भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನರತುದಿ

(ವೈ) ನರರಜ್ಜುವಿನ (ಹುರಿ) ಹೊರ ತುದಿ ಅಥವಾ ಅಂತ್ಯ ರಚನೆ. ಇದರ ಸಹಾಯದಿಂದ ನರವು ಆವೇಗಗಳನ್ನು ಸ್ವೀಕರಿಸುತ್ತದೆ ಅಥವಾಅವನ್ನು ಸ್ನಾಯುಗಳಿಗೆ ನೀಡುತ್ತದೆ. ನರಾಗ್ರ

ನರದೌರ್ಬಲ್ಯ

(ವೈ) ಆಯಾಸ, ಚಿಂತೆ, ಅತೃಪ್ತಿ, ನಿರುತ್ಸಾಹ, ತಲೆನೋವು ಮೊದಲಾದವುಗಳಿಂದ ಉಂಟಾದ ಮಾನಸಿಕ ಅಸ್ವಸ್ಥತೆ. ನ್ಯೂರಸ್ತೀನಿಯ, ನರಾಘಾತ

ನರನಾಳ

(ಪ್ರಾ) ಮೂಳೆ ಅಥವಾ ಯಾವುದೇ ಗಡಸು ಅಂಗಭಾಗದಲ್ಲಿದ್ದು ನರ ಹಾದುಹೋಗುವ ಒಂದು ರಂಧ್ರ

ನರಪ್ರೇರಕ

(ಪ್ರಾ) ಮಿದುಳಿನಿಂದ ಸ್ನಾಯುಗಳಿಗೆ ಹೋಗುವ ನರಗಳಿಗೆ ಅಥವಾ ನರಾವೇಗಗಳಿಗೆ ಸಂಬಂಧಿಸಿದ

ನರಭಕ್ಷಕ

(ಪ್ರಾ) ಮನುಷ್ಯನನ್ನು ತಿನ್ನುವ

ನರಮಂಡಲ

(ವೈ) ನರಕೋಶಗಳು, ನರಗಳು, ವಿಶೇಷ ನರತುದಿಗಳು ಇತ್ಯಾದಿಗಳಿಂದ ಕೂಡಿದ ವ್ಯವಸ್ಥೆ. ಪ್ರಾಣಿ ಹೊರ ವಿದ್ಯಮಾನಗಳಿಗೆ ಸ್ಪಂದಿಸಲು ಮತ್ತು ಶರೀರದೊಳಗಿನ ವಿವಿಧ ಭಾಗಗಳ ಪರಸ್ಪರ ಕ್ರಿಯೆಗಳನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ನರವ್ಯವಸ್ಥೆ

ನರರೋಗ

(ವೈ) ನರಗಳು ಶಿಥಿಲವಾಗಿರುವುದರಿಂದ ನರಮಂಡಲದ ಕ್ರಿಯಾತ್ಮಕ/ರಾಚನಿಕ ಅವ್ಯವಸ್ಥೆಗಳು

ನರವಿಚ್ಛೇದನ

(ವೈ) ಸಂವೇದನೆ ತಿಳಿಯದಂತೆ ಮಾಡಲು ನರವನ್ನು ಕತ್ತರಿಸುವುದು

ನರವಿಜ್ಞಾನ

(ವೈ) ನರಮಂಡಲದ ರಚನೆ ಮತ್ತು ಸಂಬಂಧಿತ ರೋಗಗಳ ಅಧ್ಯಯನ

ನರವೇದನೆ

(ವೈ) (ಸಾಮಾನ್ಯವಾಗಿ ತಲೆಯ ಅಥವಾ ಮುಖದ) ನರವೊಂದರ ಕೆರಳುವಿಕೆಯಿಂದ ಪುನಃ ಪುನಃ ಉಂಟಾಗುವ ತೀವ್ರ ನೋವು. ನರದ ರಚನೆಗೆ ಯಾವುದೇ ಹಾನಿ ಉಂಟಾದುದರಿಂದ ಆದುದಲ್ಲ. ನರಶೂಲೆ

ನರವ್ಯಾಧಿ

(ವೈ) ದೈಹಿಕವಾಗಿ ಘಾಸಿಯಾಗದೆಯೇ ನರಗಳು ಹದಗೆಟ್ಟು ವಿಲಕ್ಷಣವಾಗಿ ವರ್ತಿಸುವ ಮಾನಸಿಕ ವ್ಯಾಧಿ, ವ್ಯಕ್ತಿ ಕಳವಳ, ಕಾತರ ಹೊಂದುವುದು. ಮನೋವ್ಯಾಪಾರ ನಡೆಯುವುದಕ್ಕೆ ಮೊದಲು ಮಿದುಳಿನ ನರಕಣಗಳಲ್ಲಾಗುವ ವ್ಯತ್ಯಾಸ. ಭಾವಾತಿರೇಕ

ನರಹುರಿ

(ಪ್ರಾ) ಎರೆಹುಳು ಅಥವಾ ಕೀಟಗಳಂಥ ಅಕಶೇರುಕಗಳಲ್ಲಿ ಉದರಭಾಗದಲ್ಲಿರುವ ಜೋಡಿ ನರತಂತುಗಳು

ನರಹುಲಿ

(ವೈ) ಚರ್ಮದ ಮೇಲಿನ ಸಣ್ಣಗಂತಿ. ಕಾರುಳ್ಳು, ಕೆಡು, ನರೂಲಿ

ನರಾನಿಲ

(ರ) ಯುದ್ಧದಲ್ಲಿ ಬಳಸುವ ವಿಷವಾಯು. ನರಮಂಡಲ ಅದರಲ್ಲೂ ಉಸಿರಾಟ ನಿಯಂತ್ರಿಸುವ ನರವ್ಯೂಹದ ಮೇಲೆ ಪರಿಣಾಮ ಬೀರುವ ಅನಿಲ. ಬಹುತೇಕ ನರಾನಿಲಗಳು ಫಾಸ್ಫಾರಿಕ್ ಆಮ್ಲದ ವ್ಯುತ್ಪನ್ನಗಳು

ನರಾವೇಗ

(ವೈ) ನರತಂತುವಿನ ಒಂದು ಭಾಗದಲ್ಲಿ ಉತ್ಪಾದನೆಯಾದ ವಿದ್ಯುತ್‌ಕ್ಷೋಭೆ ಇನ್ನೊಂದು ಭಾಗಕ್ಕೆ ತಂತುಗಳ ಮೂಲಕ ಕೊನೆಯವರೆಗೂ ತ್ವರಿತವಾಗಿ ಸಾಗಿ ಅಲ್ಲಿ ಸ್ನಾಯುಚಲನೆ ಅಥವಾ ಗ್ರಂಥಿಗಳಲ್ಲಿ ವ್ಯತ್ಯಯ ಉಂಟುಮಾಡುವ ಕ್ರಿಯೆ

ನರಿ

(ಪ್ರಾ) ಕೇನಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸ್ತನಿ. ನಾಯಿಯ ಹತ್ತಿರ ಸಂಬಂಧಿ. ನಾಲ್ಕು ಮುಖ್ಯ ಜಾತಿಗಳಿವೆ. ವಲ್ಪೆಸ್ (ಕೆಂಪುನರಿ) ಎಲ್ಲ ಕಡೆಯಲ್ಲೂ ಹೆಚ್ಚಾಗಿ ಕಂಡುಬರುತ್ತದೆ. ಗಾತ್ರದಲ್ಲಿ ತೋಳಕ್ಕಿಂತ ಚಿಕ್ಕದು. ಗಿಡ್ಡ ಕಾಲು, ಚೂಪು ಮೂತಿ, ದೊಡ್ಡ ನಿಗುರಿದ ಕಿವಿ, ಉದ್ದ ದಟ್ಟ ಪೊದೆ ಬಾಲ ಇದರ ಲಕ್ಷಣ. ಯುಕ್ತಿಗೆ, ಕುಶಲತೆಗೆ ಹೆಸರುವಾಸಿ

ನರ್ವ್ಯೂರ್

(ಪ್ರಾ) ಕೀಟದ ರೆಕ್ಕೆಯ ಚೌಕಟ್ಟನ್ನು ರೂಪಿಸುವ ಸೂಕ್ಷ್ಮ ಕೊಳವೆ, ಪುಟ್ಟ ಶಾಖೆ ಅಥವಾ ತೆಳು ತುದಿ

ನವ ಪ್ರರೂಪ

(ಜೀ) ಪ್ರಾಥಮಿಕ ಪ್ರರೂಪಗಳು ನಾಶವಾದ ಬಳಿಕ ಮೂಲ ವಿವರಣೆಯ ಆಧಾರದ ಮೇಲೆ ಪ್ರರೂಪವಾಗಿ ಆಯ್ಕೆ ಮಾಡಿದ ಮಾದರಿ

ನವ ವಿಜ್ಞಾನ

(ಸಾ) ೧೮೯೫-೧೯೦೫ರ ನಡುವಿನ ಅವಧಿಯಲ್ಲಿ ನಡೆದ ಎರಡನೇ ವಿಜ್ಞಾನಕ್ರಾಂತಿಯಿಂದಾಗಿ ರೂಪುಗೊಂಡು ಬೆಳೆದ ವಿಜ್ಞಾನ. ಇದು ಆಧುನಿಕ ವಿಜ್ಞಾನದ ಮುಂದುವರಿಕೆಯಾಗಿ, ಆವಿಷ್ಕಾರಗಳು ಜಗತ್ತಿನಾದ್ಯಂತ ಹರಡುವ ಕ್ಷಿಪ್ರತೆ, ಆವಿಷ್ಕಾರಗಳ ವೈವಿಧ್ಯ, ವೈಜ್ಞಾನಿಕ ವೃತ್ತಿ, ಹಲವು ಸದಸ್ಯರ ತಂಡಗಳಿಂದೊಡ ಗೂಡಿದ ಕಾರ್ಯಶೈಲಿಯಂಥ ಗುಣಗಳನ್ನು ಒಳಗೊಂಡಿರುತ್ತದೆ

ನವಜಾತ

(ರ) ಸಂಯುಕ್ತವೊಂದರಿಂದ ಆಗತಾನೇ ಬೇರ್ಪಟ್ಟ ಪರಮಾಣು ಅಥವಾ ಘಟಕ. ಈ ಸ್ಥಿತಿಯಲ್ಲಿ ಇದು ತನ್ನ ಸಹಜ ಸ್ಥಿತಿಯಲ್ಲಿರುವುದಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಉದಾ : ಹೈಡ್ರೊಜನ್ (H)

Search Dictionaries

Loading Results

Follow Us :   
  Download Bharatavani App
  Bharatavani Windows App