भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದಾರು

(ಸ) ಲಿಗ್ನಿನ್ ಹಾಗೂ ಸೆಲ್ಯುಲೋಸ್ ಸಂಯುಕ್ತಗಳು ಕೆಲವು ಇನಾರ್ಗ್ಯಾನಿಕ್ ವಸ್ತುಗಳೊಂದಿಗೆ ಕೂಡಿ ರೂಪುಗೊಂಡುದು

ದಾರ್ಢ್ಯ

(ವೈ) ಕಠಿಣ ಪರಿಸ್ಥಿತಿ, ರೋಗ ಇತ್ಯಾದಿಗಳು ಎದುರಾದಾಗ ಅವುಗಳಿಗೆ ಈಡಾಗದೆ ನಿಭಾಯಿಸುವ ವ್ಯಕ್ತಿಯ ಶಾರೀರಿಕ ಶಕ್ತಿ. ತಾಕತ್ತು

ದಾಲ್ಚಿನ್ನಿ

(ಸ) ಲಾರೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಸಂಬಾರ ವೃಕ್ಷ ಮತ್ತು ಇದರ ತೊಗಟೆ. ಸಿನಮೋ ಮಮ್ ಜೀಲ್ಯಾನಿಕಮ್ ವೈಜ್ಞಾನಿಕ ನಾಮ. ಭಾರತ, ಮಲಯ ಮೂಲ ನಿವಾಸಿ. ಸುವಾಸನೆಯೂ ಒಗರು ರುಚಿಯೂ ಇರುವ ತೊಗಟೆ ಸಂಬಾರ ಪದಾರ್ಥವಾಗಿ ಬಳಕೆ. ಎಲೆಯಿಂದ ಪಡೆದ ಎಣ್ಣೆಯಲ್ಲೂ ತೊಗಟೆಯಲ್ಲೂ ಔಷಧೀಯ ಗುಣಗಳುಂಟು

ದಾಶಮಿಕ

(ಗ) ಹತ್ತು ವಿಭಿನ್ನ ಪ್ರತೀಕಗಳ ನೆರವಿನಿಂದ ಸಂಖ್ಯೆಯನ್ನು ಸೂಚಿಸುವ ನಿರ್ದಿಷ್ಟ ಕ್ರಮ. ೦ಯಿಂದ ೯ರವರೆಗಿನ ೧೦ ಪ್ರತೀಕಗಳನ್ನು ಉಪಯೋಗಿಸಿ ದಾಶಮಿಕ ವ್ಯವಸ್ಥೆಯನ್ನು ರೂಪಿಸಿದೆ. ದಶಮಾನ. ದಶಮಾಂಶ, ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಹಾರ ಮುಂತಾದ ಪರಿಕರ್ಮಗಳನ್ನು ಈ ಪದ್ಧತಿಯ ಮೂಲಕ ಭಿನ್ನರಾಶಿ ಪದ್ಧತಿಗಿಂತ ಹೆಚ್ಚು ಸುಲಭವಾಗಿ ನಿರ್ವಹಿಸಬಹುದು. ಸೊನ್ನೆಯಂತೆ ಈ ಪದ್ಧತಿಯೂ ಭಾರತೀಯ ಗಣಿತಶಾಸ್ತ್ರಜ್ಞರ ಕೊಡುಗೆ ಎಂದು ನಂಬಲಾಗಿದೆ. ದಶಮಾನ. ದಶಮಾಂಶ

ದಾಹ

(ವೈ) ಮುಖ್ಯವಾಗಿ ದೇಹದ ಊತಕಗಳ ನಿರ್ಜಲೀ ಕರಣದ ಪರಿಣಾಮವಾಗಿ ಉಂಟಾಗುವ ಬಾಯಾರಿಕೆ. ತೃಷೆ

ದಾಹಕ

(ರ) ರಾಸಾಯನಿಕ ಕ್ರಿಯೆಯಿಂದ ಜೀವಂತ ಊತಕ ದಹಿಸುವ, ಅದರಲ್ಲಿ ಉರಿಗಾಯ ಉಂಟುಮಾಡುವ ಪದಾರ್ಥ

ದಾಳಿಂಬೆ

(ಸ) ಪ್ಯೂನಿಕೇಸೀ ಕುಟುಂಬಕ್ಕೆ ಸೇರಿದ ಬಹುಪ್ರಾಚೀನ ಜನಪ್ರಿಯ ಫಲವೃಕ್ಷ. ಪ್ಯೂನಿಕ ಗ್ರ್ಯಾನೇಟಮ್ ವೈಜ್ಞಾನಿಕ ನಾಮ. ತವರು ಇರಾನ್. ೫-೧೦ ಮೀ ಎತ್ತರಕ್ಕೆ ಬೆಳೆಯುವ ಚಿಕ್ಕ ಗಾತ್ರದ ಮರ. ಹಣ್ಣಿನ ಒಳಭಾಗ ತೆಳುವಾದ ಪಟಲಗಳಿಂದ ಅನೇಕ ಕೋಣೆಗಳಾಗಿ ವಿಭಜಿತವಾಗಿದೆ. ಇವುಗಳಲ್ಲಿರುವ ಅಸಂಖ್ಯ ಬೀಜಗಳು ರಸಭರಿತ ಏರಿಲ್ ಎಂಬ ಹೊದಿಕೆಯಿಂದ ಆವೃತ. ಕೆಂಪು, ನಸುಗೆಂಪು ಅಥವಾ ಬಿಳಿ ಬಣ್ಣ. ತಿನ್ನಲು ಯೋಗ್ಯ. ಹಣ್ಣಿನ ಆಕಾರ, ಬೀಜಗಳ ಬಣ್ಣ ರುಚಿ ಅವಲಂಬಿಸಿ ಅನೇಕ ಬಗೆಗಳಿವೆ. ದಾಳಿಂಬೆಗೆ ಔಷಧೀಯ ಗುಣಗಳುಂಟು. ರಸ ತೆಗೆದು ಶರಬತ್ತಾಗಿ ಬಳಸುವುದುಂಟು. ಎಲೆ ಸಿಪ್ಪೆಗಳಲ್ಲಿ ಅಧಿಕ ಪ್ರಮಾಣದ ಟ್ಯಾನಿನ್ ಇರುವುದರಿಂದ ಚರ್ಮ ಹದ ಮಾಡಲೂ ಉಪಯೋಗಿಸುತ್ತಾರೆ

ದಿಕ್ಕು, ದಿಶೆ

(ಖ) ಪೂರ್ವ, ಉತ್ತರ, ಪಶ್ಚಿಮ ಮತ್ತು ದಕ್ಷಿಣ ಬಿಂದುಗಳು (ದಿಕ್ಸೂಚಿಯಿಂದ ಕರಾರುವಾಕ್ಕಾಗಿ ನಿರ್ಧರಿತವಾದವು) ಪ್ರಮುಖ ದಿಕ್ಕುಗಳು. ಪೂರ್ವದಿಕ್ಕಿನ ಎಡ (ಉತ್ತರ) ಮತ್ತು ಬಲ (ದಕ್ಷಿಣ) ಪ್ರದೇಶಗಳಿಗೆ ಸ್ಥೂಲವಾಗಿ ಪೂರ್ವದಿಶೆ ಎನ್ನುವುದುಂಟು. ಅಂತೆಯೇ ಉತ್ತರ ದಿಕ್ಕಿನ ಎಡ (ಪಶ್ಚಿಮ) ಮತ್ತು ಬಲ (ಪೂರ್ವ) ಪ್ರದೇಶಗಳು ಉತ್ತರ ದಿಶೆಯಲ್ಲಿವೆ; ಇತ್ಯಾದಿ. ಮಾರ್ಚ್ ೨೧/೨೨ ಮತ್ತು ಸೆಪ್ಟೆಂಬರ್ ೨೨/೨೩ರಂದು ಮಾತ್ರ ಸೂರ್ಯ ಪೂರ್ವ ದಿಕ್ಕಿನಲ್ಲಿ (ಬಿಂದುವಿನಲ್ಲಿ) ಮೂಡಿ ಪಶ್ಚಿಮ ದಿಕ್ಕಿನಲ್ಲಿ (ಬಿಂದುವಿನಲ್ಲಿ) ಮುಳುಗುತ್ತದೆ. ಉಳಿದ ದಿನಗಳಲ್ಲಿ ಪೂರ್ವ ದಿಶೆಯಲ್ಲಿ ಮೂಡುತ್ತದೆ, ಪಶ್ಚಿಮ ದಿಶೆಯಲ್ಲಿ ಮುಳುಗುತ್ತದೆ

ದಿಕ್ಕೋಟಿ ಜ್ಯಾಗಳು

(ಗ) Ox, Oy, Oz ಮೂರು ಪರಸ್ಪರ ಲಂಬಾಕ್ಷಗಳಾಗಿರಲಿ. p ಯಾವುದೇ ಸರಳರೇಖೆ ಯಾಗಿರಲಿ. ಮೂಲಬಿಂದು Oವಿನ ಮೂಲಕ pಗೆ ಸಮಾಂತರವಾಗಿ Op ಸರಳರೇಖೆಯನ್ನೆಳೆಯಬೇಕು. ಇದು ಅಕ್ಷಗಳ ಧನಾತ್ಮಕ ದಿಶೆಗಳೊಡನೆ ರಚಿಸುವ ಕೋನಗಳ ಕೋಟಿಜ್ಯಾಗಳೇ (cosine) ದಿಕ್ಕೋಟಿ ಜ್ಯಾಗಳು. ಇವು l. m, n ಆಗಿರಲಿ. ಇವುಗಳ ನಡುವಿನ ಸಂಬಂಧ l2+m2+n2 =1

ದಿಕ್ಪರಿವರ್ತಕ

(ತಂ) ವ್ಯತ್ಯಯಕ, ವಿನಿಮಯಕಾರಿ. ಏಕಮುಖ ವಿದ್ಯುತ್ ಮೋಟರಿನಲ್ಲಿ ಅಥವಾ ವಿದ್ಯುಜ್ಜನಕದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಾಯಿಸುವ ಅಥವಾ ಆವರ್ತಿಸುವ ಆರ್ಮೆಚರ್‌ನ ಸುತ್ತುಗಟ್ಟಿಗೂ ಸ್ಥಾಯೀ ತುದಿಗಳಿಗೂ ಸಂಪರ್ಕ ಕಲ್ಪಿಸುವ ಭಾಗ

ದಿಕ್ಪರಿವರ್ತಿಸು

(ತಂ) ಬದಲಾಯಿಸು. ಪರಿವರ್ತಿಸು. ಎರಡು ವಸ್ತು, ವಿಷಯ ಮೊದಲಾದವನ್ನು ಅದಲುಬದಲು ಮಾಡು. ವಿದ್ಯುತ್ ಪ್ರವಾಹದ ದಿಕ್ಕು ಬದಲಾಯಿಸು

ದಿಕ್ಪಲ್ಲಟ

(ಪವಿ) ಬೀಸುತ್ತಿರುವ ಗಾಳಿಯ ಮೂಲ ದಿಕ್ಕು ಬದಲಾಗುವುದು ಪ್ರದಕ್ಷಿಣ ಗತಿಯಲ್ಲಿ (ಎಡದಿಂದ ಬಲಕ್ಕೆ). ಅಭಿಪ್ರಾಯ, ಭಾವ, ವರ್ತನೆಗಳಲ್ಲಿ ತಿರುಗು ಬದಲಾವಣೆ

ದಿಕ್ಸೂಚಿ

(ಖ) ಭೂಮಿಗೆ ಸಾಪೇಕ್ಷವಾಗಿ ಕ್ಷಿತಿಜೀಯ ನಿರ್ದೇಶಕ ದಿಕ್ಕನ್ನು ತೋರಿಸುವ ಒಂದು ಸಾಧನ. ಸಮುದ್ರಯಾನ ಹಾಗೂ ವಾಯುಯಾನಗಳಲ್ಲಿ ಬಳಕೆ. ನೋಡಿ: ಕಾಂತ ದಿಕ್ಸೂಚಿ

ದಿಗಂತ

(ಖ) ನೋಡಿ: ಕ್ಷಿತಿಜ

ದಿಗ್ಬಿಂದುಗಳು

(ಭೂ) ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಬಿಂದುಗಳ ಒಟ್ಟು ಹೆಸರು. ಧ್ರುವ ನಕ್ಷತ್ರ ಮತ್ತು ವೀಕ್ಷಕನ ಖಮಧ್ಯ (ನೆತ್ತಿಬಿಂದು) ಇವೆರಡನ್ನೂ ಜೋಡಿಸುವ ಮಹಾವೃತ್ತವು ಆತನ ದಿಗಂತವನ್ನು ಸಂಧಿಸುವ ಬಿಂದುಗಳು. ಧ್ರುವನಕ್ಷತ್ರದ ಕಡೆಗಿನದು ಉತ್ತರ, ಅದಕ್ಕೆ ನೇರ ವಾಗಿ ಎದುರಾಗಿರುವುದು ದಕ್ಷಿಣ; ಉತ್ತರ ಬಿಂದುವಿ ನಿಂದ ೯೦೦ ಬಲಕ್ಕೂ ಎಡಕ್ಕೂ ತಿರುಗಿದರೆ ಅನುಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ಬಿಂದುಗಳನ್ನು ಕಾಣುತ್ತೇವೆ. ಮಾರ್ಚ್ ೨೧/೨೨ ಮತ್ತು ಸೆಪ್ಟೆಂಬರ್ ೨೨/೨೩ರಂದು ಸೂರ್ಯ ಪೂರ್ವ ಬಿಂದುವಿನಲ್ಲಿ ಮೂಡಿ ಪಶ್ಚಿಮ ಬಿಂದುವಿನಲ್ಲಿ ಮುಳುಗುತ್ತದೆ

ದಿಗ್ಭ್ರಮೆ

(ವೈ) ಒಂದು ಬಗೆಯ ಮಾನಸಿಕ, ದೈಹಿಕ ಜಡತೆ. ಸಹಜ ಚಟುವಟಿಕೆಗಳಿಗೆ ಹಿಂಜರಿತ ಹಾಗೂ ಸಾಮಾಜಿಕ ಪರಿಸರದತ್ತ ನಿರ್ಲಕ್ಷ್ಯ ಧೋರಣೆ ಇದರ ಲಕ್ಷಣಗಳು. ಮಂಕು, ಮಂಪರು

ದಿಗ್ವಿನ್ಯಾಸ

(ಜೀ) ಪ್ರಾಣಿಯ ಅಥವಾ ಸಸ್ಯದ ಇಡೀ ಕಾಯಕ್ಕೆ ಸಂಬಂಧಿಸಿದಂತೆ ಅದರ ಒಂದು ಭಾಗದ ಅಥವಾ ಅಂಗದ ಸ್ಥಾನ ಅಥವಾ ಸ್ಥಾನಪಲ್ಲಟ. ಬಾಹ್ಯ ಪ್ರಚೋದನೆಯ ಕಾರಣವಾಗಿ ಸಸ್ಯ ಅಥವಾ ಪ್ರಾಣಿ, ಇಲ್ಲವೇ ಅವುಗಳ ಯಾವುದೇ ಭಾಗ, ತಳೆಯುವ ಸ್ಥಾನ ಅಥವಾ ಸ್ಥಾನದಲ್ಲಾಗುವ ಬದಲಾವಣೆ. ಪಕ್ಷಿ ಮೊದಲಾದವುಗಳು ತಮ್ಮ ನಿವಾಸಕ್ಕೆ ಹಿಂದಿರುಗುವ ಮಾರ್ಗವನ್ನು ದೂರದಿಂದಲೇ ಕಂಡುಕೊಳ್ಳುವ ಶಕ್ತಿ. ನೆಲೆಯರಿವು. (ರ) ಸಂಕೀರ್ಣ ಅಣುಗಳಲ್ಲಿ ಪರಮಾಣುಗಳ ಅಥವಾ ಪರಮಾಣು ತಂಡಗಳ ಪರಸ್ಪರ ಸ್ಥಾನವಿನ್ಯಾಸ. ನೆಲೆ ನಿರ್ದೇಶನ. ಓರಣ

ದಿಙ್ಮಾನ

(ಭೂ) ಆಧಾರರೇಖೆ ಕುರಿತು ಯಾವುದೇ ಬಿಂದುವಿನ ಸ್ಥಾನ ದಿಶೆ ರಚಿಸುವ ಕೋನ

ದಿಡೀರ್ ನೆರೆ

(ಪವಿ) ಅನಿರೀಕ್ಷಿತವಾಗಿ ಭಾರಿ ಮಳೆ ಸುರಿದಾಗ ದಿಡೀರೆಂದು ಆಗುವ ಪ್ರವಾಹ. ಜನಜೀವನ ಅಸ್ತವ್ಯಸ್ತ ವಾಗಿ, ಬೆಳೆ, ಆಸ್ತಿಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುತ್ತದೆ

ದಿಂಡು

(ಸ) ಪ್ರಿಂರೋಸಿನಲ್ಲಿರುವಂತೆ ಎಲೆಗಳು ಬಿಡದೆ ಹೂವು ಮಾತ್ರ ಬಿಡುವ ಆಧಾರ ಕಾಂಡ

Search Dictionaries

Loading Results

Follow Us :   
  Download Bharatavani App
  Bharatavani Windows App