भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಧ್ರುವೀಯ ಮರುಭೂಮಿ

(ಭೂವಿ) ಉನ್ನತ ಅಕ್ಷಾಂಶಗಳಲ್ಲಿರುವ ಮರುಭೂಮಿ. ಅಲ್ಲಿ ಹಿಮಹಾಳೆಗಳಲ್ಲಿ ಆರ್ದ್ರತೆ ಘನೀಭವಿಸಿರುವುದರಿಂದಾಗಿ ಈ ಮರುಭೂಮಿಯು ಸಸ್ಯಗಳ ಬೆಳವಣಿಗೆಗೆ ಅಲಭ್ಯ

ಧ್ರುವೀಯ ವೃತ್ತಗಳು

(ಖ) ವಿಷುವದ್ ವೃತ್ತಕ್ಕೆ ಸಮಾಂತರ ವಾಗಿ ಧ್ರುವಗಳಿಂದ ೨೩0 -೨೭|ಗಳ ಅಂತರದಲ್ಲಿ ಎಳೆದ ವೃತ್ತಗಳು

ಧ್ರುವೀಯತೆ

(ಭೌ) ೧. ಧನ ಮತ್ತು ಋಣ ವಿದ್ಯುದಾವೇಶಗಳ ನಡುವಣ ಭಿನ್ನತೆ. ೨. ಒಂದು ಅಂಶ ಮಾತ್ರ ಭಿನ್ನವಾಗಿರುವ ಯಾವುದೇ ವ್ಯವಸ್ಥೆಯಲ್ಲಿಯ ಎರಡು ಬಿಂದುಗಳ ನಡುವೆ ವ್ಯತ್ಯಾಸ ಸೂಚಿಸುವ ಪದ. ಉದಾ: ವಿದ್ಯುತ್‌ಕೋಶದ ತುದಿಗಳ ವಿಭವಗಳು, ಪರಿವರ್ತಕದ ಸುತ್ತುಗಟ್ಟುಗಳು. (ರ) ಎಲೆಕ್ಟ್ರಾನ್‌ಗಳ ಅಸಮ್ಮಿತೀಯ ವಿತರಣೆ ಇರುವಂಥ ಅಣುವಿನ ಶಾಶ್ವತ ಗುಣ. ಭಿನ್ನ ಬೈಜಿಕ ದ್ವಿಪರಮಾಣವಿಕ ಅಣುಗಳೆಲ್ಲ ಧ್ರುವೀಯವಾದವು. (ಪ್ರಾ) ಪ್ರಾಣಿಗಳಲ್ಲಿ ನಿರ್ದಿಷ್ಟ ಅಕ್ಷ ಅಸ್ತಿತ್ವದಲ್ಲಿರುವುದು

ಧ್ವನಿ

(ಭೌ) ಕಿವಿಯಲ್ಲಿ ಸಂವೇದನೆಗೆ ಕಾರಣವಾಗುವ ಮತ್ತು ಅನಿಲ, ದ್ರವ ಹಾಗೂ ಘನ ಸ್ಥಿತಿಸ್ಥಾಪಕ ಮಾಧ್ಯಮಗಳಲ್ಲಿ ನಿಯತಕಾಲಿಕವಾಗಿ ಉಂಟಾಗುವ ಯಾಂತ್ರಿಕ ಕಂಪನಗಳು ಹಾಗೂ ತರಂಗಗಳು. ಸೀಮಿತ ಆವೃತ್ತಿ ವ್ಯಾಪ್ತಿಯಲ್ಲಿ ಅಂದರೆ ೨೦ ಹರ್ಟ್ಸ್ ಹಾಗೂ ೨೦ ಕಿಲೊಹರ್ಟ್ಸ್ ನಡುವಿನ ವ್ಯಾಪ್ತಿಯಲ್ಲಿ ವಾಯು ಕಂಪನಗಳು ಶ್ರಾವ್ಯ. ೨೦ ಹರ್ಟ್ಸ್‌ಗೂ ಕೆಳಗಿನ ಆವೃತ್ತಿ ಧ್ವನಿಗೆ ಅವಶ್ರವಣ ಧ್ವನಿ ಎಂದೂ ೨೦ ಕಿಲೊಹರ್ಟ್ಸ್‌ಗೂ ಮೇಲಿನ ಆವೃತ್ತಿ ಧ್ವನಿಗೆ ಶ್ರವಣಾತೀತ ಧ್ವನಿ ಎಂದೂ ಹೆಸರು. ಸ್ಥಿತಿಸ್ಥಾಪಕ ತರಲದಲ್ಲಿ ಅಥವಾ ಘನ ಪದಾರ್ಥಗಳ ಮೂಲಕ ಧ್ವನಿಯು ಅನುದೀರ್ಘ /ಅಡ್ಡತರಂಗಗಳ ರೂಪದಲ್ಲಿ ಪ್ರಸರಣಗೊಳ್ಳುತ್ತದೆ. ಶಬ್ದ. ಸ್ವನ

ಧ್ವನಿ ಏರಿಳಿತ

(ಸಾ) ಮಾತನಾಡುವಾಗ ಧ್ವನಿ ಸ್ಥಾಯಿಯಲ್ಲಿ ಬದಲಾವಣೆ. ಆಡಿದ ಮಾತಿಗೆ ವಿಶೇಷ ಅರ್ಥ ಅಥವಾ ಭಾವ ನೀಡಲು ಈ ಏರಿಳಿತ

ಧ್ವನಿ ತಂತು

(ವೈ) ದನಿ ನಾಳದಲ್ಲಿ ಲೋಳೆಪೊರೆ ಆವೃತ ಊತಕದ ಜೋಡಿ ಪದರಗಳ ಪೈಕಿ ಒಂದು

ಧ್ವನಿ ದೀಪ್ತಿ

(ಭೌ) ಉಚ್ಚ ಆವೃತ್ತಿಯ ಶಬ್ದ ತರಂಗಗಳು ಉಂಟುಮಾಡುವ ಕುಹರೀಕರಣದ ಪರಿಣಾಮವಾಗಿ ದ್ರವಗಳಲ್ಲಿ ಮೂಡುವ ಬೆಳಕಿನ ಸ್ಫುರಣ

ಧ್ವನಿ ಪೆಟ್ಟಿಗೆ

(ವೈ) ಮನುಷ್ಯರಲ್ಲೂ ಇತರ ಸ್ತನಿಗಳಲ್ಲೂ ಧ್ವನಿತಂತುಗಳನ್ನು ಒಳಗೊಂಡಿರುವ ಮತ್ತು ಶ್ವಾಸಕೋಶಗಳಿಗೆ ಗಾಳಿ ಹೋಗುವ ಮಾರ್ಗವಾಗಿರುವ, ಧ್ವನಿ ಹುಟ್ಟಿಸುವ ಟೊಳ್ಳಾದ ಮಾಂಸಲ ಅಂಗ. ಕಂಠಕುಹರ. ಗಂಟಲ ಗೂಡು

ಧ್ವನಿ ರಸಾಯನವಿಜ್ಞಾನ

(ರ) ೨೦ ಕಿಲೋ ಹರ್ಟ್ಸ್‌ಗೂ ಹೆಚ್ಚಿನ ಆವೃತ್ತಿಗಳ (ಶ್ರವಣಾತೀತ) ಧ್ವನಿ ತರಂಗ ಗಳನ್ನು ಬಳಸಿಕೊಂಡು ಕೆಲವೊಂದು ಮಾದರಿಯ ರಾಸಾಯನಿಕ ಕ್ರಿಯೆಗಳನ್ನು ಪ್ರೇರಿಸುವುದರ ಅಥವಾ ಉತ್ಕರ್ಷಿಸುವುದರ ಅಧ್ಯಯನ

ಧ್ವನಿ ವಾಸ್ತುವಿಜ್ಞಾನ

(ತಂ) ಭಾಷಣ, ನಾಟಕ ಮೊದಲಾದವುಗಳಿಗಾಗಿ ಬಳಸುವ ಕಟ್ಟಡದಲ್ಲಿ (ಸಭಾಂಗಣದಲ್ಲಿ) ಎಲ್ಲ ಕಡೆಯೂ ಧ್ವನಿಯು ಸ್ಪಷ್ಟವಾಗಿಯೂ ಯಥಾವತ್ತಾಗಿಯೂ ಕೇಳಿಸುವಂತೆ ಕಟ್ಟಡ ನಿರ್ಮಾಣಕ್ಕೆ

ಧ್ವನಿ ಸಂಪುಟ

(ತಂ) ಗಾನ ಮುದ್ರಿಕೆಗಳ ತೋಡುಗಳಲ್ಲಿಯ ಏರಿಳಿತಗಳನ್ನು ಧ್ವನಿಗಳಾಗಿ ಪರಿವರ್ತಿಸುವ ಗ್ರಾಮಾಫೋನ್ ಭಾಗ. ಇದರಲ್ಲಿ ಕಂಪಿಸುವ ಮುಳ್ಳು ಹಾಗೂ ತೆಳು ಅದುರು ಬಿಲ್ಲೆಗಳಿರುತ್ತವೆ

ಧ್ವನಿ ಸುರುಳಿ

(ಭೌ) ನೋಡಿ: ಕ್ಯಾಸೆಟ್

ಧ್ವನಿ ಹೀರಿಕೆ

(ತಂ) ಅಂತರಫಲಕದ (ಎರಡು ಮೇಲ್ಮೈಗಳಿಗೆ ಸಾಮಾನ್ಯವಾದ ಎಲ್ಲೆ ಪ್ರದೇಶದ) ಮೇಲೆ ಬಿದ್ದ ಧ್ವನಿ ಹೀರಲ್ಪಟ್ಟು ಉಷ್ಣವಾಗಿ ಮಾರ್ಪಡುವುದು

ಧ್ವನಿಮಾ ವಿಜ್ಞಾನ

(ಸಾ) ಮಾನವನ ಧ್ವನ್ಯಂಗ ಅಥವಾ ಉಚ್ಚಾರಣೆಯ ಆಕರಗಳಿಂದ ಉತ್ಪನ್ನವಾಗುವ ಅರ್ಥಯುತ ಸದ್ದುಗಳನ್ನು ಧ್ವನಿ ಎನ್ನಲಾಗುತ್ತದೆ. ಈ ಧ್ವನಿಗಳು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ನೀಡುತ್ತವೆ. ಇಂಥ ಧ್ವನಿ ಗಳಲ್ಲಿ ಉಪಯುಕ್ತವಾದವನ್ನು ಆಯ್ದುಕೊಂಡು ವಿಶ್ಲೇಷಿಸುವುದು ಧ್ವನಿಮಾ ವಿಜ್ಞಾನದ ಗುರಿ

ಧ್ವನಿಮಾಪಕ

(ತಂ) ಫಾನ್ ಅಳತೆ ಪಟ್ಟಿಯ ಮೇಲೆ ಧ್ವನಿಯ ಉಚ್ಚಸ್ಥಾಯಿ ಹಾಗೂ ಸ್ವರದ ಮಟ್ಟವನ್ನು ಅಂದಾಜು ಮಾಡುವ ಸಲಕರಣೆ

ಧ್ವನಿಯ ವೇಗ

(ಭೌ) ಗಾಳಿ ಅಥವಾ ನೀರು ಮುಂತಾದ ಮಾಧ್ಯಮದ ಮೂಲಕ ಧ್ವನಿ ಹಾದುಹೋಗುವ ವೇಗ. ಗಾಳಿಯಲ್ಲಿ ೦0 ಸೆ ಉಷ್ಣತೆಯಲ್ಲಿ ಧ್ವನಿಯ ವೇಗ ಸೆಕೆಂಡಿಗೆ ೩೩೧ ಮೀ. ಉಷ್ಣತೆ ಹೆಚ್ಚಿದರೆ ಧ್ವನಿಯ ವೇಗವೂ ಹೆಚ್ಚುತ್ತದೆ. ಉದಾ : ೧೮0ಸೆ ಉಷ್ಣತೆಯಲ್ಲಿ ಧ್ವನಿಯ ವೇಗ ಸೆಕೆಂಡಿಗೆ ೩೪೨ ಮೀ. ದ್ರವಗಳಲ್ಲಿ ಮತ್ತು ಘನಗಳಲ್ಲಿ ಅದರ ವೇಗ ಇನ್ನೂ ಹೆಚ್ಚು. ಉದಾ: ಸಿಹಿನೀರಿನಲ್ಲಿ ಸೆಕೆಂಡಿಗೆ ಸು. ೧೪೧೦ ಮೀ. ಸಮುದ್ರದ ನೀರಿನಲ್ಲಿ ಸೆಕೆಂಡಿಗೆ ೧೫೪೦ ಮೀ

ಧ್ವನಿಲೇಖನ

(ತಂ) ಧ್ವನಿ ಲೇಖನ ಯಂತ್ರವು ತಯಾರಿಸಿದ ಧ್ವನಿಲೇಖನ

ಧ್ವನಿವರ್ಧಕ

(ಭೌ) ವಿದ್ಯುತ್ ಸಂಜ್ಞೆಗಳನ್ನು ಅಥವಾ ರೇಡಿಯೋ ತರಂಗಗಳನ್ನು ಶಬ್ದ ತರಂಗಗಳಾಗಿ ಪರಿವರ್ತಿಸಿ ದೂರದಲ್ಲೂ ಕೇಳಿಸುವಂತೆ ಧ್ವನಿಯನ್ನು ವರ್ಧಿಸುವ ಟ್ರಾನ್ಸ್‌ಡ್ಯೂಸರ್ ಸಾಧನ. ಮಾತುಗಳಿಗೆ ೧೫೦-೮೦೦೦ ಹರ್ಟ್ಸ್ ಹಾಗೂ ಸಂಗೀತಕ್ಕೆ ೨೦-೨೦,೦೦೦ ಹರ್ಟ್ಸ್ ವ್ಯಾಪ್ತಿಯಲ್ಲಿ ಆವೃತ್ತಿ ಗಳನ್ನು ಪುನರುತ್ಪಾದಿಸುವ ಸಾಮರ್ಥ್ಯವಿರಬೇಕು

ಧ್ವನಿಸಂಕೇತ

(ತಂ) ಶೀಘ್ರಲಿಪಿ ಪದ್ಧತಿಯಲ್ಲಿ ಧ್ವನಿ ಸಂಕೇತ

Search Dictionaries

Loading Results

Follow Us :   
  Download Bharatavani App
  Bharatavani Windows App