भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದಿಣ್ಣೆದಾರಿ

(ತಂ) ಬಸ್ ದಾರಿಯ ಇಲ್ಲವೇ ರೇಲ್ವೆ ಹಳಿಯ ತೀವ್ರ ತಿರುವಿನಲ್ಲಿ ಒಳ ವಕ್ರವನ್ನು ಹೊರ ವಕ್ರಕ್ಕಿಂತ ತುಸು ತಗ್ಗಿನಲ್ಲಿಟ್ಟಿರುವ ಹಾದಿ; ಇಲ್ಲಿ ತಿರುಗುವಾಗ ವಾಹನವು ಸಮತೋಲ ಕಾಪಾಡಿಕೊಳ್ಳಲು ಇದು ಅಗತ್ಯ. ಅಂಚು ಎತ್ತರಿಸಿದ ಹಾದಿ

ದಿನಸೂಚಿ

(ಖ) ನೋಡಿ: ಕ್ಯಾಲೆಂಡರ್

ದಿನಾಂಕ ರೇಖೆ

(ಭೂವಿ) ನೋಡಿ: ಅಂತರರಾಷ್ಟ್ರೀಯ ದಿನಾಂಕರೇಖೆ

ದಿಂಬು ಲಾವ

(ಭೂವಿ) ದಿಂಬಿನ ರಚನೆಯನ್ನು ಪ್ರಕಟಿಸುವ ಶಿಲಾರಸ ಪ್ರವಾಹ. ಸಾಮಾನ್ಯವಾಗಿ ಇದು ಜಲಾಂತರ್ಗತ ಪರಿಸರದಲ್ಲಿ ರೂಪುಗೊಳ್ಳುತ್ತದೆ

ದಿಂಬು ಶಿಲಾರಚನೆ

(ಸಾವಿ) ಸಾಗರ ತಳದಲ್ಲಿ ಜ್ವಾಲಾಮುಖಿಗಳು ಹೊರಚೆಲ್ಲಿದ ಲಾವಾರಸ ನೀರಿನ ಸಂಪರ್ಕಕ್ಕೆ ಬಂದಾಗ ಒಡನೆ ಆರಿ ದಿಂಬಿನಾಕಾರ ತಳೆದ ಶಿಲೆಗಳು. ಸುಮಾರು ೩೦೦ ಕೋಟಿ ವರ್ಷ ಪ್ರಾಯದ ಇಂತಹ ಶಿಲೆಗಳು ಚಿತ್ರದುರ್ಗದ ಬಳಿ ಮರಡಿಹಳ್ಳಿಯಲ್ಲಿ ಕಂಡುಬರುತ್ತವೆ

ದಿಮ್ಮಿ

(ತಂ) ದಿಮ್ಮಿಗಳಾಗಿ ಮಾಡಿದ ಕಬ್ಬಿಣ. ಚಿಮ್ಮಟಿಗೆಯಿಂದ ಬಡಿದೋ ಹಿಸುಕಿಯೋ ನಾದಿದ ಕಬ್ಬಿಣ

ದಿಮ್ಮಿ ಹಾದಿ

(ಸಾ) ಕೊಚ್ಚೆ ನೆಲದ ಮೇಲೆ ಮರದ ತೊಲೆಗಳನ್ನು ಅಡ್ಡಲಾಗಿ ಹಾಸಿ ಕಟ್ಟಿದ ದಾರಿ

ದಿವಸ

(ಖ) ಭೂಮಿ ತನ್ನ ಅಕ್ಷದ ಸುತ್ತ ಒಂದು ಆವರ್ತನೆ ಮುಗಿಸಲು ತೆಗೆದುಕೊಳ್ಳುವ ಅವಧಿ. ಸಾಧಾರಣವಾಗಿ ಹಗಲು ಇರುಳುಗಳ ಮೊತ್ತ. ೨೪ ಗಂಟೆಗಳಾಗಿ ವಿಭಜಿಸಿರುವುದು ನಮ್ಮ ಸೌಕರ್ಯಾರ್ಥ ಮಾತ್ರ. ಗಗನದಲ್ಲಿ ಇಂಥ ಏರ್ಪಾಡು ಏನೂ ಇಲ್ಲ. ವರ್ಷದಲ್ಲಿ ಸುಮಾರು ೨೪ ಪಕ್ಷಗಳಿರುವುದರಿಂದ ಈ ಸಂಖ್ಯೆಗೆ ಪ್ರಾಮುಖ್ಯ ಬಂದಿದೆ. ಎರಡು ಬಗೆಯ ದಿವಸಗಳುಂಟು: ಒಂದು ಸೌರ ದಿವಸ; ಇನ್ನೊಂದು ನಾಕ್ಷತ್ರಿಕ ದಿವಸ. ಮಧ್ಯಾಹ್ನ ರೇಖೆಗೆ ಸೂರ್ಯನ ಎರಡು ಅನುಕ್ರಮ ಪುನರಾಗಮನಗಳ ನಡುವಿನ ಅಂತರವೇ ಸೌರದಿವಸ. ೨೪ ಗಂಟೆಗಳ ಮಾಧ್ಯ ಸೌರದಿವಸವು ಒಂದು ವರ್ಷದಲ್ಲಿ ಸೌರ ದಿವಸದ ಸರಾಸರಿ ಮೌಲ್ಯವಾಗಿರುತ್ತದೆ. ನಾಕ್ಷತ್ರಿಕ ದಿವಸವನ್ನು ಸ್ಥಿರ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಅಳೆಯ ಲಾಗುವುದು. ಇದು ಮಾಧ್ಯಸೌರ ದಿವಸಕ್ಕಿಂತ ೪.೦೯ ಮಿನಿಟ್ ಕಡಿಮೆಯಾಗಿರುತ್ತದೆ. ನೋಡಿ : ನಾಕ್ಷತ್ರಿಕ ದಿವಸ, ವರ್ಷ

ದಿವಾಚರಿ

(ಪ್ರಾ) ಹಗಲವೇಳೆ ಚಟುವಟಿಕೆ ಯಿಂದ ಇರುವ ಪ್ರಾಣಿ. ಕಾಗೆ, ದನ ಇತ್ಯಾದಿ. ನೋಡಿ: ನಿಶಾಚರಿ

ದಿಶಾಕ್ಷ

(ಗ) ನೋಡಿ: ನಿಯತರೇಖೆ

ದಿಶೆ

(ಗ) ಒಂದು ಬಿಂದುವಿಗೆ ಇನ್ನೊಂದರ ಸಾಪೇಕ್ಷ ನೆಲೆ

ದಿಷ್ಟಿಕಾರಿ

(ಭೌ) ಪರ್ಯಾಯ ವಿದ್ಯುತ್ ಪ್ರವಾಹ (a.c.)ವನ್ನು ಏಕಮುಖ ಪ್ರವಾಹ (d.c.)ವಾಗಿ ಪರಿವರ್ತಿಸುವ ಸಲಕರಣೆ. ಇದರಲ್ಲಿ ಸಾಮಾನ್ಯವಾಗಿ ಅರೆವಾಹಕ ಡಯೋಡು ಗಳನ್ನು ಬಳಸಲಾಗಿರುತ್ತದೆ

ದೀಪ

(ತಂ) ಬೆಳಕನ್ನು ಒದಗಿಸಬಲ್ಲ ಸಾಧನ. ಉದಾ: ವಿದ್ಯುದ್ದೀಪ

ದೀಪಕ

(ಭೌ) ಬೆಳಕು ನೀಡುವ ಯಾವುದೇ ವಸ್ತು

ದೀಪಗೋಪುರ

(ಎಂ) ಕಡಲಯಾನದಲ್ಲಿ ಹಡಗುಗಳ ಮಾರ್ಗದರ್ಶನಕ್ಕಾಗಿ, ಕಡಲ ತೀರದಲ್ಲಿ ಅಥವಾ ನಡುಗಡ್ಡೆಗಳಲ್ಲಿ ನಿರ್ಮಿಸಿರುವ, ಪ್ರಖರವಾದ ದೀಪ ವನ್ನು ಮೇಲ್ತುದಿಯಲ್ಲಿ ಹೊತ್ತ ಸ್ತಂಭ. ದೀಪಸ್ತಂಭ. ಲೈಟ್ ಹೌಸ್

ದೀಪನ

(ಭೌ) ಯಾವುದೇ ಮೇಲ್ಮೈಯ ಏಕಮಾನ ಪ್ರದೇಶದ ಮೇಲೆ ಬಿದ್ದ ಬೆಳಕಿನ ಪ್ರಮಾಣ

ದೀಪ್ತ

(ಭೌ) ಬೆಳಕು ಸೂಸುವ, ಬೆಳಗುವ, ಬೆಳಕು ತುಂಬಿದ

ದೀಪ್ತಿ

(ಭೌ) ಉಷ್ಣವಿಲ್ಲದೆ ಉತ್ಪತ್ತಿಯಾಗುವ ಬೆಳಕು. ರಾಸಾಯನಿಕ ಕ್ರಿಯೆಗಳಲ್ಲಿ, ಬೆಳಕು ಚಿಮ್ಮುವ ಪ್ರಾಣಿ ಗಳಲ್ಲಿ, ವಿಕಿರಣಪಟುತ್ವ ಇತ್ಯಾದಿಗಳಲ್ಲಿ ಕಂಡುಬರುವಂತಹುದು. ನೋಡಿ: ಪ್ರತಿದೀಪ್ತಿ, ಸ್ಫುರದೀಪ್ತಿ, ಅನುದೀಪ್ತಿ

ದೀಪ್ತಿವಾಹಿ

(ಭೌ) ಬೆಳಕು ಉತ್ಪಾದಿಸುವ, ಸಾಗಿಸುವ. ತೇಜೋವಾಹಿ

ದೀರ್ಘ ಚತುರಸ್ರ

(ಗ) ನಾಲ್ಕು ಭುಜಗಳ ಆಕೃತಿ. ಇದರಲ್ಲಿ ಭುಜಗಳು ಹೆಚ್ಚು ಕಡಿಮೆ ಸಮಾಂತರವಾಗಿದ್ದು ಭುಜಗಳ ದೀರ್ಘತೆ ಅವುಗಳ ನಡುವಿನ ಅಗಲಕ್ಕಿಂತ ಹೆಚ್ಚಾಗಿರುತ್ತದೆ. ನೋಡಿ: ಆಯತ. (ಸ) ಅಗಲದ ಎರಡರಷ್ಟು ಉದ್ದ ಇರುವ ಎಲೆ. ಪಕ್ಕಗಳು ಸಮಾಂತರವಾಗಿರುತ್ತವೆ, ತುದಿಗಳು ಗುಂಡಗಿರುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App