Navakarnataka Vijnana Tantrajnana Padasampada (2011)
Navakarnataka Publications Private Limited
ನತಿಪರಿವರ್ತನ ಬಿಂದು
(ಗ) ವಕ್ರರೇಖೆಯ ಮೇಲಿನ ಈ ಬಿಂದುವಿನಲ್ಲಿ ಸ್ಪರ್ಶಕದ ಆವರ್ತನ ದಿಶೆ ಬದಲಾಗುತ್ತದೆ. ಎಂದೇ ಇಲ್ಲಿ ಸ್ಪರ್ಶಕವು ವಕ್ರರೇಖೆಯನ್ನು ಛೇದಿಸುತ್ತದೆ ಕೂಡ. ಈ ಸ್ಪರ್ಶಕಕ್ಕೆ ಸ್ತಬ್ಧ ಸ್ಪರ್ಶಕವೆಂಬ ಹೆಸರುಂಟು
ನದಿಹರಣ
(ಭೂವಿ) ಒಂದು ನದಿಯನ್ನು ಅಥವಾ ಅದಕ್ಕೆ ಸೇರುವ ಉಪನದಿಯನ್ನು ಹೆಚ್ಚು ಆಳದ ಹಾಗೂ ಅಧಿಕ ಪ್ರಬಲ ಪ್ರವಾಹದ ಮತ್ತೊಂದು ನದಿ ಛೇದಿಸಿ ಮೊದಲ ನದಿಯ ಏರು ಪ್ರದೇಶದ ನೀರು ಈ ಎರಡನೆಯ ನದಿಯೊಳಕ್ಕೆ ಹರಿಯುವಂತಾಗುವುದು. ನದಿ ಚೌರ್ಯ
ನದೀ ಪಾತ್ರ
(ಭೂವಿ) ನದಿ ಹರಿಯುವ ಜಾಡು
ನದೀ ಮುಖಜಭೂಮಿ
(ಭೂ) ಸಮುದ್ರವನ್ನು ನದಿ ಸೇರುವ ಪ್ರದೇಶದಲ್ಲಿ ರೂಪುಗೊಳ್ಳುವ ತ್ರಿಕೋಣಾಕಾರದ ಮೆಕ್ಕಲು ಭೂಮಿ. ಅಧಿಕ ಪ್ರವಾಹ ಬಾಧೆಗೆ ಈಡಾಗದ ಮತ್ತು ಉಬ್ಬರವಿಳಿತ ಕ್ರಿಯೆಗಳು ಕಡಿಮೆ ಇರುವ ಕರಾವಳಿ ಪ್ರದೇಶಗಳಲ್ಲಿ ಇದು ರೂಪುಗೊಳ್ಳುತ್ತದೆ. ಕಾವೇರಿ, ಗಂಗಾ, ನೈಲ್ ಮುಖಜಭೂಮಿಗಳು ಉದಾಹರಣೆಗಳು. ಕುದುರು, ಡೆಲ್ಟ
ನದೀತೀರದ
(ಭೂವಿ) ನದೀ ದಡಗಳ ಮೇಲೆ ಅಥವಾ ನೀರಿನ ಪ್ರವಾಹಗಳಲ್ಲಿ ಇರುವ
ನದೀಶೀರ್ಷ
(ಭೂವಿ) ನದಿಯ ಉಗಮ ಸ್ಥಾನದಿಂದ ಹೊರಡುವ ಉಪನದಿಗಳು, ಕವಲುಗಳು
ನಪುಂಸಕ
(ಜೀ) ಜನನೇಂದ್ರಿಯಗಳು ಇಲ್ಲದ ಪ್ರಾಣಿಗಳು; ಕ್ರಿಯಾಕಾರಿ ಕೇಸರಗಳು, ಕ್ರಿಯಾಕಾರಿ ಸ್ತ್ರೀ ಶಲಾಕಗಳು ಇರದ ಪುಷ್ಪ
ನಮ್ಯಕಾರಕ
(ಎಂ) ಕಾಂಕ್ರೀಟಿಗೆ ಹೆಚ್ಚಿನ ನೀರು ಬೆರೆಸದೆ, ನಮ್ಯತೆಯನ್ನುಂಟುಮಾಡಲು ಬೆರೆಸುವ ರಾಸಾಯನಿಕ
ನಮ್ಯತೆ
(ಸಾ) ವಸ್ತುವನ್ನು ಮತ್ತೆ ಮತ್ತೆ ಬಗ್ಗಿಸಿದಾಗ ಅಥವಾ ತಿರುಚಿದಾಗ ಬಿರಿಯದ ಅಥವಾ ಮುರಿಯದ ಗುಣ
ನಯಗಾರಿಕೆ
(ತಂ) ಒರಟು ಮೈಯನ್ನು ಉಜ್ಜಿ ನಯಗೊಳಿಸುವುದು
ನಯಸುಣ್ಣ
(ರ) ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್. Ca(OH)2. ಸುಣ್ಣಕಲ್ಲನ್ನು (CaCO3) ಕಾಸಿದಾಗ ಸುಟ್ಟ ಸುಣ್ಣ ಉಳಿಯುತ್ತದೆ. ಇದು ನೀರಿನೊಂದಿಗೆ ಬಿರುಸಾಗಿ ವರ್ತಿಸಿ ಅಧಿಕ ಶಾಖ ಮತ್ತು ನಯಸುಣ್ಣ ಉತ್ಪತ್ತಿ ಆಗುತ್ತದೆ. ಗಾರೆಯ ರೂಪದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಮತ್ತು ರಾಡಿಯ ರೂಪದಲ್ಲಿ ಗೋಡೆಗಳಿಗೆ ಹಚ್ಚಲು ಬಳಕೆ. ತಾಂಬೂಲ ಸೇವನೆಯಲ್ಲಿ ವೀಳ್ಯದೆಲೆಗೆ ಸವರುತ್ತಾರೆ
ನಯಸ್ನಾಯು
(ವೈ) ಕದಿರು ಆಕಾರದ ತಂತುವಿನಂಥ ಏಕಬೀಜೀಯ ಕೋಶಗಳಿಂದ ಸಂಯೋಜಿತವಾದ ಒಂದು ಬಗೆಯ ಸಂಕೋಚಕ ಸ್ನಾಯು. ಪ್ರಧಾನವಾಗಿ ಪೊಳ್ಳು ವಿಸೆರದ (ಒಳ ಅಂಗಗಳು) ಭಿತ್ತಿಗಳಲ್ಲಿರುತ್ತದೆ. ನೋಡಿ: ಅರೇಖಿತ ಸ್ನಾಯು
ನರ
(ವೈ) ಅನೇಕ ನರತಂತುಗಳನ್ನೂ ಆಧಾರ ಊತಕಗಳನ್ನೂ ಒಳಗೊಂಡು ಯೋಜೀ ಊತಕದ ಹೊದಿಕೆಯಿಂದ ಆವೃತವಾದ ಊತಕದ ಒಂದು ಎಳೆ. ನರಗಳು ಕೇಂದ್ರ ನರವ್ಯೂಹವನ್ನು ಶರೀರದ ವಿವಿಧ ಅಂಗಗಳೊಂದಿಗೂ ಊತಕಗಳೊಂದಿಗೂ ಸಂಯೋಜಿ ಸುತ್ತವೆ. ನರವೊಂದು ಕೇವಲ ಚಾಲಕ ನರತಂತುಗಳನ್ನು ಒಯ್ಯುತ್ತಿರ ಬಹುದು (ಚಾಲಕ ನರ – ಇದು ಮಿದುಳಿನಿಂದ ಆಣತಿಯನ್ನು ವಿವಿಧ ಅಂಗಗಳಿಗೆ ರವಾನಿಸಿ ಅಗತ್ಯ ಚಲನೆಗೆ ಕಾರಣವಾಗುತ್ತದೆ) ಅಥವಾ ಕೇವಲ ಸಂವೇದನಾ ತಂತುಗಳನ್ನು (ಸಂವೇದನಾ ನರ – ಇದು ವಿವಿಧ ಸಂವೇದನೆಗಳನ್ನು ಪಂಚೇಂದ್ರೀಯಗಳ ಮೂಲಕ ಮಿದುಳಿಗೆ ರವಾನಿಸುತ್ತದೆ) ಒಯ್ಯುತ್ತಿರಬಹುದು ಅಥವಾ ಎರಡು ಮಾದರಿಗಳನ್ನೂ ಒಯ್ಯುತ್ತಿರಬಹುದು (ಮಿಶ್ರಿತ ನರ). ನರದೊಳಗೆ ನರತಂತುಗಳು ಪರಸ್ಪರ ತುಂಬ ನಿಕಟವಾಗಿದ್ದರೂ ಅವುಗಳ ಭೌತಕ್ರಿಯೆಗಳು ಸ್ವತಂತ್ರವಾಗಿರುತ್ತವೆ. ನೋಡಿ : ನ್ಯೂರಾನ್
ನರ ಅಂಟುಕೋಶಗಳು
(ಜೀ) ಅಸಂವೇದಕ ನರ ಅಂಟುಕೋಶಗಳು. ನರಮಂಡಲದ ಘಟಕಗಳಿಗೆ ಅಗತ್ಯವಿರುವ ಬೆಂಬಲ ಮತ್ತು ರಕ್ಷಣೆ ಒದಗಿಸುವುವು. ಅಂತಸ್ಸ್ರಾವಕ ಕೋಶ ಗಳಾಗಿಯೂ ಮಾರ್ಪಾಟಾಗಿರಬಹುದು
ನರ ಕಶೇರು
(ವೈ) ನರನಾಳದ ಮೇಲಿರುವ ನ್ಯೂರಪೋಫೈಸಿಸ್ಗಳ ಸಮ್ಮಿಲದಿಂದಾದ ಮಧ್ಯಸ್ಥ ಬೆನ್ನಿನ ಮೂಳೆ
ನರಕೇಂದ್ರ
(ವೈ) ಗ್ರಾಹಿಗಳಿಂದ ಬರುವ ಆವೇಗ ಗಳನ್ನು ನರಾವೇಗಗಳಾಗಿ ಪರಿವರ್ತಿಸಿ ಅವು ಸ್ನಾಯುಗಳ ಮೇಲೆ ಕ್ರಿಯೆ ಜರಗಿಸುವಂತೆ ಮಾಡುವ ನರವ್ಯೂಹದಲ್ಲಿಯ ಯಾವುದೇ ಭಾಗ; ಶರೀರದ ಯಾವುದಾದರೂ ಕ್ರಿಯೆಯನ್ನು, ಉದಾ: ಉಸಿರಾಟವನ್ನು ನಿಯಂತ್ರಿಸುವ ನರಕೋಶ ಸಮೂಹ
ನರಗಂಟು
(ವೈ) ನರಪದಾರ್ಥದ ರಾಶಿ. ಇದರಿಂದ ನರತಂತುಗಳು ಸುತ್ತಲೂ ಹೊರಡುತ್ತವೆ
ನರಗುಚ್ಛ
(ವೈ) ನರದ ಎಳೆಗಳು ಒಟ್ಟುಗೂಡಿ ಆದ ಕಟ್ಟು
ನರಗುಬುಟು
(ವೈ) ಸಂವೇದಕ ನರತಂತುಗಳು ಅಂಡಾಕಾರದ ಇಲ್ಲವೇ ದುಂಡಗಿನ ಗೊಂಚಲಾಗಿ ಲೋಳೆ ಪೊರೆಯಲ್ಲಿ ಸೇರಿಕೊಂಡಿರುವುದು. ತುದಿಬುಡ್ಡೆ
ನರಗ್ರಾಹಿ