Navakarnataka Vijnana Tantrajnana Padasampada (2011)
Navakarnataka Publications Private Limited
ದಕ್ಷತೆ
(ಸಾ) ವ್ಯವಸ್ಥೆಯ ಕಾರ್ಯ ಸಾಮರ್ಥ್ಯ.
ದಕ್ಷಿಣ
(ಭೂ) ನೋಡಿ : ದಿಗ್ಬಿಂದುಗಳು
ದಕ್ಷಿಣ ಪ್ರಭೆಗಳು
(ಖ) ನೋಡಿ: ಧ್ರುವಪ್ರಭೆ
ದಕ್ಷಿಣಾವರ್ತಕ
(ಭೌ) ಸಮತಲ-ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು (ಎದುರಿನಿಂದ ಬರುತ್ತಿ ರುವ ಬೆಳಕನ್ನು ಕಂಡಂತೆ) ಬಲಕ್ಕೆ ಅಂದರೆ ಪ್ರದಕ್ಷಿಣವಾಗಿ, ತಿರುಗಿಸುವ ದ್ಯುತಿಪಟುತ್ವ ವಸ್ತು/ರಾಸಾಯನಿಕ ಸಂಯುಕ್ತ. ಬಲಮುರಿ, ದಕ್ಷಿಣ ಭ್ರಾಮಕ, ನೋಡಿ : ವಾಮಾವರ್ತಕ
ದಂಡ
(ತಂ) ಕೂಡು ಪಟ್ಟಿಗಳ ಮೂಲಕ ಇಲ್ಲವೇ ಹಲ್ಲು ಚಕ್ರಗಳ ಮೂಲಕ ಚಲನೆ ಅಥವಾ ಬಲವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಬಳಸುವ ಉರುಳೆಯಾಕಾರದ ಲೋಹದ ತುಂಡು
ದಂಡ ಕಾಂತ
(ಭೌ) ಸರಳ ದಂಡಾಕಾರದ ಶಾಶ್ವತ ಕಾಂತ. ಇದರ ಒಂದೊಂದು ಕೊನೆಯೂ ಒಂದೊಂದು ಧ್ರುವ
ದಂಡ ಕೈವಾರ
(ತಂ) ನೋಡಿ : ಟ್ರ್ಯಾಮಲ್
ದಡಾರ
(ವೈ) ವೈರಸ್ನಿಂದ ಬರುವ ಒಂದು ಅಂಟುಜಾಡ್ಯ. ಎಳೆಯರಲ್ಲಿ ಹೆಚ್ಚು ಸಾಮಾನ್ಯ. ಉಸಿರಾಟದಲ್ಲಿ ತೊಂದರೆಗಳು, ಜ್ವರ, ಚರ್ಮದ ಮೇಲೆ ಕೆಂಪು ಗುಳ್ಳೆಗಳು ಈ ರೋಗದ ಲಕ್ಷಣಗಳು
ದಂಡೆ
(ಭೂವಿ) ನದೀ ಪಾತ್ರದ ಯಾವುದೇ ಅಂಚು. ತಟ
ದಡ್ಡು
(ವೈ) ಎಡೆಬಿಡದ ತುರಿಕೆ ಅಥವಾ ತಿಕ್ಕಾಟದ ಕಾರಣ ವಾಗಿ ಚರ್ಮ ಗಡಸು ಅಥವಾ ದೊರಗು ಆಗಿರುವುದು. ಜಡ್ಡುಗಂಟು, ಗಡಸುಗಂಟು
ದಂತ
(ಪ್ರಾ) ಆನೆ, ನೀರಾನೆ, ವಾಲ್ರಸ್ ಮೊದಲಾದವುಗಳ ಕೋರೆಹಲ್ಲುಗಳ ಅಧಿಕ ಭಾಗವಾಗಿರುವ ಗಟ್ಟಿಯಾದ ಬಿಳಿ ಪದಾರ್ಥ. ಸಾಪೇಕ್ಷ ಗುರುತ್ವ ೧.೮೭; ಚೆನ್ನಾದ ಮೆರುಗು ಪಡೆಯಬಲ್ಲದು; ಆಭರಣಗಳ ಮತ್ತು ಕಲಾತ್ಮಕ ವಸ್ತುಗಳ ತಯಾರಿಕೆಯಲ್ಲಿ ಬಳಕೆ; ಹಿಂದೆ ಪಿಯಾನೊಗಳ ಮನೆಗಳನ್ನು ಮಾಡಲು ಬಳಸಲಾಗುತ್ತಿತ್ತು
ದಂತ ದ್ರವ್ಯಕೋಶ
(ಪ್ರಾ) ಹಲ್ಲಿನ ಕುಹರದಲ್ಲಿ ಮೃದುವಾದ ಒಳ ಅಸ್ತರಿಯ ಸುತ್ತ ಇರುವ ಹಾಗೂ ದಂತದ್ರವ್ಯ ರೂಪಿಸುವ ಕೋಶಗಳಲ್ಲಿ ಯಾವುದೇ ಒಂದು
ದಂತಕ್ಷಯ
(ವೈ) ಮೂಳೆ, ಮುಖ್ಯವಾಗಿ ಹಲ್ಲು, ನಶಿಸುವುದು. ಅಸ್ಥಿಕ್ಷಯ, ಹುಳುಕು ಹಲ್ಲು
ದಂತಚಾಚು
(ಪ್ರಾ) ಷಾರ್ಕ್ ಮೀನು ಜಾತಿಯ ಪ್ರಾಣಿಗಳ ಹುರುಪೆಗಳಲ್ಲಿ ಕಂಡುಬರುವ ಹಲ್ಲಿನಂಥ ಹೊರಚಾಚು
ದಂತದ ಕಪ್ಪು
(ರ) ಸುಟ್ಟ ದಂತದಿಂದ ಅಥವಾ ಮೂಳೆಯಿಂದ ತಯಾರಿಸಿದ ಕಪ್ಪು ಬಣ್ಣ
ದಂತದ್ರವ್ಯ
(ವೈ) ಹಲ್ಲು ಮತ್ತು ಪ್ಲಕಾಯ್ಡ್ ಕೋಶಗಳನ್ನು ರೂಪಿಸಿರುವ ಗಟ್ಟಿಯಾದ ಕ್ಯಾಲ್ಸಿಯಮ್ ಸಂಯೋಜನೆಯ ದ್ರವ್ಯ. ಇದು ಶೇ. ೭೦ ಭಾಗ ಇನಾರ್ಗ್ಯಾನಿಕ್ ವಸ್ತು ಮತ್ತು ಶೇ. ೩೦ ಭಾಗ ನೀರು ಮತ್ತು ಆರ್ಗ್ಯಾನಿಕ್ ವಸ್ತುವಿನಿಂದ ಕೂಡಿದೆ. ಆನೆಯ ದಂತವೂ ಇಂಥ ದ್ರವ್ಯದಿಂದಲೇ ಆದುದು
ದಂತವಜ್ರ
(ವೈ) ಹಲ್ಲಿನ ಕಠಿಣ ಹೊರಕವಚವಾಗಿರುವ ಕ್ಯಾಲ್ಕೇರಿಯಸ್ ಪದಾರ್ಥ. ಶೇ. ೯೭ ಇನಾರ್ಗ್ಯಾನಿಕ್, ಶೇ. ೩ ಆರ್ಗ್ಯಾನಿಕ್ ಪದಾರ್ಥಗಳ ಸಂಯೋಜನೆ
ದಂತವಿಜ್ಞಾನ
(ಜೀ) ಹಲ್ಲುಗಳ ರೂಪ, ರಚನೆ, ಅವುಗಳಿಗೆ ತಗಲುವ ವ್ಯಾಧಿಗಳು, ಈ ವ್ಯಾಧಿಗಳ ಚಿಕಿತ್ಸೆ ಇತ್ಯಾದಿ ಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ
ದಂತವಿನ್ಯಾಸ
(ವೈ) ಮೇಲು ಹಾಗೂ ಕೆಳ ದವಡೆಗಳಲ್ಲಿ ಹಲ್ಲುಗಳ ಅಳವಡಿಕೆ, ಬಗೆ ಹಾಗೂ ಸಂಖ್ಯೆ. ಹಲ್ಲುಗಳ ರೂಪಣೆ ಮತ್ತು ಬೆಳವಣಿಗೆ. ದಂತಪಂಕ್ತಿ
ದಂತವೈದ್ಯ ವಿಜ್ಞಾನ