भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನಾರ್ಡಿಕ್ ಜನಾಂಗ

(ಸಾ) ಸ್ಕಾಂಡಿನೇವಿಯದಲ್ಲೂ (ನಾರ್ವೆ) ಉತ್ತರ ಬ್ರಿಟನ್‌ನಲ್ಲೂ ವಾಸವಾಗಿರುವ ನೀಳಕಾಯ, ನಿಡುದಲೆ, ನಸುಹಳದಿ ಮೈಬಣ್ಣ ಹಾಗೂ ಹೊಂಗೂದಲುಳ್ಳ ಜನಸಮೂಹ

ನಾರ್ಮಲೀಕರಣ

(ರ) ಲೋಹವನ್ನು ವಿಶೇಷವಾಗಿ ಉಕ್ಕನ್ನು, ಅದರ ಕ್ರಾಂತಿ ಉಷ್ಣತೆಗೂ ಮೀರಿದ ಸ್ಥಿತಿಯವರೆಗೂ ಕಾಸಿ ಆನಂತರ ಗಾಳಿಯಲ್ಲಿ ತಣ್ಣಗಾಗಿಸುವ ಕ್ರಿಯೆ. ಉಕ್ಕಿನ ಸ್ಫಟಿಕ ಸಂರಚನೆಯಲ್ಲಿರುವ ಯಾವುದೇ ನ್ಯೂನತೆಯನ್ನು ಹೋಗಲಾಡಿಸಿ ಆಂತರಿಕ ಪೀಡನ ಇಲ್ಲದಂತೆ ಮಾಡುವುದು ಇದರ ಉದ್ದೇಶ

ನಾರ್ಮಲ್

(ರ) ಕಾರ್ಬನ್ ಪರಮಾಣುಗಳ ಕವಲು ಗಳಿಲ್ಲದ ಸರಣಿ. ಉದಾ: ನಾರ್ಮಲ್ ಪ್ರೊಪೈಲ್ ಆಲ್ಕಹಾಲ್ ಸರಣಿ CH3-CH3.CH2.OH. ಸಮಾಂಗಿ ಐಸೊಪ್ರೊಪೈಲ್ ಆಲ್ಕಹಾಲ್ ಕವಲು ಸರಣಿ (CH2)2. CH.OH

ನಾರ್ಮಲ್ ದ್ರಾವಣ

(ರ) ಪ್ರತಿ ಲೀಟರ್‌ನಲ್ಲೂ ಒಂದು ಗ್ರಾಮ್-ಸಮಾನ ತೂಕ ದ್ರಾವ್ಯವಿರುವ ದ್ರಾವಣ

ನಾರ್ಮಾಲಿಟಿ

(ರ) ದ್ರಾವಣಗಳ ಸಾರತೆಯನ್ನು ವ್ಯಕ್ತ ಪಡಿಸುವ ಒಂದು (ಇಂದು ರೂಢಿಯಲ್ಲಿರದ) ವಿಧಾನ

ನಾರ್ಮ್

(ಗ) ಸದಿಶಾಕಾಶದಲ್ಲಿಯ ಒಂದು ಅದಿಶ ಮೌಲ್ಯಯುತ ಫಲನ. ಇದರ ಗುಣಗಳು ಮಿಶ್ರಸಂಖ್ಯೆಯ ಮಾಡ್ಯುಲಸ್‌ನ ಗುಣಗಳಿಗೆ ಸದೃಶವಾಗಿವೆ. ಅಂದರೆ ಶೂನ್ಯ ಸದಿಶದ ನಾರ್ಮ್ ೦. ಇತರ ಎಲ್ಲ ಸದಿಶಗಳ ನಾರ್ಮ್ ಧನಾತ್ಮಕ; ಅದಿಶ ಮತ್ತು ಸದಿಶಗಳ ಗುಣಲಬ್ಧದ ನಾರ್ಮ್ ಸದಿಶದ ನಾರ್ಮ್ ಮತ್ತು ಅದಿಶ ಇವುಗಳ ಗುಣಲಬ್ಧದ ನಿರಪೇಕ್ಷ ಮೌಲ್ಯಕ್ಕೆ ಸಮ; ಮತ್ತು ಯಾವುದೇ ಮೊತ್ತದ ನಾರ್ಮ್ ನಾರ್ಮ್‌ಗಳ ಮೊತ್ತಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮ

ನಾಲಗೆ

(ಪ್ರಾ) ಬಹುತೇಕ ಕಶೇರುಕಗಳ ಬಾಯ ಅಂಗುಳ ದಲ್ಲಿರುವ ಸ್ನಾಯು ಅಂಗ. ಆಹಾರ ಸೇವಿಸಲು ರುಚಿ ಅರಿಯಲು, (ಮನುಷ್ಯನಲ್ಲಿ) ಮಾತನಾಡಲು ಸಹಕಾರಿ

ನಾಲಗೆ ಮೂಳೆ

(ವೈ) ನೋಡಿ: ಜಿಹ್ವಾಸ್ಥಿ

ನಾಲೆ

(ತಂ) ನೀರಾವರಿ ಬೇಸಾಯಕ್ಕೆ ನೀರು ಹರಿಸಲು ತೋಡಿದ ಹಾದಿ. ಕಾಲುವೆ

ನಾಲ್ಕನೆಯ ಆಯಾಮ

(ಭೌ) ಸಾಪೇಕ್ಷತಾ ಸಿದ್ಧಾಂತದಲ್ಲಿ ಕಾಲ. ಉದ್ದ ಅಗಲ ಮತ್ತು ದಪ್ಪ ಮೂರು ಆಯಾಮಗಳ ಆಕಾಶವನ್ನು ವ್ಯಾಖ್ಯಿಸುತ್ತವೆ. ಆಕಾಶ-ಕಾಲ ಸಾತತ್ಯವೇ ವಿಶ್ವವೆಂದು ಸಾಪೇಕ್ಷತಾ ಸಿದ್ಧಾಂತದಲ್ಲಿ ಸಾಧಿಸಲಾಗಿದೆ

ನಾವಿಕ ಪಂಚಾಂಗ

(ಖ) ಖಗೋಳ ಕಾಯಗಳ ಸ್ಥಾನಗಳು, ಸಮುದ್ರದ ಉಬ್ಬರವಿಳಿತಗಳು ಇತ್ಯಾದಿ ನಾವಿಕರಿಗೆ ಅವಶ್ಯವಾದ ಮಾಹಿತಿಗಳನ್ನೂ ಇತರ ತಃಖ್ತೆಗಳನ್ನೂ ಒಳಗೊಂಡಿದ್ದು ವಾರ್ಷಿಕಾಗಿ ಪ್ರಕಟವಾಗುವ ಮಾಹಿತಿ ಪುಸ್ತಕ. ೧೭೬೭ರಲ್ಲಿ ಪ್ರಾರಂಭ

ನಾಶಭೀತಿ ತಾಣ

(ಪವಿ) ನಾಶ ಭೀತಿಯಲ್ಲಿರುವ ಸಮೃದ್ಧ ಜೀವಜಾತಿ ಜೀವಾವಾಸ. ಪರಿಸರತಜ್ಞ ಮೇಯರ‍್ಸ್ ಮೊದಲು ೧೯೮೮ರಲ್ಲಿ ‘ಹಾಟ್ ಸ್ಪಾಟ್’ ಎಂಬ ಈ ಪದ ಬಳಸಿದ. ಕರ್ನಾಟಕದ ಪಶ್ಚಿಮ ಘಟ್ಟ, ಈಶಾನ್ಯ ಹಿಮಾಲಯ ಪ್ರದೇಶಗಳು ಸೇರಿದಂತೆ ಜಾಗತಿಕ ಮಟ್ಟದಲ್ಲಿ ೨೫ ಇಂಥ ತಾಣಗಳನ್ನು ಗುರುತಿಸಲಾಗಿದೆ. ಬಿಸಿದಾಣ, ಕಾಳ್ಗಿಚ್ಚು ಪ್ರದೇಶ

ನಾಸಲ್

(ಆವಿ) ರಾಕೆಟ್‌ನ ದಹನ ಕೋಣೆಯಲ್ಲಿ ಉತ್ಪನ್ನವಾಗುವ ಹೆಚ್ಚಿನ ಉಷ್ಣತೆ ಹಾಗೂ ಒತ್ತಡದಿಂದ ಕೂಡಿದ ಅನಿಲಗಳನ್ನು ಹೊರಕ್ಕೆ ಚಿಮ್ಮಿ ನೂಕು ಬಲವನ್ನು ಉತ್ಪಾದಿಸುವ ಸೂಸುಬಾಯಿ

ನಾಸಿಕ ಅಸ್ಥಿ

(ವೈ) ಮೂಗಿನ ಏಣು ರೂಪಿಸುವ ಎರಡು ಅಸ್ಥಿಫಲಕಗಳಲ್ಲೊಂದು. ಈ ಫಲಕಗಳು ಮುಂಭಾಗದ ಮೂಳೆ, ಮೂಗಿನ ಬುಡದಲ್ಲಿರುವ ಜಾಲರಿ ಮೂಳೆ ಹಾಗೂ ಮೆಲ್ಲೆಲುಬು ಗಳೊಂದಿಗೆ ಕೂಡಿಕೊಂಡಿರುತ್ತವೆ

ನಾಸಿಕ ಕುಹರ

(ಪ್ರಾ) ಗಾಳಿಯನ್ನು ನಾಸಿಕ ಕೋಶದಿಂದ ದನಿನಾಳಕ್ಕೆ ಸಾಗಿಸುವ ಕುಳಿ

ನಾಸಿಕಸೂಚಿ

(ವೈ) ಕಪಾಲದ ಮುಂಭಾಗದ ಮೂಗು ತೆರಪುಗಳ ಅತ್ಯಂತ ಹೆಚ್ಚಿನ ಅಗಲಕ್ಕೂ ಮೂಗಿನ ಅಸ್ಥಿಪಂಜರದ ಎತ್ತರಕ್ಕೂ ನಡುವಿನ ನಿಷ್ಪತ್ತಿಯನ್ನು ನೂರರಿಂದ ಗುಣಿಸಿದಾಗ ಲಭಿಸುವ ಸೂಚ್ಯಂಕ

ನಾಸಿಕೋದ್ರೇಕ

(ವೈ) ಮೂಗಿನ ಲೋಳೆಪೊರೆಯ ಉರಿಯೂತ

ನಾಳ

(ಜೀ) ಜೀವಿ ದೇಹಗಳಲ್ಲಿ ದ್ರವ ಹರಿಯುವ ಕೊಳವೆ

ನಾಳ

(ವೈ) ದೇಹದಲ್ಲಿ ಅನ್ನಕ್ಷೀರ, ರಕ್ತದ್ರವ ಅಥವಾ ಸ್ರಾವ ಪದಾರ್ಥಗಳನ್ನು ಸಾಗಿಸುವ ಸಾಗುನಾಳ

ನಾಳ

(ಸಾ) ನಾಲೆ, ಸಾಗುದಾರಿ, ಕೊಳವೆ, ನಳಿಕೆ (ತಂ) ಕಾಂಡ್ಯೂಟ್ : ಅವಾಹಕ ಕವಚವುಳ್ಳ ವಿದ್ಯುತ್ ತಂತಿಗಳ ಕಾಪುಕೊಳವೆ

Search Dictionaries

Loading Results

Follow Us :   
  Download Bharatavani App
  Bharatavani Windows App