भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನವಜೀವತತ್ತ್ವವಾದ

(ಜೀ) ಕೆಲವು ಪ್ರಮುಖ ಜೈವಿಕ ವಿದ್ಯಮಾನಗಳನ್ನು ಭೌತಾತೀತ ಕಲ್ಪನೆಗಳ ನೆರವಿಲ್ಲದೆ ಸಕಾರಣವಾಗಿ ವಿವರಿಸಲಸಾಧ್ಯವೆಂದು ಪ್ರತಿಪಾದಿಸುವ ಸಿದ್ಧಾಂತ

ನವಭುಜ

(ಗ) ೯ ಬಾಹುಗಳುಳ್ಳ ಆಕೃತಿ. ನೋಡಿ : ಬಹುಭುಜ

ನವಸಾಗರ

(ರ) ಹೈಡ್ರೊಕ್ಲೋರಿಕ್ ಆಮ್ಲದ ಜೊತೆ ಅಮೋನಿಯ ವರ್ತಿಸಿ ದೊರೆಯುವ ಬಿಳಿ ಲವಣ. NH4cl. ವಿಶೇಷವಾಗಿ ಅಗ್ನಿಪರ್ವತಗಳ ಸುತ್ತ ಕಂಡುಬರುತ್ತದೆ. ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಮಾಡಲು ಬಳಕೆ. ಅಮೋನಿಯಂ ಕ್ಲೋರೈಡ್

ನವಿಲುಕೋಸು

(ಸ) ನೋಡಿ : ಗೆಡ್ಡೆಕೋಸು

ನವೋತಕ

(ವೈ) ಶರೀರದಲ್ಲಿ ಯಾವುದೇ ಹೊಸ ಅಪ ಸಾಮಾನ್ಯ ಕೋಶದ ಬೆಳವಣಿಗೆ. ಇಂಥ ಗಂತಿ ನಿರುಪದ್ರವಿಯಾಗಿ ಇರಬಹುದು. ಇಲ್ಲವೇ ಹಾನಿಕಾರಕವೂ (ಅರ್ಬುದ ರೋಗ) ಆಗಿರಬಹುದು

ನಸುಗಾಳಿ

(ಪವಿ) ವಿಶೇಷವಾಗಿ ಸಂಜೆ, ಮುಂಜಾನೆ ಹಗುರಾಗಿ ಬೀಸುವ ಮಂದಮಾರುತ

ನಳಾಸ್ಥಿ

(ಪ್ರಾ) ಉನ್ನತ ವರ್ಗದ ಸಮಗೊರಸಿ ಪ್ರಾಣಿಗಳಲ್ಲಿ ಮಂಡಿಗೂ ಗೊರಸು ಕೂದಲಿಗೂ ನಡುವೆ ಇರುವ ಸಂಯುಕ್ತ ಮೂಳೆ

ನಳಿಗೆ

(ಸ) ಸಂಯುಕ್ತ ಪತ್ರದಳೀಯ ಪುಷ್ಪಪಾತ್ರ/ಪುಷ್ಪ ದಳೀಯ ದಳವಲಯ ಸಮೀಪದ ಸ್ತಂಭಭಾಗ. ಕೊಳವೆ. ನಾಳ

ನಳಿಗೆ ದೀಪ

(ತಂ) ನಿರ್ವಾತಗೊಳಿಸಿದ ಅಥವಾ ಅನಿಲ ತುಂಬಿದ ಮುಚ್ಚಿದ ಗಾಜಿನ ನಳಿಕೆಯಲ್ಲಿ ಎಲೆಕ್ಟ್ರಾನ್‌ಗಳ ಪ್ರವಾಹ ದಿಂದಾಗಿ ಬೆಳಕು ಮೂಡಿಸುವ ಸಾಧನ

ನಳ್ಳಿ

(ಪ್ರಾ) ಆರ್ತ್ರಾಪೊಡ ವಂಶ, ಕ್ರಸ್ಟೇಸಿಯ ವರ್ಗ. ಡೆಕಪೊಡ ಗಣಕ್ಕೆ ಸೇರಿದ ಜಲವಾಸಿ ಅಕಶೇರುಕ ಪ್ರಾಣಿ. ಇಕ್ಕುಳದಂಥ ಪಾದಗಳಲ್ಲಿ ಹಿಡಿದ ವಸ್ತುವನ್ನು ಬಲಪಟ್ಟಿಗೆ ಬಿಡುವುದಿಲ್ಲ. ಕಡಲ ತೀರದ ಜೌಗು ಪ್ರದೇಶ, ಬಂಡೆಗಳ ಬಿರುಕು ಇದರ ವಾಸ ಸ್ಥಳ. ಆರು ಜೊತೆ ಪಾದಗಳಿವೆ. ಬಾಯಿ ಅಂಗುಳದಲ್ಲಿ ಅಳವಟ್ಟಿದೆ. ಪಿಟೀಲು ಏಡಿ

ನಾಕ್ಷತ್ರಪದ

(ಖ) ನಕ್ಷತ್ರ, ನಕ್ಷತ್ರಪುಂಜಗಳನ್ನು ಕುರಿತಂತೆ ಜನಪದರು ಕಾಲದಿಂದ ಕಾಲಕ್ಕೆ ಕಟ್ಟಿದ ಕಥೆ, ಕಲ್ಪನೆ, ಹಾಡು ಚಿತ್ರ ಮುಂತಾದವುಗಳ ಮೊತ್ತ

ನಾಕ್ಷತ್ರಿಕ ಕಾಲ

(ಖ) ದೂರದ ಸ್ಥಿರ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಭೂಮ್ಯಾವರ್ತನೆಯನ್ನು ಪರಿಗಣಿಸಿ ಅಳೆಯುವ ಕಾಲ. ಸೂರ್ಯನಿಗೆ ಸಾಪೇಕ್ಷವಾಗಿ ಅಳೆಯುವ ಕಾಲಕ್ಕಿಂತ – ನಾಗರಿಕ ಕಾಲದ ಆಧಾರವಿದು – ಭಿನ್ನವಾದುದು

ನಾಕ್ಷತ್ರಿಕ ಗುಚ್ಛಗಳು

(ಖ) ಆಸುಪಾಸಿನ ವಲಯ ಗಳೊಂದಿಗೆ ಹೋಲಿಸಿದಾಗ ಗಾಢ ನಕ್ಷತ್ರ ಸಾಂದ್ರತೆಯ ಪ್ರದೇಶಗಳು. ಉದಾ: ವೃಷಭರಾಶಿಯಲ್ಲಿರುವ ಹಯಡೀಝ್ ಮತ್ತು ಕೃತ್ತಿಕಾ ಗುಚ್ಛಗಳು. ಕರ್ಕಟ ರಾಶಿಯಲ್ಲಿರುವ ಪ್ರೀಸೇಪೀ ಗುಚ್ಛ, ಕೃಷ್ಣವೇಣಿ ಗುಚ್ಛ ಇತ್ಯಾದಿ. ಯಾವುದೇ ನಾಕ್ಷತ್ರಿಕ ಗುಚ್ಛ ಗುರುತ್ವಾತ್ಮಕವಾಗಿ ಬಂಧಿತವಾಗಿರುವ ನಕ್ಷತ್ರಗಳ ಒಂದು ಸಮುದಾಯ – ಬ್ರಹ್ಮಾಂಡದಂತೆ. ಗುಚ್ಛದ ಸಾಮೂಹಿಕ ಚಲನೆ ಯೊಂದಿಗೆ ಬಿಡಿ ತಾರೆಗಳ ವೈಯಕ್ತಿಕ ಚಲನೆಗಳೂ ಸಮಾವೇಶ ಗೊಂಡಿರುತ್ತವೆ – ಜೇನು ಹಿಂಡಿನ ಚಲನೆಯಂತೆ. ನಾಕ್ಷತ್ರಿಕ ಗುಚ್ಛಗಳಲ್ಲಿ ಎರಡು ವರ್ಗಗಳಿವೆ: ಗೋಳೀಯ ಮತ್ತು ವಿವೃತ. ಗೋಳೀಯ ಗುಚ್ಛಗಳು ನಕ್ಷತ್ರಗಳ ನಿಬಿಡ ಒಕ್ಕೂಟಗಳು. ವಿವೃತ ಗುಚ್ಛಗಳಾದರೋ ಸಡಿಲ ಜೋಡಣೆಗಳು. ನಕ್ಷತ್ರ ಗುಚ್ಛಗಳು

ನಾಕ್ಷತ್ರಿಕ ದಿವಸ

(ಖ) ಸ್ಥಿರ ನಕ್ಷತ್ರ ಚಿತ್ರ ಕುರಿತಂತೆ ಭೂಮಿಯ ಆವರ್ತನಾವಧಿ (=೨೩ ಗಂ ೫೬ ಮಿ. ೪.೦೯ ಸೆ). ನೋಡಿ : ದಿವಸ

ನಾಕ್ಷತ್ರಿಕ ಮಾಸ

(ಖ) ಸ್ಥಿರ ನಕ್ಷತ್ರ ಚಿತ್ರ ಕುರಿತಂತೆ ಚಂದ್ರ ಭೂಮಿಯ ಸುತ್ತ ಒಂದು ಪರಿಭ್ರಮಣೆ ಮುಗಿಸಲು ತೆಗೆದುಕೊಳ್ಳುವ ಅವಧಿ. (=೨೭.೩೨೧೬೬ ದಿ)

ನಾಕ್ಷತ್ರಿಕ ವಿಪಥನ

(ಖ) ನೋಡಿ: ವಿಪಥನ

ನಾಟಿ ಓಕ್ ಮರ

(ಸ) ಪ್ರೋಟಿಯೇಸೀ ಕುಟುಂಬಕ್ಕೆ ಸೇರಿದ ಮರ. ಓಕ್ ಮರವನ್ನು ಹೋಲುವುದರಿಂದ ಇದಕ್ಕೆ ಈ ಹೆಸರು. ಗ್ರೆವಿಲಿಯ ರೊಬಸ್ಟ ವೈಜ್ಞಾನಿಕ ನಾಮ. ಆಸ್ಟ್ರೇಲಿಯ ಮೂಲದ್ದು. ಕಾಫಿ ಟೀ ತೋಟಗಳಲ್ಲಿ ನೆರಳಿಗಾಗಿ ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಚೌಬೀನೆಯನ್ನು ಗೊಂಬೆ, ಪೀಠೋಪಕರಣ ತಯಾರಿಕೆಗೆ ಬಳಸುತ್ತಾರೆ

ನಾಟಿ ಹಾಕುವಿಕೆ

(ವೈ) ವ್ಯಕ್ತಿಯ ಒಂದು ಅಂಗವನ್ನೋ ಊತಕವನ್ನೋ ಅದರ ಸ್ವಾಭಾವಿಕ ನೆಲೆಯಿಂದ ತೆಗೆದು ಅದೇ ವ್ಯಕ್ತಿಯ ಇಲ್ಲವೇ ಬೇರೆ ವ್ಯಕ್ತಿಯ ದೇಹದಲ್ಲಿ ಪ್ರತಿಷ್ಠಾಪಿಸುವುದು. (ಸ) ಮಡಿಗಳಲ್ಲಿ ಬೆಳೆಸಿದ ಸಸಿಯ ಮೊಳಕೆಗಳನ್ನು ಕಿತ್ತು ಗದ್ದೆಯಲ್ಲಿ ಮರು ನೆಡುವ ಪ್ರಕ್ರಿಯೆ

ನಾಟಿಕಲ್ ಮೈಲ್

(ಖ) ಅಕ್ಷಾಂಶ ೧0ಯ ಅರವತ್ತನೆಯ ಒಂದು ಅಂಶ. ಅಕ್ಷಾಂಶದ ಜೊತೆ ವ್ಯತ್ಯಯವಾಗುವ ಮಾನಕ. ಅಂತಾರಾಷ್ಟ್ರೀಯ ನಾಟಿಕಲ್ ಮೈಲಿನ ಉದ್ದ ೧೮೫೨ ಮೀ. ನಾವಿಕ ಮೈಲಿ

ನಾಟ್

(ಭೌ) ನೌಕಾಯಾನ ಮತ್ತು ಪವನಶಾಸ್ತ್ರದಲ್ಲಿ ವೇಗದ ಅಳತೆಯ ಏಕಮಾನ. ಒಂದು ನಾಟಿಕಲ್ ಮೈಲ್‌ಗೆ (ನೌಕಾಮೈಲಿ) ಸಮ. ಗಂಟೆಗೆ ೧.೮೫೨ ಕಿಮೀ ಅಥವಾ ಸೆಕೆಂಡಿಗೆ ೦.೫೧೪೪ ಮೀ.

Search Dictionaries

Loading Results

Follow Us :   
  Download Bharatavani App
  Bharatavani Windows App