भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous123Next >

ಧಕ್ಕೆ ತರಂಗ

(ಭೌ) ನೋಡಿ: ಆಘಾತ ತರಂಗ

ಧನ

(ಗ) ಸೊನ್ನೆಗಿಂತ ಹೆಚ್ಚಿನ ಮೌಲ್ಯವುಳ್ಳದ್ದು

ಧನಕಿರಣ

(ಭೌ) ಧನ ವಿದ್ಯುದಾವೇಶಯುತ ಅಯಾನ್‌ಗಳ ಹೊನಲು. ಅನಿಲದ ಮೂಲಕ ವಿದ್ಯುತ್ ವಿಸರ್ಜನೆಯಿಂದ ಇದನ್ನು ಉಂಟುಮಾಡಬಹುದು

ಧನವಿದ್ಯುತ್ತು

(ಭೌ) ಯಾವುದೇ ಕಾಯದಲ್ಲಿ ಎಲೆಕ್ಟ್ರಾನ್‌ಗಳ ಕೊರತೆಗೆ ಸಂಬಂಧಿಸಿದಂಥ ಪರಿಣಾಮಗಳನ್ನು ಉಂಟುಮಾಡುವ ವಿದ್ಯಮಾನ. ಉದಾ: ರೇಷ್ಮೆಯಿಂದ ಉಜ್ಜಿದಾಗ ಗಾಜಿನ ಮೇಲೆ ಧನವಿದ್ಯುತ್ತು ಉಂಟಾಗುತ್ತದೆ. ನೋಡಿ: ಋಣವಿದ್ಯುತ್ತು

ಧನವಿದ್ಯುದ್ವಾರ

(ಭೌ) ನೋಡಿ: ಆನೋಡ್

ಧನಾತ್ಮಕ

(ಭೌ) ೧. ಸಹಜ ಸ್ಥಿತಿಯಲ್ಲಿರುವುದಕ್ಕಿಂತ ಕಡಿಮೆ ಸಂಖ್ಯೆಯ ಎಲೆಕ್ಟ್ರಾನ್‌ಗಳಿದ್ದು ಆ ಕಾರಣದಿಂದ ಎಲೆಕ್ಟ್ರಾನ್‌ಗಳನ್ನು ತನ್ನತ್ತ ಆಕರ್ಷಿಸುವ, ಅಂತೆಯೇ ಪ್ರೋಟಾನ್‌ಗಳನ್ನು ವಿಕರ್ಷಿಸುವ, ಸಾಮರ್ಥ್ಯವುಳ್ಳ. ೨. ವಿದ್ಯುನ್ಮಂಡಲದಲ್ಲಿ ಭೂಮಿಗಿಂತ ಹೆಚ್ಚಿನ ವಿಭವಶಕ್ತಿ ಇರುವ ಬಿಂದು

ಧನಾತ್ಮಕ ಬೆಲೆ

(ಗ) ನೋಡಿ : ಮಾಡ್ಯುಲಸ್. x ಎಂಬ ಚರಾಂಕದ ಧನಾತ್ಮಕ ಬೆಲೆಯ ಉತ್ಪನ್ನವನ್ನು |x| ಎಂದು ಸೂಚಿಸ ಲಾಗುವುದು. ದತ್ತ ಚರಾಂಕ xನ ಬೆಲೆಯು (i) ಧನಾತ್ಮಕವಾಗಿದ್ದರೆ |x|=x ಆಗಿಯೂ (ii) ಋಣಾತ್ಮಕವಾಗಿದ್ದರೆ |x|=-x ಆಗಿಯೂ ಮತ್ತು (iii) ಶೂನ್ಯವಾಗಿದ್ದರೆ |x|=0 ಆಗಿಯೂ ಇರುತ್ತದೆ. ಉದಾ: |2|=2, |-|.5|=1.5, |0|=0

ಧನಾವೇಶ

(ಭೌ) ವಿದ್ಯುದಾವೇಶದ ಎರಡು ಬಗೆಗಳಲ್ಲಿ ಒಂದು-ಪ್ರೋಟಾನ್‌ನದು; ಇನ್ನೊಂದು ಋಣಾವೇಶ – ಎಲೆಕ್ಟ್ರಾನ್‌ನದು. ರೇಷ್ಮೆಯಿಂದ ಗಾಜನ್ನು ಉಜ್ಜಿದಾಗ ಗಾಜಿನಲ್ಲಿ ಧನಾವೇಶ ಉಂಟಾಗುತ್ತದೆ

ಧನುರ್ವಾಯು

(ವೈ) ಕ್ಲಾಸ್‌ಟ್ರಿಡಿಯಮ್ ಟೆಟನಿ ಎಂಬ ಬ್ಯಾಸಿಲಸ್‌ನ ಸೋಂಕಿನಿಂದ ದೇಹದಲ್ಲಿ ಬಿಡುಗಡೆಯಾಗುವ ಜೀವಿವಿಷದಿಂದ (ಟಾಕ್ಸಿನ್) ಉಂಟಾಗುವ ಸ್ನಾಯು ಸೆಳವು ರೋಗ. ದವಡೆ ಸ್ನಾಯುಗಳು ಸೆಟೆದು ಬಾಯಿ ಬಿಡಲಾಗದೆ ತೀವ್ರ ನೋವಿನಿಂದ ಉಂಟಾಗುವ ಸೆಳವು ರೋಗ. ಸಕಾಲದಲ್ಲಿ ಯುಕ್ತ ಚಿಕಿತ್ಸೆ ನೀಡದಿದ್ದಲ್ಲಿ, ಮರಣದಲ್ಲಿ ಪರ್ಯವಸಾನಗೊಳ್ಳುವ ಮಾರಕರೋಗ. ತುಕ್ಕು ಹಿಡಿದ ಕಬ್ಬಿಣ, ಜಾನುವಾರು ಲದ್ದಿ, ರಸ್ತೆಯಲ್ಲಿರುವ ರದ್ದಿ ಮುಂತಾದವುಗಳ ಜೊತೆ ತೆರೆದ ಗಾಯ ಸಂಪರ್ಕಕ್ಕೆ ಬಂದಾಗ ಈ ಬೇನೆ ಅಂಟಬಹುದು. ಜೀವಿವಿಷವನ್ನು ಚುಚ್ಚುಮದ್ದಾಗಿ ನೀಡಿ ರೋಗಬಾರದಂತೆ ಸಂರಕ್ಷಣೆ ಒದಗಿಸ ಬಹುದು. ಲಾಕ್‌ಜಾ, ಟೆಟನಸ್

ಧಮನಿ

(ವೈ) ಹೃದಯದಿಂದ ಆಕ್ಸಿಜನ್‌ಭರಿತ ರಕ್ತವನ್ನು ದೇಹದ ಎಲ್ಲ ಅಂಗಾಂಗಗಳಿಗೆ ಸಾಗಿಸುವ ದಪ್ಪ ಭಿತ್ತಿಯ ರಕ್ತನಾಳ. ಈ ಸಾರ್ವಕಾಲಿಕ ನಿಯಮಕ್ಕೆ ಒಂದೇ ಒಂದು ಅಪವಾದವಿದೆ: ಪಲ್ಮನರಿ ಆರ‍್ಟರಿ (ಶ್ವಾಸಧಮನಿ)ಯು ಆಕ್ಸಿಜನ್ ಪೂರೈಕೆ ಆಗದೆ ಇರುವ ರಕ್ತವನ್ನು ಹೃದಯದ ಬಲಹೃತ್ಕರ್ಷಿಯಿಂದ ಶ್ವಾಸಕೋಶಕ್ಕೆ ಒಯ್ಯುತ್ತದೆ. ಅಲ್ಲಿ ರಕ್ತಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತದೆ. ದೊಡ್ಡ ಧಮನಿಯು ಅನೇಕಾನೇಕ ಸಣ್ಣ ಧಮನಿಗಳಾಗಿ ದೇಹಾದ್ಯಂತ ವ್ಯಾಪಿಸಿದೆ. ಎಲ್ಲ ಧಮನಿಗಳೂ ಸ್ನಾಯುಭಿತ್ತಿಯಿಂದ ಕೂಡಿದ್ದು ಭಿತ್ತಿಯ ಸಂಕೋಚನವು ರಕ್ತಪರಿಚಲನೆಗೆ ಸಹಕಾರಿ

ಧಮನಿ ಮಾಂದ್ಯ

(ವೈ) ಧಮನಿಗಳ ಭಿತ್ತಿ ದಪ್ಪವಾಗಿ ನಮ್ಯತೆಯನ್ನು ಕಳೆದುಕೊಂಡ ಪರಿಣಾಮವಾಗಿ ಧಮನಿ ಮಂದವಾಗುವುದು ಅಥವಾ ಬಿಗುಪುಗೊಳ್ಳುವುದು. ಸಾಮಾನ್ಯವಾಗಿ ಇದನ್ನು ಧಮನಿ ಪೆಡಸುತನ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ

ಧಮನಿ ಸುರೂಪಿಕೆ

(ವೈ) ಧಮನಿಗಳಲ್ಲಿ ಕೊಬ್ಬು ಪದಾರ್ಥಗಳ ಸಂಗ್ರಹವಾಗಿ, ಧಮನಿಯ ವ್ಯಾಸ ಕುಗ್ಗಬಹುದು. ಆಗ ಆ ಧಮನಿಯಲ್ಲಿ ಹರಿಯುವ ರಕ್ತ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಧಮನಿಯ ವ್ಯಾಸ ಪೂರ್ಣ ಮುಚ್ಚಿಕೊಂಡರೆ ಅಂಗಕ್ಕೆ ರಕ್ತ ಸರಬರಾಜು ಪೂರ್ಣ ನಿಲ್ಲುತ್ತದೆ. ಇಂತಹ ಪ್ರಕ್ರಿಯೆ ಹೃದಯಕ್ಕೆ ರಕ್ತವನ್ನು ಪೂರೈಸುವ ಮಕುಟ ಧಮನಿಗಳಲ್ಲಿ ನಡೆದಾಗ ಹೃದಯಾಘಾತವಾಗುತ್ತದೆ. ಮಿದುಳಿನ ರಕ್ತನಾಳಗಳಲ್ಲಿ ನಡೆದಾಗ ಮಿದುಳು ಆಘಾತ (ಲಕ್ವಾ) ಆಗುತ್ತದೆ. ಇದನ್ನು ಮುಂಚಿತವಾಗಿ ತಿಳಿದು, ಧಮನಿಯಲ್ಲಿ ಮೂಡಿರುವ ತಡೆಯನ್ನು ನಿವಾರಿಸಿ ರಕ್ತ ಸರಬರಾಜಿಗೆ ಅನುಕೂಲ ಮಾಡಿಕೊಡುವ ಚಿಕಿತ್ಸೆಯೇ ಧಮನಿ ಸುರೂಪಿಕೆ. ಇದನ್ನು ಸಾಮಾನ್ಯವಾಗಿ ಮಕುಟಧಮನಿಗಳಿಗೆ ಮಾಡುತ್ತಾರಾದರೂ ಇತರ ಧಮನಿಗಳಿಗೂ ಮಾಡಲು ಸಾಧ್ಯವಿದೆ. ಇದರಲ್ಲಿ ಬಲೂನ್ ಕೆಥೀಟರ್ (ತೂರುನಳಿಕೆ)ವೊಂದನ್ನು ರಕ್ತನಾಳ ದೊಳಕ್ಕೆ ತೂರಿಸಿ ಬಲೂನನ್ನು ಹಿಗ್ಗಿಸಲಾಗುವುದು. ಆಗ ಸಂಕುಚಿತ ಗೊಂಡಿದ್ದ ಧಮನಿ ಭಾಗ ಹಿಗ್ಗಿ ರಕ್ತಪರಿಚಲನೆ ಸುಗಮವಾಗುತ್ತದೆ

ಧಮನಿಲೇಖನ

(ವೈ) ಧಮನಿಯೊಳಕ್ಕೆ ರೇಡಿಯೋ ಅಪಾರಕ ವಸ್ತುವೊಂದನ್ನು ಚುಚ್ಚಿ, ಧಮನಿಯ ವ್ಯಾಪ್ತಿಯನ್ನೂ ಗುಣಲಕ್ಷಣಗಳನ್ನೂ ಎಕ್ಸ್-ಕಿರಣ ಬಳಸಿ ಚಿತ್ರಿಸುವ ತಂತ್ರಜ್ಞಾನ

ಧಾತು

(ರ) ಸಾಧಾರಣ ರಾಸಾಯನಿಕ ವಿಧಾನಗಳನ್ನು ಅನ್ವಯಿಸಿ ಇನ್ನಷ್ಟು ಸರಳತರ ಪದಾರ್ಥಗಳಾಗಿ ವಿಭಜಿಸಲು ಆಗದ ಸರಳ ಪದಾರ್ಥ. ಉದಾ: ಚಿನ್ನ, ಸೀಸ, ಕಾರ್ಬನ್ ಇತ್ಯಾದಿ. ವಿಶ್ವದ ೯೨ ನಿರ್ಮಾಣ ಘಟಕಗಳ ಪೈಕಿ ಒಂದು. ಧಾತುಗಳ ರಾಸಾಯನಿಕ ಬೆಸೆತದಿಂದ ಸಂಯುಕ್ತ ಲಭಿಸುತ್ತದೆ. ಉದಾ: ನೀರು ಎಂಬ ಸಂಯುಕ್ತವು ಹೈಡ್ರೊಜನ್ ಮತ್ತು ಆಕ್ಸಿಜನ್ ಎಂಬ ಧಾತುಗಳಿಂದ ಆಗಿದೆ. ಧಾತುವಿನ ಪ್ರತಿಯೊಂದು ಪರಮಾಣು ವಿನಲ್ಲಿಯೂ ಪ್ರೋಟಾನ್ ಹಾಗೂ ಎಲೆಕ್ಟ್ರಾನ್‌ಗಳು ಒಂದೇ ಸಂಖ್ಯೆಯಲ್ಲಿರುವುವು. ನ್ಯೂಟ್ರಾನ್‌ಗಳ ಸಂಖ್ಯೆ ಭಿನ್ನವಾಗಿ ಇರಬಹುದು. (ಗ) ಗಣವನ್ನು ರಚಿಸಿರುವ ಘಟಕ. A={a,b,c,d} ಗಣದಲ್ಲಿ a,b,c,d ಧಾತುಗಳು

ಧಾತು ವಿಶ್ಲೇಷಣೆ

(ಸಾ) ಯಾವುದೇ ಪದಾರ್ಥದಲ್ಲಿರುವ ಘಟಕ ದಾತುಗಳ ಸಾಪೇಕ್ಷ ಮೊತ್ತಗಳನ್ನು ನಿರ್ಧರಿಸಲು ಅನುಸರಿಸುವ ಪರಿಮಾಣಾತ್ಮಕ ವಿಶ್ಲೇಷಣೆ

ಧಾನ್ಯ

(ಸ) ಅಕ್ಕಿ, ಗೋದಿಗಳಂಥ ಹುಲ್ಲು ಸಸ್ಯಗಳು ಕೊಡುವ ಫಲ. ದವಸ, ಕಾಳು, ಬೀಜ. ಪತ್ರದಳದ ಹಿಂಬದಿಯ ಮೇಲೆ ಕಂಡುಬರುವ ಗುಂಡಾದ ಕಾಳಿನಾಕೃತಿಯ ಉಬ್ಬು. ಹುಲ್ಲು ಸಸ್ಯದ ಒಂದು ಕಾಳುಳ್ಳ ಸಣ್ಣ ಶುಷ್ಕಫಲ. ಕಾಳಿನ ಕವಚವು ಫಲದ ಆವರಣದೊಂದಿಗೆ ಕೂಡಿಕೊಂಡಿರುತ್ತದೆ

ಧಾರಕತೆ

(ಭೌ) ವಿದ್ಯುತ್ ಸಲಕರಣೆ ಒದಗಿಸುವ ಫಲ ಅಥವಾ ಪ್ರದಾನ (ಔಟ್‌ಪುಟ್). ಉದಾ: ವಿದ್ಯುಜ್ಜನಕದ ಅಥವಾ ವಿದ್ಯುತ್ ಮೋಟರಿನ ಪ್ರದಾನ (KWಗಳಲ್ಲಿ ಅಳೆತ). (ತಂ) ಪಾತ್ರೆಯ ಒಳಗೆ ಅಥವಾ ಭಿತ್ತಿಗಳಿಂದ ಆವೃತವಾಗಿರುವ ಅವಕಾಶದ (ಸ್ಪೇಸ್) ಅಳತೆ. ದತ್ತ ನಿರ್ಬಂಧಗಳಲ್ಲಿ ಒಂದು ಪಾತ್ರೆ/ಯಂತ್ರ/ವ್ಯವಸ್ಥೆ ಧರಿಸಬಹುದಾದ ಹೊರೆ. ವಿದ್ಯುತ್ಸಲಕರಣೆ ಉತ್ಪಾದಿಸುವ ವಿದ್ಯುತ್ತು

ಧಾರಕತೆ

(ಭೌ) ವಾಹಕದ ಅಥವಾ ವಾಹಕ ವ್ಯವಸ್ಥೆಯ ವಿದ್ಯುದಾವೇಶ ಧಾರಣಸಾಮರ್ಥ್ಯವನ್ನು ವಿವರಿಸುವ ಗುಣ. ಧಾರಕತೆ. C = Q /V ಇಲ್ಲಿ Q ಯಾವುದೇ ವಾಹಕ

ಧಾರಾನುಚಲನೆ

(ಜೀ) ಜಲಧಾರೆಯ ದಿಶೆಗೆ ಅನುಸಾರವಾಗಿ ಚಲನಶೀಲ ಕೋಶ/ಜೀವಿಯೊಂದರ ಚಲನೆ

ಧಾರಾನುವರ್ತನೆ

(ಜೀ) ಗಾಳಿ ಅಥವಾ ನೀರಿನ ಪ್ರವಾಹಕ್ಕೆ ಅನುಸಾರವಾಗಿ ಜೀವಿ ತೋರುವ ಚಲನಾನುವರ್ತನೆ
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App