भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದೃಷ್ಟಿ ಮಾಂದ್ಯ

(ವೈ) ದೃಷ್ಟಿನರದ ಅಥವಾ ಅಕ್ಷಿಪಟದ ಮೇಲೆ ಹಾನಿಕಾರಕ ಪದಾರ್ಥಗಳ ವರ್ತನೆಯ ಪರಿಣಾಮವಾಗಿ ಉಂಟಾಗುವ ದೃಕ್‌ನ್ಯೂನತೆ

ದೃಷ್ಟಿ ರೇಖೆ

(ತಂ) ಪ್ರೇಷಣ ವ್ಯವಸ್ಥೆಯಲ್ಲಿ ಪ್ರೇಷಣ ಮತ್ತು ಅಭಿಗ್ರಹಣ ಆಂಟೆನಾಗಳ ನಡುವೆ ಇರಲೇಬೇಕಾದ ಸರಳರೇಖೆ -ಯುಎಚ್‌ಎಫ್ ಹಾಗೂ ರೇಡಾರ್‌ಗಳಲ್ಲಿರುವಂತೆ

ದೇವದಾರು

(ಸ) ಪೈನೇಸೀ ಕುಟುಂಬಕ್ಕೆ ಸೇರಿದ ಕಾಡು ಮರ. ಸೆಡ್ರಸ್ ದೇವದಾರ ವೈಜ್ಞಾನಿಕ ನಾಮ. ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ. ಎತ್ತರದ ಮರ. ದೀರ್ಘಾಯು. ೭೦೦ರಿಂದ ೮೦೦ ವರ್ಷಗಳು ಬದುಕಿರುವ ದಾಖಲೆಯುಂಟು. ಎಲ್ಲ ಶಂಕುಧಾರಿ (ಪೈನ್) ಮರ ಗಳಂತೆ ಇದು ಸಹ ಶಂಕುಗಳನ್ನು ಬಿಡುತ್ತದೆ, ಹೂಗಳನ್ನಲ್ಲ. ಪೈನ್ ಮರಗಳಿಗೆ ಅಪವಾದವೆಂಬಂತೆ ಈ ಮರದಲ್ಲಿ ಗಂಡು ಮತ್ತು ಹೆಣ್ಣು ಶಂಕುಗಳು ಬೇರೆ ಬೇರೆ ಮರಗಳಲ್ಲಿ ಮೂಡುವುವು. ಇದರ ಚೌಬೀನೆಗೆ ಬೇಡಿಕೆಯಲ್ಲಿ ತೇಗದ ನಂತರದ ಸ್ಥಾನ. ಆದರೆ ದೇವದಾರು ಗೆದ್ದಲನ್ನು ನಿರೋಧಿಸ ಲಾರದು. ದೇವದಾರು ಎಣ್ಣೆಯಲ್ಲಿ ಔಷಧೀಯ ಗುಣಗಳುಂಟು

ದೇವೋನ್ಮಾದ

(ವೈ) ವ್ಯಕ್ತಿ ತಾನೇ ಸೃಷ್ಟಿಕರ್ತ ಎಂಬ ಭ್ರಮೆಯಿಂದ ಪೀಡಿತನಾಗಿರುವ ಮಾನಸಿಕ ವ್ಯಾಧಿ

ದೇಶ

(ಭೌ) ನಾಲ್ಕು ಆಯಾಮಗಳ ಸಾತತ್ಯದಲ್ಲಿ ದ್ರವ್ಯವನ್ನು ಭೌತವಾಗಿ ವಿಸ್ತರಿಸಲು ಸಾಧ್ಯ ಮಾಡಿಕೊಡುವ ಅವಕಾಶ. ನ್ಯೂಟೋನಿಯನ್ ಅಥವಾ ಅಭಿಜಾತ ಭೌತ ವಿಜ್ಞಾನದಲ್ಲಿ ದೇಶ, ಕಾಲ ಮತ್ತು ದ್ರವ್ಯಗಳನ್ನು ಪ್ರತ್ಯೇಕ ಘಟಕಗಳೆಂದು ಪರಿಗಣಿಸ ಲಾಗಿದೆ. ಐನ್‌ಸ್ಟೈನಿಯನ್ ಅಥವಾ ಆಧುನಿಕ ಭೌತ ವಿಜ್ಞಾನದಲ್ಲಿ ದೇಶ ಮತ್ತು ಕಾಲಗಳನ್ನು ನಾಲ್ಕು ಆಯಾಮಗಳ ಸಾತತ್ಯವಾಗಿ ಒಗ್ಗೂಡಿಸಲಾಗಿದೆ. ದ್ರವ್ಯವು ದೇಶದ ಮೇಲೆ ಪರಿಣಾಮಬೀರಿ ಅದನ್ನು ವಕ್ರಗೊಳಿಸುತ್ತದೆ ಎಂದು ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ ಸಾಧಿಸುತ್ತದೆ. (ಖ) ವಿಶ್ವದಲ್ಲಿ ಎಲ್ಲ ಕಾಯಗಳನ್ನೂ ಆವರಿಸಿರುವ ಬಲುಮಟ್ಟಿಗೆ ನಿರ್ದ್ರವ್ಯವಾದ ಪ್ರದೇಶ. ಭೂಮಿಯ ವಾತಾವರಣದ ಎಲ್ಲೆಯಾಚೆ ಇರುವ ವಿಶ್ವದ ಭಾಗ. ಆಕಾಶ; ಅವಕಾಶ. ವ್ಯೋಮ. ನೋಡಿ: ವೇಗ; ಕಾಲ. ಅಂತರಿಕ್ಷ

ದೇಹ

(ಜೀ) ಜೀವಿಯ ಪೂರ್ತಿ ಭೌತ ಸಂರಚನೆ. ಒಡಲು. ತನು

ದೇಹ ಕೋಶ

(ಸ) ಅನಾವೃತ ಬೀಜ ಸಸ್ಯದ ಪರಾಗ ನಾಳದಲ್ಲಿ ವಿಭಾಗಗೊಂಡು ಎರಡು ಶುಕ್ರ ಕೋಶ ಕೊಡುವ ಕೋಶ

ದೇಹದಾರ್ಢ್ಯ ವರ್ಧನೆ

(ವೈ) ಯುಕ್ತ ಆಹಾರ, ವಿಹಾರ, ವ್ಯಾಯಾಮಗಳ ಮೂಲಕ ಆರೋಗ್ಯವಂತ ಬಲಿಷ್ಠ ದೇಹವನ್ನು ರೂಪಿಸಿಕೊಳ್ಳುವುದು

ದೇಹಪ್ರಕೃತಿ

(ವೈ) ಮೈಕಟ್ಟು, ಮೈಗುಣ

ದೇಹಲಿ (ಹೊಸ್ತಿಲು) ಆವೃತ್ತಿ

(ಭೌ) ಮೇಲ್ಮೈಯಿಂದ ಒಂದು ಎಲೆಕ್ಟ್ರಾನ್‌ನ್ನು ಹೊರಹೊಮ್ಮಿಸಬಲ್ಲಂಥ ಫೋಟಾನ್‌ನಲ್ಲಿನ ಕನಿಷ್ಠ ಆವೃತ್ತಿ. ನೋಡಿ: ದ್ಯುತಿ ವಿದ್ಯುತ್ ಪರಿಣಾಮ

ದೇಹಲಿ (ಹೊಸ್ತಿಲು) ಮೌಲ್ಯ

(ಭೌ) ನೋಡಿ: ಹೊಸ್ತಿಲು ಮೌಲ್ಯ

ದೇಹಲಿ (ಹೊಸ್ತಿಲು) ಶ್ರಾವ್ಯತೆ

(ಭೌ) ಯಾವುದೇ ಆವೃತ್ತಿಯಲ್ಲಿ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯೊಬ್ಬ ಪತ್ತೆ ಹಚ್ಚಬಲ್ಲ ಧ್ವನಿತರಂಗದ ಕನಿಷ್ಠ ತೀವ್ರತೆ

ದೈತ್ಯ

(ಪ್ರಾ) ಅಸಾಧಾರಣ ಗಾತ್ರದ ಮನುಷ್ಯ, ಪ್ರಾಣಿ ಅಥವಾ ಸಸ್ಯ. (ಭೂವಿ) ಖನಿಜಗಳಲ್ಲಿ ಬೃಹತ್ ಗಾತ್ರದವು. ಉದಾ : ಬೆರಿಲ್, ಅಭ್ರಕ

ದೈತ್ಯ ನಕ್ಷತ್ರ

(ಖ) ಗಾತ್ರದಲ್ಲಿ ಸೂರ್ಯನಿಗಿಂತ ೨೦-೩೦ ಅಥವಾ ಇನ್ನೂ ಹೆಚ್ಚು ಪಟ್ಟು ದೊಡ್ಡದೂ ಕಾಂತಿಯಲ್ಲಿ ೧೦೦ ಮಡಿ ಉಜ್ಜ್ವಲವೂ ಆಗಿರುವ ನಕ್ಷತ್ರ

ದೈನಂದಿನ ಅಲೆ

(ಸಾವಿ) ದಿನವೊಂದರಲ್ಲಿ ಒಂದೇ ಉಬ್ಬರ ಒಂದೇ ಇಳಿತ ಇರುವ ಸಾಗರ ಅಲೆ

ದೈನಂದಿನ ಚಲನೆ

(ಖ) ಆಕಾಶಕಾಯಗಳು ಪೂರ್ವ-ಪಶ್ಚಿಮ ದಿಶೆಯಲ್ಲಿ ಪರಿಭ್ರಮಿಸಿದಂತೆ ಭಾಸವಾಗುವುದು. ಭೂಮಿ ತನ್ನ ಅಕ್ಷದ ಸುತ್ತ ಪಶ್ಚಿಮ-ಪೂರ್ವ ದಿಶೆಯಲ್ಲಿ ಆವರ್ತಿಸುವುದರ ಪರಿಣಾಮವಿದು. ಉಭಯ ಚಲನೆಗಳ ಅವಧಿ ೨೪ ಗಂಟೆಗಳ ಒಂದು ದಿವಸ. ಈ ಅವಧಿಯಲ್ಲಿ ಆಕಾಶಕಾಯಗಳು ಪೂರ್ವ-ಪಶ್ಚಿಮ ದಿಶೆಯಲ್ಲಿ ಒಂದು ಪರಿಭ್ರಮಣೆ ಮುಗಿಸಿರುತ್ತವೆ

ದೈನಿಕ ಲಯ

(ಜೀ) ಭೂಮಿಯ ಆವರ್ತನೆ ಯೊಂದಿಗೆ (೨೪ ಗಂಟೆ ಅವಧಿ) ಸಮಗತಿಯಲ್ಲಿರುವ ದೈಹಿಕ ಕ್ರಿಯೆ. ಹೆಚ್ಚು ಕಡಿಮೆ ದಿನಕ್ಕೊಮ್ಮೆ ಬರುವ ಅಥವಾ ಮರುಕಳಿಸುವ ಉಪಾಪಚಯಕ ಅಥವಾ ಶರೀರಶಾಸ್ತ್ರೀಯ ಪ್ರಕ್ರಿಯೆ ಅಥವಾ ನಡವಳಿಕೆಯ ಯಾವುದೇ ಮುಖ/ಪಾರ್ಶ್ವ

ದೈಹಿಕ ಪರಿಚಲನೆ

(ವೈ) ಸಾರ್ವತ್ರಿಕ ಪರಿಚಲನೆ. ಶ್ವಾಸಕ (ಪಲ್ಮನರಿ) ಪರಿಚಲನೆಯಿಂದ ಭಿನ್ನವಾದದ್ದು

ದೊಡ್ಡ ಕರುಳಿನ ಉರಿಯೂತ

(ವೈ) ದೊಡ್ಡ ಕರುಳಿನ ಮುಖ್ಯ ಭಾಗವಾದ ಕೋಲನ್ ಎಂಬುದರ ಉರಿಯೂತ. ಕಲೈಟಿಸ್

ದೊಡ್ಡ ಕರುಳು

(ವೈ) ಮನುಷ್ಯ ಮತ್ತಿತರ ಕೆಲವು ಪ್ರಾಣಿಗಳಲ್ಲಿ ಪಚನಕ್ರಿಯೆ ಯಲ್ಲಿ ಭಾಗವಹಿಸುವ ಪ್ರಮುಖ ಅಂಗ. ಸಣ್ಣ ಕರುಳನ್ನು ಹೊರತುಪಡಿಸಿ ಉಳಿದ ಕರುಳು ಮತ್ತು ಗುದದ್ವಾರಗಳನ್ನು ಒಳ ಗೊಂಡ ಕೆಳಭಾಗ. ಉದ್ದ ೧.೫ ಮೀ. ಇಲ್ಲಿ ಯಾವುದೇ ಆಹಾರ ಜೀರ್ಣಕ್ರಿಯೆ ನಡೆ ಯುವುದಿಲ್ಲ. ದಿನಕ್ಕೆ ಸು. ೪ ಲೀ. ನೀರು ಹೀರುತ್ತದೆ. ಸತ್ತ್ವರಹಿತ ಪದಾರ್ಥ ಇಲ್ಲಿಂದ ಮಲರೂಪದಲ್ಲಿ ಹೊರದೂಡಲ್ಪಡುತ್ತದೆ. ಬೃಹದಂತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App