भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನ್ಯೂರಸ್ತೀನಿಯ

(ವೈ) ತಲೆನೋವು, ಬೆನ್ನು ನೋವು, ಅಜೀರ್ಣ ಮೊದಲಾದ ಸೂಚನೆಗಳೊಂದಿಗೆ ಉಂಟಾಗುವ ಆಯಾಸ ಮತ್ತು ನಿರುತ್ಸಾಹದ ಸ್ಥಿತಿಗೆ ಹಿಂದೆ ಬಳಸುತ್ತಿದ್ದ ಪದ. ಮಾನಸಿಕ ಒತ್ತಡ ಮತ್ತು ದೈನಂದಿನ ಬದುಕಿನ ಸಮಸ್ಯೆಗಳನ್ನು ಎದುರಿಸಲು ಅಸಮರ್ಥತೆಯ ಮನೋಸ್ಥಿತಿಗೆ ಸಂಬಂಧಿತ. ನರದೌರ್ಬಲ್ಯ

ನ್ಯೂರಾನ್

(ಪ್ರಾ) ನರಕೋಶ ಮತ್ತು ಸಂಜ್ಞೆಗಳನ್ನು ಕೊಂಡೊಯ್ಯುವುವೆಂದು ನಂಬಲಾದ ನರಕೋಶದ ನೀಳ ಚಾಚಿಕೆ. ನರ ಸಂಬಂಧದ ಪ್ರಚೋದನೆ ಯನ್ನು ಜೀವಕೋಶಕ್ಕೆ ತಲಪಿಸುವ ಕವಲು ಚಾಚಿಕೆ (ಡೆಂಡ್ರೈಟ್). ನೋಡಿ : ನರ

ನ್ಯೂರಾನ್ ಸಿದ್ಧಾಂತ

(ಜೀ) ನೂರಾನ್‌ಗಳು (ನರಕೋಶಗಳು) ನರವ್ಯೂಹದ ಮೂಲ ರಾಚನಿಕ ಹಾಗೂ ಕ್ರಿಯಾತ್ಮಕ ಘಟಕ. ನ್ಯೂರಾನ್‌ಗಳು ಭೌತಿಕವಾಗಿ ಪ್ರತ್ಯೇಕ ವಾಗಿದ್ದರೂ, ಒಂದು ಇನ್ನೊಂದರೊಂದಿಗೆ ಸಿನ್ಯಾಪ್ಸ್ (ಸಂಪರ್ಕ ಬಿಂದು)ನಲ್ಲಿ ಕೂಡಿಕೊಂಡು ಕ್ರಿಯೆ ಜರಗಿಸುತ್ತವೆಂಬ ಸಿದ್ಧಾಂತ

ನ್ಯೂರಾಪ್ಟರ

(ಪ್ರಾ) ಎದ್ದುಕಾಣುವ ನರಗಳಿಂದ ಕೂಡಿದ ನಾಲ್ಕು ಪಾರದರ್ಶಕ ರೆಕ್ಕೆಗಳುಳ್ಳ ಎಂಡಾಪ್ಟೆರಿಗೋಟ ಗಣಕ್ಕೆ ಸೇರಿದ ಕೀಟ

ನ್ಯೂರಿನ್

(ರ) ಟ್ರೈಮಿಥೈಲ್ ವಿನೈಲ್ ಅಮೋನಿಯಮ್ ಹೈಡ್ರಾಕ್ಸೈಡ್. ಮಿದುಳು ಪದಾರ್ಥದಿಂದ, ಕೊಳೆತ ಮಾಂಸದಿಂದ ಲಭ್ಯ. ರಾಸಾಯನಿಕ ಸೂತ್ರ CH2 = CH.N(CH3)3OH. ಇದನ್ನು ಈಥೈಲ್ – ಟ್ರೈಮಿಥೈಲ್ – ಅಮೋನಿಯ ಹೈಡ್ರೇಟ್‌ಆಗಿ ಪರಿವರ್ತಿಸಬಹುದು, ಇದು ವಿಷಪೂರಿತ ಪ್ರತ್ಯಾಮ್ಲ

ನ್ಯೂರೊಕ್ರೇನಿಯಮ್

(ಪ್ರಾ) ಕಶೇರುಕಗಳ ತಲೆಬುರುಡೆಯಲ್ಲಿರುವ ಮಿದುಳಿನ ಕವಚ ಮತ್ತು ಸಂವೇದನ ಸಂಪುಟಗಳು. ಮುಖದ ಬಾಯಿ ಭಾಗವನ್ನು ಬಿಟ್ಟು ಮೇಲು ಭಾಗವನ್ನು ರೂಪಿಸುವ, ಮಿದುಳು ಹಾಗೂ ಒಳಕಿವಿಯ ಸುತ್ತ ಹೋಗುವ ಮೂಳೆ ಭಾಗ

ನ್ಯೂರೊಗ್ಲಿಯ

(ಪ್ರಾ) ಕಶೇರುಕಗಳ ಮಿದುಳು ಮತ್ತು ಬೆನ್ನುಹುರಿಗೆ ಆಸರೆಯಾದ ಸಂವಹನರಹಿತ ಊತಕ. ಇವುಗಳಲ್ಲಿ ತಂತುರೂಪದ ಕವಲುಕೋಶಗಳಿರುತ್ತವೆ. ನರಾಧಾರ ಊತಕ

ನ್ಯೂರೊಜೆನಿಕ್

(ಪ್ರಾ) ನರಗಳ ನಿರಂತರ ಚೋದನೆಯ ಮೇಲೆ ಅವಲಂಬಿತವಾಗಿರುವ (ಸ್ನಾಯು ಅಥವಾ ಗ್ರಂಥಿಯ ಚಟುವಟಿಕೆ)

ನ್ಯೂರೊಟ್ರಾಪಿಸಮ್

(ವೈ) ನರಕೋಶಗಳತ್ತ ವಿಶೇಷ ಒಲವು ಆಕರ್ಷಣೆ. ಉದಾ: ನ್ಯೂರೊಟ್ರಾಪಿಕ್ ವೈರಸ್‌ಗಳು (ವಿಷಾಣು)

ನ್ಯೂರೊಟ್ರೊಫಿಕ್

(ವೈ) ನರಕೋಶಗಳಿಗೆ ಆಹಾರ ಒದಗಿಸುವ (ಪದಾರ್ಥ)

ನ್ಯೂರೊಪೈಲ್

(ಪ್ರಾ) ನರತಂತುವಿನ ನವುರಾದ ಕವಲು ತುದಿ. ಮಿದುಳಿನಲ್ಲಿ ಬೂದು ದ್ರವ್ಯದ ಕೋಶಗಳ ನಡುವೆ ಇರುವ ನವುರಾದ ಅನಾಚ್ಛಾದಿತ ನರತಂತು ಜಾಲಬಂಧ

ನ್ಯೂರೊಪ್ಲಾಸಮ್

(ವೈ) ನರತಂತುಗಳ ನಡುವಿನ ಪ್ರೋಟೊಪ್ಲಾಸಮ್

ನ್ಯೂರೊಬ್ಲಾಸ್ಟ್

(ಪ್ರಾ) ಬಾಹ್ಯಚರ್ಮ ಮೂಲದ ಕೋಶಗಳಲ್ಲೊಂದು. ಇದರಿಂದ ನರಕೋಶದ ಅಭಿವರ್ಧನೆ ಯಾಗುತ್ತದೆ. ಇದು ನ್ಯೂರಾನ್‌ಗಳಿಗೆ ಜನ್ಮ ನೀಡುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App