಧಾನ ಅದಿರು ಗಳಲ್ಲೊಂದು. ತಾಮ್ರದ ನಿಕಲ್ ಎಂದೂ ಹೆಸರುಂಟು. ಪ್ರತೀಕ NiAs. ಕಾಠಿಣ್ಯಾಂಕ ಮೋಹ್ ಮಾನದಲ್ಲಿ ೫-೫.೫

ನಿಕ್ಟಲೋಪಿಯಾ

(ವೈ) ಉಜ್ಜ್ವಲ ಬೆಳಕಿನಲ್ಲಿ ಚೆನ್ನಾಗಿ ನೋಡಬಲ್ಲ, ಆದರೆ ಕತ್ತಲಿನಲ್ಲಿ ಅಥವಾ ಮಂದ ಬೆಳಕಿನಲ್ಲಿ

ನಿಕ್ಷೇಪ

(ಭೂವಿ) ನೀರು, ಗಾಳಿ, ಬರ್ಫ ಮುಂತಾದ ನೈಸರ್ಗಿಕ ಬಲಗಳ ಪ್ರಭಾವದಿಂದ ಯಾವುದೇ ಸ್ಥಳದಲ್ಲಿ ಸಂಗ್ರಹ ಗೊಳ್ಳುವ ಭೂಪದಾರ್ಥಗಳ ಸಮುಚ್ಚಯ

ನಿಕ್ಷೇಪನ

(ಭೂವಿ) ಸಾಗಣೆಯಾದ ಪದಾರ್ಥಗಳನ್ನು ಯುಕ್ತಸ್ಥಾನಗಳಲ್ಲಿ ನೆಲೆಗೊಳಿಸುವ ನೈಸರ್ಗಿಕ ಕ್ರಿಯೆ. ಈ ಪದಾರ್ಥ ಗಳಲ್ಲಿ ಖನಿಜ ಮತ್ತು ಲೋಹ ಸಿರಗಳು ಇರುವುದುಂಟು. ನೆಲೆ ಗೊಳಿಸಲಾದ ಪದಾರ್ಥಕ್ಕೆ ನಿಕ್ಷೇಪವೆಂದು ಹೆಸರು. (ತಂ) ಯಾವುದೇ ಪದಾರ್ಥದ ಮೇಲೆ ವಿದ್ಯುದ್ವಿಶ್ಲೇಷಣಾತ್ಮಕವಾಗಿ ಲೇಪಿಸಿದ ಲೋಹ. ಲೋಹ ಲೇಪನ. (ರ) ಒಂದು ಘನ ವಸ್ತುವಿನ ಹೊರ ಪದರದ ಮೇಲೆ ಬೇರೊಂದು ವಸ್ತು ಶೇಖರಗೊಳ್ಳುವ ಕ್ರಿಯೆ

ನಿಖರ

(ಸಾ) ಅತಿಸೂಕ್ಷ್ಮ ವಿವರಗಳಲ್ಲಿಯೂ ದೋಷರಹಿತ

ನಿಗದಿಸು

(ಸಾ) ಹಂಚಿಕೊಡು. ಗೊತ್ತುಮಾಡು. (ಕಂ) ದತ್ತ ಚರಕ್ಕೆ ಸಂವಾದಿಯಾದ ಮೌಲ್ಯವನ್ನು ಜ್ಞಾಪಕ ಸ್ಥಳದಲ್ಲಿರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App