भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನ್ಯೂಕ್ಲಿಯಿನ್

(ರ) ಜೀವಕೋಶಗಳ ನ್ಯೂಕ್ಲಿಯಸ್‌ಗಳಲ್ಲಿ ಕಂಡುಬರುವ, ಅಸ್ಪಷ್ಟವಾಗಿ ನಿರೂಪಿತವಾದ, ನ್ಯೂಕ್ಲಿಯಿಕ್ ಆಮ್ಲ ಪ್ರೋಟೀನ್ ಸಂಕೀರ್ಣಗಳ ತಂಡ

ನ್ಯೂಕ್ಲಿಯೇಷನ್

(ರ) ನ್ಯೂಕ್ಲಿಯಸ್‌ಗಳನ್ನು ರೂಪಿಸುವ ಕ್ರಿಯೆ. ಸ್ಫಟಿಕೀಕರಣ ಪ್ರಕ್ರಿಯೆಗಳಲ್ಲಿ ಅಧಿಪರ್ಯಾಪ್ತ ದ್ರಾವಣಗಳಲ್ಲಿ ಹೊಸ ಸ್ಫಟಿಕ ನ್ಯೂಕ್ಲಿಯಸ್‌ಗಳು ರೂಪುಗೊಳ್ಳುವುದು

ನ್ಯೂಕ್ಲಿಯೊಟೈಡ್

(ಜೀ) ಜೈವಿಕ ಪದಾರ್ಥಗಳಲ್ಲೆಲ್ಲ ಕಂಡುಬರುವ ಒಂದು ಮಾದರಿಯ ಅತ್ಯಂತ ಮುಖ್ಯ ಸಂಯುಕ್ತ. ಇದರಲ್ಲಿ ನೈಟ್ರೊಜನ್‌ನ ಆಧಾರವಾಗಿ (ಪ್ಯೂರೀನ್ ಅಥವಾ ಪಿರಿಮಿಡೀನ್) ಪೆಂಟೋಸ್ ಶರ್ಕರ ಹಾಗೂ ಒಂದು ಫಾಸ್ಫೇಟ್ ವೃಂದ ಉಂಟು. ನ್ಯೂಕ್ಲಿಯೊಟೈಡ್‌ಗಳು ಕೋಶಗಳಲ್ಲಿ ಆಡಿನೋಸಿನ್ ಟ್ರೈಫಾಸ್ಫೇಟ್‌ಗಳಾಗಿ ಮುಕ್ತ ಸ್ಥಿತಿಯಲ್ಲೂ ನಾನಾ ಸಹಕಿಣ್ವಗಳ ಭಾಗ ರೂಪದಲ್ಲೂ ಇರುವುವು. ಅವು ನ್ಯೂಕ್ಲಿಯಿಕ್ ಆಮ್ಲಗಳಾಗಿ ಪಾಲಿ ನ್ಯೂಕ್ಲಿಯೊಟೈಡ್ ಸರಣಿ ರೂಪದಲ್ಲೂ ಕಂಡುಬರುತ್ತವೆ

ನ್ಯೂಕ್ಲಿಯೊಪ್ರೋಟೀನ್

(ರ) ನ್ಯೂಕ್ಲಿಯಿಕ್ ಆಮ್ಲದ (ಡಿಎನ್‌ಎ ಅಥವಾ ಆರ್‌ಎನ್‌ಎ) ಅಣುಗಳೂ ಪ್ರೋಟೀನ್‌ನ ಅಣುಗಳೂ ನಿಕಟವಾಗಿ ಜೊತೆಗೂಡಿ ರೂಪುಗೊಂಡ ಸಂಯುಕ್ತ. ಜೀವಕೋಶಗಳ ನ್ಯೂಕ್ಲಿಯಸ್‌ಗಳಲ್ಲಿ ಪ್ರಧಾನವಾಗಿ ಕ್ರೋಮೊ ಸೋಮ್‌ಗಳ ರೂಪದಲ್ಲಿ ಕಂಡುಬರುತ್ತದೆ. ವೈರಸ್‌ಗಳು ಬಲುಮಟ್ಟಿಗೆ ಇಡೀಯಾಗಿ ನ್ಯೂಕ್ಲಿಯೊ ಪ್ರೋಟೀನ್‌ಗಳಿಂದಲೇ ಕೂಡಿರುತ್ತವೆ. ನ್ಯೂಕ್ಲಿಯೊ ಪ್ರೋಟೀನ್‌ಗಳು ತಮಗೆ ತಾವೇ ನಕಲು ಮಾಡಿಕೊಳ್ಳುವ ಗುಣದ ಮೇಲೆಯೇ ಜೀವ ಆಧರಿಸಿರುವುದು

ನ್ಯೂಕ್ಲಿಯೊಪ್ಲಾಸ್ಮ್

(ಜೀ) ನ್ಯೂಕ್ಲಿಯಸ್‌ನಲ್ಲಿ ಕ್ರೊಮ್ಯಾಟಿನ್ನನ್ನು ಆವರಿಸಿರುವ ಪ್ರೊಟೊಪ್ಲಾಸ್ಮ್ (ಬೀಜ ದ್ರವ್ಯ)

ನ್ಯೂಕ್ಲೈಡ್

(ರ) ಪರಮಾಣು ಸಂಖ್ಯೆ, ರಾಶಿ ಸಂಖ್ಯೆ ಹಾಗೂ ಬೈಜಿಕ ಶಕ್ತಿ ಸ್ಥಿತಿ ಇವುಗಳಿಂದ ನಿರೂಪಿತವಾದ ಒಂದು ಪರಮಾಣು ನ್ಯೂಕ್ಲಿಯಸ್. ಇದೊಂದು ವಿಶಿಷ್ಟ ನ್ಯೂಕ್ಲೈಡ್ ಎಂದು ಪರಿಗಣಿತ ಆಗಬೇಕಾದರೆ ಈ ನ್ಯೂಕ್ಲಿಯಸ್‌ಗೆ ಗಣನೀಯ ಆಯುಷ್ಯ

ನ್ಯೂಟನ್

(ಭೌ) ಮೀಟರ್-ಕಿಗ್ರಾಮ್-ಸೆಕೆಂಡ್ (ಎಸ್.ಐ) ಪದ್ಧತಿಯಲ್ಲಿ ಬಲದ ಏಕಮಾನ. ೧ ಕಿಗ್ರಾಮ್ ರಾಶಿಗೆ ೧ ಮೀ/ಸೆ೨ ವೇಗೋತ್ಕರ್ಷ ಒದಗಿಸಲು ಅವಶ್ಯವಾದ ಬಲ. ಸರ್ ಐಸಾಕ್ ನ್ಯೂಟನ್ (೧೬೪೨-೧೭೨೭) ಗೌರವಾರ್ಥ ಈ ಹೆಸರು. ೧ ನ್ಯೂಟನ್ = ೦.೨೨೪೮ ಪೌಂ ಬಲ. ಪ್ರತೀಕ n

ನ್ಯೂಟ್ರಾನ್

(ಭೌ) ಸರಿಸುಮಾರು ಪ್ರೋಟಾನ್‌ನಷ್ಟೆ ದ್ರವ್ಯರಾಶಿಯುಳ್ಳ ಮೂಲಕಣ. ಇದರಲ್ಲಿ ವಿದ್ಯುದಾವೇಶ ಇರು ವುದಿಲ್ಲ. ೧ಕ್ಕಿಂತ ಹೆಚ್ಚು ರಾಶಿಸಂಖ್ಯೆಯ ಎಲ್ಲ ನ್ಯೂಕ್ಲಿಯಸ್‌ಗಳ ಭಾಗ. ನ್ಯೂಕ್ಲಿಯಸ್‌ನ ಹೊರಗೆ ಇದು ಪ್ರೋಟಾನ್, ಎಲೆಕ್ಟ್ರಾನ್ ಹಾಗೂ ಪ್ರತಿನ್ಯೂಟ್ರಿನೋಗಳಾಗಿ ಕ್ಷಯಿಸುತ್ತದೆ. ಸಹಜ ಹೈಡ್ರೊಜನ್ ಬಿಟ್ಟು ಉಳಿದೆಲ್ಲ ಪರಮಾಣು ನ್ಯೂಕ್ಲಿಯಸ್‌ಗಳಲ್ಲೂ ನ್ಯೂಟ್ರಾನ್ ಕಂಡುಬರುತ್ತದೆ. ಇದನ್ನು ಜೇಮ್ಸ್ ಚಾಡ್ವಿಕ್ (೧೮೯೧-೧೯೭೪) ಮೊದಲ ಬಾರಿಗೆ ೧೯೩೨ರಲ್ಲಿ ಪತ್ತೆ ಹಚ್ಚಿದರು

ನ್ಯೂಟ್ರಾನ್ ನಕ್ಷತ್ರ

(ಖ) ನಾಕ್ಷತ್ರಿಕ ವಿಕಾಸದ ಮೂರನೆಯ ಹಂತದಲ್ಲಿ (ಹೈಡ್ರೊಜನ್-ಹೀಲಿಯಮ್-ಕಾರ್ಬನ್) ಚಂದ್ರಶೇಖರ್ ಪರಿಮಿತಿಗಿಂತ (=೧.೪ x ಸೌರರಾಶಿ) ಅಧಿಕರಾಶಿ ಇರುವ ನಕ್ಷತ್ರವು ಸೂಪರ್ನೋವಾ ಸ್ಫೋಟನೆಗೆ ಈಡಾದ ಬಳಿಕ ಉಳಿಯುವ ತಿರುಳು. ಇದು ಅತಿತಪ್ತ ಉದ್ರಿಕ್ತ ಸಾಂದ್ರ ನ್ಯೂಟ್ರಾನ್ ಕಣಗಳ ಸಮುಚ್ಚಯ. ಕನಿಷ್ಠ ಗಾತ್ರದ ತಾರೆ. ಆದರೆ ರಾಶಿ ಸೂರ್ಯನದರಷ್ಟು ಅಥವಾ ಹೆಚ್ಚು ಇರುವುದು. ಅತಿಶಯ ವೇಗದಿಂದ ಆವರ್ತಿಸುವ ಇಂಥ ಒಂದು ತಾರೆಯಿಂದ ಪ್ರಸಾರವಾಗುವ ವಿದ್ಯುತ್ ಸ್ಪಂದಗಳು ದೂರದ ಭೂಮಿಯಲ್ಲಿಯ ವೀಕ್ಷಕನಲ್ಲಿ, ದೀಪಸ್ತಂಭದಿಂದ ಬರುವ ನಿಯತಕಾಲಿಕ ವಿದ್ಯುತ್ಸಂಜ್ಞೆಗಳೋ ಎಂಬ ಭಾವನೆ ಮೂಡಿಸುತ್ತವೆ. ಎಂದೇ ಈ ನಕ್ಷತ್ರಗಳಿಗೆ ಪಲ್ಸಾರ್‌ಗಳೆಂದು (ಪಲ್ಸ್=ಸ್ಪಂದ) ಹೆಸರು ಬಂದಿದೆ. ಪಲ್ಸಾರ್‌ನಲ್ಲಿ ಗುರುತ್ವ ಸಂಕೋಚನ ಮುಂದುವರಿದರೆ ಅದು ಕೃಷ್ಣವಿವರವಾಗಿ (ಬ್ಲ್ಯಾಕ್ ಹೋಲ್) ಕಾಣದಾಗುವುದು

ನ್ಯೂಟ್ರಾನ್ ವಿವರ್ತನೆ

(ಭೌ) ಸ್ಫಟಿಕದಲ್ಲಿ ಪರಮಾಣುಗಳು ನ್ಯೂಟ್ರಾನ್‌ಗಳನ್ನು ಸಂಸಕ್ತವಾಗಿ ಮತ್ತು ಸ್ಥಿತಿಸ್ಥಾಪಕವಾಗಿ ಚದರಿಸುವುದು. ಚದರಿಕೆ ನ್ಯೂಕ್ಲಿಯಸ್‌ನಿಂದ ಆಗಿದ್ದಲ್ಲಿ ಆಗ ಸ್ಫಟಿಕದ ಪರಮಾಣು ರಚನೆಯನ್ನು ವಿವರ್ತನ ವಿನ್ಯಾಸದ ಅಳತೆಗಳ ಮೂಲಕ ನಿಗಮಿಸಬಹುದು. ಚದರಿಕೆಯು ಕಾಂತೀಯ ಮಹತ್ವವುಳ್ಳ ಎಲೆಕ್ಟ್ರಾನ್ ವಿನ್ಯಾಸಗಳಿರುವ ಪರಮಾಣು ಗಳಿಂದ ಆಗಿದ್ದಲ್ಲಿ ಆಗ ಸ್ಫಟಿಕದ ಕಾಂತೀಯ ರಚನೆಯ ವಿವರಗಳನ್ನು ನಿರ್ಧರಿಸಬಹುದು

ನ್ಯೂಟ್ರಾನ್ ಸಂಖ್ಯೆ

(ಭೌ) ಪ್ರತೀಕ n. ಒಂದು ನಿರ್ದಿಷ್ಟ ನ್ಯೂಕ್ಲೈಡ್‌ನ ಪರಮಾಣು ನ್ಯೂಕ್ಲಿಯಸ್‌ನಲ್ಲಿರುವ ನ್ಯೂಟ್ರಾನ್‌ಗಳ ಸಂಖ್ಯೆ. ಇದು ರಾಶಿ ಸಂಖ್ಯೆ (ಮಾಸ್ ನಂಬರ್- ನ್ಯೂಕ್ಲಿಯಾನ್‌ಗಳ ಒಟ್ಟು ಸಂಖ್ಯೆ) ಹಾಗೂ ಪರಮಾಣು ಸಂಖ್ಯೆ (ಪ್ರೋಟಾನ್‌ಗಳ ಸಂಖ್ಯೆ) ಇವುಗಳ ನಡುವಿನ ವ್ಯತ್ಯಾಸಕ್ಕೆ ಸಮ

ನ್ಯೂಟ್ರಾಸ್ಯುಟಿಕಲ್ಸ್

(ಜೀ) ಆರೋಗ್ಯವರ್ಧಕ, ರೋಗರಕ್ಷಕ ಆಹಾರ ಪದಾರ್ಥಗಳು

ನ್ಯೂಟ್ರಿನೋ

(ಭೌ) ಆವೇಶವೂ ಶ್ರಾಂತರಾಶಿಯೂ ಇಲ್ಲದ ಬೆಳಕಿನ ವೇಗದಲ್ಲಿ ಚಲಿಸುವ ಆದರೆ ೧/೨ ಗಿರಕಿ ಇರುವ ಸ್ಥಿರ ಮೂಲಕಣ (ಲೆಪ್ಟಾನ್). ಇದರ ಅಸ್ತಿತ್ವವನ್ನು ಪೌಲಿಯವರು ೧೯೩೧ರಲ್ಲಿ ಮುನ್ಸೂಚಿಸಿದ್ದರು. ೧೯೫೬ರಲ್ಲಷ್ಟೆ ಪ್ರಾಯೋಗಿಕವಾಗಿ ಕಾಣಲಾಯಿತು. ನ್ಯೂಟ್ರಿನೋಗೂ ಅತ್ಯಲ್ಪ ರಾಶಿ ಇರಬಹುದೆಂಬ ಕಲ್ಪನೆ ೧೯೯೯ರಲ್ಲಿ ಬಂದಿದೆ

ನ್ಯೂಟ್ರಿಸಿಸಮ್

(ಜೀ) ಎರಡು ಪ್ರಾಣಿ ಅಥವಾ ಸಸ್ಯಗಳಲ್ಲಿ ಒಂದು ಮಾತ್ರವೇ ಇನ್ನೊಂದರಿಂದ ಪ್ರಯೋಜನ ಪಡೆಯುವಂತೆ ಸಹಜೀವನ ನಡೆಸುತ್ತಿರುವ ಸ್ಥಿತಿ

ನ್ಯೂನತಾಪೂರಣ ಚಿಕಿತ್ಸೆ

(ವೈ) ಅಂಗನ್ಯೂನತೆಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕೃತಕೋಪಾಯಗಳಿಂದ ಸರಿಪಡಿಸುವುದು. ಉದಾ: ಕೃತಕ ಹಲ್ಲುಗಳು, ಮರದಕಾಲು ಜೋಡಿಸುವುದು

ನ್ಯೂನಪೋಷಣೆ

(ವೈ) ಪೋಷಕಗಳ ಅಸಮರ್ಪಕ ಸೇವನೆ, ಅವು ದೋಷಪೂರ್ಣವಾಗಿ ಜೀರ್ಣವಾಗುವುದು ಕೋಶಗತವಾಗುವುದು (ಸ್ವಾಂಗೀಕರಣ), ಉಪಾಪಚಯ – ಈ ಯಾವುದೇ ಕಾರಣವಾಗಿ ಪೋಷಣೆಯಲ್ಲಿ ಕಂಡುಬರುವ ಲೋಪ. ದೇಹಾರೋಗ್ಯಕ್ಕೆ ಅಗತ್ಯವಿರುವುದಕ್ಕಿಂತ ಕಡಿಮೆ/ಹೆಚ್ಚು ಪ್ರಮಾಣ ಗಳಲ್ಲಿ ಪೋಷಕಗಳು ಪೂರೈಕೆಯಾದಾಗ ತಲೆದೋರುವ ಸ್ಥಿತಿಗಳಿಗೆ ಅವಪೋಷಣೆ/ಅಧಿಪೋಷಣೆ ಎಂದು ಹೆಸರು. ನೋಡಿ: ಪೋಷಣೆ. ಅವಪೋಷಣೆ. ಅಧಿಪೋಷಣೆ

ನ್ಯೂಮೊಕಾಕಸ್

(ವೈ) ನ್ಯೂಮೋನಿಯ ರೋಗಕಾರಕ ಬ್ಯಾಕ್ಟೀರಿಯ. ಸಾಮಾನ್ಯವಾಗಿ ಈ ಸೋಂಕು ಗಂಟಲಿನಲ್ಲಿ, ಇಲ್ಲವೇ ಬಾಯಿ ಸ್ರಾವಗಳಲ್ಲಿ ಉಂಟಾಗಬಹುದು

ನ್ಯೂಮೊಥೊರಾಕ್ಸ್

(ವೈ) ಶ್ವಾಸಕೋಶಕ್ಕೂ ಎದೆಗೂಡು ಗೋಡೆಗೂ ನಡುವೆ ಅನಿಲ ತುಂಬಿಕೊಂಡಿರುವುದು

ನ್ಯೂಮೋನಿಯ

(ವೈ) ಬ್ಯಾಕ್ಟೀರಿಯ ಅಥವಾ ವೈರಸ್ ಗಳಿಂದಾದ ತೀವ್ರತರವಾದ ಅಥವಾ ಬೇರೂರಿದ ಶ್ವಾಸಕೋಶ ಉರಿಯೂತ. ಇತರ ಕಾರಣಗಳಿಂದಾದ ಉರಿಯೂತಕ್ಕೆ ನ್ಯೂಮೊನೈಟಿಸ್ ಎನ್ನಲಾಗುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಇದು ಮಾರಕವಾಗಬಲ್ಲುದು

ನ್ಯೂರನೊಫೇಜಿಯ

(ವೈ) ಬಿಳಿ ರಕ್ತಕಣ ಗಳಿಂದಲೂ ಮೈಕ್ರೊಗ್ಲಿಯರ್ ಕೋಶಗಳಿಂದಲೂ ರೋಗಪೀಡಿತ ನರಕೋಶಗಳ ನಾಶ

Search Dictionaries

Loading Results

Follow Us :   
  Download Bharatavani App
  Bharatavani Windows App